ಬ್ರೇಕಿಂಗ್ ನ್ಯೂಸ್
20-03-25 02:05 pm HK News Desk ಕರಾವಳಿ
ಮಂಗಳೂರು, ಮಾ.20: ಹಲವು ವರ್ಷಗಳ ಬಳಿಕ ಈ ಸಾಲಿನ ಬಜೆಟ್ ನಲ್ಲಿ ಸಿಎಂ ಸಿದ್ದರಾಮಯ್ಯ ಕರಾವಳಿಯ ದಕ್ಷಿಣ ಕನ್ನಡ ಜಿಲ್ಲೆಗೆ ಹೆಚ್ಚು ಅನುದಾನ ಕೊಟ್ಟಿದ್ದಾರೆ ಎಂದು ಪುತ್ತೂರು ಶಾಸಕ ಅಶೋಕ್ ರೈ ವಿಧಾನಸಭೆ ಅಧಿವೇಶನದಲ್ಲಿ ಭಾಷಣ ಮಾಡಿದ್ದಾರೆ. ಈ ವೇಳೆ, ಜಿಲ್ಲೆಯ ಇತರ ಬಿಜೆಪಿ ಶಾಸಕರು ಅಶೋಕ್ ರೈಯವರ ಕಾಲೆಳೆಯುವ ಪ್ರಯತ್ನ ಮಾಡಿದ್ದಾರೆ. ಬಜೆಟ್ ಚರ್ಚೆಯ ಸಂದರ್ಭದಲ್ಲಿ ಅಶೋಕ್ ರೈ ತನ್ನ ವಿರುದ್ಧ ಮಾತನಾಡಿದವರನ್ನು ಒಂದೇ ಮಾತಿನಲ್ಲಿ ಬಾಯಿ ಮುಚ್ಚಿಸಿದ್ದು ಗಮನಸೆಳೆದಿದೆ.
ಅಡಿಕೆ ಕೊಳೆರೋಗ ಪರಿಹಾರಕ್ಕಾಗಿ 62 ಕೋಟಿ ಕೊಟ್ಟಿದ್ದಾರೆ, ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ಮೇಲ್ದರ್ಜೆಗೇರಿಸಿದ್ದಾರೆ, ಪುತ್ತೂರಿಗೆ ಮೆಡಿಕಲ್ ಆಸ್ಪತ್ರೆ ಘೋಷಣೆ ಮಾಡಿದ್ದಾರೆ ಎಂದು ಅಶೋಕ್ ರೈ ಹೇಳುತ್ತಿದ್ದಂತೆ, ಬಿಜೆಪಿಯ ಹರೀಶ್ ಪೂಂಜ, ಭರತ್ ಶೆಟ್ಟಿ ಆಕ್ಷೇಪ ಎತ್ತಿದ್ದಾರೆ. ಕೇವಲ ಘೋಷಣೆ ಮಾಡಿದರೆ ಸಾಲದು, ಅನುದಾನ ಇಟ್ಟಿದ್ದಾರೆಯೇ ಹೇಳಿ ಎಂದು ಸ್ಪಷ್ಟನೆ ಕೇಳಿದ್ದಾರೆ. ಇದಕ್ಕೆ ತಿರುಗೇಟು ನೀಡಿದ ಶಾಸಕ ಅಶೋಕ್ ರೈ, ನೀವು ನನ್ನ ಕ್ಷೇತ್ರದ ಬಗ್ಗೆ ಮಾತನಾಡುವುದು ಬೇಡ. ಅದು ನಾನು ನೋಡಿಕೊಳ್ಳುತ್ತೇನೆ. ನಿಮ್ಮ ಕ್ಷೇತ್ರಕ್ಕೆ ಏನಾದರೂ ತರಿಸಿಕೊಂಡಿದ್ದೀರಾ ಹೇಳಿ. ಕಳೆದ ಐದು ವರ್ಷದಲ್ಲಿ ಏನಾದರೂ ಮಾಡಿದ್ದೀರಾ ಹೇಳಿ ಎಂದರು.
ಅದಕ್ಕೆ ಬಿಜೆಪಿಯ ಇತರ ಶಾಸಕರು ಸೇರಿ ಅಶೋಕ್ ರೈ ವಿರುದ್ಧ ಮುಗಿಬಿದ್ದರು. ಮತ್ತೆ ತಿರುಗೇಟು ನೀಡಲು ಶುರು ಮಾಡಿದ ಅಶೋಕ್ ರೈ, ಬಾಯಿ ತೆರೆದರೆ ಧರ್ಮದ ಬಗ್ಗೆ ಮಾತಾಡೋ ಇವರೆಲ್ಲ ಕರಾವಳಿಯಲ್ಲಿ ದೇವಸ್ಥಾನ, ಮಂದಿರ, ಮಸೀದಿಗಳು ಸಾರ್ವಜನಿಕ ಜಾಗದಲ್ಲಿರುವುದನ್ನು ಹಕ್ಕುಪತ್ರ ಕೊಡಿಸಿದ್ದೀರಾ.. ಇದರ ಬಗ್ಗೆ ಜನರು ಮನವಿ ಕೊಡುತ್ತಲೇ ಇದ್ದಾರಲ್ವಾ.. ಒಂದಾದರೂ ಮಾಡಿಸಿದ್ದರೆ ಹೇಳಿ ನೋಡೋಣ. ಕಳೆದ ಐದು ವರ್ಷಗಳ ಕಾಲ ನಿಮ್ಮದೇ ಸರಕಾರ ಇತ್ತು. ಕರಾವಳಿಯ ಜಿಲ್ಲೆಗಳ ಬಗ್ಗೆ ಒಮ್ಮೆಯಾದರೂ ಬಜೆಟ್ ನಲ್ಲಿ ಹೆಸರು ಬಂದಿದೆಯಾ ಹೇಳಿ. ದುರ್ಬೀನು ಹಾಕಿ ಹುಡುಕಿದರೂ ಮಂಗಳೂರು, ಪುತ್ತೂರಿನ ಹೆಸರು ಕಾಣಸಿಕ್ಕಿಲ್ಲ. ಈ ಬಾರಿಯ ಬಜೆಟ್ ನಲ್ಲಿ 23 ಬಾರಿ ದಕ್ಷಿಣ ಕನ್ನಡ ಜಿಲ್ಲೆ, ಮಂಗಳೂರು, ಪುತ್ತೂರು ಹೀಗೆ ಕರಾವಳಿಯ ಹೆಸರು ಉಲ್ಲೇಖ ಆಗಿದೆ, ಅಭಿವೃದ್ಧಿ ಬಗ್ಗೆ ಪ್ರಸ್ತಾಪ ಆಗಿದೆ ಎಂದು ಹೇಳಿದರು. ಸ್ಪೀಕರ್ ಪ್ರತಿಕ್ರಿಯಿಸಿ ಈ ಬಗ್ಗೆ ನಾವೊಂದು ದಿನ ಡಿಬೇಟ್ ಮಾಡೋಣ, ಎಲ್ಲ ಸಾಕ್ಷಿ ಹಿಡ್ಕೊಂಡು ಬನ್ನಿ ಎಂದು ಕಿಚಾಯಿಸಿದರು.
ಇದಕ್ಕೆ ಆಕ್ಷೇಪಿಸಿದ ಬಸನಗೌಡ ಯತ್ನಾಳ್ ಕರಾವಳಿಯ ಬಗ್ಗೆಯೇ ಚರ್ಚೆ ಮಾಡೋಕೆ ಅವಕಾಶ ನೀಡಿದ್ದೀರಲ್ಲಾ ಎಂದು ಸಭಾಧ್ಯಕ್ಷ ಖಾದರ್ ಅವರನ್ನು ಪ್ರಶ್ನಿಸಿದರು. ಶನಿವಾರ ಒಂದಿಡೀ ದಿನ ಯತ್ನಾಳ್ ಅವರಿಗೆ ಕೊಟ್ಟು ಬಿಡಿ ಅಧ್ಯಕ್ಷರೇ, ನಾನು ಇನ್ನು ಐದು ನಿಮಿಷದಲ್ಲಿ ಮಾತು ಮುಗಿಸುತ್ತೇನೆ ಎನ್ನುತ್ತ ಅಶೋಕ್ ರೈ ಮಾತು ಮುಂದುವರಿಸಿದರು. ಪ್ರತಿ ಅಧಿವೇಶನದಲ್ಲಿ ಉಲ್ಲೇಖಿಸುತ್ತ ಬಂದಂತೆ, ತುಳು ಭಾಷೆಯನ್ನು ಎರಡನೇ ಭಾಷೆಯಾಗಿ ಘೋಷಣೆ ಮಾಡಿ, ಇದಕ್ಕೇನೂ ಖರ್ಚಿಲ್ಲ, ಇಚ್ಛಾಶಕ್ತಿ ಅಷ್ಟೇ ಬೇಕಾಗಿರೋದು ಎಂದು ಮುಖ್ಯಮಂತ್ರಿ ಮತ್ತು ಇತರ ಸಚಿವರಿಗೆ ಟಾಂಗ್ ನೀಡಿದರು. ತುಳು ಭಾಷೆಯ ಬಗ್ಗೆ ಅಧಿವೇಶನದಲ್ಲಿ ಪ್ರತಿ ಬಾರಿ ಧ್ವನಿ ಎತ್ತುತ್ತಾ ಬಂದಿರುವುದು ಅಶೋಕ್ ರೈ ಹೆಗ್ಗಳಿಕೆ.
Puttur MLA Ashok Rai has issued a bold challenge to the district's BJP MLAs, questioning their contributions to Mangalore over the past five years. In a significant statement, Rai argued that despite their time in office, there has been a noticeable lack of development in the region, asserting, “Even if you put on binoculars, no development by the BJP in Mangalore has been seen.”
09-09-25 10:52 pm
Bangalore Correspondent
U T Khader: ಯುಟಿ ಖಾದರ್ ಏಕಪಕ್ಷೀಯ ತೀರ್ಮಾನ ತೆಗೆದ...
09-09-25 09:14 pm
Shivamogga Accident: ಸೆ.25ಕ್ಕೆ ಹಸೆಮಣೆ ಏರಬೇಕಿದ...
08-09-25 08:07 pm
ವೀರಶೈವ ಲಿಂಗಾಯತರು ಹಿಂದು ಬದಲು ಇತರರು ಎಂದು ನಮೂದಿಸ...
08-09-25 06:48 pm
ಮಸೀದಿ ಎದುರಲ್ಲಿ ಗಣೇಶ ವಿಸರ್ಜನೆ ವೇಳೆ ಕಲ್ಲು ತೂರಾಟ...
08-09-25 05:21 pm
10-09-25 04:22 pm
HK News Desk
ನೇಪಾಳದಲ್ಲಿ ಹಿಂಸಾಚಾರ ತೀವ್ರ ; ದೇಶ ಬಿಟ್ಟು ಓಡಿದ ಪ...
09-09-25 11:09 pm
ನೂತನ ಉಪ ರಾಷ್ಟ್ರಪತಿಯಾಗಿ ಎನ್.ಡಿ.ಎ ಮೈತ್ರಿಕೂಟದ ಸಿ...
09-09-25 09:38 pm
ಕಾಸರಗೋಡು ; ರಾಷ್ಟ್ರೀಯ ಹೆದ್ದಾರಿ ದಾಟಲೆತ್ನಿಸಿದ ಮಹ...
08-09-25 11:06 pm
ನೇಪಾಳದಲ್ಲಿ ಸೋಶಿಯಲ್ ಮೀಡಿಯಾ ಬ್ಯಾನ್ ; ದೇಶಾದ್ಯಂತ...
08-09-25 10:59 pm
11-09-25 02:45 pm
Mangalore Correspondent
ಬಿಜೆಪಿ ಬಗ್ಗೆ ಪುತ್ತಿಲ ಪರಿವಾರದ ಅಸಮಾಧಾನ ; ಭರವಸೆ...
11-09-25 01:40 pm
Headline Karnataka, Social Campaigning, Manga...
11-09-25 11:34 am
ಧರ್ಮಸ್ಥಳ ಕೇಸ್ ; ವಿಚಾರಣೆ ಮುಗಿಸಿ ಸತ್ಯಕ್ಕೆ ಜಯ ಎನ...
10-09-25 10:50 pm
Yenepoya Hospital, Mangalore: ಯೆನಪೋಯ ಆಸ್ಪತ್ರೆ...
10-09-25 08:46 pm
11-09-25 02:25 pm
HK STAFF
Mangalore Police, Communial Case, Arrest, Cri...
08-09-25 10:34 pm
ಮಂಗಳೂರು ಏರ್ಪೋರ್ಟ್ ಟರ್ಮಿನಲ್ ಬಿಲ್ಡಿಂಗ್ ಧ್ವಂಸ ಬೆ...
07-09-25 03:34 pm
Mangalore SAF Police Constable, Arrest: ವಕೀಲ...
06-09-25 08:32 pm
60 Crore Fraud, Actress Shilpa Shetty, Raj Ku...
06-09-25 07:45 pm