ಬ್ರೇಕಿಂಗ್ ನ್ಯೂಸ್
22-03-25 05:45 pm Mangalore Correspondent ಕರಾವಳಿ
ಮಂಗಳೂರು, ಮಾ.22 : ಸಿಎಂ ಸಿದ್ದರಾಮಯ್ಯ ಕಳ್ಳದಾರಿ ಮೂಲಕ ಮುಸಲ್ಮಾನರಿಗೆ 2ಬಿ ವರ್ಗದ ಹೆಸರಲ್ಲಿ ಗುತ್ತಿಗೆಯಲ್ಲಿ ಮೀಸಲು ಕೊಟ್ಟಿದ್ದಾರೆ. ಧರ್ಮದ ಹೆಸರಲ್ಲಿ ಮೀಸಲು ಕೊಡುವಂತಿಲ್ಲ ಎಂದು ಅಂಬೇಡ್ಕರ್ ಸಂವಿಧಾನ ಹೇಳಿದರೂ ಇವರು ಕಾನೂನು ಮೀರಿ ಮೀಸಲಾತಿ ಕೊಟ್ಟಿದ್ದಾರೆ. ರಾಜ್ಯದಲ್ಲಿ ಸಿದ್ದರಾಮಯ್ಯ ಹೆಸರಲ್ಲಿ ಮುಸ್ಲಿಮರು ಆಡಳಿತ ನಡೆಸುತ್ತಿದ್ದಾರೆ. ಇದೇ ರೀತಿಯಾದರೆ ಮುಂದೆ ಕಾಂಗ್ರೆಸ್ ಇರಲ್ಲ. ಕಾಂಗ್ರೆಸ್ ಜಾಗದಲ್ಲಿ ಮುಸ್ಲಿಂ ಲೀಗ್ ಮಾತ್ರ ಇರಲಿದೆ ಎಂದು ವಿಧಾನ ಪರಿಷತ್ ಸದಸ್ಯೆ ಭಾರತಿ ಶೆಟ್ಟಿ ಹೇಳಿದ್ದಾರೆ.
ಮಂಗಳೂರಿನ ಕ್ಲಾಕ್ ಟವರ್ ಬಳಿ ನಡೆದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಅವರು, ಕೇಂದ್ರ ಸರಕಾರ ವಕ್ಫ್ ಹೆಸರಲ್ಲಿ ಮಾಡುತ್ತಿರುವ ಲೂಟಿ ತಪ್ಪಿಸಲು ಕಾನೂನು ತರುತ್ತಿದ್ದರೆ, ಸಿದ್ದರಾಮಯ್ಯ ಸರಕಾರ ವಕ್ಫ್ ಭೂಮಿಯ ರಕ್ಷಣೆ ಹೆಸರಲ್ಲಿ 150 ಕೋಟಿ ರೂ. ಅನುದಾನ ಕೊಟ್ಟಿದ್ದಾರೆ. ಸಿಕ್ಕ ಸಿಕ್ಕಲ್ಲಿ ವಕ್ಫ್ ಭೂಮಿಯೆಂದು ಮುಸ್ಲಿಮರು ಹಕ್ಕು ಮಂಡಿಸುತ್ತಿದ್ದಾರೆ. ಗುಲ್ಬರ್ಗ, ವಿಜಯಪುರದಲ್ಲಿ ರೈತರ ಭೂಮಿಯನ್ನೂ ತಮ್ಮದೆಂದು ಹೇಳುತ್ತಿದ್ದಾರೆ. ಮೊನ್ನೆ ಸುನಿತಾ ವಿಲಿಯಮ್ಸ್ ಬದಲು ಶಬಿನಾ ಬೇಗಂ ಎಂಬ ಹೆಸರಿನ ಮಹಿಳೆ ಬಾಹ್ಯಾಕಾಶಕ್ಕೆ ಹೋಗಿ ಬರುತ್ತಿದ್ದರೆ, ಬಾಹ್ಯಾಕಾಶವನ್ನೂ ವಕ್ಫ್ ಆಸ್ತಿಯೆಂದು ಹೇಳುತ್ತಿದ್ದರು. ಸಿದ್ದರಾಮಯ್ಯ ಸರಕಾರ ಅದಕ್ಕೂ ಬೆಂಬಲಿಸುತ್ತಿದ್ದರು ಎಂದು ವ್ಯಂಗ್ಯವಾಡಿದರು.
ಈ ಬಾರಿಯ ಬಜೆಟ್ ನಲ್ಲಿ ಮುಸ್ಲಿಂ ಹೆಣ್ಮಕ್ಕಳಿಗೆ ಪ್ರತ್ಯೇಕ ಶಾಲೆ ತೆರೆಯಲು ಅನುದಾನ ನೀಡಿದ್ದಾರೆ. ಹಿಂದು- ಮುಸ್ಲಿಂ ವಿಭಜನೆ ಮಾಡುವುದಕ್ಕಾಗಿಯೇ ಸಿದ್ದರಾಮಯ್ಯ ಸರಕಾರ ಮುಸ್ಲಿಂ ಹೆಣ್ಮಕ್ಕಳಿಗೆ ಬೇರೆಯದ್ದೇ ಶಾಲೆ ಮಾಡುತ್ತಂತೆ. ಆಮೂಲಕ ಮುಸ್ಲಿಂ ಹೆಣ್ಮಕ್ಕಳನ್ನು ಸಮಾಜದಲ್ಲಿ ಬೇರ್ಪಡಿಸಿ ಅಸ್ಪಶ್ಯರಂತೆ ಮಾಡುತ್ತಿದ್ದಾರೆ. ಇದರಿಂದ ಸಮಾಜಕ್ಕೆ ಕೆಡುಕೇ ಆಗುತ್ತೆ ಅಲ್ಲದೆ ಒಳ್ಳೆಯದು ಆಗಲು ಸಾಧ್ಯವಿಲ್ಲ. ತಲಾಕ್ ಶೋಷಣೆ ನಿಲ್ಲಿಸಿದ್ದು ಮೋದಿ ಸರ್ಕಾರ. ಮುಸ್ಲಿಮರ ಪವಿತ್ರ ಮೆಕ್ಕಾಗೆ ಹೋಗಲು ವ್ಯವಸ್ಥೆ ಮಾಡಿದ್ದು ವಾಜಪೇಯಿ ಸರಕಾರ. ಕಾಂಗ್ರೆಸ್ ಸಮಾಜಕ್ಕಾಗಿ ಏನೂ ಮಾಡಿಲ್ಲ, ಓಲೈಕೆ ಮಾತ್ರ ಮಾಡಿರುವುದು ಎಂದು ಭಾರತಿ ಶೆಟ್ಟಿ ಹೇಳಿದರು.
ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಚಿತ್ರದುರ್ಗ ಬಿಜೆಪಿ ಸಂಸದ ಗೋವಿಂದ ಕಾರಜೋಳ ಮಾತನಾಡಿ, ಮಾತೆತ್ತಿದರೆ ಹಿಂದುಳಿದ ವರ್ಗದ ನಾಯಕ ಎಂದು ಹೇಳುವ ಸಿದ್ದರಾಮಯ್ಯನವರು ಕಳೆದ ಎರಡು ವರ್ಷಗಳಲ್ಲಿ ಎಸ್ಸಿ- ಎಸ್ಟಿ ವರ್ಗದ ಕಲ್ಯಾಣಕ್ಕಾಗಿ ಇಟ್ಟಿದ್ದ ಹಣವನ್ನೇ ತೆಗೆದು ಗ್ಯಾರಂಟಿಗೆ ಬಳಸಿದ್ದಾರೆ. ಇದು ಇವರ ಸಾಚಾತನವನ್ನು ತೋರಿಸುತ್ತಿದೆ ಎಂದು ಹೇಳಿದರು. ಪ್ರತಿಭಟನೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಮಾಜಿ ಎಂಎಲ್ಸಿ ಪ್ರತಾಪಸಿಂಹ ನಾಯಕ್, ಪರಿಷತ್ ಸದಸ್ಯ ಕಿಶೋರ್ ಕುಮಾರ್ ಮತ್ತಿತರರು ಪಾಲ್ಗೊಂಡಿದ್ದರು.
ತಳ್ಳಾಟ ಸಂದರ್ಭದಲ್ಲಿ ರಸ್ತೆಗೆ ಬಿದ್ದ ಎಂಎಲ್ಸಿ
ಪ್ರತಿಭಟನೆ ಬಳಿಕ ಸಾಂಕೇತಿಕವಾಗಿ ಬಿಜೆಪಿ ಕಾರ್ಯಕರ್ತರು ರಸ್ತೆ ತಡೆದು ಘೋಷಣೆ ಕೂಗಿದರು. ಈ ವೇಳೆ, ಪೊಲೀಸರು ಕಾರ್ಯಕರ್ತರನ್ನು ವಶಕ್ಕೆ ಪಡೆದು ಪೊಲೀಸ್ ಬಸ್ಸಿಗೆ ತುಂಬಿಸಿದ್ದಾರೆ. ತಳ್ಳಾಟ ಸಂದರ್ಭದಲ್ಲಿ ರಸ್ತೆ ಬದಿಯಲ್ಲಿದ್ದ ಎಂಎಲ್ಸಿ ಭಾರತಿ ಶೆಟ್ಟಿ ಮತ್ತು ಸುಲೋಚನಾ ಭಟ್ ದೂಡಲ್ಪಟ್ಟು ರಸ್ತೆಗೆ ಬಿದ್ದಿದ್ದಾರೆ. ಆನಂತರ, ಮಹಿಳಾ ಪೊಲೀಸರು ಬಂದು ಅವರನ್ನು ಎಬ್ಬಿಸಿ ವಶಕ್ಕೆ ಪಡೆಯಲು ಮುಂದಾದರು. ಈ ವೇಳೆ, ಭಾರತಿ ಶೆಟ್ಟಿ ಪೊಲೀಸರನ್ನು ಗದರಿದ್ದು ವಾಗ್ವಾದ ನಡೆಸಿದ್ದಾರೆ. ನೀವೇ ನನ್ನನ್ನು ರಸ್ತೆಗೆ ತಳ್ಳಿ ವಶಕ್ಕೆ ಪಡೆಯಲು ಬರ್ತೀರಾ ಎಂದು ಪ್ರಶ್ನೆ ಮಾಡಿದ್ದಾರೆ.
In a heated demonstration that has ignited significant political controversy, members of the Bharatiya Janata Party (BJP) gathered today to protest what they claim is a fraudulent reservation of leases for Muslim communities. The demonstration was marked by heightened emotions, with MLC Bharathi Shetty reportedly falling to the ground during a scuffle amid the protests.
16-07-25 09:36 pm
HK News Desk
ಕೋವಿಡ್ ಮುಗಿದರೂ, ಅದರ ಪರಿಣಾಮ ನಿಂತಿಲ್ಲ..! ನರಮಂಡಲ...
16-07-25 07:05 pm
BESCOM, Cybercrime, Digital Arrest: ಡಿಜಿಟಲ್ ಅ...
16-07-25 03:58 pm
ಕಾವೇರಿ ಆರತಿ ದುಡ್ಡು ಹೊಡೆಯುವ ಸ್ಕೀಮ್, ನೂರು ಕೋಟಿ...
16-07-25 11:47 am
35 IPS Officers Transfer: ರಾಜ್ಯದಲ್ಲಿ 35 ಐಪಿಎಸ...
15-07-25 01:32 pm
16-07-25 09:58 pm
HK News Desk
Changur Baba: ಲವ್ ಜಿಹಾದ್, ಹಿಂದು ಯುವತಿಯರ ಮತಾಂತ...
14-07-25 03:24 pm
ಅಹ್ಮದಾಬಾದ್ ವಿಮಾನ ದುರಂತ ; ಭಾರೀ ಅನುಮಾನ ಹುಟ್ಟಿಸಿ...
12-07-25 09:25 pm
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
ಸಾಮೂಹಿಕ ಮತಾಂತರ ; ಮೂರೇ ವರ್ಷಕ್ಕೆ ಚಾಂಗೂರ್ ಬಾಬಾನಿ...
12-07-25 02:15 pm
17-07-25 01:51 pm
Mangalore Correspondent
Mangalore Rain, Landslide, Maryhill: ಭಾರೀ ಮಳೆ...
17-07-25 01:34 pm
Wizdom Education, Guruvandana, Mangalore: ಮಂಗ...
17-07-25 01:26 pm
Mangalore Rain, School College Holiday: ಕರಾವಳ...
16-07-25 10:52 pm
ಕೆಂಪು ಕಲ್ಲು, ಮರಳು ಸಮಸ್ಯೆಗೆ ಕಾಂಗ್ರೆಸ್ ಸರ್ಕಾರದ...
16-07-25 01:01 pm
17-07-25 02:30 pm
Mangalore Correspondent
Cyber Crime Tumkur, Facebook, Mangalore Polic...
16-07-25 11:04 pm
Mangalore Crime, Konaje Murder: ಒಂಟಿ ಮಹಿಳೆಯ ಅ...
16-07-25 09:48 pm
Sexual Harassment Odisha News; ಪ್ರಾಧ್ಯಾಪಕನಿಂದ...
16-07-25 04:37 pm
Kavoor police constable arrest, Mangalore: ದೂ...
16-07-25 11:42 am