ಬ್ರೇಕಿಂಗ್ ನ್ಯೂಸ್
01-04-25 09:12 pm Mangalore Correspondent ಕರಾವಳಿ
ಮಂಗಳೂರು, ಎ.1 : ಮಂಗಳೂರು ನಗರ ಮಧ್ಯದ ಕೊಡಿಯಾಲಬೈಲಿನ ಜೈಲಿನಲ್ಲಿ ಜಾಮರ್ ಅಳವಡಿಸಿರುವುದರಿಂದ ಸುತ್ತಮುತ್ತಲಿನ ಸರಕಾರಿ, ಖಾಸಗಿ ಕಚೇರಿ ಇನ್ನಿತರ ಕೆಲಸ ಮಾಡುತ್ತಿರುವವರು ಮತ್ತು ಇತರ ಸಾರ್ವಜನಿಕರಿಗೆ ತೀವ್ರ ಸಮಸ್ಯೆ ಎದುರಾಗಿದೆ. ಇದರ ಬಗ್ಗೆ ಈಗಾಗಲೇ ಬಂಧೀಖಾನೆ ಇಲಾಖೆಯ ಅಧಿಕಾರಿಗಳಿಗೆ ಮನವಿ ಕೊಟ್ಟಿದ್ದೇವೆ. ಇನ್ನು ಮೂರು ದಿನ ಸಮಯ ಕೊಡುತ್ತೇವೆ, ಜಾಮರ್ ಯಂತ್ರ ಸರಿಯಾಗದಿದ್ದರೆ ಜೈಲಿನ ಒಳಗೆ ನುಗ್ಗಿ ಜಾಮರ್ ಯಂತ್ರವನ್ನು ಕಿತ್ತು ಬಿಸಾಕುತ್ತೇವೆ ಎಂದು ಶಾಸಕ ವೇದವ್ಯಾಸ ಕಾಮತ್ ಎಚ್ಚರಿಕೆ ನೀಡಿದ್ದಾರೆ.
ಈ ಬಗ್ಗೆ ಹೇಳಿಕೆ ನೀಡಿರುವ ಶಾಸಕ ಕಾಮತ್, ಜೈಲಿನಲ್ಲಿ ಸಿಬಂದಿ ಮತ್ತು ಅಧಿಕಾರಿಗಳು ತಮ್ಮ ಕೆಲಸ ಸರಿಯಾಗಿ ಮಾಡಿದರೆ ಕೈದಿಗಳಿಗೆ ಮೊಬೈಲ್ ಹೇಗೆ ಸಿಗುತ್ತದೆ. ಅವರ ಕೈಗೆ ಮೊಬೈಲ್ ಕೊಡುವುದು ಯಾರೆಂದು ಪ್ರಶ್ನೆ ಬರುತ್ತದೆ. ಇವರು ಸರಿಯಾಗಿ ಕೆಲಸ ಮಾಡದಿರುವುದರಿಂದಲೇ ಜಾಮರ್ ಅಳವಡಿಸುವ ಪ್ರಮೇಯ ಬಂದಿದೆ. ಆದರೆ ಯಾವ ಜಾಮರ್ ಇದ್ದರೂ ಅದನ್ನು ಜೈಲಿನ ಒಳಗಡೆ ಸೀಮಿತಗೊಳಿಸಿ, ಸಾರ್ವಜನಿಕರಿಗೆ ತೊಂದರೆ ಕೊಡಬೇಡಿ ಎಂದು ಜೈಲು ಅಧಿಕಾರಿಗಳಿಗೆ ಮನವಿ ಕೊಟ್ಟಿದ್ದೇವೆ. ಜಿಲ್ಲಾಡಳಿತ, ಪೊಲೀಸ್ ಕಮಿಷನರ್ ಅವರಿಗೂ ಮನವಿ ನೀಡಿದ್ದೇವೆ. ರಾಜ್ಯ ಸರಕಾರದ ಉನ್ನತ ಅಧಿಕಾರಿಗಳಿಗೂ ತಿಳಿಸಿದ್ದೇವೆ.
ನಗರ ಮಧ್ಯ ಇರುವ ಜೈಲಿನಲ್ಲಿ ಏಕಾಏಕಿ ಜಾಮರ್ ಅಳವಡಿಸಿ ಜನರಿಗೆ ತೊಂದರೆ ಕೊಡುವುದನ್ನು ನೋಡಿಕೊಂಡು ಸುಮ್ಮನಿರಲು ಸಾಧ್ಯವಿಲ್ಲ. ನಾವು ಎಪ್ರಿಲ್ 4ರಂದು ಬಿಜೆಪಿ ಕಾರ್ಯಕರ್ತರು ಸೇರಿಕೊಂಡು ರಾಸ್ತಾರೋಕೊ ನಡೆಸಿ ಜೈಲಿಗೆ ನುಗ್ಗುತ್ತೇವೆ, ಜಾಮರ್ ಯಂತ್ರವನ್ನು ಕಿತ್ತು ಬಿಸಾಕುತ್ತೇವೆ ಎಂದು ಶಾಸಕ ಕಾಮತ್ ಹೇಳಿದ್ದಾರೆ. ಕೈದಿಗಳಿಗೆ ಮೊಬೈಲ್ ನೀಡುವುದು, ಅದನ್ನು ಕಂಟ್ರೋಲ್ ಮಾಡಕ್ಕಾಗದ ಸ್ಥಿತಿಯಾಗಿರುವುದಕ್ಕೆ ಕಾಂಗ್ರೆಸ್ ಆಡಳಿತ ಕಾರಣ. ಇವರಿಂದಾಗಿಯೇ ಕೈದಿಗಳು ಜೈಲಿನಲ್ಲಿದ್ದುಕೊಂಡೇ ಮೊಬೈಲ್ ನಲ್ಲಿ ಧಮಕಿ ಹಾಕುವ ಸ್ಥಿತಿ ಬಂದಿದೆ. ಅದನ್ನು ನಿಯಂತ್ರಣ ಮಾಡಲಾಗದ ಅಧಿಕಾರಿ ವರ್ಗ ಈಗ ಜೈಲಿನೊಳಗೆ ಜಾಮರ್ ಹಾಕಿದ್ದಾರೆ ಎಂದು ಕಾಮತ್ ಹೇಳಿದ್ದಾರೆ.
Mangalore MLA Vedavyas Kamath has threatened to demolish the controversial "Jammer" installation following ongoing unresolved issues that have raised significant concerns among prison authorities. The Jammer, intended to block mobile signals within the vicinity of correctional facilities, has become a point of contention amid allegations of ineffective operation and safety concerns.
10-05-25 10:40 pm
HK News Desk
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
U T Khader, Dinesh Gundurao, Suhas Shetty Mur...
08-05-25 07:50 pm
10-05-25 11:05 pm
HK News Desk
ಎಸ್-400 ಏರ್ ಡಿಫೆನ್ಸ್ ಸಿಸ್ಟಮ್ ಮತ್ತು ಬ್ರಹ್ಮೋಸ್...
10-05-25 09:24 pm
India and Pakistan, Ceasefire: ಮೂರೇ ದಿನದಲ್ಲಿ...
10-05-25 08:28 pm
India-Pakistan war: ಭಾರತ - ಪಾಕಿಸ್ತಾನ ತಕ್ಷಣದಿಂ...
10-05-25 07:25 pm
Indian Military, Pakistan : ತನ್ನ ಮೂರು ವಾಯುನೆಲ...
10-05-25 01:58 pm
10-05-25 07:10 pm
Mangalore Correspondent
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
Mangalore University, U T Khader, Syndicate M...
09-05-25 06:22 pm
Resham Bariga, Belthangady, Indo Pak War, Ant...
09-05-25 03:24 pm
Suhas Shetty Murder Case, Speaker UT Khader,...
09-05-25 01:32 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm