ಬ್ರೇಕಿಂಗ್ ನ್ಯೂಸ್
07-04-25 03:03 pm Mangalore Correspondent ಕರಾವಳಿ
ಬಂಟ್ವಾಳ, ಎ.6 : ಬಂಟ್ವಾಳ ತಾಲೂಕಿನ ಅಮ್ಟಾಡಿ ಲೊರೆಟ್ಟೋಪದವು ನಿವಾಸಿ ಜೀವನ್ ತಾವ್ರೋ (37) ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಬಂಟ್ವಾಳ ನಗರ ಠಾಣೆ ಪೊಲೀಸರು ಇಬ್ಬರು ಯುವಕರನ್ನು ವಶಕ್ಕೆ ಪಡೆದಿದ್ದಾರೆ.
ಲೊರೆಟ್ಟೋಪದವಿನಲ್ಲಿ ವೃದ್ಧ ತಂದೆ- ತಾಯಿ ಜೊತೆಗಿದ್ದುಕೊಂಡು ಪ್ರಗತಿಪರ ಕೃಷಿಕರಾಗಿದ್ದ ಜೀವನ್ ತಾವ್ರೋ ಅವರು ಕಳೆದ ಫೆಬ್ರವರಿ 10ರಂದು ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ವೇಳೆ, ಹಣಕಾಸು ವಿಚಾರದಲ್ಲಿ ಮೋಸ ಆಗಿರುವುದರ ಬಗ್ಗೆ ಮನೆಯಲ್ಲಿ ಡೆತ್ ನೋಟ್ ಬರೆದಿಟ್ಟಿದ್ದರು. ಈ ಬಗ್ಗೆ ಬಂಟ್ವಾಳ ಪೊಲೀಸರು ಆತ್ಮಹತ್ಯೆ ಪ್ರಕರಣ ದಾಖಲಿಸಿದ್ದರೂ ತನಿಖೆ ಮುಂದುವರಿದಿರಲಿಲ್ಲ. ಜೀವನ್ ತಾವ್ರೋಗೆ ಮದುವೆ ಆಗಿರಲಿಲ್ಲ. ಗೆಳೆಯರ ಜೊತೆಗೆ ಉತ್ತಮ ಸಂಬಂಧ ಇಟ್ಟುಕೊಂಡಿದ್ದರು.
ಇದೀಗ ಸಂಬಂಧಿಕರ ಒತ್ತಾಯದ ಮೇರೆಗೆ ಘಟನೆ ಸಂಬಂಧಿಸಿ ತನಿಖೆ ನಡೆಸಿದ ವೇಳೆ ಜೀವನ್ ಅವರ ಹತ್ತಿರದ ಗೆಳೆಯರಾಗಿದ್ದ ಕೆಲವರು ಮನೆಗೆ ಬರುವುದನ್ನು ಬಿಟ್ಟು ದೂರ ಉಳಿದಿದ್ದರು. ಇದರಿಂದ ಸಂಶಯದಲ್ಲಿ ಪೊಲೀಸರು ತನಿಖೆ ನಡೆಸಿದಾಗ ಇವರೊಳಗಿನ ಹಣಕಾಸು ವ್ಯವಹಾರದ ಬಗ್ಗೆ ಮಾಹಿತಿ ಸಿಕ್ಕಿತ್ತು. ಪೊಲೀಸರು ಇದೀಗ ಅದೇ ಪರಿಸರದ ಪ್ರವೀಣ್ ಡೇಸಾ ಮತ್ತು ರೋಹನ್ ಪಿಂಟೋ ಎಂಬವರನ್ನು ಬಂಧಿಸಿದ್ದು ಕೋರ್ಟಿಗೆ ಹಾಜರು ಪಡಿಸಿದ್ದಾರೆ. ಇವರ ಪಾತ್ರವೇನು, ಬೇರೆ ಯಾರೆಲ್ಲ ಭಾಗಿಯಾಗಿದ್ದಾರೆ ಎಂಬ ವಿಚಾರದಲ್ಲಿ ತನಿಖೆ ಆಗಬೇಕಷ್ಟೆ ಎಂದು ಪೊಲೀಸರು ತಿಳಿಸಿದ್ದಾರೆ. ಇದೀಗ ಸೆಕ್ಷನ್ 306 ಅಡಿ ಆತ್ಮಹತ್ಯೆಗೆ ಪ್ರಚೋದನೆಯೆಂದು ಹೆಚ್ಚುವರಿ ಕೇಸು ದಾಖಲಾಗಿದೆ.
Jeevan Tauro suicide case, Two attested by bantwal police in Mangalore. The arrested has been identified as Praveen Desa and Rohan pinto. Jeevan had written a death note where he was cheated financially, based on the death two have been arrested. Jeevan Tauro (38), son of Maxim Tauro & Leticia Tauro, brother of Steeva, Pramila / Sudeep, Passed away on February 10, 2025.
16-07-25 03:58 pm
Bangalore Correspondent
ಕಾವೇರಿ ಆರತಿ ದುಡ್ಡು ಹೊಡೆಯುವ ಸ್ಕೀಮ್, ನೂರು ಕೋಟಿ...
16-07-25 11:47 am
35 IPS Officers Transfer: ರಾಜ್ಯದಲ್ಲಿ 35 ಐಪಿಎಸ...
15-07-25 01:32 pm
ನಟಿ ಸರೋಜಾ ದೇವಿ- ಎಸ್ಸೆಂ ಕೃಷ್ಣ ಪ್ರೇಮ ಪ್ರಸಂಗ ; ಮ...
15-07-25 12:27 pm
ಕೇವಲ 2 ಸಾವಿರ ಲಂಚ ಕೇಳಿ ಸಿಕ್ಕಿಬಿದ್ದ ಪಂಚಾಯತ್ ಪಿಡ...
15-07-25 10:35 am
14-07-25 03:24 pm
HK News Desk
ಅಹ್ಮದಾಬಾದ್ ವಿಮಾನ ದುರಂತ ; ಭಾರೀ ಅನುಮಾನ ಹುಟ್ಟಿಸಿ...
12-07-25 09:25 pm
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
ಸಾಮೂಹಿಕ ಮತಾಂತರ ; ಮೂರೇ ವರ್ಷಕ್ಕೆ ಚಾಂಗೂರ್ ಬಾಬಾನಿ...
12-07-25 02:15 pm
Coimbatore Serial Blasts, 'Tailor Raja' Arres...
11-07-25 12:08 pm
16-07-25 01:01 pm
Mangalore Correspondent
Dharmasthala Missing case, Ananya Bhat, Compl...
15-07-25 10:40 pm
Udupi Rain, Fishermen Missing: ಉಡುಪಿ ; ಭಾರೀ ಗ...
15-07-25 10:13 pm
Kmc Manipal Hospital, Mangalore, Health Card:...
15-07-25 07:19 pm
Karkala Parashurama Theme Park: ಕಾರ್ಕಳ ಪರಶುರಾ...
15-07-25 02:28 pm
16-07-25 04:37 pm
HK News Desk
Kavoor police constable arrest, Mangalore: ದೂ...
16-07-25 11:42 am
ಸುಂದರವಾಗಿದ್ದಕ್ಕೆ ತಲೆ ಬೋಳಿಸಿ ಮನೆಯಲ್ಲಿ ಕೂಡಿಹಾಕಿ...
15-07-25 10:57 pm
Lawrence Bishnoi, Bangalore, Crime: ಡಾನ್ ಲಾರೆ...
15-07-25 06:52 pm
Mangalore, Moodbidri college, Rape, Blackmail...
15-07-25 06:07 pm