ಬ್ರೇಕಿಂಗ್ ನ್ಯೂಸ್
07-04-25 03:38 pm Mangalore Correspondent ಕರಾವಳಿ
ಮಂಗಳೂರು, ಎ.6 : ಫರಂಗಿಪೇಟೆ ಪಿಯುಸಿ ವಿದ್ಯಾರ್ಥಿ ದಿಗಂತ್ ನಾಪತ್ತೆ ಪ್ರಕರಣದ ಹಿಂದೆ ಗಾಂಜಾ ಗ್ಯಾಂಗ್ ಕೈವಾಡವಿದ್ದು, ಪೊಲೀಸರು ವ್ಯವಸ್ಥಿತ ರೀತಿಯಲ್ಲಿ ಕೇಸನ್ನು ಮುಚ್ಚಿ ಹಾಕಿದ್ದಾರೆ. ನಮ್ಮ ನಾಯಕರೂ ಪೋಲೀಸರು ಹೇಳಿದ್ದನ್ನು ನಂಬಿ ಪ್ರಕರಣವನ್ನು ಕೊನೆಗೊಳಿಸಿದ್ದಾರೆ ಎಂದು ಆರೆಸ್ಸೆಸ್ ಹಿರಿಯ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಹೇಳಿದ್ದಾರೆ.
ಬಂಟ್ವಾಳದ ಕಾರ್ಯಕ್ರಮ ಒಂದರಲ್ಲಿ ಮಾತನಾಡಿದ ಅವರು ಫರಂಗಿಪೇಟೆ ವಿದ್ಯಾರ್ಥಿ ದಿಗಂತ್ ನಾಪತ್ತೆ ಹಿಂದೆ ಗಾಂಜಾ ಗ್ಯಾಂಗ್ ಕೈವಾಡ ಇರೋದು ಸ್ಪಷ್ಟ. ಆದರೆ ಪೊಲೀಸರು ದಿಗಂತ್ ನಾಪತ್ತೆ ಪ್ರಕರಣವನ್ನು ತಿರುಚುವ ಪ್ರಯತ್ನ ಮಾಡಿದ್ದಾರೆ ಎಂದು ಆರೋಪಿಸಿದರು. ಪೊಲೀಸರು ದಿಗಂತ್ ಪೋಷಕರನ್ನೂ ತಾವು ಹೇಳುವಂತೆ ಕೇಳಬೇಕೆಂದು ಒತ್ತಾಯಿಸಿದ್ದಾರೆ. ಉಡುಪಿಯಲ್ಲಿ ಪತ್ತೆಯಾದ ದಿಗಂತ್ ನನ್ನು ಪೊಲೀಸರು ರಿಮಾಂಡ್ ಹೋಮ್ ಗೆ ಕೊಂಡೊಯ್ದಿದ್ದರು. ಅಲ್ಲಿಗೆ ದಿಗಂತ್ ತಂದೆ-ತಾಯಿ ಆತನ ಭೇಟಿಗೆ ಹೋಗಿದ್ದರು, ಆ ಸಂದರ್ಭದಲ್ಲಿ ಪೋಲೀಸರು ಕೂಡ ಉಪಸ್ಥಿತರಿದ್ದು, ತಾವು ಹೇಳಿದಂತೆ ಹೇಳಲು ದಿಗಂತ್ ಗೆ ಒತ್ತಾಯಿಸಿದ್ದರು. ಪೋಲೀಸರು ಅವರ ಮೇಲಿನವರ ಒತ್ತಡಕ್ಕೆ ಮಣಿದು ಈ ಕೆಲಸ ಮಾಡಿರಬೇಕು ಎಂದರು.
ಪರೀಕ್ಷೆಗೆ ಹೆದರಿ ಮನೆಯಿಂದ ಹೋಗಿರುವುದಾಗಿ ದಿಗಂತ್ ಹೇಳಿದ್ದಾನೆ ಎಂದು ಪೊಲೀಸರೇ ಪೋಷಕರಿಗೆ ಮಾಹಿತಿ ನೀಡಿದ್ದಾರೆ. ಆದರೆ ಉಡುಪಿಯಲ್ಲಿ ದಿಗಂತ್ ಪತ್ತೆಯಾದ ಕೂಡಲೇ ಮಾಲ್ ಒಂದರ ಮ್ಯಾನೇಜರ್ ಈ ವಿಚಾರವನ್ನು ಅವನ ತಾಯಿಗೆ ತಿಳಿಸಿದ್ದರು. ಆ ಸಂದರ್ಭದಲ್ಲಿ ದಿಗಂತ್ ನನ್ನನ್ನು ಯಾರೋ ಕರೆದುಕೊಂಡು ಹೋಗಿರುವುದಾಗಿ ತಿಳಿಸಿದ್ದ, ಪೋಲೀಸರು ಕೂಡ ದಿಗಂತ್ ನಾಪತ್ತೆ ವಿಚಾರದಲ್ಲಿ ಹಲವು ಕಥೆ ಕಟ್ಟಿದ್ದಾರೆ. ಮನೆಯಿಂದ ಹೊರಟ ದಿಗಂತ್ ಬೈಕ್ ಮೂಲಕ ತೆರಳಿದ್ದಾನೆ ಎಂದಿದ್ದಾರೆ. ಆತ ತೆರಳಿದ ಬೈಕ್ ಯಾವುದೆಂದು ಪೋಲೀಸರು ಪತ್ತೆ ಹಚ್ಚಿಲ್ಲ. ಪರೀಕ್ಷೆಗೆ ಹೆದರಿ ಓಡಿ ಹೋಗುವ ದಿಗಂತ್ ಮನೆಗೆ ಬಂದು ಓಡಿ ಹೋಗುವ ಅಗತ್ಯ ಇರಲಿಲ್ಲ. ತನ್ನ ಕಾಲೇಜಿನಿಂದಲೇ ಓಡಿ ಹೋಗಬಹುದಿತ್ತು. ಅಲ್ಲದೆ ಓಡಿ ಹೋಗುವ ಸಂದರ್ಭದಲ್ಲಿ ತನ್ನ ಮೊಬೈಲ್ ಮತ್ತು ಚಪ್ಪಲಿಯನ್ನು ಬಿಟ್ಟು ಹೋಗುವ ಅಗತ್ಯವೇನಿತ್ತು ಎಂದು ಪ್ರಶ್ನಿಸಿದ್ದಾರೆ.
ಈ ಎಲ್ಲಾ ಘಟನೆಯ ಹಿಂದೆ ಗಾಂಜಾ ಗ್ಯಾಂಗ್ ನ ಕೈವಾಡವಿದೆ. ದುರಾದೃಷ್ಟವೆಂದರೆ ನಮ್ಮ ನಾಯಕರೂ ಪೋಲೀಸರು ಹೇಳಿದ್ದನ್ನು ನಂಬಿಕೊಂಡು ಪ್ರಕರಣ ಕೊನೆಗೊಳಿಸಿದ್ದಾರೆ. ಗಾಂಜಾ ವ್ಯಸನಿಗಳು ದಿಗಂತ್ ನನ್ನು ತನ್ನ ಬಲೆಗೆ ಬೀಳಿಸಲು ಯತ್ನಿಸಿದ್ದಾರೆ. ದೊಡ್ಡ ಗಾಂಜಾ ಗ್ಯಾಂಗ್ ಫರಂಗಿಪೇಟೆ ಪರಿಸರದಲ್ಲಿ ಕಾರ್ಯಾಚರಿಸುತ್ತಿದ್ದು ಎಲ್ಲ ಕೋಮಿನವರೂ ಈ ಗ್ಯಾಂಗ್ ನಲ್ಲಿದ್ದಾರೆ. ಗಾಂಜಾ ಗ್ಯಾಂಗ್ ಗೆ ಹೆದರಿ ದಿಗಂತ್ ಪ್ರಕರಣವನ್ನು ಮುಚ್ಚಿ ಹಾಕಲಾಗಿದೆ. ನನಗೂ ಆ ಗಾಂಜಾ ಗ್ಯಾಂಗ್ ತೊಂದರೆ ಮಾಡುವ ಸಾಧ್ಯತೆಯಿದೆ. ಆದರೆ ನಾನು ಅದಕ್ಕೆಲ್ಲಾ ಹೆದರುವ ವ್ಯಕ್ತಿಯಲ್ಲ ಎಂದು ಪ್ರಭಾಕರ್ ಭಟ್ ಹೇಳಿದ್ದಾರೆ.
In a shocking revelation, Dr. Kalladka Prabhakar Bhat has alleged that a drug gang may be involved in the mysterious disappearance of local influencer Mangalore Diganth. He has further accused law enforcement agencies of attempting to divert attention away from this grim possibility.
16-07-25 03:58 pm
Bangalore Correspondent
ಕಾವೇರಿ ಆರತಿ ದುಡ್ಡು ಹೊಡೆಯುವ ಸ್ಕೀಮ್, ನೂರು ಕೋಟಿ...
16-07-25 11:47 am
35 IPS Officers Transfer: ರಾಜ್ಯದಲ್ಲಿ 35 ಐಪಿಎಸ...
15-07-25 01:32 pm
ನಟಿ ಸರೋಜಾ ದೇವಿ- ಎಸ್ಸೆಂ ಕೃಷ್ಣ ಪ್ರೇಮ ಪ್ರಸಂಗ ; ಮ...
15-07-25 12:27 pm
ಕೇವಲ 2 ಸಾವಿರ ಲಂಚ ಕೇಳಿ ಸಿಕ್ಕಿಬಿದ್ದ ಪಂಚಾಯತ್ ಪಿಡ...
15-07-25 10:35 am
14-07-25 03:24 pm
HK News Desk
ಅಹ್ಮದಾಬಾದ್ ವಿಮಾನ ದುರಂತ ; ಭಾರೀ ಅನುಮಾನ ಹುಟ್ಟಿಸಿ...
12-07-25 09:25 pm
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
ಸಾಮೂಹಿಕ ಮತಾಂತರ ; ಮೂರೇ ವರ್ಷಕ್ಕೆ ಚಾಂಗೂರ್ ಬಾಬಾನಿ...
12-07-25 02:15 pm
Coimbatore Serial Blasts, 'Tailor Raja' Arres...
11-07-25 12:08 pm
16-07-25 01:01 pm
Mangalore Correspondent
Dharmasthala Missing case, Ananya Bhat, Compl...
15-07-25 10:40 pm
Udupi Rain, Fishermen Missing: ಉಡುಪಿ ; ಭಾರೀ ಗ...
15-07-25 10:13 pm
Kmc Manipal Hospital, Mangalore, Health Card:...
15-07-25 07:19 pm
Karkala Parashurama Theme Park: ಕಾರ್ಕಳ ಪರಶುರಾ...
15-07-25 02:28 pm
16-07-25 04:37 pm
HK News Desk
Kavoor police constable arrest, Mangalore: ದೂ...
16-07-25 11:42 am
ಸುಂದರವಾಗಿದ್ದಕ್ಕೆ ತಲೆ ಬೋಳಿಸಿ ಮನೆಯಲ್ಲಿ ಕೂಡಿಹಾಕಿ...
15-07-25 10:57 pm
Lawrence Bishnoi, Bangalore, Crime: ಡಾನ್ ಲಾರೆ...
15-07-25 06:52 pm
Mangalore, Moodbidri college, Rape, Blackmail...
15-07-25 06:07 pm