ಬ್ರೇಕಿಂಗ್ ನ್ಯೂಸ್
18-12-20 10:15 pm Mangaluru Correspondent ಕರಾವಳಿ
ಮಂಗಳೂರು, ಡಿ.18: ಲವ್ ಜಿಹಾದ್ ವಿಷ ವರ್ತುಲಕ್ಕೆ ಬಲಿಯಾಗಿ ಗಂಡ ಮತ್ತು ಆತನ ಕುಟುಂಬದಿಂದ ತಿರಸ್ಕಾರಕ್ಕೆ ಒಳಗಾಗಿರುವ ಆಸಿಯಾ ಯಾನೆ ಶಾಂತಿ ಜೂಬಿ ಇಂದು ಮತ್ತೊಂದು ಹೆಜ್ಜೆ ಇಟ್ಟಿದ್ದಾರೆ.
ಇಂದು ಬೆಳ್ಳಂಬೆಳಗ್ಗೆ ಆಸಿಯಾ ಆಧುನಿಕ್ ಹ್ಯೂಮನ್ ರೈಟ್ಸ್ ಸಂಘಟನೆಯ ಸದಸ್ಯರ ಜೊತೆಗೆ ಸುಳ್ಯದಲ್ಲಿರುವ ಗಂಡನ ಮನೆಗೆ ತೆರಳಿದ್ದಾರೆ. ಬೆಳಗ್ಗೆ ಆರು ಗಂಟೆಗೆ ಗಂಡನ ಮನೆಯ ಒಳಗೆ ಕಾಲಿಡುತ್ತಿದ್ದಂತೆ, ಮನೆಯವರು ವಿರೋಧ ವ್ಯಕ್ತಪಡಿಸಿದ್ದಾರೆ. ಇದರಿಂದ ಮನೆಯ ಒಳಗೇ ರಂಪಾಟ ನಡೆದಿದೆ. ಗಂಡನ ತಂದೆ ಮತ್ತು ಅವರ ಇನ್ನೊಬ್ಬ ಮಗ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಈ ವೇಳೆ, ತಳ್ಳಾಟ ನಡೆದಿದ್ದು, ಆಸಿಯಾಳ ಪರ್ಸ್ ಮತ್ತು ಮೊಬೈಲ್ ನೆಲಕ್ಕೆ ಬಿದ್ದಿದೆ. ಈ ವೇಳೆ, ಪತಿ ಇಬ್ರಾಹಿಂ ಸೋದರ ಶಿಹಾಬ್ ಪರ್ಸ್ ಮತ್ತು ಮೊಬೈಲ್ ಎತ್ತಿಕೊಂಡು ಹೊರಗೆ ಹೋಗಿದ್ದಾನೆ.
ಆನಂತ್ರವೂ ಮಾವ ಮತ್ತು ಆಸಿಯಾ ನಡುವೆ ತಳ್ಳಾಟ ನಡೆದಿದ್ದು, ಬಳಿಕ ಗಂಡನ ಕೋಣೆಗೆ ತೆರಳಿ ಬಾಗಿಲು ಹಾಕ್ಕೊಂಡಿದ್ದಾರೆ. ಆದರೆ, ಗಂಡನ ತಂದೆ ಕೋಣೆಯ ಬಾಗಿಲಿನ ಚಿಲಕ ಮುರಿದು ಒಳಗೆ ನುಗ್ಗಿದ್ದಾರೆ. ಆದರೆ, ಏನೇ ಮಾಡಿದ್ರೂ ನಾನು ಹೊರಗೆ ಹೋಗಲ್ಲ. ಇದು ನನ್ನ ಗಂಡನ ಮನೆ. ಇದರಲ್ಲಿ ನನಗೂ ಹಕ್ಕಿದೆ ಎಂದು ಆಸಿಯಾ ಕೂಡ ಪಟ್ಟುಹಿಡಿದಿದ್ದಾರೆ. ತಳ್ಳಾಟ ಸಂದರ್ಭ ಆಸಿಯಾಳ ಹಣೆಗೆ ಗೋಡೆ ತಾಗಿ ಪೆಟ್ಟು ಬಿದ್ದಿದೆ.
ಇವೆಲ್ಲದಕ್ಕೂ ಹ್ಯೂಮನ್ ರೈಟ್ಸ್ ಸಂಘಟನೆ ಸದಸ್ಯರು ಸಾಕ್ಷಿಯಾಗಿದ್ದು, ಬಳಿಕ ಅಲ್ಲಿಂದ ಮರಳಿದ್ದಾರೆ. ಆಸಿಯಾ ತಾನು ಇದೇ ಮನೆಯಲ್ಲಿ ಇರುತ್ತೇನೆಂದು ಅಲ್ಲಿ ಉಳಿದುಕೊಂಡಿದ್ದಾರೆ. ಹೀಗೆಂದು ಹ್ಯೂಮನ್ ರೈಟ್ಸ್ ಸಂಘಟನೆಯ ಸದಸ್ಯರು ‘ಹೆಡ್ ಲೈನ್ ಕರ್ನಾಟಕ’ಕ್ಕೆ ತಿಳಿಸಿದ್ದಾರೆ.
Asia Joobi Asiya Ibrahim Khaleel Kattekar a victim of love jihad has finally entered her husband's house with the help of Adunik Human Rights Team but she has been assaulted by her inlaws at Sullia. The Husband is said to be absconding.
07-09-25 10:17 am
Bangalore Correspondent
Mandya Suicide, Marriage: ಮದುವೆ ಕ್ಯಾನ್ಸಲ್ ಆಗಿ...
07-09-25 10:11 am
Sirsi Airgun, Murder, Crime: ಶಿರಸಿ; ಏರ್ಗನ್ ಗ...
06-09-25 08:28 pm
Prathap Simha, Mysuru Dasara: ದಸರಾ ಕುಸ್ತಿ ; ಬ...
06-09-25 07:26 pm
Sonia Gandhi, Dharmasthala: Who Killed the Wo...
05-09-25 11:15 pm
06-09-25 10:34 am
HK News Desk
ಗಣೇಶ ವಿಸರ್ಜನೆ ಸಡಗರ ಹಿನ್ನೆಲೆ ; ಮುಂಬೈ ಮಹಾನಗರದಲ್...
04-09-25 08:47 pm
ಜಿಎಸ್ಟಿ ತೆರಿಗೆಯಲ್ಲಿ ಭಾರೀ ಪರಿಷ್ಕರಣೆ ; ಕಡೆಗೂ ತೆ...
04-09-25 10:54 am
ತಂದೆ ಸ್ಥಾಪಿಸಿದ ಬಿಆರ್ ಎಸ್ ಪಕ್ಷದಿಂದ ಮಗಳಿಗೆ ಗೇಟ್...
03-09-25 10:04 pm
ಹೊಳೆಯಂತಾದ ದೆಹಲಿಯ ಬೀದಿಗಳು, ನೀರಲ್ಲೇ ಮಾರ್ಕೆಟ್!...
03-09-25 09:59 pm
07-09-25 02:25 pm
Mangalore Correspondent
Ullal, Mangalore Police: ಮೊದಲ ಪತ್ನಿಗೆ ಜೀವನಾಂಶ...
06-09-25 10:59 pm
Mangalore, Dharmasthala, Vittal Gowda, Skull:...
06-09-25 10:15 pm
ಗೋಮಾಂಸ ಭಕ್ಷಕರಿಗೆ ರಾಜ್ಯ ಸರ್ಕಾರ ಶಾದಿ ಭಾಗ್ಯ ರೀತಿ...
06-09-25 05:56 pm
Mla Vedavyas Kamath, Mangalore: ಮಳೆಗೆ ಹದಗೆಟ್ಟ...
06-09-25 04:46 pm
07-09-25 03:34 pm
Mangalore Correspondent
Mangalore SAF Police Constable, Arrest: ವಕೀಲ...
06-09-25 08:32 pm
60 Crore Fraud, Actress Shilpa Shetty, Raj Ku...
06-09-25 07:45 pm
ಲಷ್ಕರ್ ಉಗ್ರರ ಹೆಸರಲ್ಲಿ ಮುಂಬೈ ಸ್ಫೋಟದ ಬೆದರಿಕೆ ಸಂ...
06-09-25 05:26 pm
Udupi cyber fraud crime; ಷೇರು ಟ್ರೇಡಿಂಗ್ ಹೆಸರಿ...
06-09-25 01:58 pm