ಬ್ರೇಕಿಂಗ್ ನ್ಯೂಸ್
14-04-25 09:20 pm Mangalore Correspondent ಕರಾವಳಿ
ಮಂಗಳೂರು, ಎ.14 : ಕಾಶೀ ಮಠದ ಹಿರಿಯ ಯತಿವರ್ಯ, ಮಹಾತಪಸ್ವಿ ಶ್ರೀಮದ್ ಸುಧೀಂದ್ರ ತೀರ್ಥ ಸ್ವಾಮೀಜಿಯವರ ಜನ್ಮ ಶತಮಾನೋತ್ಸವ ಆಚರಣೆ ಎಪ್ರಿಲ್ 8 ರಿಂದ 14ರ ತನಕ ಜರುಗಿದ್ದು, ಎಪ್ರಿಲ್ 14 ರಂದು ಶ್ರೀಗಳ ನೂರನೇ ಜನ್ಮನಕ್ಷತ್ರದಂದು ವಿಶೇಷ ಕಾರ್ಯಕ್ರಮಗಳು ಉತ್ತರಾಖಂಡದ ಹರಿದ್ವಾರದಲ್ಲಿರುವ ವ್ಯಾಸಾಶ್ರಮದಲ್ಲಿ ನಡೆದವು.
ಬೆಳಗ್ಗೆ 1008 ವಿಶೇಷ ಪವಮಾನಾಭಿಷೇಕ ಸೇವೆ ನಡೆಯಿತು. ಭಾರತದ ವಿವಿಧ ದಿಕ್ಕುಗಳಲ್ಲಿ ಹರಿಯುತ್ತಿರುವ ಪವಿತ್ರ ನದಿಗಳ ತೀರ್ಥವನ್ನು ಸಂಗ್ರಹಿಸಿ ಅದನ್ನು ಹರಿದ್ವಾರದ ವ್ಯಾಸಾಶ್ರಮಕ್ಕೆ ತರಲಾಗಿತ್ತು. ಇದು ಚಾರಿತ್ರಿಕವಾಗಿರುವ ದಾಖಲೆಯಾಗಿದೆ. ಎಲ್ಲಾ ಪವಿತ್ರ ನದಿಗಳ ತೀರ್ಥವನ್ನು ಸ್ವಾಮೀಜಿಯವರ ವೃಂದಾವನದಲ್ಲಿ ಅಭಿಷೇಕ ಮಾಡಲಾಯಿತು. ಇನ್ನು 1008 ಬೆಳ್ಳಿ ನಾಣ್ಯಗಳನ್ನು ಸೇವಾದಾರರಿಗೆ ವಿತರಿಸಲಾಯಿತು. ಆಬಳಿಕ ಸ್ವರ್ಣ ಪುಷ್ಪಾರ್ಚನಾ ಕಾರ್ಯಕ್ರಮ ನಡೆಯಿತು. ಮೊದಲಿಗೆ ವೃಂದಾವನದಲ್ಲಿರುವ ಹನುಮಂತ ದೇವರ ಪಾದಗಳಿಗೆ ಸ್ವರ್ಣ ಪುಷ್ಪಾಚನೆ ನಡೆಸಲಾಯಿತು. ಬಳಿಕ ಗುರುಪಾದುಕೆಗೆ ಸ್ವರ್ಣ ಪುಷ್ಪಾಚನೆ ನಡೆಯಿತು. ಆ ಸ್ವರ್ಣ ಪುಷ್ಪಗಳನ್ನು ಪ್ರಸಾದ ರೂಪದಲ್ಲಿ ಭಕ್ತರಿಗೆ ವಿತರಿಸಲಾಯಿತು.




ಆಗಮಿಸಿದ ಎಲ್ಲಾ ಭಕ್ತರಿಗೆ ಕಾಶೀ ಮಠಾಧೀಶರಾದ ಶ್ರೀಮದ್ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರ ದಿವ್ಯ ಹಸ್ತದಿಂದ ಗಂಧ ಪ್ರಸಾದ ನೀಡಲಾಯಿತು. ತಿರುಪತಿ ಲಾಡು, ಫಲವಸ್ತು, ಮಹಿಳೆಯರಿಗೆ ಸೀರೆ, ಗಂಡಸರಿಗೆ ಧೋತಿ, ಹೆಣ್ಣು ಮಕ್ಕಳಿಗೆ, ಗಂಡು ಮಕ್ಕಳಿಗೆ ವಸ್ತ್ರಗಳನ್ನು ವಿತರಿಸಲಾಯಿತು. ಸುಧೀಂದ್ರ ವೇದಿಕೆಯಲ್ಲಿ ವಿಷ್ಣು ಸಹಸ್ರನಾಮ ಪಠಣ, ಸಾಮೂಹಿಕ ಕುಂಕುಮಾರ್ಚನೆ, ಸಾಮೂಹಿಕ ದುರ್ಗಾ ನಮಸ್ಕಾರ, ಸಹಸ್ರ ಚಂಡಿಕಾಯಾಗ, ಋತ್ಮಿಕಾ ಯಾಗ, ಗುರು ಗುಣಗಾನ, ಭಜನಾ ಕಾರ್ಯಕ್ರಮಗಳು ನಡೆಯಿತು. ಸಂಜೆ ಶ್ರೀಮದ್ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರು ಆರ್ಶೀವಚನ ನೀಡಿದರು. ದೇಶ, ವಿದೇಶದಿಂದ ನಾಲ್ಕು ಸಾವಿರಕ್ಕೂ ಮಿಕ್ಕಿ ಭಕ್ತರು ಈ ಪುಣ್ಯ ಕಾರ್ಯದಲ್ಲಿ ಭಾಗವಹಿಸಿ ಧನ್ಯರಾದರು.
ಮುಂಬೈಯ ಜಿಎಸ್ ಬಿ ಸೇವಾ ಮಂಡಲ, ಸುಕೃತೀಂದ್ರ ಸ್ವಾಮಿ ಸೇವಾ ಪ್ರತಿಷ್ಠಾನ, ದೆಹಲಿ ಸಮಾಜ, ಬೆಂಗಳೂರು ಸಮಾಜ ಸಹಿತ ಗೌಡ ಸಾರಸ್ವತ ಬ್ರಾಹ್ಮಣ ಸಮಾಜದ ವಿವಿಧ ಸಂಘಟನೆಗಳ ಪ್ರಮುಖರು, ಕಾರ್ಯಕರ್ತರು, ವೈದಿಕ ವೃಂದ ಈ ಕಾರ್ಯಕ್ರಮದ ಯಶಸ್ಸಿಗಾಗಿ ಶ್ರಮಿಸಿದರು.
In a grand celebration filled with reverence and devotion, the birth centenary of Sudhindra Tirtha Swamiji was commemorated on [Insert date of event] at Haridwar. The event brought together a multitude of devotees, religious leaders, and dignitaries who gathered to honor the legacy of the revered Swamiji, who has made significant contributions to spirituality and social upliftment.
11-07-26 01:48 pm
HK News Staffer
ಮೈಸೂರು ದಸರಾದಲ್ಲಿ ಕಂಬಳ ನಡೆಸಿಯೇ ಸಿದ್ಧ; ಎಲ್ಲ ಸಿದ...
11-07-26 11:42 am
ಕರೂರ್ಗೆ ಸಿಎಂ ವಿಜಯ್ ಭೇಟಿ ; ಕಾಲ್ತುಳಿತ ಸಂತ್ರಸ್ತ...
10-07-26 10:12 pm
ರಾಮಮಂದಿರದ ಶ್ರೇಯಸ್ಸು ಪಡೆದವರೇ, ದೇಣಿಗೆ ಕಳ್ಳತನದ ಹ...
10-07-26 07:42 pm
ಸಚಿವ ಸಂಪುಟ ವಿಸ್ತರಣೆಯಾದರೆ ಸರ್ಕಾರ ಸ್ವಲ್ಪಮಟ್ಟಿಗೆ...
09-07-26 02:56 pm
11-07-26 09:29 pm
HK News Staffer
ವಿಯೆಟ್ನಾಂ ದ್ವೀಪ ಸಮೂಹದಲ್ಲಿ ಭಾರತೀಯ ಪ್ರವಾಸಿಗರಿದ್...
11-07-26 04:31 pm
ರಾಮ ಮಂದಿರದ ದೇಣಿಗೆ ಕಳ್ಳತನ; ಕದ್ದ ಹಣವನ್ನು ಷೇರು ಮ...
11-07-26 11:48 am
ಕರೂರ್ಗೆ ಸಿಎಂ ವಿಜಯ್ ಭೇಟಿ ; ಕಾಲ್ತುಳಿತ ಸಂತ್ರಸ್ತ...
10-07-26 10:46 pm
ಮತ್ತೆ ಗಲ್ಫ್ ಉದ್ವಿಗ್ನ ; ಇರಾನ್ ಮೇಲೆ ಮುಗಿಬಿದ್ದ ಅ...
09-07-26 03:40 pm
11-07-26 06:32 pm
HK News Staffer
ಬಾಂಗ್ಲಾನ್ನರ ಬಂಧನ ; ಇವರನ್ನು ಮತಪಟ್ಟಿಗೆ ಸೇರಿಸಲು...
11-07-26 04:26 pm
ಮಂಗಳೂರಿನಲ್ಲಿ ಜಾಂಡೀಸ್ ಆತಂಕ ; ಎರಡು ವಾರಗಳಲ್ಲಿ 19...
10-07-26 05:25 pm
ಬಾಲಕನಿಗೆ ಛಡಿಯೇಟು ; ಕಾಟಿಪಳ್ಳ ಮದ್ರಸಾ ಶಿಕ್ಷಕ ಉಸ್...
09-07-26 11:09 pm
ಮೋದಿಯನ್ನ ಪ್ರಶ್ನಿಸುವ ಕೈ ಮುಖಂಡ ಅಭಿಷೇಕ್ ಮೂಡಾ ಭ್ರ...
09-07-26 10:47 pm
12-07-26 10:13 pm
HK News Staffer
ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದಲ್ಲಿ ಕೊನೆಗೂ ಎನ್ಐ...
12-07-26 02:16 pm
ಬೆಂಗಳೂರಿನಲ್ಲಿ ಬೆಚ್ಚಿಬೀಳಿಸಿದ ತ್ರಿವಳಿ ಕೊಲೆ ; ತಾ...
11-07-26 08:40 pm
ಸಣ್ಣ ಗಾಯಕ್ಕೆ ಚಿಕಿತ್ಸೆ, ಆದರೆ ಮರಳಲಿಲ್ಲ ಪ್ರಜ್ಞೆ...
11-07-26 08:37 pm
ಮಂಗಳೂರು- ವಿಟ್ಲ ಖಾಸಗಿ ಬಸ್ಸಿನಲ್ಲಿ ವಿದ್ಯಾರ್ಥಿನಿಯ...
11-07-26 04:28 pm