ಬ್ರೇಕಿಂಗ್ ನ್ಯೂಸ್
19-12-20 05:49 pm Mangalore Correspondent ಕರಾವಳಿ
ಮಂಗಳೂರು, ಡಿ.19: ಎಂಟು ವರ್ಷದ ಬಾಲಕನ ಅಪಹರಣ ಪ್ರಕರಣ ಸಂಬಂಧಿಸಿ, ಸದ್ಯಕ್ಕೆ ಆರು ಮಂದಿಯನ್ನು ಬಂಧಿಸಲಾಗಿದೆ. ಈ ಆರು ಜನರು ಕೃತ್ಯದಲ್ಲಿ ಭಾಗಿಯಾಗಿದ್ದು ಇವರಿಗೆ ಸುಪಾರಿ ಕೊಟ್ಟ ವ್ಯಕ್ತಿ ಬೇರೆ ಇದ್ದಾನೆ. ಆತನ ಬಗ್ಗೆ ಮಾಹಿತಿ ಕಲೆ ಹಾಕಿದ್ದು ಶೀಘ್ರದಲ್ಲೇ ಬಂಧಿಸುತ್ತೇವೆ ಎಂದು ದಕ್ಷಿಣ ಕನ್ನಡ ಎಸ್ಪಿ ಲಕ್ಷ್ಮೀಪ್ರಸಾದ್ ಹೇಳಿದ್ದಾರೆ.
ಅಪಹರಣ ಪ್ರಕರಣವನ್ನು ಕೇವಲ 36 ಗಂಟೆಯಲ್ಲಿ ಭೇದಿಸಿದ ಹುಮ್ಮಸ್ಸಿನಲ್ಲಿದ್ದ ಎಸ್ಪಿ ಲಕ್ಷ್ಮೀಪ್ರಸಾದ್, ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿ ಕರೆದು ಕಾರ್ಯಾಚರಣೆ ಬಗ್ಗೆ ಮಾಹಿತಿ ನೀಡಿದ್ದಾರೆ. ಪ್ರಕರಣದ ಬಗ್ಗೆ ಮೊದಲೇ ಮನೆಯವರಿಂದ ಮಾಹಿತಿ ಪಡೆದಿದ್ದೆವು. ಈ ವೇಳೆ, ಸಿಕ್ಕ ಮಾಹಿತಿ ಮತ್ತು ನಾವು ಸಂಗ್ರಹಿಸಿದ ಮಾಹಿತಿ ಆಧರಿಸಿ ನಾಲ್ಕು ಪೊಲೀಸ್ ತಂಡಗಳನ್ನು ರಚಿಸಿದ್ದು ಚಿಕ್ಕಮಗಳೂರಿನ ಮೂಡಿಗೆರೆ, ಮಂಡ್ಯ ಜಿಲ್ಲೆಯ ಮಧುಗಿರಿ, ಹಾಸನ, ಬೆಂಗಳೂರಿಗೆ ತೆರಳಿತ್ತು. ಮಧುಗಿರಿಗೆ ತೆರಳಿದ್ದ ತಂಡಕ್ಕೆ ಒಂದಷ್ಟು ಮಾಹಿತಿಗಳು ಸಿಕ್ಕಿದ್ದವು ಎಂದು ಹೇಳಿದರು.

ಮಂಡ್ಯ ಜಿಲ್ಲೆಯ ಬೇವಿನಹಳ್ಳಿ ಗ್ರಾಮದ ದೇವಲಕೆರೆಯ ರಂಜಿತ್ (22), ಕೆ.ಎಂ.ದೊಡ್ಡಿ ಸಮೀಪದ ಕೋಡಿಕೆರೆ ಗ್ರಾಮದ ಹನುಮಂತು(21), ಮೈಸೂರು ಜಿಲ್ಲೆಯ ಅರಸೀಕೆರೆ ತಾಲೂಕಿನ ತಲಕಾಡು ಗ್ರಾಮದ ಗಂಗಾಧರ (25), ಬೆಂಗಳೂರಿನ ದೊಡ್ಡಮ್ಮನ ಹಳ್ಳ 2ನೇ ಕ್ರಾಸ್ ನಿವಾಸಿ ಕಮಲ್(22) ಎಂಬ ನಾಲ್ವರನ್ನು ಪ್ರಮುಖ ಆರೋಪಿ ಬಾಡಿಗೆಗೆ ಪಡೆದು, ಸ್ಕೆಚ್ ರೂಪಿಸಿದ್ದ. ಅದಕ್ಕಾಗಿ ಏಳು ಲಕ್ಷ ರೂ. ನೀಡುವುದಾಗಿ ಹೇಳಿದ್ದ. ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಕೂರ್ನಹೊಸಳ್ಳಿ ಗ್ರಾಮದ ಮಂಜುನಾಥ್ ಮತ್ತು ಮಹೇಶ್ ಆರೋಪಿಗಳಿಗೆ ಸಹಕರಿಸಿದ್ದರು. ಉಜಿರೆಯಿಂದ ನೇರವಾಗಿ ಸುಳ್ಯ, ಮಡಿಕೇರಿ, ಹಾಸನ ಮಾರ್ಗವಾಗಿ ಬೆಂಗಳೂರಿಗೆ ಹೋಗಿ ಕೋಲಾರದತ್ತ ಹೋಗಿದ್ದಾರೆ. ಈ ನಡುವೆ, ಎಲ್ಲಿಯೂ ನಿಲ್ಲಿಸದೆ ಪ್ರಯಾಣ ಮಾಡಿದ್ದಾರೆ. ಕೋಲಾರಕ್ಕೆ ಹೋಗಿದ್ದ ವೇಳೆ ಖಚಿತ ಮಾಹಿತಿ ಪಡೆದು ಅಲ್ಲಿನ ಸ್ಥಳೀಯ ಪೊಲೀಸರ ನೆರವು ಪಡೆದು ಬಂಧನ ಕಾರ್ಯಾಚರಣೆ ಮಾಡಿದ್ದೇವೆ ಎಂದು ಎಸ್ಪಿ ಲಕ್ಷ್ಮೀಪ್ರಸಾದ್ ತಿಳಿಸಿದ್ದಾರೆ.
ಬಿಟ್ ಕಾಯಿನ್ ವ್ಯವಹಾರ ಹೊಂದಿದ್ದ
ಬಾಲಕನ ತಂದೆ, ಬಿಜೋಯ್ ನಾಲ್ಕು ವರ್ಷಗಳ ಹಿಂದೆ ಬಿಟ್ ಕಾಯಿನ್ ಖರೀದಿಸಿದ್ದರು. ಆದರೆ, ಆಬಳಿಕ ಮೌಲ್ಯ ಕುಸಿಯುತ್ತದೆ ಎಂದು ಮಾರಾಟ ಮಾಡಿದ್ದಾಗಿ ತಿಳಿಸಿದ್ದಾರೆ. ಈಗ ನಾಪತ್ತೆಯಾಗಿರುವ ಪ್ರಮುಖ ಆರೋಪಿಗೆ ಬಿಜೋಯ್ ಕುಟುಂಬದ ಬಗ್ಗೆ ಗೊತ್ತಿದೆ. ಆತನೇ ಅಪಹರಣದ ಪ್ಲಾನ್ ಮಾಡಿದ್ದು. ಇದಕ್ಕಾಗಿ ಡಿ.7ರಿಂದಲೇ ಆರೋಪಿಗಳನ್ನು ಉಜಿರೆಗೆ ಕಳಿಸಿ, ಕುಟುಂಬಸ್ಥರ ಚಲನವಲನಗಳನ್ನು ಗಮನಿಸುತ್ತಿದ್ದ ಎಂದು ಎಸ್ಪಿ ಹೇಳಿದರು.

ಮಾಹಿತಿ ಪ್ರಕಾರ, ಬಿಜೋಯ್ ಬಿಟ್ ಕಾಯಿನ್ ವಹಿವಾಟು ನಡೆಸುತ್ತಿದ್ದಾರೆ. ಈ ಬಗ್ಗೆ ಗೊತ್ತಿದ್ದ ವ್ಯಕ್ತಿಯೇ ಬಿಜೋಯ್ ಬಳಿಯಿಂದ ಹಣ ಕೀಳುವುದಕ್ಕೆ ಪ್ಲಾನ್ ಮಾಡಿದ್ದಾನೆ. ಬಿಟ್ ಕಾಯಿನ್ ಮೌಲ್ಯ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದ್ದರಿಂದ ಒಂದಷ್ಟು ಪೀಕಿಸುವ ಪ್ಲಾನ್ ಹಾಕಿ, ಫೈಲ್ ಆಗಿದ್ದಾನೆ. ಆ ವ್ಯಕ್ತಿ ಯಾರೆನ್ನುವ ಬಗ್ಗೆ ಸ್ಪಷ್ಟ ಸುಳಿವು ಪೊಲೀಸರಿಗೆ ಲಭಿಸಿದ್ದು, ಈಗಾಗ್ಲೇ ಆತನ ಹಿಂದೆ ಬಿದ್ದಿದ್ದಾರೆ. ಶೀಘ್ರದಲ್ಲಿಯೇ ಬಂಧಿಸುವ ವಿಶ್ವಾಸದಲ್ಲಿದ್ದಾರೆ.
Six persons have been arrested in Kidnap case of young boy from Ujre, Mangalore. One Master mind is said to be absconding said SP.
24-08-26 03:16 pm
HK News Staffer
ಕರ್ನಾಟಕದಲ್ಲಿ ‘ಅನಲಾಗ್ ಪನ್ನೀರ್’ಗೆ ಒಂದು ವರ್ಷ ನಿಷ...
22-08-26 10:15 pm
ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ನಾಪತ್ತೆ ; ಏ...
22-08-26 03:01 pm
500 ಕೆಪಿಎಸ್ ಶಾಲೆಗಳ ಸಮಗ್ರ ಅಭಿವೃದ್ಧಿಗೆ ₹2500 ಕೋ...
22-08-26 11:10 am
ದೇಶದ ರಾಜಕೀಯದಲ್ಲಿ ಬಹುದೊಡ್ಡ ಬಿರುಗಾಳಿ; ವಿರುದ್ಧ ಧ...
21-08-26 03:42 pm
24-08-26 04:55 pm
HK News Staffer
ಪಾಲ್ಘಾಟ್ ರೈಲ್ವೇ ವಿಭಾಗದಿಂದ ಮಂಗಳೂರು ಹೊರಕ್ಕೆ ; ವ...
22-08-26 08:37 pm
ದೇಹದಲ್ಲಿಡೀ ಉರಿ ಉರಿ! ಕೆರೆಯಲ್ಲೇ ವಾಸ, ಅಲ್ಲೇ ಆಹಾ...
20-08-26 10:55 am
ತಮಿಳುನಾಡು ಮಹಿಳಾ ಸರ್ಕಾರಿ ನೌಕರರಿಗೆ ಸರ್ಕಾರದ ಬಂಪರ...
19-08-26 02:13 pm
ಲಷ್ಕರ್ ಸ್ಥಾಪಕ ಹಫೀಜ್ ಸಯೀದ್ 10,000 ಯುವಕರನ್ನು ಕಾ...
19-08-26 01:06 pm
24-08-26 06:25 pm
HK News Staffer
ಈದ್ ಮಿಲಾದ್ ; ಬೆಳಗ್ಗೆ ಕೋಟೆಪುರದಿಂದ ಉಳ್ಳಾಲ ದರ್ಗಾ...
24-08-26 04:14 pm
ಅಡಿಕೆ ಎಲೆ ಚುಕ್ಕಿ ರೋಗ ನಿಯಂತ್ರಣಕ್ಕೆ ಸಿಪಿಸಿಆರ್ ಐ...
24-08-26 04:11 pm
ಎಂಆರ್ ಪಿಎಲ್ ನಲ್ಲಿ 26 ಇಂಜಿನಿಯರಿಂಗ್ ಹುದ್ದೆಗಳ ಭರ...
24-08-26 01:13 pm
ಹಲ್ಲೆಗೀಡಾದವರ ಮೇಲೆ ಕೊಲೆಯತ್ನ ಕೇಸು ಹಾಕಿದ್ದಾರೆ, ಹ...
23-08-26 06:17 pm
24-08-26 09:06 pm
HK News Staffer
ಸಾವಿರಾರು ಕೋಟಿ ವಂಚಕ, ಶಿವಂ ಅಸೋಸಿಯೇಟ್ಸ್ ಮಾಲೀಕ ಶಿ...
24-08-26 07:04 pm
ಚಿಕ್ಕಮಗಳೂರಿನಲ್ಲಿ ಈದ್ ಮೆರವಣಿಗೆ ಸಿದ್ಧತೆ ; ಬೃಹತ್...
24-08-26 02:35 pm
ಕುಂಬಳೆಯ ಮುಸ್ಲಿಂ ವ್ಯಾಪಾರಿಗೆ ಹನಿಟ್ರ್ಯಾಪ್ ; ವಿಡಿ...
24-08-26 02:25 pm
ನದಿಗೆ ಬಿದ್ದ ಫುಟ್ಬಾಲ್ ಹೆಕ್ಕಲು ಹೋಗಿ ಜೀವ ಕಳಕೊಂಡ...
24-08-26 01:03 pm