ಬ್ರೇಕಿಂಗ್ ನ್ಯೂಸ್
30-04-25 08:29 pm Mangalore Correspondent ಕರಾವಳಿ
ಮಂಗಳೂರು, ಎ.30 : ಮಂಗಳೂರಿನ ಹೆಸರಾಂತ ಬಿಲ್ಡರ್ ನಿಧಿ ಲ್ಯಾಂಡ್ ಇನ್ಫ್ರಾ ಸ್ಟ್ರಕ್ಚರ್ ಡೆವಲಪರ್ಸ್ ಇಂಡಿಯಾ ವತಿಯಿಂದ ನಗರದ ಚಿಲಿಂಬಿಯಲ್ಲಿ ಮತ್ತೊಂದು ಲಕ್ಸುರಿ ಅಪಾರ್ಟ್ಮೆಂಟ್ ಸ್ಕೈ ಗಾರ್ಡನ್ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಲಾಗಿದೆ. ಸಂಸ್ಥೆಯ ಚೇರ್ಮನ್ ಪ್ರಶಾಂತ್ ಸನಿಲ್ ನೇತೃತ್ವದಲ್ಲಿ ಗಣ್ಯರು ಸೇರಿಕೊಂಡು ಹೊಸ ಕಟ್ಟಡಕ್ಕೆ ಶಿಲಾನ್ಯಾಸ ನೆರವೇರಿಸಿದರು.
ಕಾಂಗ್ರೆಸ್ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್, ಬಿಜೆಪಿ ನಾಯಕ ಹರಿಕೃಷ್ಣ ಬಂಟ್ವಾಳ್, ಮಾಜಿ ಕಾರ್ಪೊರೇಟರ್ ಭಾಸ್ಕರ ಮೊಯ್ಲಿ, ಬ್ರಹ್ಮಕುಮಾರಿ ಮಂಗಳೂರು ಘಟಕದ ಪ್ರಮುಖರಾದ ಬಿಕೆ ವಿಶ್ವೇಶ್ವರಿ, ದಾಯ್ಜಿವರ್ಲ್ಡ್ ಮ್ಯಾನೇಜಿಂಗ್ ಡೈರೆಕ್ಟರ್ ವಾಲ್ಟರ್ ನಂದಳಿಕೆ, ಕ್ರೆಡೈ ಸಂಸ್ಥೆಯ ಅಧ್ಯಕ್ಷ ವಿನೋದ್ ಪಿಂಟೋ ಮತ್ತು ಇತರರು ಉಪಸ್ಥಿತರಿದ್ದರು. ಇದೇ ವೇಳೆ, ಸ್ಕೈ ಗಾರ್ಡನ್ ಅಪಾರ್ಟ್ಮೆಂಟ್ ವೈಶಿಷ್ಟ್ಯದ ಬಗ್ಗೆ ಬ್ರೋಶರ್ ಅನ್ನು ಬಿಕೆ ಮಹೇಶ್ವರಿ ಬಿಡುಗಡೆಗೊಳಿಸಿದರು.






ಲೇಡಿಹಿಲ್ – ಚಿಲಿಂಬಿ ಪ್ರಮುಖ ರಸ್ತೆಯ ಬದಿಯಲ್ಲೇ ಸ್ಕೈ ಗಾರ್ಡನ್ ಅಪಾರ್ಟ್ಮೆಂಟ್ ಅದ್ದೂರಿಯಾಗಿ ನಿರ್ಮಾಣಗೊಳ್ಳಲಿದ್ದು, ಎಲ್ಲ ಆಧುನಿಕ ಮಾದರಿಯ ವ್ಯವಸ್ಥೆಗಳೊಂದಿಗೆ 33 ಮಹಡಿಯಲ್ಲಿ ತಲೆಯೆತ್ತಲಿದೆ. ಇದರಲ್ಲಿ 3ಬಿಎಚ್ ಕೆ, 4 ಬಿಎಚ್ ಕೆ ಮತ್ತು 5 ಬಿಎಚ್ ಕೆ ಮನೆಗಳು ಹಾಗೂ ಡ್ಯುಪ್ಲೆಕ್ಸ್ ಸಂಕೀರ್ಣಗಳು ಬರಲಿವೆ. ಗ್ರೌಂಡ್ ಫ್ಲೋರ್ ಕೆಳಭಾಗದಲ್ಲಿ ಪಾರ್ಕಿಂಗ್ ಇರಲಿದ್ದು, ಗ್ರೌಂಡ್ ಫ್ಲೋರ್ ಮತ್ತು ಮೊದಲ ಮಹಡಿಯಲ್ಲಿ ಕ್ಲಬ್ ಹೌಸ್ ಬರಲಿದೆ. ಇದರೊಳಗೆ ಝೆನ್ ರೂಮ್, ಯೋಗ, ಏರೋಬಿಕ್ಸ್ ರೂಮ್, ಮಕ್ಕಳ ಸ್ಟಡಿ ರೂಮ್, ಮಕ್ಕಳ ಪ್ಲೇ ರೂಮ್, ಜಿಮ್ನಾಶಿಯಂ, ಟೇಬಲ್ ಟೆನ್ನಿಸ್, ಬಿಲಿಯರ್ಡ್ಸ್, ಕೇರಂ, ಇನ್ನಿತರ ಒಳಾಂಗಣ ಕ್ರೀಡೆಗಳ ಸಂಕೀರ್ಣಗಳು, ಕಾರ್ಡ್ಸ್ ರೂಮ್, ಸ್ವಿಮ್ಮಿಂಗ್ ಪೂಲ್, ಮಿನಿ ಥಿಯೇಟರ್, ಕಾನ್ಫರೆನ್ಸ್ ಹಾಲ್, ವಾಕಿಂಗ್ ಟ್ರ್ಯಾಕ್, ವಾಟರ್ ಫೌಂಟೇನ್ ಜೊತೆಗೆ ಹಲವು ಮಾದರಿಯ ಲಕ್ಸುರಿ ವ್ಯವಸ್ಥೆಗಳು ಇರಲಿವೆ.
ದೂರದೃಷ್ಟಿ ಮತ್ತು ಆಧುನಿಕ ಮಾದರಿಯ ಅಪಾರ್ಟ್ಮೆಂಟ್ ನಿರ್ಮಾಣದಲ್ಲಿ ಹೆಸರು ಪಡೆದಿರುವ ಪ್ರಶಾಂತ್ ಕೆ. ಸನಿಲ್ ಮಂಗಳೂರಿನಲ್ಲಿ ಕಳೆದ 12 ವರ್ಷಗಳಿಂದ ಹಲವು ಅಪಾರ್ಟ್ಮೆಂಟ್ ಸೇರಿದಂತೆ ಕಮರ್ಶಿಯಲ್ ಕಟ್ಟಡಗಳನ್ನು ನಿರ್ಮಿಸಿದ್ದಾರೆ. ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಮೂರು ದಶಕಗಳ ಅನುಭವ ಹೊಂದಿರುವ ಪ್ರಶಾಂತ್ ಸನಿಲ್ 2012ರಿಂದ ನಿಧಿ ಲ್ಯಾಂಡ್ ಹೆಸರಲ್ಲಿ ಮಂಗಳೂರು ನಗರದಲ್ಲಿ ನಿರ್ಮಾಣ ಕ್ಷೇತ್ರದಲ್ಲಿ ತೊಡಗಿಸಿದ್ದಾರೆ. ಈಗಾಗಲೇ ನಿಧಿ ಲ್ಯಾಂಡ್ 11 ಪ್ರಾಜೆಕ್ಟ್ ಗಳನ್ನು ಕಂಪ್ಲೀಟ್ ಮಾಡಿದ್ದು, ಶಕ್ತಿ ಹೈಟ್ಸ್ ಮತ್ತು ಸ್ಮೃತಿ ಹೈಟ್ಸ್ ಸದ್ಯಕ್ಕೆ ನಿರ್ಮಾಣ ಹಂತದಲ್ಲಿದ್ದರೆ, ವೈಟ್ ರೋಸ್, ಬಿಸಿನೆಸ್ ಬೇ, ಬಿಸಿನೆಸ್ ಪಾರ್ಕ್, ಕ್ಯಾಸಲ್ ಗ್ರೀನ್ ಎನ್ನುವ ಹೆಸರಲ್ಲಿ ಶೀಘ್ರದಲ್ಲಿ ಹೊಸ ಪ್ರಾಜೆಕ್ಟ್ ತಲೆಯೆತ್ತಲಿದೆ.
The foundation stone laying ceremony of ‘Sky Garden’, a super luxury residential apartment, was held at Chilimbi on Wednesday April 30. The project is being developed by the city's most trusted builders and property developers, Nidhi Land Infrastructure Developers India (P) Ltd led by its dynamic chairman Prashanth K Sanil.
17-12-25 10:30 pm
HK News Desk
ಯಶವಂತಪುರ - ಕಾರವಾರ ಗೋಮಟೇಶ್ವರ ಎಕ್ಸ್ ಪ್ರೆಸ್ ರೈಲು...
17-12-25 12:45 pm
ಶೃಂಗೇರಿ ; ಬಿಕಾಂ ಓದುತ್ತಿದ್ದ ವಿದ್ಯಾರ್ಥಿನಿ ಹಠಾತ್...
17-12-25 12:42 pm
ಶಿವಮೊಗ್ಗ, ಧಾರವಾಡ ಸೇರಿ ಹಲವೆಡೆ ಲೋಕಾಯುಕ್ತ ದಾಳಿ ;...
16-12-25 03:08 pm
ಮಂಗಳೂರು ಬೆನ್ನಲ್ಲೇ ತುಮಕೂರು ಜಿಲ್ಲಾಧಿಕಾರಿ ಕಚೇರಿಗ...
16-12-25 12:57 pm
17-12-25 10:27 pm
HK News Desk
ಆಸ್ಟ್ರೇಲಿಯಾ ಬೋಂಡಿ ಬೀಚ್ ದಾಳಿ ; ಹೈದ್ರಾಬಾದ್ ಮೂಲದ...
17-12-25 01:38 pm
ಯುಕೆಯ ಮಿಡ್ಲಾಂಡ್ಸ್ ನಲ್ಲಿ ಕನ್ನಡ ರಾಜ್ಯೋತ್ಸವ ; ಬರ...
16-12-25 06:33 pm
ಭಟ್ಕಳ ತಹಸೀಲ್ದಾರ್ ಕಚೇರಿಗೂ ಸ್ಫೋಟದ ಬೆದರಿಕೆ ; ತಮಿ...
16-12-25 01:56 pm
ಪಾಕಿಸ್ತಾನದ ಎರಡು ವಿವಿಗಳಲ್ಲಿ ಸಂಸ್ಕೃತ ಕಲಿಯಲು ಕೋರ...
15-12-25 08:12 pm
17-12-25 08:54 pm
Mangalore Correspondent
New year 2026, Mangalore Rules: ಹೊಸ ವರ್ಷಾಚರಣೆ...
17-12-25 08:19 pm
Udupi, Baby death: ಉಡುಪಿ ; ತಾಯಿ ಕೈಯಿಂದ ಜಾರಿ ಬ...
17-12-25 05:23 pm
Mangalore Jail, Fight, Ccb Police: ಮಂಗಳೂರು ಜೈ...
17-12-25 05:05 pm
Mangalore Landslide, Death: ಗುಡ್ಡ ಕುಸಿದು ಕಾರ್...
16-12-25 10:25 pm
17-12-25 11:14 am
Bangalore Correspondent
ಕದ್ರಿಯಲ್ಲಿ ಬೈಕ್ ಕದ್ದು ಭಟ್ಕಳದಲ್ಲಿ ಮಹಿಳೆಯ ಸರ ಕಸ...
16-12-25 10:35 pm
Mangalore Crime, Robbery, Mukka: 'ಬಂಗಾರ್ ಒಲ್ಪ...
15-12-25 10:26 pm
Udupi Murder, Brahmavar, Update: ಕುಡಿದ ಮತ್ತಿನ...
15-12-25 05:37 pm
Brahmavar Murder, Udupi Crime: ಎಣ್ಣೆ ಪಾರ್ಟಿಯಲ...
15-12-25 12:19 pm