ಬ್ರೇಕಿಂಗ್ ನ್ಯೂಸ್
02-05-25 03:10 pm Mangalore Correspondent ಕರಾವಳಿ
ಮಂಗಳೂರು, ಮೇ 02 : ಗುರುವಾರ ರಾತ್ರಿ ಕೊಲೆಯಾದ ಹಿಂದೂ ಕಾರ್ಯಕರ್ತ ಹಾಗೂ ರೌಡಿಶೀಟರ್ ಸುಹಾಸ್ ಶೆಟ್ಟಿ ಅಂತಿಮ ಯಾತ್ರೆ ಮಂಗಳೂರು ಖಾಸಗಿ ಆಸ್ಪತ್ರೆಯಿಂದ ಬಿಸಿ ರೋಡ್ ಮಾರ್ಗವಾಗಿ ಕಾರಿಂಜದ ಅವರ ಮನೆಗೆ ಅಂತಿಮ ಯಾತ್ರೆ ನಡೆಯಿತು.
ಕಾರಿಂಜದಲ್ಲಿ ಇಂದು ಅಂತ್ಯಕ್ರಿಯೆ ನಡೆಯಲಿದೆ. ಸಾವಿರಾರು ಕಾರ್ಯಕರ್ತರು, ನೂರಾರು ವಾಹನದ ಜತೆ ಅಂತಿಮ ಯಾತ್ರೆಯಲ್ಲಿ ಪಾಲ್ಗೊಂಡರು. ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಸೇರಿದಂತೆ ಈ ಭಾಗದ ಶಾಸಕರು, ಮಾಜಿ ಸಂಸದರು ಭಾಗಿಯಾದರು.

ಬಂದ್ ನಡುವೆಯೂ ಅಹಿತಕರ ಘಟನೆ:
ಇಂದು ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ವಿಶ್ವ ಹಿಂದೂ ಪರಿಷತ್ ಬಂದ್ ಗೆ ಕರೆ ನೀಡಿತ್ತು. ಬಸ್ ಗಳ ಓಡಾಟಕ್ಕೆ ಸಂಪೂರ್ಣ ಬ್ರೇಕ್ ಬಿದ್ದಿತ್ತು. ಇಷ್ಟರ ನಡುವೆಯೂ ಮತ್ತೆ ಅಡ್ಯಾರ್, ಉಳ್ಳಾಲ, ಉಡುಪಿಯಲ್ಲಿ ಚೂರಿ ಇರಿತ ಪ್ರಕರಣಗಳು ನಡೆದಿವೆ.
ಇನ್ನು ಲೇಡಿಹಿಲ್, ಹಂಪನಕಟ್ಟ, ಕಂಕನಾಡಿಯಲ್ಲಿ ಸಂಚರಿಸಿದ ಬಸ್ ಗಳ ಮೇಲೆ ಕಲ್ಲು ತೂರಾಟ ನಡೆದಿದೆ. ಬಿ.ಸಿ. ರೋಡ್ ನಲ್ಲಿ ರಿಕ್ಷಾದ ಮೇಲೆ ದಾಳಿಯಾಗಿದೆ. ಬಸ್ ಗಳ ಓಡಾಟ ಸಂಪೂರ್ಣ ಸ್ಥಗಿತವಾಗಿದ್ದು, ಖಾಸಗಿ ವಾಹನಗಳ ಓಡಾಟ ಕೂಡಾ ವಿರಳ ಆಗಿದೆ
ಮಣಿಪಾಲ, ಉಡುಪಿಯಿಂದ ಮಂಗಳೂರಿಗೆ ಎಕ್ಸ್ ಪ್ರೆಸ್, ಸರ್ವಿಸ್ ಖಾಸಗಿ ಹಾಗೂ ಸರಕಾರಿ ಬಸ್ ಸಂಚಾರ ವ್ಯತ್ಯಯವಾಗಿದ್ದು ಬೆರಳೆಣಿಕೆ ಬಸ್ಸುಗಳು ಪಡುಬಿದ್ರಿ ತನಕ ತೆರಳಿವೆ. ಸರಕಾರಿ, ಖಾಸಗಿ ಕಚೇರಿಗೆ ತೆರಳುವವರು, ಯಾತ್ರಾರ್ಥಿಗಳು ಸಂಕಷ್ಟಕ್ಕೆ ಈಡಾಗಿದ್ದಾರೆ
ರಿಕ್ಷಾ ಚಾಲಕನಿಗೆ ಹಲ್ಲೆ, ಇಬ್ಬರ ಬಂಧನ ಬಾಡಿಗೆಗೆ ತೆರಳುತ್ತಿದ್ದ ರಿಕ್ಷಾ ಚಾಲಕನಿಗೆ ಗುರುವಾರ ರಾತ್ರಿ ಬೈಕಿನಲ್ಲಿ ಬಂದು ಅಡ್ಡಗಟ್ಟಿ ಹಲ್ಲೆ ನಡೆಸಿದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಬಡಗಬೆಟ್ಟಿನ ಅಬೂಬಕ್ಕರ್ ಎಂಬ ವ್ಯಕ್ತಿ ಮೇಲೆ ಹಲ್ಲೆಯಾಗಿದೆ. ಸಂದೇಶ ಬೊಮ್ಮರಬೆಟ್ಟು ಹಾಗೂ ಸುಶಾಂತ್ ಹಿರಿಯಡ್ಕ ಬಂಧಿತ ಆರೋಪಿಗಳು. ಇಬ್ಬರನ್ನೂ ಶುಕ್ರವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದು ತನಿಖೆ ಮುಂದುವರಿದಿದೆ ಎಂದು ಎಸ್ಪಿ ಡಾ. ಅರುಣ ಕೆ. ತಿಳಿಸಿದ್ದಾರೆ.
ಆತ್ರಾಡಿಗೆ ಬರುವಂತೆ ದಿನೇಶ್ ದೂರ ವಾಣಿ ಕರೆ ಮಾಡಿದ ಹಿನ್ನೆಲೆಯಲ್ಲಿ ಬಾಡಿಗೆಗೆ ಆತ್ರಾಡಿಯಿಂದ ಮದಗಕ್ಕೆ ತೆರಳುತ್ತಿದ್ದ ವೇಳೆ ಹಲ್ಲೆ ಘಟನೆ ನಡೆದಿದೆ. ಆತ್ರಾಡಿ ಗ್ಯಾಸ್ ಪೆಟ್ರೋಲ್ ಬಂಕ್ ಬಳಿ ಬಂದ ವೇಳೆ ಬೈಕಿನಲ್ಲಿ ಬಂದ ಇಬ್ಬರು ಗಾಡಿಯನ್ನು ನಿಲ್ಲಿಸು ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿ ಆಟೋರಿಕ್ಷಾವನ್ನು ಅಡ್ಡಗಟ್ಟಿ ನಿಲ್ಲಿಸಲು ಯತ್ನಿಸಿದರು. ಗಾಡಿಯನ್ನು ನಿಲ್ಲಿಸದೇ ಮುಂದೆ ಬಂದಾಗ, ಬೈಕಿನಲ್ಲಿದ್ದ ಹಿಂಬದಿ ಸವಾರ ಜೀವ ಬೆದರಿಕೆ ಒಡ್ಡಿದ್ದು ಶೇಡಿಗುಡ್ಡೆ ಬಳಿ ರೋಸ್ ಬಸ್ಸಿನವರ ಮನೆ ಬಳಿ ಇರುವ ರಸ್ತೆಯಲ್ಲಿ ಆಟೋ ರಿಕ್ಷಾವನ್ನು ನಿಲ್ಲಿಸಿ ಓಡಲು ಪ್ರತ್ನಿಸಿದಾಗ ಬೈಕ್ ನಲ್ಲಿದ್ದ ವ್ಯಕ್ತಿ ತಲವಾರನ್ನು ಬೀಸಿದ್ದು ಹೊಡೆತದಿಂದ ತಪ್ಪಿಸಿಕೊಂಡರು.
ಬೈಕಿನಲ್ಲಿದ್ದ ಇನ್ನೊಬ್ಬ ವ್ಯಕ್ತಿಯು ಯಾವುದೋ ಬಾಟಲಿಯನ್ನು ಕೈ ಯಲ್ಲಿ ಹಿಡಿದು ಆಟೋ ರಿಕ್ಷಾ ಮುಂಭಾಗದ ಕನ್ನಡಿಗೆ ಹೊಡೆದಿದ್ದಾನೆ.
ರಿಕ್ಷಾ ಚಾಲಕ ಪಕ್ಕದಲ್ಲಿದ್ದ ಕಂಪೌಂಡ್ ಜಿಗಿದು ಓಡಿ ಹೋಗಿದ್ದಾರೆ. ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೊಲೆಗಡಕರ ಸುಳಿವು ಸಿಕ್ಕಿದೆ ; ಎಡಿಜಿಪಿ ಮೋಹನ್
ಕೊಲೆ ಆರೋಪಿಗಳ ಹೆಸರು ಸಹಿತ ಸುಳಿವು ದೊರೆತಿದೆ. ಆರೋಪಿಗಳನ್ನು ಬಂಧಿಸಲು ಶೀಘ್ರ ಕ್ರಮ ಕೈಗೊಳ್ಳಲಾಗುವುದು. ಸಾರ್ವಜನಿಕರು ಶಾಂತಿ, ಸುವ್ಯವಸ್ಥೆ ಕಾಪಾಡಲು ಸಹಕರಿಸಬೇಕು ಎಂದು ಕಾನೂನು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಆರ್. ಹಿತೇಂದ್ರ ಹೇಳಿದರು.
ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ತಪ್ಪು ಮಾಡಿದ್ದು ಯಾರೇ ಆದರೂ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು. ಹೆಚ್ಚಿನ ಭದ್ರತೆಗಾಗಿ 22 ಕೆಎಸ್‌ಆರ್‌ಪಿ , ಐವರು ಎಸ್‌ಪಿ, 1,000ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ. ಸಾರ್ವಜನಿಕರು ಯಾವುದೇ ವದಂತಿಗಳಿಗೆ ಕಿವಿಗೊಡಬಾರದು. ಪೊಲೀಸ್ ಇಲಾಖೆ ವಾಸ್ತವವನ್ನು ಕಾಲಕಾಲಕ್ಕೆ ಅಪ್‌ಡೇಟ್ ಮಾಡುತ್ತದೆ ಎಂದರು
In a key update on the Suhas Shetty murder case, Additional Director General of Police (ADGP) Alok Kumar Hitendra confirmed that the identities of the accused have been traced and arrests are expected shortly.
05-11-25 06:15 pm
Bangalore Correspondent
ಮಾಜಿ ಸಚಿವ ಎಚ್.ವೈ ಮೇಟಿ ಬೆಂಗಳೂರಿನ ಆಸ್ಪತ್ರೆಯಲ್ಲಿ...
04-11-25 04:38 pm
ಸಚಿವ ಸತೀಶ್ ಜಾರಕಿಹೊಳಿ ದಿಢೀರ್ ದೆಹಲಿಗೆ ; ಕೆಪಿಸಿಸ...
03-11-25 05:17 pm
ಕಣ್ಣೂರಿನ ಪಯ್ಯಂಬಲಂ ಬೀಚ್ ನಲ್ಲಿ ಸಮುದ್ರಕ್ಕಿಳಿದ ಬೆ...
02-11-25 11:09 pm
ಆರೆಸ್ಸೆಸ್ನವರಷ್ಟು ಹೇಡಿಗಳು ಯಾರೂ ಇಲ್ಲ, ಅವರ್ಯಾಕೆ...
01-11-25 09:33 pm
03-11-25 01:13 pm
HK News Desk
ಜೋಧಪುರ ; ಭೀಕರ ರಸ್ತೆ ಅಪಘಾತದಲ್ಲಿ 18 ಜನರು ಸಾವು,...
02-11-25 11:12 pm
ಕೇರಳದಲ್ಲಿ ಮುಸ್ಲಿಮ್ ಮತ್ತು ಕ್ರಿಶ್ಚಿಯನ್ನರಿಗೆ ಒಬಿ...
02-11-25 05:13 pm
ಜೆಡ್ಡಾದಿಂದ ಹೈದರಾಬಾದ್ ಬರುತ್ತಿದ್ದ ವಿಮಾನದಲ್ಲಿ ಬ...
01-11-25 07:27 pm
ಭಾರತದಲ್ಲಿ ಸ್ವತಂತ್ರವಾಗಿದ್ದೇನೆ, ಮತ್ತೆ ಬಾಂಗ್ಲಾದೇ...
30-10-25 03:20 pm
05-11-25 07:49 pm
Mangalore Correspondent
ಅಕ್ರಮ ಗೋಹತ್ಯೆ, ಮಾಂಸಕ್ಕೆ ಬಳಕೆ ; ಆರೋಪಿಯ ಉಳ್ಳಾಲದ...
05-11-25 03:35 pm
ಮಂಗಳೂರು ಕಮಿಷನರ್ ಸುಧೀರ್ ರೆಡ್ಡಿ ಹೆಸರಿನಲ್ಲಿ ನಕಲಿ...
04-11-25 10:51 pm
Mangalore Police, Panambur Beach: ಗಂಡ - ಹೆಂಡತ...
04-11-25 08:37 pm
ಅಬಕಾರಿ ಇಲಾಖೆಯಲ್ಲಿ ವ್ಯಾಪಕ ಭ್ರಷ್ಟಾಚಾರ, ಹಣಕ್ಕಾಗಿ...
04-11-25 06:15 pm
05-11-25 05:27 pm
Bangalore Correspondent
ನಕಲಿ ಷೇರು ಮಾರುಕಟ್ಟೆ ಮೇಲೆ ಹೂಡಿಕೆ ; ಫೇಸ್ಬುಕ್ ಗೆ...
04-11-25 02:11 pm
ಟೋಪಿ ನೌಫಾಲ್ ಕೊಲೆಯಲ್ಲ, ರೈಲು ಡಿಕ್ಕಿ ಹೊಡೆದು ಸಾವು...
03-11-25 12:33 pm
ಶಬರಿಮಲೆ ಅಯ್ಯಪ್ಪ ದೇವಸ್ಥಾನದಲ್ಲಿ ಚಿನ್ನ ಕಳವು ಪ್ರಕ...
01-11-25 07:25 pm
Rowdy Topi Naufal Murder, Mangalore: ಮಂಗಳೂರಿನ...
01-11-25 03:31 pm