ಬ್ರೇಕಿಂಗ್ ನ್ಯೂಸ್
05-05-25 11:22 am Mangalore Correspondent ಕರಾವಳಿ
ಮಂಗಳೂರು, ಮೇ 5 : ನಗರದ ಕೆ.ಎಸ್ ರಾವ್ ರಸ್ತೆಯ ಗಣೇಶ್ ಮಹಲ್ ಕಟ್ಟಡದಲ್ಲಿ ದಕ್ಷಿಣ ಭಾರತದ ಹೆಸರಾಂತ ಪಾಕಶಾಲ ವೆಜಿಟೇರಿಯನ್ ರೆಸ್ಟೋರೆಂಟ್ ಆರಂಭಗೊಂಡಿದ್ದು, ಭಾನುವಾರ ಅಧಿಕೃತ ಉದ್ಘಾಟನೆಗೊಂಡಿದೆ. ಕರ್ನಾಟಕ ಕರಾವಳಿಯಲ್ಲಿ ಪಾಕಶಾಲಾ ಸಂಸ್ಥೆಯ ನಾಲ್ಕನೇ ಶಾಖೆ ಇದಾಗಿದೆ. ಮಂಗಳೂರಿನ ಹೃದಯಭಾಗದಲ್ಲಿ ಪ್ರವಾಸಿಗಳು, ವಿದ್ಯಾರ್ಥಿಗಳು ಮತ್ತು ಕುಟುಂಬ ಸಮೇತ ವೆಜ್ ಡಿಶ್ ಗಳನ್ನು ಸವಿಯಲು ರೆಸ್ಟೋರೆಂಟ್ ಹೇಳಿ ಮಾಡಿಸಿದಂತಿದೆ. ವಿಶಾಲ ಹವಾನಿಯಂತ್ರಿತ ಡೈನಿಂಗ್ ಹಾಲ್ ಮತ್ತು ಪಾರ್ಟಿ ಹಾಲ್ ಇದ್ದು ಫ್ಯಾಮಿಲಿ ಪಾರ್ಟಿಗಳಿಗೆ, ಸಾಧಾರಣ ಮಟ್ಟದ ಪಾರ್ಟಿ ಆಯೋಜನೆಗೆ ಅವಕಾಶ ಇರುತ್ತದೆ.
1960ರಲ್ಲಿ ನಾಗೇಶ್ವರ ಅಡಿಗ ಮತ್ತು ಕೆಎನ್ ಸರಸ್ವತಿ ದಂಪತಿ 1960ರಲ್ಲಿ ಬ್ರಾಹ್ಮಣರ ಕಾಫಿ ಬಾರ್ ಹೆಸರಲ್ಲಿ ಬೆಂಗಳೂರಿನಲ್ಲಿ ಮೊದಲಿಗೆ ಹೊಟೇಲ್ ಉದ್ಯಮ ಆರಂಭಿಸಿದ್ದರು. ಸರಳ ಮತ್ತು ಶುಚಿ ರುಚಿಯಾದ ಆಹಾರ ಖಾದ್ಯಗಳ ಕಾರಣದಿಂದ ಬಹು ಜನರ ಮೆಚ್ಚುಗೆ ಗಳಿಸಿತ್ತು. ಇವರ ಮಗ ಕೆಎನ್ ವಾಸುದೇವ ಅಡಿಗ ಕುಂದಾಪುರದಲ್ಲಿ ಬಿಎಂಎಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಪದವಿ ಪಡೆದರೂ, ಹೊಟೇಲ್ ಉದ್ಯಮವನ್ನೇ ಮುಂದುವರಿಸಿ 1993ರಲ್ಲಿ ತನ್ನದೇ ಹೊಟೇಲ್ ಬ್ರಾಂಡ್ ಆರಂಭಿಸಿದ್ದರು.
ತ್ವರಿತ ಗತಿಯ ಸೇವೆ, ವೆಜಿಟೇರಿಯನ್ ಆಹಾರ ವೈವಿಧ್ಯದಲ್ಲಿ ಕ್ರಾಂತಿ ಎಬ್ಬಿಸಿದ ವಾಸುದೇವ ಅಡಿಗರು ಹೊಟೇಲ್ ಉದ್ಯಮವನ್ನು ದೊಡ್ಡ ಮಟ್ಟಿಗೆ ಕೊಂಡೊಯ್ದರು. ರಾಜ್ಯ ಮತ್ತು ದೇಶದ ಮಟ್ಟಕ್ಕೂ ಹೊಟೇಲ್ ಉದ್ಯಮ ಎತ್ತರಕ್ಕೇರಿಸಿದ್ದರು. ಅತ್ಯುತ್ತಮ ಉದ್ಯಮಿಯಾಗಿ ಹೊರ ಹೊಮ್ಮಿದ್ದರಿಂದ 2012ರಲ್ಲಿ ಫೋರ್ಬ್ಸ್ ಇಂಡಿಯಾದಲ್ಲಿ ಇವರು ಹೆಸರು ದಾಖಲಾಯಿತು. ಆಮೂಲಕ ವಾಸುದೇವ ಅಡಿಗರ ಹೆಸರು ದೇಶಾದ್ಯಂತ ಪ್ರಸಿದ್ಧಿಗೆ ಬಂತು.
ಏಳು ವರ್ಷಗಳಲ್ಲಿ 30ಕ್ಕೂ ಹೆಚ್ಚು ಪಾಕಶಾಲೆ
2018ರಲ್ಲಿ ಪಾಕಶಾಲೆ ಹೆಸರಲ್ಲಿ ತಮ್ಮದೇ ಆದ ಹೊಟೇಲ್ ಉದ್ಯಮ ಸ್ಥಾಪಿಸಿದ್ದು, ಕೇವಲ ಏಳು ವರ್ಷಗಳಲ್ಲಿ ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶದಲ್ಲಿ 30ಕ್ಕೂ ಹೆಚ್ಚು ಶಾಖೆಗಳನ್ನು ತೆರೆಯಿತು. ಇವರ ಸಂಸ್ಥೆಯಲ್ಲಿ ಎರಡು ಸಾವಿರಕ್ಕೂ ಹೆಚ್ಚು ಸಿಬಂದಿಗಳಿದ್ದು, ಸೌತ್ ಇಂಡಿಯನ್, ನಾರ್ತ್ ಇಂಡಿಯನ್ ಸೇರಿದಂತೆ 325ಕ್ಕೂ ಹೆಚ್ಚು ವೆಜಿಟೇರಿಯನ್ ಡಿಶ್ ಸರ್ವ್ ಮಾಡುತ್ತಾರೆ. ಇದೀಗ ಮಂಗಳೂರಿನ ಸಿಟಿ ಸೆಂಟರ್ ನಲ್ಲಿಯೇ ಹೊಸತಾಗಿ ಪಾಕಶಾಲೆಯ ಹೊಟೇಲ್ ಅಸ್ತಿತ್ವಕ್ಕೆ ಬಂದಿದ್ದು, ಜನಾಕರ್ಷಣೆ ಪಡೆಯಲಿದೆ.
ಈಗಾಗಲೇ ಕರಾವಳಿಯಲ್ಲಿ ಉಡುಪಿ, ಕುಂಭಾಶಿ, ಮುರ್ಡೇಶ್ವರದಲ್ಲಿ ಇವರ ಔಟ್ಲೆಟ್ ಇದ್ದು, ನಾಲ್ಕನೇಯದಾಗಿ ಮಂಗಳೂರಿನಲ್ಲಿ ಹೊಟೇಲ್ ಶಾಖೆ ಆರಂಭಗೊಂಡಿದೆ. ಸದ್ಯದಲ್ಲೇ ಮೈಸೂರು, ಕನಕಪುರ, ಮಂಡ್ಯ, ದಾವಣಗೆರೆ, ಗ್ರೇಟರ್ ಕೈಲಾಶ್- ನವದೆಹಲಿ, ಚೆಂಡೂರಿನಲ್ಲಿ ಪಾಕಶಾಲಾ ಹೊಟೇಲ್ ಔಟ್ಲೆಟ್ ಆರಂಭಗೊಳ್ಳಲಿದೆ.
Paakashala, South India’s leading multi-cuisine vegetarian restaurant chain, proudly announces the opening of its Mangalore outlet at Ganesh Mahal, KS Rao Road. The grand inauguration will be held on May 4, 2025, followed by a public opening on May 5, 2025. This marks Paakashala’s 4th coastal branch, continuing its expansion along Karnataka’s thriving western coastline.
15-07-25 01:32 pm
Bangalore Correspondent
ನಟಿ ಸರೋಜಾ ದೇವಿ- ಎಸ್ಸೆಂ ಕೃಷ್ಣ ಪ್ರೇಮ ಪ್ರಸಂಗ ; ಮ...
15-07-25 12:27 pm
ಕೇವಲ 2 ಸಾವಿರ ಲಂಚ ಕೇಳಿ ಸಿಕ್ಕಿಬಿದ್ದ ಪಂಚಾಯತ್ ಪಿಡ...
15-07-25 10:35 am
ಧರ್ಮಸ್ಥಳದಲ್ಲಿ 20 ವರ್ಷಗಳಲ್ಲಾದ ಯುವತಿಯರ ನಾಪತ್ತೆ-...
14-07-25 10:44 pm
Shiradi Ghat Accident, Car: ಶಿರಾಡಿ ಘಾಟ್ ; ರಸ್...
14-07-25 01:43 pm
14-07-25 03:24 pm
HK News Desk
ಅಹ್ಮದಾಬಾದ್ ವಿಮಾನ ದುರಂತ ; ಭಾರೀ ಅನುಮಾನ ಹುಟ್ಟಿಸಿ...
12-07-25 09:25 pm
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
ಸಾಮೂಹಿಕ ಮತಾಂತರ ; ಮೂರೇ ವರ್ಷಕ್ಕೆ ಚಾಂಗೂರ್ ಬಾಬಾನಿ...
12-07-25 02:15 pm
Coimbatore Serial Blasts, 'Tailor Raja' Arres...
11-07-25 12:08 pm
15-07-25 02:28 pm
HK News Desk
Mangalore Accident, Alto Car: ದೆಹಲಿಯಿಂದ ಬಂದ ಗ...
15-07-25 10:32 am
ಕಲ್ಲು ಮರಳಿನ ಸಮಸ್ಯೆಯಿಂದ ಜನರ ತಲೆಗೆ ಚಪ್ಪಡಿ ಕಲ್ಲು...
14-07-25 09:55 pm
Mrpl leakgae, Death, Fight: ಅನಿಲ ಸೋರಿಕೆಯಿಂದ ಇ...
14-07-25 07:56 pm
Mangalore, Help: ಅಪಘಾತದಲ್ಲಿ ಬಡ ಮಹಿಳೆಯ ತಲೆಗೆ ತ...
13-07-25 11:13 pm
15-07-25 06:52 pm
Bangalore Correspondent
Mangalore, Moodbidri college, Rape, Blackmail...
15-07-25 06:07 pm
ಹಿಂದು ಯುವತಿಯರನ್ನು ಮತಾಂತರ ಮಾಡುತ್ತಿದ್ದಾನೆಂದು ಸು...
15-07-25 05:21 pm
Mangalore Police, Arrest, NITTE College Stude...
15-07-25 01:13 pm
Mangalore Crime, Police: ದುಬೈನಲ್ಲಿ ವಹಿವಾಟು ;...
15-07-25 11:38 am