ಬ್ರೇಕಿಂಗ್ ನ್ಯೂಸ್
09-05-25 06:22 pm Giridhar Shetty, Mangaluru ಕರಾವಳಿ
ಮಂಗಳೂರು, ಮೇ 9 : ಮಂಗಳೂರು ವಿಶ್ವವಿದ್ಯಾನಿಲಯವು ಸಲ್ಲದ ವಿಚಾರಕ್ಕೆ ಸುದ್ದಿಯಾಗಿದ್ದೇ ಹೆಚ್ಚು. ಅಲ್ಲಿನ ಅವ್ಯವಹಾರ, ಸ್ವಜನ ಪಕ್ಷಪಾತ, ಪ್ರೊಫೆಸರು ಹುದ್ದೆಯನ್ನು ಗಿಟ್ಟಿಸಲು ನಡೆಸುವ ಲಾಬಿ, ಅಲ್ಲಿದ್ದವರು ಬೇರೆ ವಿವಿಗಳಿಗೆ ಕುಲಪತಿ, ರಿಜಿಸ್ಟ್ರಾರ್ ಹುದ್ದೆ ಗಿಟ್ಟಿಸಲು ನಡೆಸುವ ವಶೀಲಿಬಾಜುತನ, ಪಿಎಚ್ ಡಿ ಪಡೆಯಲು ಬರುವ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ಇತ್ಯಾದಿ ಕಾರಣಕ್ಕೆ ಹಲವು ಬಾರಿ ಸುದ್ದಿಯಾಗಿದ್ದಿದೆ. ಕಳೆದೊಂದು ವರ್ಷದಲ್ಲಿ ವಿವಿಯು ಆರ್ಥಿಕ ದುಸ್ಥಿತಿಗೆ ಸಿಲುಕಿದ್ದರಿಂದ ಅತಿಥಿ ಉಪನ್ಯಾಸಕರಿಗೂ ಸಂಬಳ, ಪಿಂಚಣಿ ಕೊಡಲಾಗದೆ ರಾಜ್ಯ ಸರ್ಕಾರದಿಂದ ಇತ್ತೀಚೆಗೆ 5 ಕೋಟಿಯಷ್ಟು ಅನುದಾನ ತರಿಸಿದ್ದೂ ಆಗಿತ್ತು.
ಇದೆಲ್ಲದರ ಮಧ್ಯೆ, ವಿಶ್ವವಿದ್ಯಾನಿಲಯದ ಆವರಣದಲ್ಲಿರುವ 300 ಎಕ್ರೆಗೂ ಹೆಚ್ಚಿನ ಜಾಗದ ಮೇಲೂ ಕೆಲವರ ಕಣ್ಣು ಬಿದ್ದಿದ್ಯಾ ಎನ್ನುವ ಅನುಮಾನ ಹುಟ್ಟಿದೆ. ಇದಕ್ಕೆ ಕಾರಣವಾಗಿದ್ದು ಇದೇ ಮೇ 9ರಂದು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸಭೆಯಲ್ಲಿ ಇಟ್ಟಿರುವ ಅಜೆಂಡಾದ ವಿಚಾರಗಳು. ಕಾರ್ಯಸೂಚಿ ಪಟ್ಟಿಯಲ್ಲಿ ಮೊದಲ ಸಾಲಿನಲ್ಲಿ ಮಂಗಳೂರು ವಿಶ್ವವಿದ್ಯಾನಿಲಯಕ್ಕೆ ಸಂಬಂಧಪಟ್ಟ ಜಮೀನಿನಲ್ಲಿ ತಾಲೂಕು ಮಟ್ಟದ ಕಚೇರಿಗಳ ನಿರ್ಮಾಣಕ್ಕೆ ಕ್ಷೇತ್ರದ ಶಾಸಕ, ವಿಧಾನಸಭೆ ಸ್ಪೀಕರ್ ಯುಟಿ ಖಾದರ್ ಪ್ರಸ್ತಾವನೆ ಸಲ್ಲಿಸಿರುವುದು ಇದೆ. ಇದಲ್ಲದೆ, ಮಂಗಳೂರು ವಿಶ್ವವಿದ್ಯಾನಿಲಯಕ್ಕೆ ಸಂಬಂಧಪಟ್ಟ ಸರ್ವೇ ನಂಬರ್ 113ರಲ್ಲಿ 2.50 ಎಕರೆ ಜಮೀನನ್ನು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮಕ್ಕೆ ಮಂಜೂರು ಮಾಡುವ ಪ್ರಸ್ತಾವನೆ ಇದೆ.
ಮೇಲಿನ ಎರಡು ಪ್ರಸ್ತಾವಗಳು ಕೂಡ ಶಿಕ್ಷಣ ಉದ್ದೇಶಕ್ಕೆ ಮಂಗಳೂರು ವಿವಿಗೆ ನೀಡಲ್ಪಟ್ಟ ಭೂಮಿಯನ್ನು ಸರ್ಕಾರದ ಹೆಸರಲ್ಲಿ ಕಬಳಿಸುವ ಉದ್ದೇಶ ಹೊಂದಿರುವಂತಿದೆ. ಈಗಾಗಲೇ ವಿವಿ ಆವರಣದ ಆಸುಪಾಸಿನ ಭೂಮಿಯನ್ನು ಖಾಸಗಿಯವರು ಅತಿಕ್ರಮಿಸಿದ್ದಾರೆ. ವಿವಿಯ ಆಡಳಿತವೂ ಇದರ ಬಗ್ಗೆ ತಕರಾರು ತೆಗೆಯದೆ ಕನಿಷ್ಠ ಕಂಪೌಂಡ್ ಗೋಡೆಯನ್ನೂ ಹಾಕದೆ ಉಳ್ಳವರು ಮೇಯಲಿ ಎಂಬ ನಿರ್ಲಕ್ಷ್ಯ ಧೋರಣೆಯಲ್ಲಿದೆ. ಇದೇ ಕಾರ್ಯಸೂಚಿ ಪಟ್ಟಿಯಲ್ಲಿರುವ ಇತರ ಅಂಶಗಳನ್ನು ನೋಡಿದರೆ ವಿವಿಯ ಆಡಳಿತಕ್ಕಾಗಲೀ, ಸಿಂಡಿಕೇಟ್ ಸದಸ್ಯರಿಗಾಗಲೀ ಕಿಂಚಿತ್ ಜನಪರ, ಶೈಕ್ಷಣಿಕ ಕಾಳಜಿ ಇಲ್ಲ ಎನ್ನುವುದು ಕಂಡುಬರುತ್ತದೆ. ಕಾರ್ಯಸೂಚಿ ಪಟ್ಟಿಯಲ್ಲಿರುವ ಕೆಲವು ಅಂಶಗಳನ್ನು ಕೆಳಗೆ ಪಟ್ಟಿ ಮಾಡಲಾಗಿದೆ.
ಮಂಗಳೂರು ವಿಶ್ವವಿದ್ಯಾನಿಲಯದ ಮಹಿಳಾ ಅತಿಥಿ ಉಪನ್ಯಾಸಕರಿಗೆ ವೇತನ ಸಹಿತ ಮಾತೃತ್ವ ರಜೆ ಸೌಲಭ್ಯ ನೀಡಿರುವ ನಿರ್ಣಯವನ್ನು ಮರು ಪರಿಶೀಲಿಸುವ ಬಗ್ಗೆ, ಮಂಗಳೂರು ವಿವಿಗೆ ಸಂಬಂಧಪಟ್ಟ ಬೆಳಪು ಗ್ರಾಮದಲ್ಲಿ ನಿರ್ಮಿಸುತ್ತಿರುವ ಅತ್ಯಾಧುನಿಕ ಸಂಶೋಧನಾ ಕೇಂದ್ರದ ಕಾಮಗಾರಿಯ ವಾಸ್ತುಶಿಲ್ಪಿ ಸಲಹೆಗಾರ ಎನ್.ಎನ್ ಭಟ್ ಇವರಿಗೆ 3ನೇ ಭಾಗಶಃ ಬಿಲ್ ಪಾವತಿಸುವ ಬಗ್ಗೆ, ಮಂಗಳೂರು ವಿವಿಯ ಸಿಂಡಿಕೇಟ್ ಸಭೆ ಹಾಗೂ ಇತರ ಸಭೆಗಳಿಗೆ ಹಾಜರಾಗುವ ಅಧಿಕಾರೇತರ ಸದಸ್ಯರಿಗೆ ಮತ್ತು ಸರಕಾರಿ ಸೇವೆಯಲ್ಲಿರುವ ಸದಸ್ಯರುಗಳಿಗೆ ಪ್ರಯಾಣ ಭತ್ಯೆ, ದಿನಭತ್ಯೆ ಮತ್ತು ಉಪಸ್ಥಿತಿ ಭತ್ಯೆ ಪಾವತಿಯ ಕುರಿತು ರಚಿಸಿದ ಪರಿಷ್ಕೃತ ಪರಿನಿಮಯ ಅನುಮೋದನೆ ಬಗ್ಗೆ.
ಕುಲಪತಿಗಳ ಪರಿಹಾರ ನಿಧಿಯ ವಿನಿಯೋಗದ ಬಗ್ಗೆ ತಯಾರಿಸಿದ ಮಾರ್ಗಸೂಚಿಯ ನಡಾವಳಿಗಳ ಅನುಮೋದನೆ ಬಗ್ಗೆ, ಶೈಕ್ಷಣಿಕ ವರ್ಷ 2024-25ನೇ ಸಾಲಿನಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ವಿಭಾಗಗಳಲ್ಲಿ ವಿಶ್ವವಿದ್ಯಾನಿಲಯ ಕಾಲೇಜು, ಮಂಗಳೂರು ಇಲ್ಲಿ ನಡೆಸಲ್ಪಡುವ ವಿವಿಧ ಸ್ನಾತಕೋತ್ತರ ಕಾರ್ಯಕ್ರಮಗಳಿಗೆ ವಿದ್ಯಾರ್ಥಿ ಪರಿಮಿತಿಯನ್ನು ನಿಗದಿಪಡಿಸಿರುವ ಬಗ್ಗೆ, ಪದವಿ ಮತ್ತು ಸ್ನಾತಕೋತ್ತರ ತುಳು ಭಾಷಾ ಸಂಯುಕ್ತ ಅಧ್ಯಯನ ಮಂಡಳಿಯ ಪುನರ್ರಚನೆಯ ಬಗ್ಗೆ(ಪ್ರತ್ಯೇಕ ತುಳು ಭಾಷಾ ಅಧ್ಯಯನ ವಿಭಾಗ ಆಗಬೇಕೆಂಬ ಪ್ರಸ್ತಾವ ಇದ್ದರೂ ಅದನ್ನು ಈವರೆಗೂ ಪರಿಗಣಿಸಿಲ್ಲ), ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜು ಇದರ ಆಟದ ಮೈದಾನವನ್ನು ಬಾಡಿಗೆಗೆ ನೀಡುವ ಬಗ್ಗೆ.
ಡಾ.ಯಶಸ್ವಿನಿ ಬಿ. ಇವರು ಎಂಎಸ್ ಡಬ್ಲ್ಯು ವಿಭಾಗದಲ್ಲಿ ತನಗಾದ ಲೈಂಗಿಕ ಕಿರುಕುಳ ಬಗ್ಗೆ ಕರ್ನಾಟಕ ಹೈಕೋರ್ಟ್ ನಲ್ಲಿ ಹೂಡಿರುವ ರಿಟ್ ಅರ್ಜಿ ಕುರಿತಾಗಿ ವಿಶ್ವವಿದ್ಯಾನಿಲಯದಿಂದ ಮುಂದಿನ ಕ್ರಮ ಕೈಗೊಳ್ಳುವ ಬಗ್ಗೆ(ವಿವಿಯ ಆಡಳಿತಕ್ಕೆ ದೂರು ಕೊಟ್ಟು ಸ್ಪರ್ಶ್ ಕಮಿಟಿ ವರದಿಯಲ್ಲಿ ಆರೋಪ ಸಾಬೀತಾಗಿದ್ದರೂ ಆರೋಪಿತ ವಿಭಾಗ ಮುಖ್ಯಸ್ಥ ಮೋಹನ್ ಸಿಂಘೆ ವಿರುದ್ಧ ಕ್ರಮ ಕೈಗೊಂಡಿಲ್ಲ), ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಬ್ಯಾರಿ ಅಧ್ಯಯನ ಪೀಠ ಸ್ಥಾಪನೆ ಬಗ್ಗೆ ಪರಿಷ್ಕರಣೆ ಮಾಡಿ ರಚಿಸಿದ ಕರಡು ಪರಿನಿಯಮವನ್ನು ಅನುಮೋದಿಸುವ ಕುರಿತು, ಮಂಗಳೂರು ವಿವಿಯಲ್ಲಿ ಕುಂದಾಪುರ ಕನ್ನಡ ಅಧ್ಯಯನ ಪೀಠವನ್ನು ಸ್ಥಾಪಿಸುವ ಕುರಿತು ರಚಿಸಲಾದ ಕರಡು ಪರಿನಿಯಮವನ್ನು ಅನುಮೋದಿಸುವ ಕುರಿತು, ಫಾದರ್ ಮುಲ್ಲರ್ ಕಾಲೇಜು, ಮಂಗಳೂರು ಇಲ್ಲಿಗೆ ಪಿಎಚ್ ಡಿ ವ್ಯಾಸಂಗಕ್ಕೆ ಸಂಶೋಧನಾ ಕೇಂದ್ರವನ್ನಾಗಿ ಮಾನ್ಯತೆ ನೀಡುವ ಬಗ್ಗೆ, ಮಂಗಳೂರು ವಿವಿಯ ಘಟಕ ಕಾಲೇಜುಗಳಲ್ಲಿ ನಡೆಸಲಾಗುವ ಸ್ನಾತಕ ಕಾರ್ಯಕ್ರಮಗಳಿಗೆ ಕನಿಷ್ಠ ವಿದ್ಯಾರ್ಥಿ ನಿಗದಿಪಡಿಸುವ ಬಗ್ಗೆ,
ಮಂಗಳೂರು ವಿಶ್ವವಿದ್ಯಾನಿಲಯದ ಕಾವೇರಿ ಅತಿಥಿ ಗೃಹದಲ್ಲಿ ಜಂಟಿ ನಿರ್ದೇಶಕರು, ಕಾಲೇಜು ಶಿಕ್ಷಣ ಇಲಾಖೆ, ಮಂಗಳೂರು ಇವರು ವಾಸ್ತವ್ಯ ಹೂಡಿದ ಕೊಠಡಿ ಬಾಡಿಗೆಯನ್ನು ನಿಗದಿಪಡಿಸುವ ಬಗ್ಗೆ ಕಾರ್ಯಸೂಚಿ ಇಡಲಾಗಿದೆ. (ಜಂಟಿ ನಿರ್ದೇಶಕರಾಗಿ ಇತ್ತೀಚೆಗೆ ನಿವೃತ್ತಿಯಾಗಿದ್ದ ರಾಮೇಗೌಡ ಎಂಬ ಅಧಿಕಾರಿ ಒಂದೂವರೆ ವರ್ಷ ಕಾಲ ಕಾವೇರಿ ಅತಿಥಿ ಗೃಹದಲ್ಲಿ ಉಳಿದುಕೊಂಡಿದ್ದರೂ, ಮೇಲಧಿಕಾರಿ ಎಂಬ ನೆಲೆಯಲ್ಲಿ ಮಂಗಳೂರು ವಿವಿಯ ರಿಜಿಸ್ಟ್ರಾರ್ ಮತ್ತು ಕುಲಪತಿ ಅವರಿಂದ ಕೊಠಡಿ ಬಾಡಿಗೆಯನ್ನೇ ಪಡೆದಿರಲಿಲ್ಲ).
ಸಿಂಡಿಕೇಟ್ ಸಭೆಯಲ್ಲಿ ಕುಲಪತಿ, ರಿಜಿಸ್ಟ್ರಾರ್ ಸೇರಿದಂತೆ 15 ಮಂದಿಯಷ್ಟು ಆಹ್ವಾನಿತರಿದ್ದಾರೆ. ರಾಜ್ಯಪಾಲರ ಕಡೆಯಿಂದ ನಿಯೋಜನೆಗೊಂಡ ಬಿಜೆಪಿ ಮೂಲದವರು, ಕಾಂಗ್ರೆಸ್ ಆಡಳಿತದ ಕಡೆಯಿಂದ ನೇಮಕಗೊಂಡ ಸಿಂಡಿಕೇಟ್ ಸದಸ್ಯರೂ ಇದ್ದಾರೆ. ಸಿಂಡಿಕೇಟ್ ಸಭೆಯಲ್ಲಿಟ್ಟ ಅಜೆಂಡಾಗಳನ್ನು ನೋಡಿದರೆ, ಇವರೆಲ್ಲ ಸೇರಿಕೊಂಡು ವಿವಿಯನ್ನು ಆರ್ಥಿಕ ದುಸ್ಥಿತಿಯಿಂದ ಮೇಲೆತ್ತುವ ಬದಲು ಇನ್ನಷ್ಟು ಆಳಕ್ಕೆ ಕುಸಿಯುವಂತೆ ಮಾಡಲು ಪ್ರಯತ್ನ ಮಾಡುವಂತೆ ತೋರುತ್ತಿದೆ. ಒಂದು ಬಾರಿ ವಿವಿಯ ಆಸ್ತಿ ಇನ್ನೊಂದು ಇಲಾಖೆಯ ಪಾಲಾದರೆ ಅಲ್ಲಿಂದ ವಿಸ್ತರಣೆಯಾಗುತ್ತ ಹೋಗುತ್ತದೆ. ಖಾಸಗಿಯವರ ಕಬಳಿಕೆಗೂ ದಾರಿ ಮಾಡಿಕೊಡುತ್ತದೆ. ಮಂಗಳೂರು ವಿವಿ ಕಾಲೇಜಿನ ಸ್ನಾತಕ ತರಗತಿಗಳನ್ನು ಮುಚ್ಚಿ ಕೋಣಾಜೆ ವಿವಿ ಕ್ಯಾಂಪಸಿಗೆ ಒಯ್ಯುವುದಕ್ಕೂ ತೆರೆಮರೆಯ ಕಸರತ್ತು ನಡೆಯುತ್ತಿದೆ. ಈಗಲೇ ವಿವಿಯ ಸ್ನಾತಕ ಅಧ್ಯಯನ ಕೇಂದ್ರಕ್ಕೆ ವಿದ್ಯಾರ್ಥಿಗಳಿಲ್ಲ. ಮಂಗಳೂರು ಕೇಂದ್ರ ಸ್ಥಾನದಲ್ಲಿ ಇರುವುದರಿಂದ ವಿವಿ ಕಾಲೇಜಿನಲ್ಲಿ ಒಂದಷ್ಟು ವಿದ್ಯಾರ್ಥಿಗಳಿದ್ದಾರೆ. ಇವರ ಈ ನಡೆಯಿಂದ ಪರೋಕ್ಷವಾಗಿ ಮಂಗಳೂರು ವಿವಿಯನ್ನು ಒಂದೋ ಮುಚ್ಚುವುದು ಅಥವಾ ಖಾಸಗಿ ವಿವಿಯವರ ಕೈಗಿಡುವ ಹುನ್ನಾರದಂತೆ ತೋರುತ್ತದೆ.
Mangalore University, which has frequently found itself mired in controversies, is once again under scrutiny—this time for alleged moves to allocate its land to external agencies, including a taluk office and the Karnataka Power Transmission Corporation Limited (KPTCL). Speaker U.T. Khader has reportedly sought land for a taluk office, while a proposal to allot 2.5 acres to KPTCL is also under discussion. However, syndicate meeting agendas related to these decisions appear to be inconsistent, raising further questions.
16-09-25 11:00 pm
Bangalore Correspondent
Nanjegowda MLA, Malur: ಮಾಲೂರು ಕಾಂಗ್ರೆಸ್ ಶಾಸಕ...
16-09-25 10:54 pm
Bangalore Suicide, Air force: ಸಹೋದರಿ ಜೊತೆ ಜಗಳ...
15-09-25 08:53 pm
Actor Upendra, Wife Priyanka, Cyber Fraud, Ha...
15-09-25 04:45 pm
Pratap Simha, Banu Mushtaq: ಬಾನು ಮುಷ್ತಾಕ್ ದಸರ...
15-09-25 03:39 pm
16-09-25 10:11 pm
HK News Desk
Cloudburst, Dehradun: ಡೆಹ್ರಾಡೂನ್ನಲ್ಲಿ ಭಾರೀ ಮ...
16-09-25 02:46 pm
Waqf, Supreme Court; ವಕ್ಫ್ ತಿದ್ದುಪಡಿ ಕಾಯ್ದೆ...
15-09-25 04:57 pm
ನಾನು ಶಿವಭಕ್ತ ; ನಿಂದನೆಯ ವಿಷವನ್ನು ಕುಡಿದು ಜೀರ್ಣಿ...
14-09-25 10:49 pm
ಪ್ರಧಾನಿ ಮೋದಿ ಅಸ್ಸಾಂನಲ್ಲಿ ಇರುವಾಗಲೇ 5.8ರ ತೀವ್ರತ...
14-09-25 07:31 pm
16-09-25 07:48 pm
Mangalore Correspondent
Ex IPS Kempaiah, Professor Umeshchandra, Mang...
16-09-25 07:02 pm
Mangalore BJP Protest, UT khader, Red Stone:...
16-09-25 06:51 pm
UT Khader, Mangalore, Ullal: ಉಳ್ಳಾಲ ಕ್ಷೇತ್ರದಲ...
16-09-25 06:06 pm
ಕೆಂಪು ಕಲ್ಲು ನಿಯಮ ಸರಳೀಕರಣಕ್ಕೆ ಸಂಪುಟದಲ್ಲಿ ಒಪ್ಪಿ...
16-09-25 05:12 pm
16-09-25 10:40 pm
HK News Desk
Bidar crime: ಏಳು ವರ್ಷದ ಬಾಲಕಿಯನ್ನ ಮೂರನೇ ಮಹಡಿಯಿ...
16-09-25 07:12 pm
Bangalore Police, Inspector Suspend, Crime, D...
15-09-25 10:47 pm
Udupi, Surat Murder, Arrest: ವೃದ್ಧ ದಂಪತಿಯನ್ನು...
14-09-25 06:01 pm
Mangalore Fake Aadhar, RTC Scam, Police: ಆರೋಪ...
13-09-25 11:36 am