ಬ್ರೇಕಿಂಗ್ ನ್ಯೂಸ್
19-05-25 11:07 pm Mangalore Correspondent ಕರಾವಳಿ
ಮಂಗಳೂರು, ಮೇ 19 : ವಿದೇಶದಲ್ಲಿ ಉದ್ಯೋಗ ತೆಗೆಸಿಕೊಡುವುದಾಗಿ ಹೇಳಿ ನೂರಾರು ಮಂದಿಗೆ ಕೋಟ್ಯಂತರ ರೂಪಾಯಿ ದೋಖಾ ಎಸಗಲಾಗಿದೆ ಎಂಬ ಪ್ರಕರಣಲ್ಲಿ ಕರ್ತವ್ಯ ಲೋಪ ಎಸಗಿದ್ದಾರೆಂದು ಕದ್ರಿ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಸೋಮಶೇಖರ್ ಮತ್ತು ಎಸ್ಐ ಉಮೇಶ್ ಕೆ.ಎನ್ ಅವರನ್ನು ಪೊಲೀಸ್ ಕಮಿಷನರ್ ಇಲಾಖಾ ಕರ್ತವ್ಯದಿಂದ ಅಮಾನತು ಮಾಡಿದ್ದಾರೆ.
ನ್ಯೂಜಿಲಂಡಿನಲ್ಲಿ ರಿಗ್ ಕಂಪನಿಯಲ್ಲಿ ಉದ್ಯೋಗ ತೆಗೆಸಿಕೊಡುವ ಆಮಿಷ ತೋರಿಸಿ 200ಕ್ಕೂ ಹೆಚ್ಚು ಮಂದಿಯಿಂದ 2-3 ಲಕ್ಷ ರೂಪಾಯಿ ಹಣವನ್ನು ಪಡೆದು ವಂಚನೆ ಎಸಗಿರುವ ಬಗ್ಗೆ ಮಂಗಳೂರಿನ ಬೆಂದೂರುವೆಲ್ ನಲ್ಲಿ ಕಚೇರಿ ಹೊಂದಿದ್ದ ಹೈರ್ ಗ್ಲೋ ಎಲಿಗೆಂಟ್ ಓವರ್ ಸೀಸ್ ಇಂಟರ್ನ್ಯಾಶನಲ್ (ಓಪಿಸಿ) ಎನ್ನುವ ಕಂಪನಿ ವಿರುದ್ಧ ಪ್ರಕರಣ ದಾಖಲಾಗಿದೆ. ಈ ಬಗ್ಗೆ ಮೇ 5ರಂದು ಕದ್ರಿ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದ್ದು, ಆನಂತರ ಪ್ರಕರಣ ಸಿಸಿಬಿಗೆ ಹಸ್ತಾಂತರಗೊಂಡು ತನಿಖಾ ಪ್ರಕ್ರಿಯೆ ನಡೆದಿತ್ತು.
ಆದರೆ ಇದಕ್ಕೂ ಮೊದಲೇ ಬೆಂದೂರುವೆಲ್ ನಲ್ಲಿರುವ ಹೈರ್ ಗ್ಲೋ ಕಂಪನಿ ಮತ್ತು ಝೀ ಝೋನ್ ರಿಕ್ವೈರ್ಮೆಂಟ್ ಏಜನ್ಸಿ ಮತ್ತು ಪಂಪ್ವೆಲ್ ನಲ್ಲಿರುವ ಮತ್ತೊಂದು ಏಜನ್ಸಿಯವರು ಇಸ್ರೇಲ್, ಯುಕೆ ಸೇರಿದಂತೆ ಉದ್ಯೋಗದ ಬಗ್ಗೆ ಆಮಿಷವೊಡ್ಡಿ ಪತ್ರಿಕಾ ಪ್ರಕಟಣೆ ಕೊಟ್ಟು ಅಭ್ಯರ್ಥಿಗಳನ್ನು ಆಹ್ವಾನಿಸುತ್ತಿದ್ದ ಬಗ್ಗೆ ಇಮಿಗ್ರೇಶನ್ ಅಧಿಕಾರಿಗಳು ಪೊಲೀಸ್ ಕಮಿಷನರ್ ಕಚೇರಿಗೆ ಸಂದೇಶ ನೀಡಿದ್ದು, ಇವರಿಗೆ ಇಮಿಗ್ರೇಶನ್ ಅನುಮತಿ ಇಲ್ಲ ಮತ್ತು ನಕಲಿ ಏಜನ್ಸಿ ಎನ್ನುವ ಬಗ್ಗೆ ಮಾಹಿತಿ ನೀಡಿದ್ದರು. ಇದರಂತೆ, ಕದ್ರಿ ಠಾಣೆಯಲ್ಲಿ ಈ ಬಗ್ಗೆ ಕೇಸು ದಾಖಲಾಗಿತ್ತಲ್ಲದೆ, ಇಮಿಗ್ರೇಶನ್ ಅನುಮತಿ ಇಲ್ಲದಿರುವ ಬಗ್ಗೆ ತನಿಖೆಯೂ ನಡೆದಿತ್ತು. ನವೆಂಬರ್ ತಿಂಗಳಲ್ಲಿ ಇಮಿಗ್ರೇಶನ್ ಇಲಾಖೆಯಿಂದ ಸಂದೇಶ ಬಂದಿದ್ದರೂ, ಆರು ತಿಂಗಳಲ್ಲಿ ಹೈರ್ ಗ್ಲೋ ಕಂಪನಿಯ ಹೆಸರಲ್ಲಿ 200ಕ್ಕೂ ಹೆಚ್ಚು ಮಂದಿಗೆ ದೋಖಾ ಆಗಿರುವುದು ಈಗ ಬೆಳಕಿಗೆ ಬಂದಿದೆ.
ಇಮಿಗ್ರೇಶನ್ ಅನುಮತಿ ಇಲ್ಲದೇ ಇದ್ದರೆ ಪೊಲೀಸರಿಗೆ ಇಂತಹ ಏಜನ್ಸಿಗಳನ್ನು ಬಂದ್ ಮಾಡಿಸುವ ಅಥವಾ ಸೂಕ್ತ ಕ್ರಮ ಜರುಗಿಸುವ ಅಧಿಕಾರ ಇರುತ್ತದೆ. ಆ ಕೆಲಸವನ್ನು ಸೂಕ್ತವಾಗಿ ನಿರ್ವಹಿಸದೇ ಇದ್ದುದರಿಂದ ಈಗ ದೊಡ್ಡ ಹಗರಣ ರೂಪದಲ್ಲಿ ಕೋಟ್ಯಂತರ ರೂಪಾಯಿ ದೋಖಾ ಆಗಿದೆ ಎನ್ನುವುದು ಮೇಲ್ನೋಟಕ್ಕೆ ತಿಳಿದುಬಂದಿರುವುದರಿಂದ ಕದ್ರಿ ಇನ್ಸ್ ಪೆಕ್ಟರ್ ಸೋಮಶೇಖರ್ ಮತ್ತು ಆಗ ಎಸ್ಐ ಆಗಿ ಕರ್ತವ್ಯದಲ್ಲಿದ್ದ ಉಮೇಶ್ ಅವರನ್ನು ಪೊಲೀಸ್ ಕಮಿಷನರ್ ಅಮಾನತು ಮಾಡಿದ್ದಾರೆ. ವಿಶೇಷ ಅಂದ್ರೆ, ಮಾಜಿ ಮಿಲಿಟರಿ ಯೋಧನೂ ಆಗಿರುವ ಉಮೇಶ್ ಅವರಿಗೆ ಫೆ.14ರಂದು ಕದ್ರಿಯಿಂದ ಬರ್ಕೆ ಠಾಣೆಗೆ ವರ್ಗಾವಣೆಯಾಗಿತ್ತು ಎನ್ನುವ ಮಾಹಿತಿಯಿದ್ದು, ಇದಕ್ಕೂ ಮೊದಲೇ ಇಮಿಗ್ರೇಶನ್ ಇಲಾಖೆಯ ಪ್ರಕರಣ ನಡೆದಿದ್ದರಿಂದ ಅವರನ್ನೂ ಕರ್ತವ್ಯ ಲೋಪದ ಕಾರಣಕ್ಕೆ ಅಮಾನತು ಮಾಡಲಾಗಿದೆ.
ಇದಲ್ಲದೆ, ವಿದೇಶದಲ್ಲಿ ಉದ್ಯೋಗ ಆಮಿಷ ತೋರಿಸಿ ವಂಚನೆ ಎಸಗಿರುವ ಬಗ್ಗೆ ಕಾಂಗ್ರೆಸ್ ಕಾರ್ಮಿಕ ಘಟಕದವರು ಸುದ್ದಿಗೋಷ್ಟಿ ಮೂಲಕ ತಿಳಿಸಿದ್ದಾರೆ ವಿನಾ ಅಧಿಕೃತವಾಗಿ ಪೊಲೀಸರು ಇನ್ನೂ ತಿಳಿಸಿಲ್ಲ. ಸೋಮವಾರ ಮಧ್ಯಾಹ್ನ ಕಾರ್ಮಿಕ ಘಟಕದ ಜಿಲ್ಲಾಧ್ಯಕ್ಷ ಲಾರೆನ್ಸ್ ಡಿಸೋಜ ಸುದ್ದಿಗೋಷ್ಟಿ ನಡೆಸಿದ ಬೆನ್ನಲ್ಲೇ ಇಬ್ಬರು ಪೊಲೀಸ್ ಅಧಿಕಾರಿಗಳನ್ನು ಸಸ್ಪೆಂಡ್ ಮಾಡಿರುವ ಬಗ್ಗೆ ಪೊಲೀಸ್ ಕಮಿಷನರ್ ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ. ವಂಚನೆ ಪ್ರಕರಣವಾಗಲೀ, ಆರೋಪಿಯನ್ನು ಬಂಧಿಸಿದ ಬಗ್ಗೆಯಾಗಲೀ ಇನ್ನೂ ಖಚಿತಪಡಿಸಿಲ್ಲ.
In a major development related to the overseas job scam that defrauded hundreds of people of crores of rupees, two police officers have been suspended for dereliction of duty. Kadri Police Station Inspector Somasekhar and Sub-Inspector Umesh K.N. have been suspended from departmental duties by the Police Commissioner.
09-09-25 10:52 pm
Bangalore Correspondent
U T Khader: ಯುಟಿ ಖಾದರ್ ಏಕಪಕ್ಷೀಯ ತೀರ್ಮಾನ ತೆಗೆದ...
09-09-25 09:14 pm
Shivamogga Accident: ಸೆ.25ಕ್ಕೆ ಹಸೆಮಣೆ ಏರಬೇಕಿದ...
08-09-25 08:07 pm
ವೀರಶೈವ ಲಿಂಗಾಯತರು ಹಿಂದು ಬದಲು ಇತರರು ಎಂದು ನಮೂದಿಸ...
08-09-25 06:48 pm
ಮಸೀದಿ ಎದುರಲ್ಲಿ ಗಣೇಶ ವಿಸರ್ಜನೆ ವೇಳೆ ಕಲ್ಲು ತೂರಾಟ...
08-09-25 05:21 pm
09-09-25 11:09 pm
HK News Desk
ನೂತನ ಉಪ ರಾಷ್ಟ್ರಪತಿಯಾಗಿ ಎನ್.ಡಿ.ಎ ಮೈತ್ರಿಕೂಟದ ಸಿ...
09-09-25 09:38 pm
ಕಾಸರಗೋಡು ; ರಾಷ್ಟ್ರೀಯ ಹೆದ್ದಾರಿ ದಾಟಲೆತ್ನಿಸಿದ ಮಹ...
08-09-25 11:06 pm
ನೇಪಾಳದಲ್ಲಿ ಸೋಶಿಯಲ್ ಮೀಡಿಯಾ ಬ್ಯಾನ್ ; ದೇಶಾದ್ಯಂತ...
08-09-25 10:59 pm
ಏಳು ವರ್ಷ ಶಿಕ್ಷೆ ಪೂರ್ತಿಗೊಳಿಸಿದ ಬಳಿಕವೂ ಹೆಚ್ಚುವರ...
08-09-25 06:07 pm
10-09-25 11:02 am
Mangalore Correspondent
"ಅಮೃತ ಸೋಮೇಶ್ವರ ರಸ್ತೆ" ನಾಮಕರಣಕ್ಕೆ ಸೋಮೇಶ್ವರ ಪುರ...
09-09-25 10:47 pm
Mangalore Accident, Kulur, NHAI: ಕುಳೂರು ರಸ್ತೆ...
09-09-25 08:01 pm
YouTuber Munaf, SIT, Dharmasthala Case: ಎಸ್ಐಟ...
09-09-25 05:59 pm
Mangalore, NHAI, Padmaraj: ಇನ್ನೆಷ್ಟು ಜೀವ ಬಲಿಯ...
09-09-25 05:14 pm
08-09-25 10:34 pm
Mangalore Correspondent
ಮಂಗಳೂರು ಏರ್ಪೋರ್ಟ್ ಟರ್ಮಿನಲ್ ಬಿಲ್ಡಿಂಗ್ ಧ್ವಂಸ ಬೆ...
07-09-25 03:34 pm
Mangalore SAF Police Constable, Arrest: ವಕೀಲ...
06-09-25 08:32 pm
60 Crore Fraud, Actress Shilpa Shetty, Raj Ku...
06-09-25 07:45 pm
ಲಷ್ಕರ್ ಉಗ್ರರ ಹೆಸರಲ್ಲಿ ಮುಂಬೈ ಸ್ಫೋಟದ ಬೆದರಿಕೆ ಸಂ...
06-09-25 05:26 pm