ಬ್ರೇಕಿಂಗ್ ನ್ಯೂಸ್
27-05-25 04:26 pm Mangalore Correspondent ಕರಾವಳಿ
ಮಂಗಳೂರು, ಮೇ 27 : ಕುಪ್ಪೆಪದವು ಗ್ರಾಮದಲ್ಲಿ ಸ್ವಂತ ಮನೆ, ಭೂಮಿ ಇಲ್ಲದ ನೂರಾರು ಬಡ ಕುಟುಂಬಗಳು ದಶಕದಿಂದ ನಿವೇಶನಕ್ಕಾಗಿ ಪಂಚಾಯತ್ ಗೆ ಅರ್ಜಿ ಸಲ್ಲಿಸಿ ಕಾಯುತ್ತಿದ್ದರು. ಆರು ವರ್ಷಗಳ ಹಿಂದೆ ಚುನಾವಣಾ ಪೂರ್ವದಲ್ಲಿ ಬಹಳ ತರಾತುರಿಯಿಂದ ಶಾಸಕ ಭರತ್ ಶೆಟ್ಟಿ 97 ಕುಟುಂಬಗಳಿಗೆ ನಿವೇಶನ ತೋರಿಸಿ ಹಕ್ಕು ಪತ್ರ ವಿತರಿಸಿದರು. ಆದರೆ, ಹಕ್ಕುಪತ್ರ ನೀಡಿ ಆರು ವರ್ಷ ಕಳೆದರೂ 97 ಕುಟುಂಬಳಿಗೂ ನಿವೇಶನ ಹಸ್ತಾಂತರ ಮಾಡಲಿಲ್ಲ.
ಕಾದು ಬಸವಳಿದ ಈ ಬಡ ಕುಟುಂಬಗಳು ಈಗ ಸ್ಥಳೀಯ ಕಾರ್ಮಿಕ ಸಂಘಟನೆಗಳು, ಸಿಪಿಐಎಂ ಮುಖಂಡರ ಮಾರ್ಗದರ್ಶನದಲ್ಲಿ ಹೋರಾಟ ಸಮಿತಿ ರಚಿಸಿ ಹೋರಾಟ ಶುರು ಮಾಡಿದ್ದಾರೆ. ಕಳೆದ ಜನವರಿಯಿಂದ ಧರಣಿ, ಪ್ರತಿಭಟನೆ ನಡೆಸಿದರೂ ನ್ಯಾಯ ದೊರಕದ ಹಿನ್ನಲೆಯಲ್ಲಿ ಈಗ ಕುಪ್ಪೆಪದವು ಗ್ರಾಪಂ ಮುಂಭಾಗ ಅನಿರ್ಧಿಷ್ಟಾವಧಿ ಧರಣಿ ಹಮ್ಮಿಕೊಂಡಿದ್ದಾರೆ.



ಭಾರೀ ಮಳೆಯನ್ನೂ ಲೆಕ್ಕಿಸದೆ ಬಡ ನಿವೇಶನ ಸಂತ್ರಸ್ತರು ಅನಿರ್ಧಿಷ್ಟಾವಧಿ ಧರಣಿಗೆ ಚಾಲನೆ ನೀಡಿದ್ದಾರೆ. ತಾಲೂಕು ಕಾರ್ಯ ನಿರ್ವಹಣಾಧಿಕಾರಿ, ತಹಶೀಲ್ದಾರ್ ಧರಣಿ ಸ್ಥಳಕ್ಕೆ ಆಗಮಿಸಿ ಸಮಸ್ಯೆ ಆಲಿಸಿದ್ದಾರೆ. ಆದಷ್ಟು ಬೇಗ ನಿವೇಶನ ವಿತರಿಸುವುದಾಗಿ ಭರವಸೆ ನೀಡಿದ್ದಾರೆ.
ರಾತ್ರಿಯೂ ಧರಣಿ ಮುಂದುವರಿಕೆ
ಕಳೆದ ಆರು ವರ್ಷಗಳಿಂದ ಭರವಸೆಗಳನ್ನಷ್ಟೆ ಕೇಳಿ ಭ್ರಮನಿರಸನ ಗೊಂಡಿರುವ ನಿವೇಶನ ರಹಿತರು ತಾಲೂಕು ಆಡಳಿತದ ಭರವಸೆಗೆ ಬಗ್ಗದೆ, ನಿವೇಶನ ಸ್ವಾಧೀನದ ಲಿಖಿತ ಪತ್ರ ನೀಡುವವರೆಗೆ ಧರಣಿ ಕೈ ಬಿಡುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ. ರಾತ್ರಿ 8 ಗಂಟೆಯ ವರೆಗೂ ಮನವೊಲಿಸಲು ಯತ್ನಿಸಿದ ಅಧಿಕಾರಿಗಳು ಪ್ರತಿಭಟನಾಕಾರರ ದೃಢ ನಿಲುವಿನಿಂದ ವಾಪಸ್ ಆಗಿದ್ದಾರೆ. ಮೇ 27ರ ಮಂಗಳವಾರ ಧರಣಿ ಎರಡನೇ ದಿನಕ್ಕೆ ಕಾಲಿಟ್ಟಿದೆ.
Mangalore Indefinite Protest by Kuppepadavu Gram Panchayat Site Allottees Enters Second Day; No Sites Allotted Despite MLA's Assurances of Rights Certificates".
07-02-26 05:09 pm
HK News Desk
ಸಿದ್ದರಾಮಯ್ಯರೇ ಐದು ವರ್ಷ ಸಿಎಂ ; ಪುತ್ರ ಯತೀಂದ್ರ ಪ...
07-02-26 02:58 pm
Sanjana Bus Fire Accident, Nelamangala: ಮತ್ತೊ...
06-02-26 12:30 pm
ಭವಿಷ್ಯ ಹೇಳುವ ನೆಪದಲ್ಲಿ ಬೇಟೆ? ರೀಲ್ಸ್ ರಾಣಿಯ ಹಿಂದ...
05-02-26 05:52 pm
ಗದಗದಲ್ಲಿ ಭೀಕರ ರಸ್ತೆ ಅಪಘಾತ ; ಕ್ರೂಸರ್ - ಕ್ಯಾಂಟರ...
05-02-26 03:11 pm
07-02-26 10:53 pm
HK News Desk
ಕಣ್ಣೆದುರೇ ನಡೆದ ಅಚ್ಚರಿ ; 1 ಲಕ್ಷ ರೂ. ಮೌಲ್ಯದ ಚಿನ...
06-02-26 10:58 pm
ಕೊರಿಯನ್ ವೆಬ್ ಸಿರೀಸ್ ವ್ಯಸನ, ತಂದೆಯ ಎರಡು ಕೋಟಿ ಸಾ...
06-02-26 08:47 pm
SBI ಬ್ಯಾಂಕ್ ಕಿತಾಪತಿ ; 2 ಕೋಟಿ ಮೌಲ್ಯದ ಚಿನ್ನ–ಬೆಳ...
06-02-26 08:17 pm
ನೇಪಾಳದ ಗಡಿಯಲ್ಲಿ ಮದುವೆ ದಿಬ್ಬಣ ಕರೆದೊಯ್ಯುತ್ತಿದ್ದ...
06-02-26 07:04 pm
07-02-26 12:55 pm
HK staffer
DK Shivakumar, Puttur: ಪಕ್ಷ ಏನು ಹೇಳುತ್ತೋ ಅದೇ...
07-02-26 11:53 am
ಬಿಜೆಪಿಯವರು ತಿಪ್ಪರಲಾಗ ಹೊಡೆದ್ರೂ ಅಧಿಕಾರಕ್ಕೆ ಬರಲ್...
06-02-26 10:56 pm
ಡಿಕೆಶಿ ಸಿಎಂ ಆಗಿಯೇ ಪುತ್ತೂರು ಕಾಂಗ್ರೆಸ್ ಕಚೇರಿ ಉದ...
06-02-26 10:42 pm
Veerendra Heggade, Dharmasthala: ಶಿವರಾತ್ರಿಗೆ...
06-02-26 09:01 pm
08-02-26 02:07 pm
Mangalore Correspondent
MDMA ಮಾದಕ ವಸ್ತು ಮಾರಾಟ ಮಾಡುತ್ತಿದ್ದಾಗ ಪೊಲೀಸ್ ದಾ...
08-02-26 12:59 pm
Mangalore Robbery, Crime: ಕಳವಾರಿಗೆ ಮೆಹಂದಿ ಹೋಗ...
08-02-26 12:37 pm
ಫ್ರೀ ಫೈರ್ ಗೇಮ್ ಚಟ ; ಅಕ್ಕನ ಮಗನ ಕೊಂದಿದ್ದ ಮಾವ, ಪ...
07-02-26 10:48 pm
ಡಿಜಿಟಲ್ ಅರೆಸ್ಟ್ ; ಮಹಿಳೆಗೆ 15 ನಿಮಿಷದಲ್ಲಿ 50 ಲಕ...
07-02-26 10:07 pm