ಬ್ರೇಕಿಂಗ್ ನ್ಯೂಸ್
27-05-25 10:49 pm Mangalore Correspondent ಕರಾವಳಿ
ಮಂಗಳೂರು, ಮೇ 27 : ಬಂಟ್ವಾಳದಲ್ಲಿ ಬರ್ಬರವಾಗಿ ಹತ್ಯೆಯಾದ ಅಬ್ದುಲ್ ರಹೀಂ ಅವರ ಮೃತದೇಹ ಇರಿಸಲಾದ ಯೇನಪೋಯಾ ಆಸ್ಪತ್ರೆಗೆ ಎಸ್ಡಿಪಿಐ ಜಿಲ್ಲಾಧ್ಯಕ್ಷ ಅನ್ವರ್ ಸಾದತ್ ಭೇಟಿ ನೀಡಿದ್ದು ಈ ವೇಳೆ ಹಿಂದು ಸಂಘಟನೆಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೊಳ್ತಮಜಲು ಬಳಿ ಪಿಕಪ್ ಚಾಲಕನಾಗಿದ್ದ ಮುಸ್ಲಿಂ ಯುವಕನಿಗೆ ಮರಳು ಲೋಡ್ ಗೆ ಕರೆದಿದ್ದರು. ಈ ಸಂದರ್ಭ ಸಂಘ ಪರಿವಾರಕ್ಕೆ ಸೇರಿದ ಗೂಂಡಾ ಪಡೆ ಏಕಾಏಕಿ ತಲವಾರು ದಾಳಿ ನಡೆಸಿದೆ. ಘಟನೆಯಲ್ಲಿ ಇಮ್ತಿಯಾಜ್ ಆಲಿಯಾಸ್ ಅಬ್ದುಲ್ ರಹೀಂ ಸ್ಥಳದಲ್ಲೇ ಹತ್ಯೆಯಾಗಿದ್ದಾರೆ. ಕೆಲವು ದಿನಗಳಿಂದ ಕಿಡಿಗೇಡಿಗಳು ಮುಸ್ಲಿಮರಿಗೆ ಬಹಿರಂಗ ಬೆದರಿಕೆ ಹಾಕ್ತಾ ಇದ್ದಾರೆ. ರೌಡಿಶೀಟರ್ ಒಬ್ಬನ ಹತ್ಯೆಗೆ ಪ್ರತೀಕಾರವಾಗಿ ಬೆದರಿಕೆ ಹಾಕ್ತಾ ಇದಾರೆ. ಮೊನ್ನೆ ಪ್ರತಿಭಟನೆಯಲ್ಲಿ ಶ್ರೀಕಾಂತ್ ಶೆಟ್ಟಿ ಎಂಬಾತ ರಕ್ತಕ್ಕೆ ರಕ್ತ ಅಂತ ಹೇಳಿದ್ದಾನೆ. ಮತ್ತೊಬ್ಬ ಭರತ್ ಕುಮ್ಡೇಲ್ ಎಂಬ ಗೂಂಡಾ ಪೋಸ್ಟ್ ಮಾರ್ಟಂ ಕೂಡ ಮಾಡಲು ಆಗದ ರೀತಿಯಲ್ಲಿ ಕೊಲೆ ಮಾಡ್ತೇನೆ ಅಂದಿದ್ದಾನೆ. ಸಾಮಾಜಿಕ ತಾಣಗಳಲ್ಲಿ ಬೆದರಿಕೆ ಹಾಕಿದವರ ವಿರುದ್ದ 45 ಎಫ್ಐಆರ್ ಆಗಿದೆ. ಆದರೆ ಒಂದಿಬ್ಬರನ್ನ ಬಿಟ್ಟು ಯಾರನ್ನೂ ಬಂಧನ ಮಾಡಲಿಲ್ಲ. ಪೊಲೀಸರು ಆಂಟಿ ಕಮ್ಯುನಲ್ ಟಾಸ್ಕ್ ಫೋರ್ಸ್ ಮಾಡ್ತಾರೆ ಅಂತಿದಾರೆ, ಆದರೆ ಅದಕ್ಕೆ ಮತ್ತೊಂದು ಹೆಣ ಬೀಳಬೇಕಾ ಎಂದು ಪ್ರಶ್ನಿಸಿದರು.
15 ಮಂದಿ ಬಹಳ ವ್ಯವಸ್ಥಿತವಾಗಿ ಈ ಹತ್ಯೆ ಮಾಡಿದ್ದಾರೆ. ಇದರ ವಿರುದ್ದ ವಿಶೇಷ ತನಿಖಾ ತಂಡ ರಚಿಸಿ ತಕ್ಷಣ ತನಿಖೆ ಮಾಡಬೇಕು. ರಹೀಂ ಒಬ್ಬ ಅಮಾಯಕ ಯುವಕ, ಯಾವುದೇ ಸಂಘಟನೆಯಲ್ಲಿ ಆತ ಇರಲಿಲ್ಲ. ಆತ ಮಸೀದಿಯಲ್ಲಿ ಕಾರ್ಯದರ್ಶಿ ಆಗಿದ್ದು, ಶ್ರಮಜೀವಿಯಾಗಿದ್ದ. ಯಾವುದೇ ಕೇಸು ಆತನ ಮೇಲೆ ಇಲ್ಲ. ಸಂಘ ಪರಿವಾರದ ಗೂಂಡಾಗಳು ಅಂತಹ ಅಮಾಯಕನನ್ನ ಕೊಂದಿದ್ದಾರೆ. ಮರಳು ಲೋಡ್ ಬಾಡಿಗೆಗೆ ಕರೆಸಿ ಹತ್ಯೆ ಮಾಡಲಾಗಿದೆ.
ಈ ಹಿಂದೆ ಯಾವುದೇ ಸಂಘಟನೆಯಲ್ಲಿ ಇಲ್ಲದ ಫಾಜಿಲ್ ಹತ್ಯೆ ಮಾಡಿದ್ದರು. ಇವರಿಗೆ ಒಬ್ಬ ಮುಸಲ್ಮಾನನ ರಕ್ತ ಬೇಕು, ಯಾವುದೇ ಸಂಘಟನೆಯಲ್ಲಿ ಇರಬೇಕು ಅಂತ ಇಲ್ಲ. ಬಜಪೆಯಲ್ಲಿ ಶ್ರೀಕಾಂತ್ ಶೆಟ್ಟಿ ಬಹಿರಂಗವಾಗಿ ಹೇಳಿಕೆ ಕೊಟ್ಟಿದ್ದ. ಪೊಲೀಸರ ಗಮನಕ್ಕೆ ತಂದರೂ ಎಫ್ ಐಆರ್ ಮಾಡಿದ್ದು ಬಿಟ್ಟರೆ ಕ್ರಮ ಆಗಿಲ್ಲ. ಸಂಘ ಪರಿವಾರದವರು ಓಪನ್ ಹೇಳಿಕೆ ಕೊಟ್ಟರೂ ಕ್ರಮ ಆಗ್ತಿಲ್ಲ. ಇಲ್ಲಿನ ಬಿಜೆಪಿ ಶಾಸಕರು ಕೂಡ ಬಹಿರಂಗ ಹೇಳಿಕೆ ಕೊಡ್ತಾ ಇದ್ದಾರೆ. ಸರ್ಕಾರ ತಕ್ಷಣ ಕೊಲೆಯ ಹಿಂದಿರೋ ಎಲ್ಲರನ್ನೂ ಹುಡುಕಿ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
Mangalore SDPI District President Anwar Sadat Visits Yenepoya Hospital, Condemns Hindu Organizations after Brutal Murder in Bantwal.
11-07-26 01:48 pm
HK News Staffer
ಮೈಸೂರು ದಸರಾದಲ್ಲಿ ಕಂಬಳ ನಡೆಸಿಯೇ ಸಿದ್ಧ; ಎಲ್ಲ ಸಿದ...
11-07-26 11:42 am
ಕರೂರ್ಗೆ ಸಿಎಂ ವಿಜಯ್ ಭೇಟಿ ; ಕಾಲ್ತುಳಿತ ಸಂತ್ರಸ್ತ...
10-07-26 10:12 pm
ರಾಮಮಂದಿರದ ಶ್ರೇಯಸ್ಸು ಪಡೆದವರೇ, ದೇಣಿಗೆ ಕಳ್ಳತನದ ಹ...
10-07-26 07:42 pm
ಸಚಿವ ಸಂಪುಟ ವಿಸ್ತರಣೆಯಾದರೆ ಸರ್ಕಾರ ಸ್ವಲ್ಪಮಟ್ಟಿಗೆ...
09-07-26 02:56 pm
11-07-26 09:29 pm
HK News Staffer
ವಿಯೆಟ್ನಾಂ ದ್ವೀಪ ಸಮೂಹದಲ್ಲಿ ಭಾರತೀಯ ಪ್ರವಾಸಿಗರಿದ್...
11-07-26 04:31 pm
ರಾಮ ಮಂದಿರದ ದೇಣಿಗೆ ಕಳ್ಳತನ; ಕದ್ದ ಹಣವನ್ನು ಷೇರು ಮ...
11-07-26 11:48 am
ಕರೂರ್ಗೆ ಸಿಎಂ ವಿಜಯ್ ಭೇಟಿ ; ಕಾಲ್ತುಳಿತ ಸಂತ್ರಸ್ತ...
10-07-26 10:46 pm
ಮತ್ತೆ ಗಲ್ಫ್ ಉದ್ವಿಗ್ನ ; ಇರಾನ್ ಮೇಲೆ ಮುಗಿಬಿದ್ದ ಅ...
09-07-26 03:40 pm
11-07-26 06:32 pm
HK News Staffer
ಬಾಂಗ್ಲಾನ್ನರ ಬಂಧನ ; ಇವರನ್ನು ಮತಪಟ್ಟಿಗೆ ಸೇರಿಸಲು...
11-07-26 04:26 pm
ಮಂಗಳೂರಿನಲ್ಲಿ ಜಾಂಡೀಸ್ ಆತಂಕ ; ಎರಡು ವಾರಗಳಲ್ಲಿ 19...
10-07-26 05:25 pm
ಬಾಲಕನಿಗೆ ಛಡಿಯೇಟು ; ಕಾಟಿಪಳ್ಳ ಮದ್ರಸಾ ಶಿಕ್ಷಕ ಉಸ್...
09-07-26 11:09 pm
ಮೋದಿಯನ್ನ ಪ್ರಶ್ನಿಸುವ ಕೈ ಮುಖಂಡ ಅಭಿಷೇಕ್ ಮೂಡಾ ಭ್ರ...
09-07-26 10:47 pm
12-07-26 10:13 pm
HK News Staffer
ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದಲ್ಲಿ ಕೊನೆಗೂ ಎನ್ಐ...
12-07-26 02:16 pm
ಬೆಂಗಳೂರಿನಲ್ಲಿ ಬೆಚ್ಚಿಬೀಳಿಸಿದ ತ್ರಿವಳಿ ಕೊಲೆ ; ತಾ...
11-07-26 08:40 pm
ಸಣ್ಣ ಗಾಯಕ್ಕೆ ಚಿಕಿತ್ಸೆ, ಆದರೆ ಮರಳಲಿಲ್ಲ ಪ್ರಜ್ಞೆ...
11-07-26 08:37 pm
ಮಂಗಳೂರು- ವಿಟ್ಲ ಖಾಸಗಿ ಬಸ್ಸಿನಲ್ಲಿ ವಿದ್ಯಾರ್ಥಿನಿಯ...
11-07-26 04:28 pm