ಬ್ರೇಕಿಂಗ್ ನ್ಯೂಸ್
06-06-25 09:29 pm Mangalore Correspondent ಕರಾವಳಿ
ಮಂಗಳೂರು, ಜೂನ್ 6 : ಗೋವಾದಲ್ಲಿ ಇತ್ತೀಚಿಗೆ ಆಯೋಜಿಸಿದ್ದ "ಜೂನಿಯರ್ ಮಾಡೆಲ್ ಇಂಟರ್‌ನ್ಯಾಷನಲ್ 2025" ಸ್ಪರ್ಧೆಯಲ್ಲಿ “ಪ್ರಿನ್ಸ್ ಆಫ್ ಜೂನಿಯರ್ ಮಾಡೆಲ್ ಇಂಟರ್‌ನ್ಯಾಷನಲ್” ಎಂಬ ಪ್ರಶಸ್ತಿಗೆ ಮಂಗಳೂರಿನ ಎಂಟು ವರ್ಷದ ಹುಡುಗ ರುಶಭ್ ರಾವ್ ಆಯ್ಕೆಯಾಗಿದ್ದಾನೆ.
ಮಂಗಳೂರಿನಲ್ಲಿ ವೃತ್ತಿಯಲ್ಲಿ ಎಂಜಿನಿಯರ್ ಆಗಿರುವ ರಕ್ಷಿತ್ ರಾವ್ ಮತ್ತು ಅಶ್ವಿನಿ ದಂಪತಿಯ ಪುತ್ರನಾಗಿರುವ ರುಶಭ್ ರಾವ್, ಖಾಸಗಿ ಶಾಲೆಯಲ್ಲಿ ಮೂರನೇ ತರಗತಿಯ ವಿದ್ಯಾರ್ಥಿ. ಆರು ವರ್ಷದಲ್ಲೇ ಮಾಡೆಲಿಂಗ್ ಪ್ರವೇಶಿಸಿದ್ದ ರುಶಭ್, ಉತ್ತಮ ನೃತ್ಯ ಕೌಶಲ್ಯ ಮತ್ತು ಅಭಿನಯದಿಂದ ಗಮನ ಸೆಳೆದಿದ್ದಾನೆ. ಮೂರು ತುಳು ಚಲನಚಿತ್ರಗಳು ಮತ್ತು ಒಂದು ಕನ್ನಡ ಧಾರಾವಾಹಿಯಲ್ಲಿ ಬಾಲನಟನಾಗಿ ಅಭಿನಯ ತೋರಿಸಿದ್ದಾನೆ.
ಗೋವಾದಲ್ಲಿ ನಡೆದ ಮಾಡೆಲಿಂಗ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದಲ್ಲದೇ, ಪ್ರಿನ್ಸ್ ಆಫ್ ಕರ್ನಾಟಕ, ಸೂಪರ್ ಟ್ಯಾಲೆಂಟ್" (ಪ್ರತಿಭಾ ಪ್ರದರ್ಶನ ವಿಭಾಗದಲ್ಲಿ ನೃತ್ಯ) ಬೆಸ್ಟ್ ಕಾಸ್ಟ್ಯೂಮ್" (ಅತ್ಯುತ್ತಮ ಉಡುಪು) ಪ್ರಶಸ್ತಿಗೂ ಆಯ್ಕೆಯಾಗಿದ್ದಾನೆ. ಫ್ಯಾಷನ್ ನಿರ್ದೇಶಕಿ ಯಶಸ್ವಿನಿ ದೇವಾಡಿಗ, ನೃತ್ಯ ಗುರು ನವೀನ್ ಶೆಟ್ಟಿ ಅವರಿಂದ ನೃತ್ಯ ತರಬೇತಿ ಪಡೆಯುತ್ತಿದ್ದಾನೆ.
ಆಗಸ್ಟ್ ತಿಂಗಳಲ್ಲಿ ವಿಯಟ್ನಾಂನಲ್ಲಿ ನಡೆಯಲಿರುವ ಅಂತರಾಷ್ಟ್ರೀಯ ಜೂನಿಯರ್ ಮಾಡೆಲ್ ಇಂಟರ್‌ನ್ಯಾಷನಲ್ ಸ್ಪರ್ಧೆಯಲ್ಲಿ ರುಶಭ್ ಭಾರತ ನ್ನು ಪ್ರತಿನಿಧಿಸಲಿದ್ದಾನೆ.
Mangalore Rushabh Rao Shines at Junior Model International 2025; To Represent India Globally.
09-09-25 09:14 pm
Bangalore Correspondent
Shivamogga Accident: ಸೆ.25ಕ್ಕೆ ಹಸೆಮಣೆ ಏರಬೇಕಿದ...
08-09-25 08:07 pm
ವೀರಶೈವ ಲಿಂಗಾಯತರು ಹಿಂದು ಬದಲು ಇತರರು ಎಂದು ನಮೂದಿಸ...
08-09-25 06:48 pm
ಮಸೀದಿ ಎದುರಲ್ಲಿ ಗಣೇಶ ವಿಸರ್ಜನೆ ವೇಳೆ ಕಲ್ಲು ತೂರಾಟ...
08-09-25 05:21 pm
ತುಳು ರಾಜ್ಯ ಭಾಷೆ ಘೋಷಣೆ ಬಗ್ಗೆ ಸಂಪುಟದಲ್ಲಿ ಚರ್ಚೆ...
08-09-25 02:41 pm
09-09-25 09:38 pm
HK News Desk
ಕಾಸರಗೋಡು ; ರಾಷ್ಟ್ರೀಯ ಹೆದ್ದಾರಿ ದಾಟಲೆತ್ನಿಸಿದ ಮಹ...
08-09-25 11:06 pm
ನೇಪಾಳದಲ್ಲಿ ಸೋಶಿಯಲ್ ಮೀಡಿಯಾ ಬ್ಯಾನ್ ; ದೇಶಾದ್ಯಂತ...
08-09-25 10:59 pm
ಏಳು ವರ್ಷ ಶಿಕ್ಷೆ ಪೂರ್ತಿಗೊಳಿಸಿದ ಬಳಿಕವೂ ಹೆಚ್ಚುವರ...
08-09-25 06:07 pm
ಮಲ್ಲಿಗೆ ಮುಡಿದಿದ್ದ ನಟಿ ನವ್ಯಾ ನಾಯರ್ಗೆ ಒಂದು ಲಕ್...
08-09-25 02:02 pm
09-09-25 08:01 pm
Mangalore Correspondent
YouTuber Munaf, SIT, Dharmasthala Case: ಎಸ್ಐಟ...
09-09-25 05:59 pm
Mangalore, NHAI, Padmaraj: ಇನ್ನೆಷ್ಟು ಜೀವ ಬಲಿಯ...
09-09-25 05:14 pm
MLA Vedavyas Kamath, Mangalore, Yakshangana:...
09-09-25 04:47 pm
Mangalore, Bajilakere, Suicide: ನನ್ನವರೇ ನನ್ನನ...
09-09-25 03:07 pm
08-09-25 10:34 pm
Mangalore Correspondent
ಮಂಗಳೂರು ಏರ್ಪೋರ್ಟ್ ಟರ್ಮಿನಲ್ ಬಿಲ್ಡಿಂಗ್ ಧ್ವಂಸ ಬೆ...
07-09-25 03:34 pm
Mangalore SAF Police Constable, Arrest: ವಕೀಲ...
06-09-25 08:32 pm
60 Crore Fraud, Actress Shilpa Shetty, Raj Ku...
06-09-25 07:45 pm
ಲಷ್ಕರ್ ಉಗ್ರರ ಹೆಸರಲ್ಲಿ ಮುಂಬೈ ಸ್ಫೋಟದ ಬೆದರಿಕೆ ಸಂ...
06-09-25 05:26 pm