ಬ್ರೇಕಿಂಗ್ ನ್ಯೂಸ್
08-06-25 10:51 pm Mangalore Correspondent ಕರಾವಳಿ
ಮಂಗಳೂರು, ಜೂನ್ 8 : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಿಂದು ಸಂಘಟನೆಗಳ ಭಾರೀ ಆಕ್ರೋಶಕ್ಕೆ ಕಾರಣವಾಗಿದ್ದ ಸುಹಾಸ್ ಶೆಟ್ಟಿ ಕೊಲೆ ಪ್ರಕರಣವನ್ನು ಕೇಂದ್ರ ಗೃಹ ಸಚಿವಾಲಯ ಹಠಾತ್ ಎನ್ನುವಂತೆ ಎನ್ಐಎ ತನಿಖೆಗೆ ವಹಿಸಿದೆ. ರಾಜ್ಯ ಕಾಂಗ್ರೆಸ್ ಸರಕಾರದ ನಿರಾಕರಣೆ ನಡುವೆಯೂ ರಾಜ್ಯ ಪೊಲೀಸರು ತನಿಖೆ ನಡೆಸುತ್ತಿರುವ ಪ್ರಕರಣವನ್ನು ಕೇಂದ್ರ ಗೃಹ ಇಲಾಖೆ ನೇರವಾಗಿ ಕೇಂದ್ರ ತನಿಖಾ ಏಜನ್ಸಿಗೆ ವಹಿಸಿದ್ದು ಕುತೂಹಲ ಮೂಡಿಸಿದೆ. ಇದು ಹೇಗೆ ಸಾಧ್ಯ, ರಾಜ್ಯ ಸರ್ಕಾರ ಸಹಕಾರ ನೀಡುತ್ತಾ ಎನ್ನುವ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಮೂಡಿದೆ.
ಕೇಂದ್ರ ಗೃಹ ಇಲಾಖೆಯ ಆದೇಶದಲ್ಲಿ ಈ ಕುರಿತಾಗಿ ಸ್ಪಷ್ಟ ಮಾಹಿತಿಗಳನ್ನು ಕೊಡಲಾಗಿದೆ. ಸುಹಾಸ್ ಶೆಟ್ಟಿ ಕೊಲೆ ಪ್ರಕರಣ ಮೇಲ್ನೋಟಕ್ಕೆ ಟಾರ್ಗೆಟ್ ಮಾಡಿ ಕೊಲ್ಲಿಸಿದ ರೀತಿ ಕಾಣುತ್ತಿದೆ. ಸಾರ್ವಜನಿಕರ ಎದುರಲ್ಲೇ ವ್ಯಕ್ತಿಯೊಬ್ಬನನ್ನು ಗುರಿಯಾಗಿಸಿ ಬರ್ಬರವಾಗಿ ಹತ್ಯೆಗೈದು ಜನರಲ್ಲಿ ಭಯ ಮೂಡಿಸುವುದು, ಪ್ರಕರಣದ ಆರೋಪಿಗಳು ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆಗೆ ಸೇರಿದವರು ಎನ್ನುವ ಆರೋಪಗಳಿರುವುದು ಯುಎ(ಪಿ) ಏಕ್ಟ್ ಸೆಕ್ಷನ್ 41, 13, 15, 17, 18 ಮತ್ತು 20 ಕಲಂ ಅನ್ವಯಗೊಳ್ಳಲು ಕಾರಣವಾಗುತ್ತದೆ.
ಈ ರೀತಿಯ ಆರೋಪಗಳಿದ್ದರೆ ಮತ್ತು ಯುಎ(ಪಿ)ಎ ಸೆಕ್ಷನ್ ಅಡಿ ದಾಖಲಾಗಬಲ್ಲ ಕೇಸುಗಳಿದ್ದರೆ ರಾಷ್ಟ್ರೀಯ ತನಿಖಾ ದಳದಿಂದ ತನಿಖೆ ನಡೆಸಬೇಕಾಗುತ್ತದೆ. ಎನ್ಐಎ ಆಕ್ಟ್ 2008 ಪ್ರಕಾರ, ದೇಶದ ಭದ್ರತೆಗೆ ಸವಾಲಾಗಬಲ್ಲ ಆರೋಪಗಳಿದ್ದರೆ, ಯಾವುದೇ ರೀತಿಯ ಟಾರ್ಗೆಟ್ ಕಿಲ್ಲಿಂಗ್ ಅಥವಾ ಸಮಾಜದಲ್ಲಿ ಭಯಪಡಿಸುವ ರೀತಿಯ ಕಗ್ಗೊಲೆಗಳಿದ್ದರೆ, ನಿಷೇಧಿತ ಸಂಘಟನೆಗಳ ಶಾಮೀಲಾತಿ ಇದ್ದರೆ ಅಂತಹ ಪ್ರಕರಣಗಳನ್ನು ರಾಷ್ಟ್ರೀಯ ತನಿಖಾ ದಳದಿಂದ ತನಿಖೆ ಮಾಡಬೇಕಾಗುತ್ತದೆ. ಎನ್ಐಎ ಸೆಕ್ಷನ್ 6 ಮತ್ತು 8 ಪ್ರಕಾರ, ಸುಹಾಸ್ ಶೆಟ್ಟಿ ಪ್ರಕರಣವನ್ನು ಎನ್ಐಎ ತನಿಖೆಗೆ ಒಪ್ಪಿಸಿದ್ದಾಗಿ ಈ ಕುರಿತ ಆದೇಶದಲ್ಲಿ ಗೃಹ ಇಲಾಖೆ ಹೇಳಿದೆ.
ಸುಹಾಸ್ ಶೆಟ್ಟಿ ಕಾರಿನಲ್ಲಿ ತೆರಳುತ್ತಿದ್ದಾಗ ಕಳೆದ ಮೇ 1ರಂದು ಬಜ್ಪೆ ಬಳಿಯ ಕಿನ್ನಿಪದವು ಎಂಬಲ್ಲಿ ರಾತ್ರಿ 8.30ರ ವೇಳೆಗೆ ಏಳೆಂಟು ಮಂದಿಯಿದ್ದ ತಂಡ ಅಡ್ಡಹಾಕಿ ಯದ್ವಾತದ್ವಾ ಕಡಿದು ಹತ್ಯೆ ಮಾಡಿತ್ತು. ಈ ಘಟನೆಯ ವಿಡಿಯೋ ವೈರಲ್ ಆಗಿದ್ದರಿಂದ ಕರಾವಳಿ ಭಾಗದಲ್ಲಿ ಭಾರೀ ಸಂಚಲನ ಮೂಡಿಸಿತ್ತು. ಘಟನೆ ಸಂಬಂಧಿಸಿ ಮಂಗಳೂರು ಪೊಲೀಸರು ಎಂಟು ಮಂದಿ ಆರೋಪಿಗಳನ್ನು ಬಂಧಿಸಿದ್ದರು. ಆದರೆ ಈ ಕೃತ್ಯದಲ್ಲಿ ವಿದೇಶಿ ಫಂಡಿಂಗ್ ಆಗಿದೆ ಮತ್ತು ಪಿಎಫ್ಐನಂತಹ ಭಯೋತ್ಪಾದಕ ಸಂಘಟನೆಗಳು ಕೈಯಾಡಿಸಿವೆ ಎಂದು ಬಿಜೆಪಿ ನಾಯಕರು ಆರೋಪಿಸಿದ್ದಲ್ಲದೆ, ಈ ಬಗ್ಗೆ ಎನ್ಐಎ ತನಿಖೆ ಆಗಬೇಕೆಂದು ಆಗ್ರಹ ಮಾಡಿದ್ದರು.
ಆದರೆ ರಾಜ್ಯ ಸರಕಾರ ಎನ್ಐಎ ತನಿಖೆಯ ಅಗತ್ಯವಿಲ್ಲ, ರಾಜ್ಯದ ಪೊಲೀಸರೇ ತನಿಖೆ ಮಾಡುತ್ತಾರೆ ಎಂದು ಹೇಳುತ್ತ ಬಂದಿತ್ತು. ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಮತ್ತು ರಾಜ್ಯದ ಗೃಹ ಸಚಿವ ಪರಮೇಶ್ವರ್ ಕೂಡ ಎನ್ಐಎ ತನಿಖೆ ಸಾಧ್ಯವಿಲ್ಲ ಎಂದು ನಿರಾಕರಣೆ ಮಾಡಿದ್ದರು. ಆದರೆ ಸುಹಾಸ್ ಶೆಟ್ಟಿ ಕೊಲೆಯ ಬಗ್ಗೆ ಎನ್ಐಎ ತನಿಖೆ ಆಗಲೇಬೇಕೆಂದು ಸಂಸದ ಬ್ರಿಜೇಶ್ ಚೌಟ ಒತ್ತಾಯಿಸಿದ್ದರಲ್ಲದೆ, ಇದಕ್ಕಾಗಿ ಕೇಂದ್ರ ಗೃಹ ಸಚಿವರನ್ನೂ ಭೇಟಿಯಾಗಿದ್ದರು. ಇದೀಗ ಹಠಾತ್ತಾಗಿ ಎನ್ಐಎ ತನಿಖೆಗೆ ವಹಿಸಿರುವುದಾಗಿ ಕೇಂದ್ರ ಗೃಹ ಸಚಿವಾಲಯ ಪ್ರಕಟಿಸಿದೆ.
ಇದೇ ವೇಳೆ, ಮಂಗಳೂರಿನಲ್ಲಿ ನಡೆದ ಇತರ ಕೊಲೆ ಪ್ರಕರಣಗಳನ್ನೂ ಎನ್ಐಎ ತನಿಖೆಗೆ ಒಪ್ಪಿಸಬೇಕೆಂದು ಆಗ್ರಹ ಕೇಳಿಬರುತ್ತಿದೆ. ಕಳೆದ ಬಾರಿ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣವನ್ನು ಎನ್ಐಎ ವಹಿಸಿದಾಗಲೂ ಫಾಜಿಲ್ ಕೊಲೆ ಕೇಸನ್ನೂ ಎನ್ಐಎಗೆ ಒಪ್ಪಿಸಬೇಕೆಂದು ಆಗ್ರಹ ಮಾಡಲಾಗಿತ್ತು. ಆಗ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಆಡಳಿತದಲ್ಲಿತ್ತು. ಈಗ ಕಾಂಗ್ರೆಸ್ ಸರ್ಕಾರ ಆಡಳಿತದಲ್ಲಿ ಇರುವುದರಿಂದ ಮುಸ್ಲಿಂ ಯುವಕರ ಕೊಲೆ ಪ್ರಕರಣ ಯಾಕೆ ಎನ್ಐಎ ತನಿಖೆಗೆ ಒಪ್ಪಿಸಬಾರದು ಎಂಬ ಪ್ರಶ್ನೆಯನ್ನು ಮುಂದಿಡುತ್ತಿದ್ದಾರೆ. ಆದರೆ ಎನ್ಐಎ ತನಿಖೆ ಎತ್ತಿಕೊಳ್ಳಬೇಕಿದ್ದರೆ, ಅದರಲ್ಲಿ ನಿಷೇಧಿತ ಸಂಘಟನೆಯ ಶಾಮೀಲಾತಿ ಇರಬೇಕು ಮತ್ತು ಆರೋಪಿಗಳು ಅದಕ್ಕೆ ಸೇರಿದವರು ಅನ್ನುವ ಅಂಶ ಇರಬೇಕು ಎಂದು ಹೇಳಲಾಗುತ್ತಿದೆ. ಇಂತಹದ್ದೇ ಪ್ರಕರಣದಲ್ಲಿ ಕೇಂದ್ರ ಗೃಹ ಇಲಾಖೆ ಸೂಚನೆಯಂತೆ ಎನ್ಐಎ ತನಿಖೆ ಎತ್ತಿಕೊಂಡಾಗ, ಕೇರಳ ಸರ್ಕಾರ ತನ್ನ ವ್ಯಾಪ್ತಿಯ ಕೇಸಿಗೆ ಕೈಹಾಕಬಾರದೆಂದು ಹೈಕೋರ್ಟ್ ಮೆಟ್ಟಿಲೇರಿತ್ತು. ಆದರೆ ಪ್ರಕರಣದಲ್ಲಿ ಪಿಎಫ್ಐ ಕೈವಾಡ ಎನ್ನುವ ವಿಷಯ ಇದ್ದ ಕಾರಣಕ್ಕೆ ಹೈಕೋರ್ಟ್ ಕೇರಳ ಸರ್ಕಾರದ ಅರ್ಜಿಯನ್ನು ವಜಾ ಮಾಡಿತ್ತು.
The Central Ministry of Home Affairs has handed over the high-profile Suhas Shetty murder case to the National Investigation Agency (NIA), bypassing the consent of the Karnataka state government, triggering legal and political controversy. Suhas Shetty, allegedly targeted and brutally murdered on May 1 near Kinnipadavu, Bajpe, had strong links with Hindu organizations, making the case highly sensitive. A group of around 7–8 assailants ambushed and hacked Shetty to death while he was traveling in a car.
24-06-25 05:23 pm
Bangalore Correspondent
Lokayukta Raid, Karnataka: ಬೆಂಗಳೂರು, ಶಿವಮೊಗ್ಗ...
24-06-25 01:53 pm
Kodi Sri ; ರಾಜ್ಯದಲ್ಲಿ ಸಂಕ್ರಾಂತಿ ಬಳಿಕ ರಾಜಕೀಯ ವ...
22-06-25 07:52 pm
Heart Attack, Hassan: ಊಟಕ್ಕೆ ಕುಳಿತುಕೊಳ್ಳುವಾಗ...
22-06-25 12:36 pm
Iran Attack Illegal,War, CM Siddaramaiah; ಇರಾ...
21-06-25 02:48 pm
24-06-25 12:03 pm
HK News Desk
ಅಮೆರಿಕದ ಮೇಲೆ ತಿರುಗಿಬಿದ್ದ ಇರಾನ್ ! ಕತಾರ್ನಲ್ಲಿರ...
24-06-25 01:02 am
NEET ಪರೀಕ್ಷೆಯಲ್ಲಿ ಮಗಳಿಗೆ ಕಡಿಮೆ ಅಂಕ ; ಕೂಲಿನಿಂದ...
23-06-25 08:54 pm
Rapper Tommy Genesis, Controversy: ಹಿಂದು ದೇವತ...
23-06-25 04:37 pm
VP Jagdeep Dhankhar; ಜೂನ್ 25 ಸಂವಿಧಾನ ಹತ್ಯೆಗೈದ...
22-06-25 07:48 pm
24-06-25 01:36 pm
Mangalore Correspondent
Iran Qatar, War, Mangalore Flight: ಗಲ್ಫ್ ರಾಷ್...
24-06-25 11:19 am
Zakariya Jokatte, Mangalore: ಮಂಗಳೂರಿನಲ್ಲಿ ಸ್ಕ...
23-06-25 11:01 pm
Udupi BJP, Kishore Kumar: ಉಡುಪಿ ಬಿಜೆಪಿಯಲ್ಲಿ ಬ...
23-06-25 10:28 pm
Journalist Vijay Kotian, Brand Mangalore Awar...
23-06-25 09:48 pm
23-06-25 08:51 pm
HK News Desk
Manipal, Udupi Murder: ಮಣಿಪಾಲ ; ಹೆತ್ತ ತಾಯಿಯನ್...
23-06-25 11:47 am
Sandhya Pavithra Nagaraj Fraud; ಸೌಜನ್ಯಾ ಹೆಸರಿ...
21-06-25 08:58 pm
Crime Mangalore, Bantwal Attack, Fake News; ಬ...
21-06-25 12:21 pm
Brahmavar, Udupi Murder, Crime: ಪತ್ನಿಗೆ ಮೊಬೈಲ...
20-06-25 02:04 pm