ಬ್ರೇಕಿಂಗ್ ನ್ಯೂಸ್
31-12-20 10:58 am Mangalore Correspondent ಕರಾವಳಿ
ಪುತ್ತೂರು, ಡಿ. 31: ಸುಳ್ಯ ಕ್ಷೇತ್ರದಲ್ಲಿ ಮತ್ತೆ ಬಿಜೆಪಿ ಬೆಂಬಲಿತರು ಪಾರಮ್ಯ ಮೆರೆದಿದ್ದಾರೆ. ತಾಲೂಕಿನ 25 ಗ್ರಾಮ ಪಂಚಾಯಿತಿಗಳ ಪೈಕಿ 18 ಪಂಚಾಯಿತಿಗಳಲ್ಲಿ ಬಿ.ಜೆ.ಪಿ ಬೆಂಬಲಿತರು ಹೆಚ್ಚು ಮಂದಿ ಗೆದ್ದಿದ್ದು ಅಧಿಕಾರ ಹಿಡಿಯಲು ಮುಂದಾಗಿದ್ದಾರೆ. ಐದು ಗ್ರಾಮ ಪಂಚಾಯಿತಿಗಳಲ್ಲಿ ಕಾಂಗ್ರೆಸ್ ಬೆಂಬಲಿತರು ಅಧಿಕಾರ ಹಿಡಿದಿದ್ದಾರೆ.
ಐವರ್ನಾಡು ಮತ್ತು ದೇವಚಳ್ಳ ಪಂಚಾಯಿತಿಗಳಲ್ಲಿ ಬಿಜೆಪಿಯಿಂದ ಬಂಡಾಯ ಎದ್ದು ಪ್ರತ್ಯೇಕವಾಗಿರುವ ಸ್ವಾಭಿಮಾನಿ ಬಳಗ ಸಂಘಟನೆಯ ಸದಸ್ಯರು ಅಧಿಕಾರಕ್ಕೆ ಬಂದಿದ್ದಾರೆ. ಒಟ್ಟು 282 ಸ್ಥಾನಗಳಲ್ಲಿ ಬಿಜೆಪಿ ಬೆಂಬಲಿತ 168 ಅಭ್ಯರ್ಥಿಗಳು ಮತ್ತು ಕಾಂಗ್ರೆಸ್ ಬೆಂಬಲಿತ 79 ಸದಸ್ಯರು ವಿಜಯಿ ಆಗಿದ್ದಾರೆ. ಪಕ್ಷೇತರರು 35 ಕಡೆಗಳಲ್ಲಿ ಜಯ ಗಳಿಸಿದ್ದಾರೆ.
ಸಂಪಾಜೆ ಗ್ರಾ.ಪಂನಲ್ಲಿ 14 ಸ್ಥಾನಗಳಿದ್ದು ಕಾಂಗ್ರೆಸ್ ಬೆಂಬಲಿತ 13 ಸದಸ್ಯರು ಮತ್ತು ಒಂದು ಬಿಜೆಪಿ ಬೆಂಬಲಿತ ಆಯ್ಕೆ ಆಗಿದ್ದಾರೆ. ಅರಂತೋಡು ಗ್ರಾ.ಪಂ.ನಲ್ಲಿ 15 ರಲ್ಲಿ 11 ಸ್ಥಾನಗಳು ಬಿಜೆಪಿ ಪಾಲಾದರೆ, ಕೇವಲ ತಲಾ 2 ಸ್ಥಾನಗಳು ಕಾಂಗ್ರೆಸ್ ಬೆಂಬಲಿತರು ಮತ್ತು ಪಕ್ಷೇತರರ ಪಾಲಾದವು.
ಆಲೆಟ್ಟಿ ಗ್ರಾ.ಪಂನ 21 ಸ್ಥಾನಗಳಲ್ಲಿ 13 ವಾರ್ಡ್‌ಗಳಲ್ಲಿ ಬಿಜೆಪಿ ಬೆಂಬಲಿತರು ಜಯ ಗಳಿಸಿದ್ದಾರೆ. 8 ವಾರ್ಡ್‌ಗಳಲ್ಲಿ ಕಾಂಗ್ರೆಸ್ ವಿಜಯಿ ಆಗಿದ್ದಾರೆ. ಮಂಡೆಕೋಲು ಗ್ರಾ.ಪಂನ 15 ಸ್ಥಾನಗಳಲ್ಲಿ 14 ಬಿಜೆಪಿ ಮತ್ತು ಒಬ್ಬ ಕಾಂಗ್ರೆಸ್ ಸದಸ್ಯ ಆಯ್ಕೆ ಆಗಿದ್ದಾರೆ. ಅಜ್ಜಾವರ ಗ್ರಾಪಂನ 18 ಸ್ಥಾನಗಳಲ್ಲಿ 10 ಮಂದಿ ಕಾಂಗ್ರೆಸ್ ಬೆಂಬಲಿತರು ಆಯ್ಕೆ ಆಗಿದ್ದಾರೆ. ಇದರಲ್ಲಿ5 ಸ್ಥಾನಗಳು ಬಿಜೆಪಿ ಪಾಲಾಗಿದೆ. ಮೂರು ಕ್ಷೇತ್ರದಲ್ಲಿ ಪಕ್ಷೇತರರು ಜಯ ಗಳಿಸಿದ್ದಾರೆ.
ಕನಕಮಜಲು ಗ್ರಾಪಂನಲ್ಲಿ 7 ಸ್ಥಾನಗಳಿದ್ದು, ಬಿಜೆಪಿಯ 5 ಮತ್ತು ಕಾಂಗ್ರೆಸ್ 2 ಸದಸ್ಯರನ್ನು ಪಡೆದಿದೆ. ಜಾಲ್ಸೂರು ಗ್ರಾ.ಪಂ.ನಲ್ಲಿ 17 ಸ್ಥಾನಗಳಿದ್ದು ಬಿಜೆಪಿ 11 ಮತ್ತು ಕಾಂಗ್ರೆಸ್ 3 ಸದಸ್ಯರು ಮತ್ತು 3 ಮಂದಿ ಪಕ್ಷೇತರರು ಆಯ್ಕೆ ಆಗಿದ್ದಾರೆ. ಐವರ್ನಾಡು ಪಂಚಾಯಿತಿನಲ್ಲಿ 13 ಸ್ಥಾನಗಳಿದ್ದು ಇದರಲ್ಲಿ ಬಿಜೆಪಿಯಿಂದ ಬಂಡಾಯ ಎದ್ದು ಸ್ಪರ್ಧೆ ಮಾಡಿದ ಸ್ವಾಭಿಮಾನಿ ಬಳಗ 12 ವಾರ್ಡ್‌ಗಳಲ್ಲಿ ಗೆದ್ದು ಅಧಿಕಾರ ಪಡೆದುಕೊಂಡಿದೆ. ಒಂದು ಕ್ಷೇತ್ರ ಪಕ್ಷೇತರ ಪಾಲಾಗಿದೆ. ಅಮರಮೂಡ್ನೂರು ಗ್ರಾ.ಪಂನಲ್ಲಿ ಒಟ್ಟು 17 ಸ್ಥಾನಗಳಿದ್ದು ಇದರಲ್ಲಿ 11 ಸ್ಥಾನಗಳು ಬಿಜೆಪಿ ಬೆಂಬಲಿತರ ಪಾಲಾದರೆ 4 ಸ್ಥಾನಗಳು ಕಾಂಗ್ರೆಸ್ ಬೆಂಬಲಿತರು ಮತ್ತು 2 ಪಕ್ಷೇತರರು ಆಯ್ಕೆ ಆಗಿದ್ದಾರೆ.
ಕಳಂಜ ಗ್ರಾ.ಪಂ.ನಲ್ಲಿ 6 ಸ್ಥಾನಗಳಲ್ಲಿ ಗೆದ್ದು ಬಿಜೆಪಿ ಕ್ಲೀನ್‌ಸ್ಲೀಪ್ ಮಾಡಿದೆ. ಬೆಳ್ಳಾರೆ ಗ್ರಾ.ಪಂನಲ್ಲಿ ಒಟ್ಟು 14 ಸ್ಥಾನಗಳಿದ್ದು ಬಿಜೆಪಿಯ 8 ವಾರ್ಡ್‌ಗಳಲ್ಲಿ ಜಯಗಳಿಸಿ ಅಧಿಕಾರ ಒಲಿಸಿಕೊಂಡಿದ್ದಾರೆ. ಕಾಂಗ್ರೆಸ್‌ನ 4 ಸದಸ್ಯರು ಮತ್ತು ಇಬ್ಬರು ಎಸ್‌ಡಿಪಿಐ ಸದಸ್ಯರು ವಿಜಯಿ ಆಗಿದ್ದಾರೆ. ಪೆರುವಾಜೆ ಗ್ರಾ.ಪಂನಲ್ಲಿ 8 ಸ್ಥಾನಗಳಿದ್ದು ಕಾಂಗ್ರೆಸ್ ಬೆಂಬಲಿತರು 5 ವಾರ್ಡ್‌ಗಳಲ್ಲಿ ಜಯಗಳಿಸಿ ಅಧಿಕಾರ ಪಡೆದುಕೊಂಡಿದ್ದಾರೆ. ಮತ್ತು ಬಿಜೆಪಿಯ 3 ಅಭ್ಯರ್ಥಿಗಳು ವಿಜಯಿ ಆಗಿದ್ದಾರೆ. ಬಾಳಿಲ ಗ್ರಾ.ಪಂ.ನಲ್ಲಿ 10 ಸ್ಥಾನಗಳಿದ್ದು 9 ಬಿಜೆಪಿ ಸದಸ್ಯರು ಮತ್ತು ಒಬ್ಬರು ಕಾಂಗ್ರೆಸ್‌ಸ್ ಸದಸ್ಯರು ಜಯ ಗಳಿಸಿದ್ದಾರೆ.
ಕಲ್ಮಡ್ಕದಲ್ಲಿ ಎಲ್ಲ 9 ಸ್ಥಾನಗಳನ್ನು ಕಾಂಗ್ರೆಸ್ ಕ್ಲೀನ್‌ಸ್ವೀಪ್ ಮಾಡಿದೆ. ಪಂಜ ಪಂಚಾಯಿತಿನಲ್ಲಿ ಒಟ್ಟು 13 ಸ್ಥಾನಗಳಿದ್ದು 10 ಸ್ಥಾನಗಳು ಬಿಜೆಪಿ ಪಾಲಾದರೆ, 3 ರಲ್ಲಿ ಕಾಂಗ್ರೆಸ್ ವಿಜಯಿ ಆಗಿದೆ. ಹರಿಹರ ಪಲ್ಲತಡ್ಕ ಪಂಚಾಯಿತಿಯ ಒಟ್ಟು 6 ಸ್ಥಾನಗಳಲ್ಲಿ 5 ಸ್ಥಾನಗಳು ಬಿಜೆಪಿ ಬೆಂಬಲಿತರಿಗೆ ಮತ್ತು 1 ಸ್ಥಾನ ಕಾಂಗ್ರೆಸ್ ಪಾಲಾಗಿದೆ.
Bjp gains full prominent victory in Sullia Gram Panchayat Elections 2020. Ivarnadu and Devachalla bags major victory in Sullia.
08-05-25 11:07 pm
Bangalore Correspondent
U T Khader, Dinesh Gundurao, Suhas Shetty Mur...
08-05-25 07:50 pm
Karwar high alert: ಕಾರವಾರದಲ್ಲಿ ಹೈ ಎಲರ್ಟ್ ; ಸಮ...
08-05-25 12:23 pm
Special Poojas, Indian Army, Minister Ramalin...
07-05-25 04:07 pm
ಭಾರತ - ಪಾಕ್ ಮಧ್ಯೆ ಉದ್ವಿಗ್ನ ಸ್ಥಿತಿ ; ಮೇ 7 ರಂದು...
06-05-25 11:23 pm
09-05-25 06:49 pm
HK News Desk
India Pak War: ಭಾರತ ವಾಯುಪಡೆಯಿಂದ ಭೀಕರ ಪ್ರತಿದಾಳ...
09-05-25 12:33 pm
India - Pak War update: ಪಾಕಿಸ್ತಾನದ ಎಫ್ -16, ಎ...
09-05-25 12:00 am
New Pope, Robert Francis Prevost;140 ಕೋಟಿ ಸದಸ...
08-05-25 11:44 pm
Pak drone-missile attack; ಚೈನಾ ಮೇಡ್ ಲಾಹೋರ್ ಏರ...
08-05-25 04:57 pm
09-05-25 11:07 pm
Mangalore Correspondent
Mangalore University, U T Khader, Syndicate M...
09-05-25 06:22 pm
Resham Bariga, Belthangady, Indo Pak War, Ant...
09-05-25 03:24 pm
Suhas Shetty Murder Case, Speaker UT Khader,...
09-05-25 01:32 pm
Ullal accident, Mangalore: ರಸ್ತೆ ದಾಟುತ್ತಿದ್ದ...
08-05-25 10:54 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm