ಬ್ರೇಕಿಂಗ್ ನ್ಯೂಸ್
23-07-26 10:27 pm Mangaluru Staffer ಕರಾವಳಿ
ಉಳ್ಳಾಲ, ಜು.23: ಮಂಗಳೂರಿನ ಸುರತ್ಕಲ್ ಮಾದರಿಯಲ್ಲಿ ತೊಕ್ಕೊಟ್ಟು ಫ್ಲೈ ಓವರ್ ಕೆಳಭಾಗವನ್ನ ಸುಂದರಗೊಳಿಸಲು ಆಗ್ರಹಿಸಿ ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನ ಆರಂಭಿಸಲಾಗಿದೆ. ತೊಕ್ಕೊಟ್ಟು ಫ್ಲೈ ಓವರ್ ಕೆಳಭಾಗವನ್ನ ಅತಿಕ್ರಮಿಸಿ ಅನಧಿಕೃತ ಮಾರುಕಟ್ಟೆ ತಲೆಯೆತ್ತಿದ್ದು ಇದರ ವಿರುದ್ಧ ಕ್ರಮ ಕೈಗೊಳ್ಳಬೇಕಾದ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಮಾರುಕಟ್ಟೆ ತೆರವು ಕಾರ್ಯಾಚರಣೆಗೆ ಪೊಲೀಸರ ಸಹಕಾರ ಲಭಿಸಿಲ್ಲವೆಂಬ ಕುಂಟು ನೆಪ ಹೇಳಿ ದಿನ ಕಳೆಯುತ್ತಿದ್ದಾರೆ.
ತೊಕ್ಕೊಟ್ಟು ಫ್ಲೈ ಓವರಿನ ಕೆಳಭಾಗದಲ್ಲಿ ಕಳೆದ ಎರಡು ವರ್ಷಗಳಿಂದ ಅನಧಿಕೃತ ಮಾರುಕಟ್ಟೆ ಹುಟ್ಟಿಕೊಂಡಿದ್ದು, ಬೆಳೆಯುತ್ತಿರುವ ಉಳ್ಳಾಲ ನಗರದ ಸೌಂಧರ್ಯವನ್ನೇ ಕೆಡಿಸಿದೆ. ಫ್ಲೈ ಓವರ್ ಕೆಳಗಡೆ ಸ್ಟಾಲ್ ಗಳನ್ನ ಹಾಕಿ ಹಣ್ಣು, ತರಕಾರಿ, ಒಣ ಮೀನು, ಬಟ್ಟೆ ವ್ಯಾಪಾರ ನಡೆಸಲಾಗುತ್ತಿದೆ. ವ್ಯಾಪಾರಿಗಳು ಇಲ್ಲಿ ತ್ಯಾಜ್ಯಗಳನ್ನ ಎಸೆಯುವುದಲ್ಲದೆ, ಮಲ, ಮೂತ್ರ ವಿಸರ್ಜಿಸಿ ಸಂಪೂರ್ಣ ಮಲಿನಗೊಳಿಸಿದ್ದಾರೆ.

ಈ ಬಗ್ಗೆ ಸಂಬಂಧಪಟ್ಟ ಹೆದ್ದಾರಿ ಪ್ರಾಧಿಕಾರ ಹಾಗೂ ಸ್ಥಳೀಯ ಉಳ್ಳಾಲ ನಗರಸಭೆ ಆಡಳಿತವನ್ನ ಜಾಗೃತಗೊಳಿಸುವ ನಿಟ್ಟಿನಲ್ಲಿ ಹೆಡ್ ಲೈನ್ ಕರ್ನಾಟಕವು ಇತ್ತೀಚೆಗೆ ವಿಶೇಷ ವರದಿ ಪ್ರಕಟಿಸಿತ್ತು. ಇದರ ಫಲ ಎನ್ಜುವಂತೆ, ಸಾರ್ವಜನಿಕರು ಇದೀಗ ಸುರತ್ಕಲ್ ಹೆದ್ದಾರಿಯಲ್ಲಿ ಸಂದರಗೊಂಡಿರುವ ಫ್ಲೈ ಓವರ್ ಕೆಳಭಾಗದ ಫೋಟೊ ಹಾಗೂ ಅನಧಿಕೃತ ಮಾರುಕಟ್ಟೆಯಿಂದ ಗಲೀಜು ಕೊಂಪೆಯಾಗಿರುವ ತೊಕ್ಕೊಟ್ಟು ಫ್ಲೈ ಓವರ್ ಕೆಳಭಾಗದ ಫೋಟೊವನ್ನ ಒಟ್ಟಿಗೆ ಜೋಡಿಸಿ ಜಾಲತಾಣಗಳಲ್ಲಿ ಹರಿಯಬಿಟ್ಟು ಅಭಿಯಾನ ನಡೆಸುವುದರ ಮೂಲಕ ಹೆದ್ದಾರಿ ಪ್ರಾಧಿಕಾರವನ್ನ ಅಣಕಿಸಿದ್ದಲ್ಲದೆ, ಸುರತ್ಕಲ್ ಮಾದರಿಯಲ್ಲೇ ತೊಕ್ಕೊಟ್ಟು ಫ್ಲೈ ಓವರ್ ಕೆಳ ಭಾಗವು ಸುಂದರಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.



ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಜಾಣಕುರುಡು ;
ಫ್ಲೈ ಓವರ್ ಕೆಳಭಾಗದಲ್ಲಿ ಕಳೆದ ಎರಡು ವರ್ಷಗಳಿಂದ ರಾಜಾರೋಷವಾಗಿ ಅನಧಿಕೃತ ಬೀದಿ ವ್ಯಾಪಾರ ನಡೆಸುತ್ತಿದ್ದರೂ ಸಂಬಂಧಪಟ್ಟ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಜಾಣ ಕುರುಡು ಅನುಸರಿಸುತ್ತಿದ್ದಾರೆ. ಹೆದ್ದಾರಿ ಪ್ರಾಧಿಕಾರದ ಮಂಗಳೂರು ವಿಭಾಗದ ಯೋಜನಾ ನಿರ್ದೇಶಕ ಅಬ್ದುಲ್ಲ ಜಾವೇದ್ ಅಜ್ಮಿಯವರಲ್ಲಿ ಈ ಬಗ್ಗೆ ವಿಚಾರಿಸಿದಾಗ ನಮಗೆ ನೇರವಾಗಿ ತೆರವು ಕಾರ್ಯಾಚರಣೆ ನಡೆಸಲು ಸಾಧ್ಯವಿಲ್ಲ. ರಕ್ಷಣೆ ಒದಗಿಸಲು ಪೊಲೀಸರ ಸಹಕಾರ ಕೇಳಿದ್ದು, ಅವರಿಂದ ಇನ್ನೂ ಸಮರ್ಪಕ ಸ್ಪಂದನೆ ಸಿಕ್ಕಿಲ್ಲವೆಂದು ಸಬೂಬು ನೀಡಿದ್ದರು. ಈ ರೀತಿ ಸಬೂಬು ನೀಡಿ ವಾರ ಕಳೆದರೂ ಅನಧಿಕೃತ ಮಾರುಕಟ್ಟೆ ತೆರವು ಕಾರ್ಯಾಚರಣೆ ಇನ್ನೂ ನಡೆದಿಲ್ಲ. ಹೆದ್ದಾರಿಯಲ್ಲಿ ನಾಯಿ ಕೊಡೆಯಂತೆ ತಲೆ ಎತ್ತಿರುವ ಅನಧಿಕೃತ ಸ್ಟಾಲ್ ಗಳನ್ನ ಎತ್ತಂಗಡಿ ಮಾಡಲು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಪೊಲೀಸರ ಸಹಕಾರ ಸಿಕ್ಕಿಲ್ಲವೆಂಬ ವಿಚಾರವೇ ತೀರಾ ಹಾಸ್ಯಾಸ್ಪದವಾಗಿದೆ. ತೊಕ್ಕೊಟ್ಟು ಮಾತ್ರವಲ್ಲದೆ ಪಕ್ಕದ ಕಲ್ಲಾಪು ಹೆದ್ದಾರಿ ಅಂಚಿನಲ್ಲೂ ಅನಧಿಕೃತ ಮೀನು ಮಾರುಕಟ್ಟೆ ರಾಜಾರೋಷವಾಗಿ ಕಾರ್ಯಾಚರಿಸುತ್ತಿದ್ದು ಲಕ್ಷಾಂತರ ರೂಪಾಯಿಗಳ ವಹಿವಾಟು ನಡೆಸುತ್ತಿದೆ. ಇದಕ್ಕೆಲ್ಲಾ ಬ್ರೇಕ್ ಹಾಕಬೇಕಿದ್ದ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳೇ ಪರೋಕ್ಷವಾಗಿ ಅನಧಿಕೃತ ಬೀದಿ ಬದಿ ವ್ಯಾಪಾರವನ್ನ ಪೋಷಿಸುತ್ತಿದ್ದಾರೆಯೇ ಎಂಬ ಅನುಮಾನ ಜನಸಾಮನ್ಯರಲ್ಲಿ ಕಾಡುತ್ತಿದೆ.
ಮಾರುಕಟ್ಟೆ ಕಾರಣದಿಂದ ಫ್ಲೈ ಓವರ್ ಕೆಳಭಾಗದಲ್ಲಿ ರಸ್ತೆ ದಾಟಲೂ ಸಾರ್ವಜನಿಕರಿಗೆ ಕಷ್ಟಕರ ಸ್ಥಿತಿಯಾಗಿದೆ. ಬೇಕಾಬಿಟ್ಟಿ ಸ್ಟಾಲ್ ಗಳನ್ನ ಹಾಕಿ ನಗರದ ಸೌಂದರ್ಯ ಕೆಡಿಸಿದ್ದಲ್ಲದೆ, ಪರಿಸರ ಮಾಲಿನ್ಯವನ್ನೂ ನಡೆಸಲಾಗಿದೆ. ಹೀಗೆಯೇ ಬಿಟ್ಟರೆ ಇಲ್ಲಿ ಶೀಘ್ರದಲ್ಲೇ ಹಸಿ ಮೀನು, ಕೋಳಿ, ಮಾಂಸ ಮಾರಾಟದ ಸ್ಟಾಲ್ ಗಳು ಆರಂಭಗೊಳ್ಳುವ ಎಲ್ಲಾ ಸಾಧ್ಯತೆಗಳಿವೆ. ಮಾಧ್ಯಮಗಳ ವರದಿಗಳಲ್ಲದೆ, ಸಾಮಾಜಿಕ ಜಾಲತಾಣಗಳಲ್ಲೂ ಫ್ಲೈ ಓವರ್ ಕೆಳಗಿನ ಅವ್ಯವಸ್ಥೆ ವಿರುದ್ಧ ಜಾಗೃತಿ ಮೂಡಿಸಿ ಅಧಿಕಾರಿಗಳನ್ನ ಎಚ್ಚರಿಸುವ ಕಾರ್ಯ ನಡೆಯಬೇಕೆಂದು ಸ್ಥಳೀಯರಾದ ಶೈಲೇಶ್ ಗಟ್ಟಿ ಪಿಲಾರು ತಿಳಿಸಿದ್ದಾರೆ.
Citizens and commuters have launched an online campaign demanding that the Thokkottu flyover be beautified on the lines of the Surathkal flyover and that the illegal roadside market beneath the structure be cleared immediately.
23-09-26 11:02 pm
HK News Desk
ಬರ ಪಟ್ಟಿಯಿಂದ ಇಂಡಿ, ಚಡಚಣ ಕೈಬಿಟ್ಟಿದ್ದಕ್ಕೆ ಅಸಮಾಧ...
23-09-26 05:14 pm
ಕೆಪಿಎಸ್ಸಿಯಲ್ಲಿ ಹಗರಣ ತನಿಖೆಗೆ ಎಸ್ಐಟಿ ; ಕಾನೂನು...
23-09-26 11:05 am
ಸೆ.26ರಿಂದ ಸತತ 5 ದಿನ ಬ್ಯಾಂಕ್ಗಳು ಬಂದ್ ; ATM, U...
23-09-26 09:28 am
ತೀವ್ರ ಆರ್ಥಿಕ ಮುಗ್ಗಟ್ಟಿನಲ್ಲಿ ಡಿಕೆಶಿ ಸರ್ಕಾರ ! ಹ...
22-09-26 08:58 pm
24-09-26 09:42 pm
HK News Staffer
"ನಾವು ಚುನಾವಣೆ ಗೆದ್ದರೆ, ಟೆಕ್ಸಾಸ್ ಹನುಮಾನ್ ವಿಗ್...
23-09-26 04:21 pm
ಪಶುವೈದ್ಯರ ಹುದ್ದೆಗೆ ₹80 ಲಕ್ಷದ ಡೀಲ್ ಆರೋಪ: ಪ್ರಶ್...
22-09-26 09:42 am
ಡಿಸೆಂಬರ್ ಒಳಗೆ ಸ್ಥಳೀಯ ಸಂಸ್ಥೆಗಳ ಚುನಾವಣೆ ; ಇವಿಎಂ...
19-09-26 05:40 pm
Mamata Banerjee, Sanchita Pradhan, Rejinagar:...
19-09-26 03:37 pm
24-09-26 10:46 pm
HK News Desk
ಬಂಟ್ವಾಳ ; ಅಡಿಕೆ ತೋಟದಲ್ಲಿ ಕೆಲಸ ಮಾಡುತ್ತಿದ್ದಾಗ ಹ...
24-09-26 06:26 pm
ಬಂಗಾಳ ವಾಯುಭಾರ ಕುಸಿತ ; ಕರಾವಳಿ, ಮಲೆನಾಡು, ದಕ್ಷಿಣ...
24-09-26 05:55 pm
ಕುಕ್ಕೆ ಸುಬ್ರಹ್ಮಣ್ಯಕ್ಕೆ ಮಾಜಿ ಕ್ರಿಕೆಟಿಗ ರವಿ ಶಾಸ...
23-09-26 10:47 pm
ಉತ್ತರಾಖಂಡದ ಯಮುನೋತ್ರಿಯಲ್ಲಿ ಕುಂಪಲದ ವ್ಯಕ್ತಿ ಹೃದಯ...
23-09-26 09:55 am
24-09-26 05:10 pm
HK News Staffer
ಸೈಬರ್ ಖದೀಮರ ಹೊಸ ಹೊಸ ತಂತ್ರ: ಒಂದೇ ದಿನ ಮಂಗಳೂರಿನಲ...
24-09-26 11:10 am
bus fire, Greater Noida: ಚಲಿಸುತ್ತಿದ್ದ ಸ್ಲೀಪರ್...
24-09-26 10:09 am
ಶಿರ್ವದಲ್ಲಿ ಭಾರೀ ಪ್ರಮಾಣದ ಗಾಂಜಾ, ಡ್ರಗ್ಸ್ ವಶಕ್ಕೆ...
23-09-26 09:28 pm
ಕರ್ತವ್ಯ ಲೋಪ, ಲಂಚಬಾಕತನ, ಅನುಚಿತ ವರ್ತನೆ ಬಗ್ಗೆ ದೂ...
23-09-26 09:24 pm