Sudhir Kumar Murolli: ಎಸ್ಐಆರ್ ಹೆಸರಲ್ಲಿ ನಿರ್ದಿಷ್ಟ ಮತಗಳಿಗೆ ಕತ್ತರಿ ಹಾಕುತ್ತಿದ್ದಾರೆ, ದೇಶದಲ್ಲಿ ಎರಡು ರೀತಿಯ ವರ್ಗ ಸೃಷ್ಟಿಸುತ್ತಿದ್ದಾರೆ ; ಸುಧೀರ್ ಕುಮಾರ್ ಮುರೊಳ್ಳಿ

06-10-26 09:15 pm       HK News Staffer   ಕರಾವಳಿ

ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸೂಚನೆಯಂತೆ ದೇಶಾದ್ಯಂತ ಎರಡು ರೀತಿಯ ಮತದಾರರನ್ನು ಸೃಷ್ಟಿ ಮಾಡಲಾಗುತ್ತಿದ್ದು, ಮತದಾನಕ್ಕೆ ಅರ್ಹತೆ ಉಳ್ಳವರು ಮತ್ತು ಮತದಾನ ರಹಿತರು ಎಂಬ ಎರಡು ವರ್ಗ ಸೃಷ್ಟಿಸಲು ಹುನ್ನಾರ ನಡೆದಿದೆ.

ಮಂಗಳೂರು, ಅ.6: ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸೂಚನೆಯಂತೆ ದೇಶಾದ್ಯಂತ ಎರಡು ರೀತಿಯ ಮತದಾರರನ್ನು ಸೃಷ್ಟಿ ಮಾಡಲಾಗುತ್ತಿದ್ದು, ಮತದಾನಕ್ಕೆ ಅರ್ಹತೆ ಉಳ್ಳವರು ಮತ್ತು ಮತದಾನ ರಹಿತರು ಎಂಬ ಎರಡು ವರ್ಗ ಸೃಷ್ಟಿಸಲು ಹುನ್ನಾರ ನಡೆದಿದೆ. ಆದರೆ ದೇಶದಲ್ಲಿ ಯುವಜನರು ರಾಜಕೀಯ ಪ್ರಜ್ಞೆ ಬೆಳೆಸುತ್ತಿದ್ದು ಪ್ರಮುಖ ನಗರಗಳಲ್ಲಿ ಪ್ರತಿಭಟನೆಗಿಳಿದಿದ್ದಾರೆ. ಇದು ಮುಂದೆ ಆಂದೋಲನ ರೂಪ ಪಡೆಯಲಿದ್ದು ಬಿಜೆಪಿಯ ಅಸಲಿತನವನ್ನು ಬಯಲಿಗೆ ತರಲಿದೆ ಎಂದು ಕೆಪಿಸಿಸಿ ವಕ್ತಾರ ಸುಧೀರ್ ಕುಮಾರ್ ಮುರೊಳ್ಳಿ ಹೇಳಿದರು. 

ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿದ ಅವರು, ಎಸ್ಐಆರ್ ಮಾಡುವುದಕ್ಕೆ ವಿರೋಧ ಇಲ್ಲ‌. ಆದರೆ ಇದರ ನೆಪದಲ್ಲಿ ದೇಶಾದ್ಯಂತ ಎಸ್ಸಿ ಎಸ್ಟಿ ಮುಸ್ಲಿಂ ಮತ್ತು ಕ್ರಿಶ್ಚಿಯನ್ ಮತಗಳನ್ನು ಟಾರ್ಗೆಟ್ ಮಾಡಿರುವುದನ್ನು ವಿರೋಧಿಸುತ್ತೇವೆ. ಬಿಜೆಪಿ ಏಜಂಟರೇ ಫಾರ್ಮ್ ನಂಬರ್7 ನೆಪದಲ್ಲಿ ಮುಸ್ಲಿಮರ ಮತಗಳನ್ನು ಡಿಲೀಟ್ ಮಾಡಲು ಅರ್ಜಿ ಸಲ್ಲಿಸಿದ್ದಾರೆ. ಅವರ ಮತ ಇಲ್ಲ, ಇವರು ವಲಸೆ ಹೋಗಿದ್ದಾರೆಂದು ಇವರಿಗೆ ಹೇಗೆ ಗೊತ್ತು. ದುರುದ್ದೇಶದಿಂದ ಇಂತಹ ಕೆಲಸ ಮಾಡುತ್ತಿದ್ದಾರೆ. ನಾವು ಚುನಾವಣಾ ಆಯೋಗಕ್ಕೆ ಇಂತಹ ಕೆಲಸ ಮಾಡುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳಲು, ಪೊಲೀಸ್ ದೂರು ಕೊಡಲು ಹೇಳಿದ್ದೇವೆ‌. ಸ್ವತಃ ಮುಖ್ಯಮಂತ್ರಿ ಅವರೇ ಧರಣಿ ಕುಳಿತ ಬಳಿಕ ಆಯೋಗದವರು ಫಾರಂ ನಂಬರ್ 7 ಪ್ರಕಾರ ಮತಗಳನ್ನು ಡಿಲೀಟ್ ಮಾಡಬೇಡಿ ಎಂದು ಹೇಳಿದ್ದಾರೆ.  

ರಾಜ್ಯದಲ್ಲಿ 1 ಕೋಟಿಗೂ ಹೆಚ್ಚು ಮತಗಳನ್ನು ಡಿಲೀಟ್ ಮಾಡಿರುವುದು ಕರಡು ಪ್ರತಿಯಲ್ಲಿ ಗೊತ್ತಾಗಿದೆ. ಇಷ್ಟೊಂದು ಮತಗಳನ್ನು ಡಿಲೀಟ್ ಮಾಡಲು ಹೇಗೆ ಸಾಧ್ಯ. ಚುನಾವಣಾ ಆಯೋಗಕ್ಕೆ ಯಾವುದೇ ಅರ್ಹ ಮತದಾರನ ಮತದ ಹಕ್ಕನ್ನು ಕಸಿಯಲು ಸಾಧ್ಯವಿಲ್ಲ. ಆದರೆ ಪರಿಷ್ಕರಣೆ ನೆಪದಲ್ಲಿ ಮತಗಳನ್ನು ಕತ್ತರಿ ಹಾಕಲಾಗುತ್ತಿದೆ. ಕತ್ತರಿ ಹಾಕಿದ ಬಳಿಕ ಮತದಾರರ ಸೇರ್ಪಡೆ ಎನ್ಹುತ್ತಿದ್ದಾರೆ. ಅರ್ಹ ಮತದಾರರನ್ನು ಯಾಕೆ ತೆಗೆದು ಹಾಕಿದ್ದರು ಎನ್ನುವ ಪ್ರಶ್ನೆಗೆ ಆಯೋಗ ಉತ್ತರ ಕೊಡಬೇಕು ಎಂದು ಆಗ್ರಹಿಸಿದರು. 

ದೇಶಾದ್ಯಂತ ಮತಗಟ್ಟೆಗಳಲ್ಲಿ ಗುಂಪು ಗುಂಪಾಗಿ ಫಾರಂ 7 ಅರ್ಜಿ ಕೊಟ್ಟಿರುವುದನ್ನು ಸ್ವತಃ ಆಯೋಗವೇ ಪರಿಶೀಲಿಸಿ ಸೂಕ್ತ ಕ್ರಮವನ್ನು ಸ್ವಯಂ ಆಗಿ ಕೈಗೊಳ್ಳಬೇಕು. ಇಂತಹ ಅರ್ಜಿಗಳಲ್ಲಿ ಸ್ಥಳಾಂತರ ಆಗಿದ್ದಾರೆ, ಸತ್ತಿದ್ದಾರೆಂದು ಮನವಿ ಕೊಟ್ಟಿದ್ದಾರೆ. ಚಿಕ್ಕಮಗಳೂರಿನ ಕೊಪ್ಪದಲ್ಲಿ ಸರ್ಕಾರಿ ಶಾಲಾ ಶಿಕ್ಷಕ ಮತ್ತು ಮತಗಟ್ಟೆ ಅಧಿಕಾರಿಯಾಗಿಯೂ ಕೆಲಸ ಮಾಡುತ್ತಿರುವ ವಜೀರ್ ಖಾನ್ ಎಂಬವರ ಮತ ಡಿಲೀಟ್ ಮಾಡಬೇಕೆಂದು ಅರ್ಜಿ ಕೊಟ್ಟಿದ್ದಾರೆ. ಆತ ಸ್ವತಃ ಸರ್ಕಾರಿ ನೌಕರನಾಗಿದ್ದರೂ ಇದು ಹೇಗೆ ಸಾಧ್ಯ ಎಂಬ ಪ್ರಶ್ನೆ ಇದೆ‌. ಎಸ್ಐಆರ್ ಮೂಲಕ ಬಿಜೆಪಿಯವರು ದೇಶದಲ್ಲಿ ಜನಾಂಗೀಯ ದ್ವೇಷವನ್ನು ಸೃಷ್ಟಿಸುತ್ತಿದ್ದಾರೆ. ಈ ಕೃತ್ಯವನ್ನು ಟಿಸಿಎಸ್ ಕಂಪನಿಯವರು ಡೆವಲಪ್ ಮಾಡಿರುವ ಏಪ್ ಮೂಲಕ ಮಾಡುತ್ತಿದ್ದಾರೆ. 50 ವರ್ಷಗಳಿಂದಲೂ ಮತ ಹಾಕುತ್ತ ಬಂದವರನ್ನು ಏಪ್ ನಲ್ಲಿ ತೋರಿಸುತ್ತಿಲ್ಲ, ನೀವು ಮತದ ಅರ್ಹತೆಯನ್ನು ಸಾಬೀತುಪಡಿಸಿ ಎಂದರೆ ಹೇಗೆ? ಎಂದು ಪ್ರಶ್ನಿಸಿದರು. ಶುಭೋದಯ ಆಳ್ವ, ಟಿಕೆ ಸುಧೀರ್ ಮತ್ತಿತರರು ಇದ್ದರು.

KPCC spokesperson Sudheer Kumar Muralolli has alleged that the ongoing Special Intensive Revision (SIR) of electoral rolls is being misused to create two categories of citizens—those allowed to exercise their voting rights and those effectively denied the right to vote.