ಬ್ರೇಕಿಂಗ್ ನ್ಯೂಸ್
28-10-26 10:52 pm HK News Desk ಕರ್ನಾಟಕ
ಮೈಸೂರು, ಅ.28 ಮೈಸೂರು ಅರಮನೆಯ ಒಡೆತನದ ಕುರಿತಾಗಿ ತನ್ನ ಹೇಳಿಕೆಯನ್ನು ಪುನರುಚ್ಚರಿಸಿರುವ ನಗರಾಭಿವೃದ್ಧಿ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಯತೀಂದ್ರ ಸಿದ್ದರಾಮಯ್ಯ, ತಾವು ನೀಡಿದ ಹೇಳಿಕೆಗೆ ಈಗಲೂ ಬದ್ಧನಾಗಿದ್ದೇನೆ. ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲ ಎಂದು ತಿಳಿಸಿದ್ದಾರೆ.
ಇತ್ತೀಚೆಗೆ ಮೈಸೂರು ದಸರಾ ಆಚರಣೆಯ ಕುರಿತು ರಾಜಮಾತೆ ಪ್ರಮೋದಾ ದೇವಿ ಒಡೆಯರ್ ವ್ಯಕ್ತಪಡಿಸಿರುವ ಅಸಮಾಧಾನಕ್ಕೆ ಸಂಬಂಧಿಸಿದಂತೆ, ಅವರ ಕ್ಷಮೆ ಕೋರಬೇಕೆಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರು ಆಗ್ರಹಿಸಿದ್ದರು. ಈ ಬಗ್ಗೆ ಮಾತನಾಡಿದ ಯತೀಂದ್ರ, ಮೈಸೂರು ಅರಮನೆ ಸರ್ಕಾರದ ಆಸ್ತಿ. ಈ ವಿಚಾರದಲ್ಲಿ ನಾನು ಯಾವುದೇ ತಪ್ಪು ಮಾಡಿಲ್ಲ. ಆದಾಗ್ಯೂ, ಕೆಲವರು ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ. ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರೇ ರಾಜ ಮನೆತನದೊಂದಿಗೆ ಮಾತನಾಡುವುದಾಗಿ ಹೇಳಿದ್ದಾರೆ. ಹಾಗಾಗಿ ನಾನು ಮತ್ತೆ ಅವರೊಂದಿಗೆ ಚರ್ಚಿಸುವ ಅಗತ್ಯವಿಲ್ಲ' ಎಂದರು.
'ಚಿನ್ನದ ಅಂಬಾರಿ ಮತ್ತು ಅರಮನೆಗೆ ಸಂಬಂಧಿಸಿದಂತೆ ನಾನು ಏನನ್ನೂ ತಪ್ಪಾಗಿ ಹೇಳಿಲ್ಲ. 'ಅರಮನೆ ಸ್ವಾಧೀನ ಮತ್ತು ವರ್ಗಾವಣೆ ಕಾಯ್ದೆ'ಯ ಪ್ರಕಾರವೇ ಮಾತನಾಡಿದ್ದೇನೆ. ಆದರೆ, ಕೆಲವರು ಬೇಕಂತಲೇ ಈ ವಿಚಾರವನ್ನು ರಾಜಕೀಯವಾಗಿ ಬಳಸಿಕೊಳ್ಳುತ್ತಿದ್ದಾರೆ. ನಾನು ಪ್ರಜ್ಞಾಪೂರ್ವಕವಾಗಿಯೇ ಮಾತನಾಡಿದ್ದೇನೆ. ನಾನು ತಪ್ಪು ಮಾಡಿದ್ದರೆ, ಕ್ಷಮೆ ಕೇಳುತ್ತಿದ್ದೆ. ಆದರೆ ನಾನು ಯಾವುದೇ ತಪ್ಪು ಮಾಡಿಲ್ಲದಿರುವುದರಿಂದ, ನಾನು ಕ್ಷಮೆ ಕೇಳುವುದಿಲ್ಲ' ಎಂದು ತಿಳಿಸಿದರು.
ಪ್ರಮೋದಾ ದೇವಿ ಒಡೆಯರ್ ಅವರು ಏಳು ದಿನಗಳ ಕಾಲ ದಸರಾ ಆಚರಣೆಯನ್ನು ನಡೆಸಲು ಮತ್ತು ಚಿನ್ನದ ಅಂಬಾರಿಯನ್ನು ಕೊಡುವುದಿಲ್ಲ ಎಂದು ಮಾಧ್ಯಮ ಹೇಳಿಕೆ ನೀಡಿದ್ದರು. ನಾನು ಅದಕ್ಕೆ ಪ್ರತಿಕ್ರಿಯಿಸಿದ್ದೆ ಅಷ್ಟೇ. ಅಂಬಾರಿ ಇಲ್ಲದೆ ದಸರಾ ಜಂಬೂ ಸವಾರಿ ನಡೆಯಲು ಸಾಧ್ಯವಿಲ್ಲ. ನಾವು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿದ್ದೇವೆ ಮತ್ತು ಈಗ ಇರುವುದು ಜನರ ಸರ್ಕಾರ. ನಾವು ಜನರಿಗಾಗಿಯೇ ದಸರಾವನ್ನು ಆಚರಿಸುತ್ತೇವೆ. ಹೀಗಾಗಿ ನನ್ನ ಹೇಳಿಕೆಯಲ್ಲಿ ಯಾವುದೇ ತಪ್ಪಿಲ್ಲ' ಎಂದು ಅವರು ಹೇಳಿದರು.
ಅಂಬಾರಿ ಇಲ್ಲದೆ ವಿಜಯದಶಮಿ ಆಚರಣೆ ಅಸಾಧ್ಯ. ಅಂಬಾರಿಗಾಗಿ ಸರ್ಕಾರ ಹಣ ನೀಡುತ್ತದೆ. ಈ ಬಗ್ಗೆ ಯಾರಿಗಾದರೂ ದೂರುಗಳಿದ್ದರೆ ನಮ್ಮೊಂದಿಗೆ ಮಾತನಾಡಿ ಬಗೆಹರಿಸಿಕೊಳ್ಳಬೇಕು. ಈ ಘಟನೆ ಮುಂಬರುವ ಚುನಾವಣೆಗಳ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
09-11-26 07:45 pm
HK News Staffer
ಒಂದು ಕೋಟಿಗೆ 1.30 ಕೋಟಿ ಆಫರ್ ! ಹಣ ದುಪ್ಪಟ್ಟು ಪ್ಲ...
08-11-26 10:24 pm
ತುಂಡು ತುಂಡಾಗಿ ಕತ್ತರಿಸುತ್ತಾರೆಂದು ಹೇಳಿಕೆ ; ಛಲವಾ...
07-11-26 09:34 pm
ವಿಧಾನ ಪರಿಷತ್ ಚುನಾವಣೆ ಸೋಲಿಗೆ ಸ್ಟಿಂಗ್ ಕಾರಣ ; 5...
03-11-26 09:48 pm
ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಹಂಚಿಕೆ ಪ್ರಕರಣದಲ್ಲ...
03-11-26 01:01 pm
09-11-26 04:45 pm
HK News Staffer
ಯುದ್ಧ ನಿಲ್ಲಿಸಿ ಸಂಧಾನಕ್ಕೆ ಬನ್ನಿ.. ಇಲ್ಲದಿದ್ದರೆ...
09-11-26 11:51 am
ಇಸ್ರೇಲ್ ಅಧಿಪತ್ಯ ಪಡೆಯಲು ನೆತನ್ಯಾಹು ಸೋಲು ; ಹೊಸ ಸ...
29-10-26 09:28 pm
ಆಡಳಿತ ಬದಲಾವಣೆ ಉದ್ದೇಶದ ಹಿಂಸಾತ್ಮಕ ಪ್ರತಿಭಟನೆಗಳಲ್...
29-10-26 08:23 pm
'ಮೋದಿ ಅಪ್ಪನೂ ಜೈಲಿಗೆ ಹೋಗಬೇಕಾಗುತ್ತೆ!' ; ವಿವಾದಕ್...
25-10-26 09:40 pm
12-11-26 06:34 pm
HK News Staffer
ಬಾಳೆಕುದ್ರು ಸ್ವಾಮೀಜಿ ವಿರುದ್ಧ ಮತ್ತೊಂದು ವಂಚನೆ ಆರ...
12-11-26 03:51 pm
ಬಹುನಿರೀಕ್ಷಿತ ಬೆಂಗಳೂರು - ಮಂಗಳೂರು- ಗೋವಾ ‘ವಂದೇ ಭ...
11-11-26 08:59 pm
ನಟೋರಿಯಸ್ ಗ್ಯಾಂಗ್ ಸ್ಟರ್ 'ಹೇಮಂತ ಪೂಜಾರಿ' ಬಂಧನ ಬಗ...
10-11-26 03:12 pm
ನೇಪಾಳದಿಂದ ಬಸ್ರೂರಿಗೆ ಬರಲಿದೆ ಚಿನ್ನದ ಶ್ರೀಚಕ್ರ! 3...
10-11-26 12:36 pm
11-11-26 03:09 pm
HK News Staffer
ಬೆಳ್ತಂಗಡಿ ; ಗೂಡ್ಸ್ ಟೆಂಪೋ ಡಿಕ್ಕಿಯಾಗಿ ಇಬ್ಬರು ಬೈ...
11-11-26 01:54 pm
ದಾವಣಗೆರೆಯಿಂದ ಮಂಗಳೂರು ಸಾಗಿಸುತ್ತಿದ್ದ 1.15 ಕೋಟಿ...
10-11-26 10:01 pm
ಭೂಗತ ಪಾತಕಿ ಹೇಮಂತ್ ಪೂಜಾರಿ, ನಟೋರಿಯಸ್ ಕ್ರಿಮಿನಲ್...
07-11-26 11:07 pm
15 ದಿನಗಳಲ್ಲಿ ಏಳು ಕೊಲೆ ! ಚಿನ್ನಾಭರಣ ದೋಚಿ ಶವಗಳನ್...
07-11-26 10:39 am