ಕಾಲಲ್ಲೇ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದ ಸಾಧಕನಿಗೆ ಬಂಟ್ವಾಳ ಡಿವೈಎಸ್ಪಿ ಅವರಿಂದ ಸನ್ಮಾನ

16-08-20 04:31 pm       Mangalore Reporter   ಕರಾವಳಿ

ಕಾಲಿನ ಬೆರಳಿನ ಮೂಲಕ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದ ವಿದ್ಯಾರ್ಥಿಯೊಬ್ಬ ರಾಜ್ಯದಲ್ಲಿ ಗರಿಷ್ಠ ಅಂಕದ ಸಾಧನೆ ಮಾಡಿರುವುದನ್ನು ಗಮನಿಸಿದ ಬಂಟ್ವಾಳ ಡಿ.ವೈ.ಎಸ್.ಪಿ. ವೆಲೆಂಟೈನ್ ಡಿ.ಸೋಜ ಆತನ ಮನೆಗೆ ತೆರಳಿ ಸನ್ಮಾನಿಸಿದ್ದಾರೆ.

ಬಂಟ್ವಾಳ, ಆಗಸ್ಟ್ 16:  ಕಾಲಿನ ಬೆರಳಿನ ಮೂಲಕ ಪರೀಕ್ಷೆ ಬರೆದು ಎಸ್.ಎಸ್.ಸಿ.ಯಲ್ಲಿ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣನಾದ ವಿದ್ಯಾರ್ಥಿ ಕೌಶಿಕ್ ನ ಮನೆಗೆ ಬಂಟ್ವಾಳ ಡಿ.ವೈ.ಎಸ್.ಪಿ. ವೆಲೆಂಟೈನ್ ಡಿ.ಸೋಜ ಬೇಟಿ ನೀಡಿ ಅಭಿನಂದನೆ ಸಲ್ಲಿಸಿದ್ದಾರೆ.  

ಬಂಟ್ವಾಳ ತಾಲೂಕು ಬಿ ಮೂಡ ಗ್ರಾಮದ ಕಂಚಿಕಾರ ಪೇಟೆ ನಿವಾಸಿ ರಾಜೇಶ್ ಆಚಾರ್ಯ ಮತ್ತು ಜಲಜಾಕ್ಷಿ ರವರ ಮಗ ಕೌಶಿಕ್ ಆಚಾರ್ಯ ರವರು ತನ್ನ ಹುಟ್ಟಿನಿಂದಲೇ ಎರಡೂ ಕೈಗಳು ಇಲ್ಲದೆ ಇದ್ದರೂ 2019-20 ನೇ ಸಾಲಿನಲ್ಲಿ ನಡೆದ ಎಸ್‌ ಎಸ್‌ ಎಲ್‌ ಸಿ ಪರೀಕ್ಷೆಯಲ್ಲಿ ಯಾರ ಸಹಾಯವೂ ಇಲ್ಲದೆ ಕಾಲಿನ ಬೆರಳುಗಳ ಮೂಲಕವೇ ಉತ್ತರವನ್ನು ಬರೆದು 424 ಅಂಕ (67.74%) ಗಳಿಸಿರುವ ಹೆಮ್ಮೆಯ ಸಾಧನೆಯನ್ನು ಅಭಿನಂದಿಸಿ 74 ನೇ ಸ್ವಾತಂತ್ರ್ಯೋತ್ಸವದ ಆಚರಣೆಯ ಸಂದರ್ಭದಲ್ಲಿ ಬಂಟ್ವಾಳ ಉಪವಿಭಾಗದ ಪೊಲೀಸ್ ಉಪಾಧೀಕ್ಷಕರಾದ ವೆಲೆಂಟೈನ್ ಡಿಸೋಜ ಹಾಗೂ ಉಪವಿಭಾಗ ಕಛೇರಿ ಸಿಬ್ಬಂದಿಗಳು ಕೌಶಿಕ್ ರವರ ಮನೆಗೆ ಭೇಟಿ ನೀಡಿ ಸ್ಮರಣಿಕೆ ನೀಡಿ ಗೌರವಿಸಿ, ಧನ ಸಹಾಯವನ್ನು ಮಾಡಿ ಆತನ ಮುಂದಿನ ವಿದ್ಯಾಭ್ಯಾಸ ಹಾಗೂ ಜೀವನಕ್ಕೆ ಶುಭ ಹಾರೈಸಿದ್ದಾರೆ.