ಭಟ್ಕಳದಲ್ಲಿ ಮೀನಿಗಾಗಿ ಹಾಕಿದ್ದ ಬಲೆಯಲ್ಲಿ ಸಿಕ್ಕಿದ್ದೇನು ಗೊತ್ತಾ?

19-08-20 08:44 pm       Headline Karnataka News Network   ಕರಾವಳಿ

ಮೀನುಗಾರಿಕಾ ಕೈರಂಪಣಿ ಬಲೆಗೆ ದೈತ್ಯಾಕಾರದ ಮೊಸಳೆಯೊಂದು ಬಿದ್ದ ಅಪರೂಪದ ಘಟನೆ ಭಟ್ಕಳ ತಾಲೂಕಿನ ಅಳ್ವೆಕೋಡಿನಲ್ಲಿ ಬುಧವಾರ ನಡೆದಿದೆ.

ಭಟ್ಕಳ, ಆಗಸ್ಟ್‌ 19:  ಸಮುದ್ರದಲ್ಲಿ ಮೀನು ಹಿಡಿಯಲು ಬೀಸಿದ ಬಲೆಗೆ ಬೃಹತ್ ಗಾತ್ರದ ಮೊಸಳೆ ಬಲೆಗೆ ಬಿದ್ದಿರುವ ಅಪರೂಪದ ಘಟನೆ ಉತ್ತರ ಕನ್ನಡ  ಜಿಲ್ಲೆಯ ಭಟ್ಕಳದಲ್ಲಿ ನಡೆದಿದೆ.

ಈ ಗಾಗಲೇ ಕರಾವಳಿಯಲ್ಲಿ ಮೀನುಗಾರಿಕೆ ಆರಂಭ ವಾಗಿದೆ. ಈ ಹಿನ್ನೆಲೆಯಲ್ಲಿ ಎಂದಿನಂತೆ ಮೀನುಗಾರಿಕೆಗೆ ತೆರಳಿದ್ದ ಭಟ್ಕಳದ ಮೀನುಗಾರಿಕೆಗೆ ತೆರಳಿದ್ದ ಮೀನುಗಾರ ರಿಗೆ ಅಚ್ಚರಿ ಕಾದಿತ್ತು.

ಮೀನುಗಾರಿಕಾ ಕೈರಂಪಣಿ ಬಲೆಗೆ ದೈತ್ಯಾಕಾರದ ಮೊಸಳೆಯೊಂದು ಬಿದ್ದ ಅಪರೂಪದ ಘಟನೆಗೆ ಭಟ್ಕಳ ತಾಲೂಕಿನ ಅಳ್ವೆಕೋಡಿ ಸಾಕ್ಷಿಯಾಗಿದೆ.

ಸಾಂಪ್ರದಾಯಿಕ ನಾಡದೋಣಿ ಮೀನುಗಾರಿಕೆಯಾದ ಕೈರಂಪಣಿ ಮೀನುಗಾರಿಕೆ ಮಾಡುವ ಸಂದರ್ಭ ಹಾಕಿದ ಬಲೆಗೆ ಮೀನುಗಳ ಜೊತೆ ಮೊಸಳೆ ಕೂಡಾ ಸಿಲುಕಿದ್ದು ಮೀನುಗಾರರಲ್ಲಿ ಆಶ್ಚರ್ಯದ ಜೊತೆ ಆತಂಕವು ಮನೆಮಾಡಿತು.

ಕರಾವಳಿ ಭಾಗದಲ್ಲಿ ಸಮುದ್ರದಲ್ಲಿ ಮೊಸಳೆಗಳು ಬಲೆಗೆ ಸಿಕ್ಕಿರುವುದು ಬಹಳ ಅಪರೂಪ.ಈ ಭಾರಿ ಎಲ್ಲೆಡೆ ಮಳೆ ಜೋರಾಗಿದ್ದ ಪರಿಣಾಮ ಹೊಳೆಗಳಲ್ಲಿ ಉಂಟಾದ ನೆರೆಯಿಂದಾಗಿ ಸಮುದ್ರಕ್ಕೆ ಸೇರಿರಬೇಕು ಎಂದು ಹೇಳಲಾಗಿದೆ.

ಸ್ಥಳಕ್ಕೆ ಬಂದ ಅರಣ್ಯ ಇಲಾಖೆ ಅಧಿಕಾರಿಗಳು ಮೊಸಳೆಯನ್ನು ರಕ್ಷಿಸಿ ಹೊಳೆಗೆ ಬಿಟ್ಟಿದ್ದಾರೆ ಎನ್ನಲಾಗಿದೆ.