ಬ್ರೇಕಿಂಗ್ ನ್ಯೂಸ್
 
            
                        19-03-21 10:30 am Mangaluru correspondent ಕರಾವಳಿ
 
            ಉಳ್ಳಾಲ, ಮಾ.19 : ಮನೆ ಮಂದಿ ಮಲಗಿದ್ದಾಗಲೇ ಮೇಲ್ಛಾವಣಿಯ ಹಂಚು ಸರಿಸಿ ನಗ, ನಗದು ಕಳವುಗೈದ ಘಟನೆ ತೊಕ್ಕೊಟ್ಟಿನಲ್ಲಿ ನಡೆದಿದೆ. ಹಂಚು ತೆಗೆದು ಒಳನುಗ್ಗಿದ ಕಳ್ಳರು 15 ಪವನ್ ಚಿನ್ನ, 5000 ನಗದನ್ನು ಕಳವುಗೈದಿದ್ದಾರೆ. ನಿನ್ನೆ ರಾತ್ರಿ ತೊಕ್ಕೊಟ್ಟು ಓವರ್ ಬ್ರಿಡ್ಜ್ ನ ರಕ್ಷಾ ಕ್ಲಿನಿಕ್ ಬಳಿ ಘಟನೆ ನಡೆದಿದೆ.



ಓವರ್ ಬ್ರಿಡ್ಜ್ ರಕ್ಷಾ ಕ್ಲಿನಿಕ್ ಬಳಿಯ ನಿವಾಸಿ, ನಿವೃತ್ತ ಬಿಎಸ್ಸೆನ್ನೆಲ್ ಉದ್ಯೋಗಿ ಜಯರಾಜ್ ಕೆ. ಎಂಬವರ ಮನೆಯಲ್ಲಿ ಕಳ್ಳತನ ನಡೆದಿದೆ. ಜಯರಾಜ್ ಅವರ ಪತ್ನಿ ಮರಣ ಹೊಂದಿದ್ದು ಮನೆಯಲ್ಲಿ ಅಮ್ಮ, ಇಬ್ಬರು ತಂಗಿಯಂದಿರ ಜೊತೆ ನೆಲೆಸಿದ್ದಾರೆ.


ನಿನ್ನೆ ರಾತ್ರಿ ದೇವರ ಕೋಣೆಯ ಹಂಚು ಸರಿಸಿ ಒಳ ನುಗ್ಗಿದ ಕಳ್ಳರು ಹಾಲಲ್ಲಿ ಇರುವ ಕಪಾಟಿನ ಬೀಗ ತೆಗೆದು 15 ಪವನ್ ಚಿನ್ನ ಮತ್ತು ಹೊರಗಡೆ ಇದ್ದ ಸುಮಾರು 5000 ದಷ್ಟು ನಗದು , ಎರಡು ಸ್ಮಾರ್ಟ್ ಫೋನ್, ಒಂದು ಸಾಮಾನ್ಯ ಮೊಬೈಲನ್ನ ದೋಚಿ ಪರಾರಿಯಾಗುತ್ತಿದ್ದ ವೇಳೆ ಕೋಣೆಯಲ್ಲಿ ಮಲಗಿದ್ದ ಜಯರಾಜ್ ಅವರ ಹಿರಿಯ ತಂಗಿ ಹರಿಣಾಕ್ಷಿ ಅವರು ಎಚ್ಚರಗೊಂಡು ಬೊಬ್ಬೆ ಹೊಡೆದಿದ್ದು ಕಳ್ಳರು ಓಡಿದ್ದಾರೆ.


ಸ್ಥಳಕ್ಕೆ ಉಳ್ಳಾಲ ಪೊಲೀಸರು, ಬೆರಳಚ್ಚು ತಜ್ನರು, ಶ್ವಾನದಳ ಭೇಟಿ ನೀಡಿ ಪರಿಶೀಲನೆ ನಡೆಸಿ ಕೇಸು ದಾಖಲಿಸಿದ್ದಾರೆ.
 
            
            
            Mangalore Thieves break into house and steal 15 pounds gold in ullal. The police are now investigating the case.
 
    
            
             31-10-25 08:10 pm
                        
            
                  
                HK News Desk    
            
                    
 
    'ನವೆಂಬರ್ ಕ್ರಾಂತಿ' ಮುನ್ಸೂಚನೆ ನೀಡಿದ್ದ ರಾಜಣ್ಣ ಅಖ...
31-10-25 06:02 pm
 
    ಧರ್ಮಸ್ಥಳ ಕೇಸ್ ; ಮಹೇಶ್ ಶೆಟ್ಟಿ ತಿಮರೋಡಿ ತಂಡದ ಮೇಲ...
30-10-25 11:00 pm
 
    ನಟ ಪ್ರಕಾಶ್ ರಾಜ್, ರಾಜೇಂದ್ರ ಚೆನ್ನಿ, ಜಕರಿಯಾ ಜೋಕಟ...
30-10-25 07:25 pm
 
    ಚಿತ್ತಾಪುರ ಆರೆಸ್ಸೆಸ್ ಪಥಸಂಚಲನ ; ನ.5ರಂದು ಮತ್ತೊಂದ...
30-10-25 06:22 pm
 
    
            
             30-10-25 03:20 pm
                        
            
                  
                HK News Desk    
            
                    
 
    ಭಾರತ ಮೂಲದ ಅನಿಲ್ ಕುಮಾರ್ ಬೊಲ್ಲಗೆ 240 ಕೋಟಿ ಮೊತ್ತ...
28-10-25 10:23 pm
 
    ಶಾಂಘೈ ತೆರಳಿದ್ದ ಪ್ರಧಾನಿ ಮೋದಿ ಹತ್ಯೆಗೆ ಅಮೆರಿಕ ಸಂ...
26-10-25 11:01 pm
 
    ಅಂಗೈಯಲ್ಲಿ ಡೆತ್ ನೋಟ್ ಬರೆದಿಟ್ಟು ಸರ್ಕಾರಿ ವೈದ್ಯೆ...
26-10-25 05:38 pm
 
    ಮುಂದಿನ ವಾರದಿಂದಲೇ ತಮಿಳುನಾಡಿನಲ್ಲಿ ಮತದಾರ ಪಟ್ಟಿಯ...
25-10-25 09:36 pm
 
    
            
             31-10-25 10:47 pm
                        
            
                  
                Mangalore Correspondent    
            
                    
 
    MP Brijesh Chowta, Mangalore: ದೇಶವ್ಯಾಪಿ ಸರ್ದಾ...
31-10-25 09:23 pm
 
    ಅನಧಿಕೃತ ಪಾರ್ಕಿಂಗ್ ವಿರುದ್ಧ ಮಂಗಳೂರು ಪೊಲೀಸರ ಕಾರ್...
31-10-25 09:00 pm
 
    78 ಶೇ. ಜನರಿಗೆ ಎರಡು ವರ್ಷದಲ್ಲಿ 23 ಸಾವಿರ ಮಕ್ಕಳು,...
31-10-25 03:05 pm
 
    ಬಿಸಿ ರೋಡಿನಲ್ಲಿ ಆಂಬುಲೆನ್ಸ್ ಗೆ ಸೈಡ್ ಕೊಡದೆ ಸತಾಯಿ...
30-10-25 11:16 pm
 
    
            
             31-10-25 10:57 pm
                        
            
                  
                Mangalore Correspondent    
            
                    
 
    ಮುಂಬೈನಲ್ಲಿ 17 ಮಕ್ಕಳನ್ನು ಒತ್ತೆಯಾಳಾಗಿಸಿದ್ದ ವ್ಯಕ...
31-10-25 12:55 pm
 
    ಇಂಗ್ಲೆಂಡಿನಲ್ಲಿ ಉದ್ಯೋಗ ಆಮಿಷ ; ಮಂಗಳೂರು- ಉಡುಪಿಯ...
29-10-25 10:43 pm
 
    ಪ್ರೇಯಸಿಗಾಗಿ ಕಳ್ಳತನಕ್ಕಿಳಿದ ಲವ್ವರ್ ; 40 ಲಕ್ಷ ಮ...
29-10-25 10:09 pm
 
    ವಿಷನ್ ಇಂಡಿಯಾ ಹೆಸರಲ್ಲಿ ನಕಲಿ ಲಕ್ಕಿ ಸ್ಕೀಮ್ ; ಪುತ...
29-10-25 02:53 pm