ಬ್ರೇಕಿಂಗ್ ನ್ಯೂಸ್
07-04-21 03:02 pm Mangalore Correspondent ಕರಾವಳಿ
ಮಂಗಳೂರು, ಎ.7; ಈಗೆಲ್ಲ ತಂತ್ರಜ್ಞಾನ ತುಂಬ ಮುಂದುವರಿದಿದೆ. ಅಪರಾಧ ಪ್ರಕರಣಗಳಲ್ಲಿ ಪೊಲೀಸರು ಕುಳಿತಲ್ಲೇ ಆರೋಪಿಗಳು ಎಲ್ಲೆಲ್ಲಿಗೆ ತಿರುಗಾಡುತ್ತಾರೆ ಎಂಬುದನ್ನು ಪತ್ತೆ ಮಾಡುತ್ತಾರೆ. ಮೊಬೈಲ್ ಟ್ರೇಸಿಂಗ್, ಜಿಪಿಎಸ್, ಲೊಕೇಶನ್, ಸಿಸಿ ಕ್ಯಾಮರಾಗಳು ಅಪರಾಧ ಲೋಕದಲ್ಲಿ ಕ್ರಾಂತಿಯನ್ನೇ ಎಬ್ಬಿಸಿವೆ. ಆದರೆ, ಇದಕ್ಕಿಂತಲೂ ನೂರು ಪಟ್ಟು ವೇಗದಲ್ಲಿ ಪತ್ತೆಕಾರ್ಯ ಮಾಡೋದಕ್ಕೆ ತಂತ್ರಜ್ಞಾನ ಬಂದಿದ್ಯಂತೆ. ಆದರೆ, ನಮ್ಮ ಪೊಲೀಸ್ ಇಲಾಖೆ ಇವನ್ನು ಇನ್ನೂ ಅಳವಡಿಸಿಕೊಂಡಿಲ್ಲ.
ಈಗಿನ ಹೈಟೆಕ್ ಕ್ಯಾಮರಾಗಳು ರಾತ್ರಿಯಲ್ಲೂ ಮನುಷ್ಯರು ಮತ್ತು ವಾಹನಗಳನ್ನು ಯಾವುದೇ ಬ್ಲರ್ ಇಲ್ಲದೆ ಪತ್ತೆ ಮಾಡುತ್ತವೆ. ಇಷ್ಟೇ ಅಲ್ಲ, ಇದೇ ಹೈಟೆಕ್ ಕ್ಯಾಮರಾವನ್ನು ಏಪ್ ಜೊತೆ ಜೋಡಿಸಿಕೊಂಡರೆ ರಸ್ತೆಯಲ್ಲಿ ಸಾಗುವ ಮಂದಿಯ ಪೈಕಿ ಯಾರು ಸಾಚಾ ಇದ್ದಾರೆ, ಯಾರು ನಕಲಿ ಇದ್ದಾರೆ, ಯಾವ ವಾಹನದ ಮೇಲೆ ಕೇಸ್ ಇದೆ ಎಂಬುದನ್ನೂ ಪತ್ತೆ ಮಾಡಬಹುದು. ನಕಲಿ ನಂಬರ್ ಪ್ಲೇಟ್ ಹಾಕ್ಕೊಂಡು ಅಪರಾಧ ಕೃತ್ಯಕ್ಕೆ ಸಂಚು ಹೂಡಿದ್ದರೆ, ಕೂಡಲೇ ಅದನ್ನು ಪೊಲೀಸರಿಗೆ ರವಾನಿಸಬಲ್ಲ ತಂತ್ರಜ್ಞಾನ ಬಂದಿದೆ. ದೆಹಲಿ, ಮುಂಬೈಯಂಥ ಮಹಾನಗರಗಳಲ್ಲಿ ಈ ರೀತಿಯ ಹೈಟೆಕ್ ಸಿಸ್ಟಮ್ ಜಾರಿಗೆ ಬಂದಿದೆ.
ಇದೇ ರೀತಿಯ ತಂತ್ರಜ್ಞಾನವನ್ನು ಸ್ಮಾರ್ಟ್ ಸಿಟಿಯಡಿ ಮಂಗಳೂರಿಗೆ ತರಬೇಕು ಅನ್ನುವ ನಿಟ್ಟಿನಲ್ಲಿ ಮಂಗಳೂರು ಕಮಿಷನರ್ ಶಶಿಕುಮಾರ್ ಮತ್ತು ಡಿಸಿಪಿ ಹರಿರಾಮ್ ಶಂಕರ್ ಜೋಡಿ ಚಿಂತನೆ ನಡೆಸಿದ್ದಾರೆ. ಮೂಲತಃ ಮೆಕ್ಯಾನಿಕಲ್ ಇಂಜಿನಿಯರ್ ಆಗಿರುವ ಡಿಸಿಪಿ ಹರಿರಾಮ್ ಶಂಕರ್, ಅಪರಾಧ ಲೋಕದಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಅಳವಡಿಸ್ಕೊಂಡರೆ ಪತ್ತೆಕಾರ್ಯ ತುಂಬ ಸುಲಭ ಎನ್ನುವುದನ್ನು ಹೇಳುತ್ತಾರೆ. ಈಗೆಲ್ಲ ತುಂಬ ಕಡಿಮೆ ವೆಚ್ಚದಲ್ಲಿ ಈ ರೀತಿಯ ಹೈಟೆಕ್ ಕ್ಯಾಮರಾಗಳು ಸಿಗುತ್ತವೆ. ಸ್ಮಾರ್ಟ್ ಸಿಟಿಯಡಿ ಕೋಟ್ಯಂತರ ರೂಪಾಯಿ ವ್ಯಯಿಸಿ, ಹತ್ತು ವರ್ಷ ಹಳೆಯ ಟೆಕ್ನಾಲಜಿಯನ್ನು ಬಳಕೆ ಮಾಡುವ ಬದಲು ಪೊಲೀಸರಿಗೆ ಅಪರಾಧ ಪ್ರಕರಣಗಳಲ್ಲಿ ನೆರವಾಗಬಲ್ಲ ಅತ್ಯಾಧುನಿಕ ತಂತ್ರಜ್ಞಾನ ಅಳವಡಿಸಬಹುದು ಎನ್ನುತ್ತಾರೆ.
ಈ ರೀತಿಯ ಹೈಟೆಕ್ ಕ್ಯಾಮರಾ ಅಳವಡಿಸಿದಲ್ಲಿ ಒಂದು ಸೆಕೆಂಡಿನಲ್ಲಿ 14 ಪಿಕ್ಚರ್ ರವಾನಿಸುತ್ತದೆ. ಅಲ್ಲದೆ, ಹೆಲ್ಮೆಟ್ ರಹಿತ ಮತ್ತು ತ್ರಿಬಲ್ ರೈಡಿಂಗ್ ಮಾಡುತ್ತಿರುವುದನ್ನು ಕರಾರುವಾಕ್ಕಾಗಿ ಫೋಟೋ ತೆಗೆದು ಕಳಿಸಿಕೊಡುತ್ತದೆ. ಅದರ ನಂಬರ್ ಟ್ರೇಸ್ ಮಾಡಿ, ವಾಹನ ಯಾರ ಹೆಸರಿನಲ್ಲಿರುತ್ತದೆ ಎನ್ನುವುದನ್ನೂ ಪತ್ತೆ ಮಾಡುತ್ತದೆ. ಏಕಕಾಲದಲ್ಲಿ ಅಪರಾಧ ಎಸಗಿದ ಚಿತ್ರ ಮತ್ತು ಆ ವಾಹನ ಯಾರದ್ದು, ಮೊಬೈಲ್ ನಂಬರ್ ಏನು ಇತ್ಯಾದಿ ಮಾಹಿತಿಗಳು ರವಾನೆಯಾಗುತ್ತದೆ. ಒಂದ್ವೇಳೆ, ನಕಲಿ ನಂಬರ್ ಪ್ಲೇಟ್ ಇದ್ದರೆ ಅದನ್ನೂ ಪತ್ತೆ ಮಾಡುತ್ತದೆ. ನಗರದಲ್ಲಿ ಸಂಚರಿಸುವ ವಾಹನಗಳ ಎಲ್ಲ ಮಾಹಿತಿಗಳು ಕ್ಷಣಮಾತ್ರದಲ್ಲಿ ಟೇಬಲ್ ಮೇಲೆ ಬಂದು ಬೀಳುತ್ತದೆ. ಟ್ರಾಫಿಕ್ ಇನ್ ಸ್ಪೆಕ್ಟರ್ ಗಳ ಮೊಬೈಲ್ ಗಳಿಗೇ ಇದನ್ನೂ ಜೋಡಿಸಿಕೊಳ್ಳಬಹುದು. ಇಂಥ ಟೆಕ್ನಾಲಜಿ ಮಂಗಳೂರಿಗೂ ಬರಬೇಕು ಎನ್ನುವ ಬಗ್ಗೆ ಡಿಸಿಪಿ ಹರಿರಾಮ್ ಶಂಕರ್ ಹೇಳುತ್ತಾರೆ.
ಸ್ಮಾರ್ಟ್ ಸಿಟಿಯಡಿ ನೂರಾರು ಕೋಟಿ ರೂಪಾಯಿ ಸುರಿಯಲಾಗುತ್ತದೆ, ಇದ್ದ ರಸ್ತೆಯನ್ನೇ ಅಗೆದು ಕಾಂಕ್ರೀಟ್ ಹೆಸರಿನಲ್ಲಿ ಹಣ ಹೂಡಿಕೆ ಮಾಡಲಾಗುತ್ತದೆ. ಸ್ಪಷ್ಟ ಯೋಜನೆ, ಮುಂದಾಲೋಚನೆ ಇಲ್ಲದ ಕಾಮಗಾರಿಗಳನ್ನು ಮಾಡಲಾಗುತ್ತದೆ. ಪೊಲೀಸ್ ಇಲಾಖೆಗೆ ನೆರವಾಗಬಲ್ಲ ಹೈಟೆಕ್ ತಂತ್ರಜ್ಞಾನ ಅಳವಡಿಸಿಕೊಂಡರೆ ದೂರಗಾಮಿ ಪರಿಣಾಮ ಬೀರುವುದಲ್ಲದೆ, ನಗರದಲ್ಲಿ ಕ್ರೈಮ್ ಪತ್ತೆಗೆ ಸುಲಭದಲ್ಲಿ ಸಾಧ್ಯವಾಗುತ್ತದೆ. ಸ್ಮಾರ್ಟ್ ಸಿಟಿಯಡಿ ಮಂಗಳೂರು ನಗರಕ್ಕೆ ಈ ರೀತಿಯ ತಂತ್ರಜ್ಞಾನ ಅಳವಡಿಸಿಕೊಳ್ಳಬೇಕು ಎನ್ನುವ ನೆಲೆಯಲ್ಲಿ ಡಿಸಿಪಿ ಮುಂದಡಿ ಇಟ್ಟಿದ್ದು ಅದಕ್ಕಾಗಿ ಬೆಂಗಳೂರಿನ ಕಂಪನಿಯೊಂದರ ಪ್ರತಿನಿಧಿಗಳನ್ನು ಕರೆದು ಮಂಗಳೂರಿನಲ್ಲಿ ಪ್ರಾತ್ಯಕ್ಷಿಕೆ ನಡೆಸಿದ್ದಾರೆ. ಈಗಾಗ್ಲೇ ಇರುವ ವಾಹನ್ ಏಪ್ ಅನ್ನು ಆ ಕ್ಯಾಮರಾಗಳಿಗೆ ಜೋಡಿಸಿಕೊಳ್ಳುವುದು ಹೇಗೆ ಮತ್ತು ಅದರ ಕಾರ್ಯ ನಿರ್ವಹಣೆ ಹೇಗಿರುತ್ತದೆ ಎನ್ನುವುದರ ಬಗ್ಗೆ ಮಾಹಿತಿ ಪಡೆದಿದ್ದಾರೆ.
In order to detect traffic violations, the Mangalore Traffic city police are going to implement Speed Cameras. The camera will help in Motoring offences, Speeding etc.
05-10-25 09:41 pm
HK News Desk
ನಾಯಿ ದಾಳಿಗೆ ಸ್ಥಳೀಯರ ಆಕ್ರೋಶ ; ಬೀದಿ ನಾಯಿಗಳ ಮೇಲೆ...
05-10-25 08:08 pm
ಲಿಂಗಾಯತರನ್ನು ಪ್ರತ್ಯೇಕಿಸುವುದು ಸಮಾಜ ವಿರೋಧಿ ಕೆಲಸ...
05-10-25 07:57 pm
ಬಿಹಾರ ಚುನಾವಣೆ ಬಳಿಕ ರಾಜ್ಯದಲ್ಲಿ ರಾಜಕೀಯ ಕ್ರಾಂತಿ...
05-10-25 07:38 pm
ಜಾತಿ ಗಣತಿ ತೆರಳಿದ್ದ ಶಿಕ್ಷಕಿ ಮತ್ತು ಪತಿಗೆ ಅಟ್ಟಾಡ...
05-10-25 07:18 pm
05-10-25 11:07 pm
HK News Desk
ಡೆಡ್ಲಿ ಸಿರಪ್ 'ಕೋಲ್ಡ್ರಿಫ್ 'ಶಿಫಾರಸು ಮಾಡಿದ್ದ...
05-10-25 10:38 pm
Coldrif syrup: ಸಿರಪ್ ಸೇವಿಸಿ 11 ಮಕ್ಕಳು ಸಾವು ;...
04-10-25 04:45 pm
Rashmika Mandanna, Vijay Deverakonda Marriage...
04-10-25 03:11 pm
ಕಾಂತಾರ ಬ್ಲಾಕ್ ಬಸ್ಟರ್, ನಾವೆಲ್ಲ ಚಿತ್ರೋದ್ಯಮಿಗಳು...
04-10-25 01:11 pm
06-10-25 02:58 pm
Mangalore Correspondent
Ullal, UT Khader, Sharadotsava Clash: ಉಳ್ಳಾಲ...
04-10-25 10:29 pm
103ನೇ ವರ್ಷದ ರಥಬೀದಿ 'ಮಂಗಳೂರು ಶಾರದಾ ಮಹೋತ್ಸವ' ಸಂ...
03-10-25 11:07 pm
Puttur Krishna Rao, Baby, Pratibha Kulai: ಕೃಷ...
03-10-25 05:59 pm
Ullal Dasara Issue, Mangalore 2025: ದಸರಾ ಶೋಭಾ...
03-10-25 02:11 pm
05-10-25 03:22 pm
Mangalore Correspondent
Shivamogga Murder, Mother: ಶಿವಮೊಗ್ಗ ; ಮಗಳನ್ನು...
04-10-25 02:57 pm
Karkala Murder, Crime: ಕಾರ್ಕಳ ; ಪ್ರೀತಿಸಿದ ಯುವ...
03-10-25 11:28 pm
ಸುಧಾಮೂರ್ತಿ, ನಿರ್ಮಲಾ ಸೀತಾರಾಮನ್ ಹೆಸರಲ್ಲಿ ಎಐ ವಿಡ...
01-10-25 02:39 pm
Ullal Gold Robbery, Mangalore, CCB police: ಜು...
29-09-25 01:24 pm