ಬ್ರೇಕಿಂಗ್ ನ್ಯೂಸ್
21-06-21 06:57 pm Mangaluru Correspondent ಕರಾವಳಿ
ಮಂಗಳೂರು, ಜೂನ್ 21: ಕೊರೊನಾ ಲಾಕ್ಡೌನ್ ಮುಗಿಯುತ್ತಿದ್ದಂತೆ, ವಿದೇಶಕ್ಕೆ ಹೋಗುವ ಮಂದಿ ತಯಾರಾಗುತ್ತಿದ್ದಾರೆ. ಗಲ್ಫ್ ರಾಷ್ಟ್ರಗಳು ಲಸಿಕೆ ಪಡೆದವರಿಗೆ ಮಾತ್ರ ಪ್ರವೇಶ ಎಂದು ನಿರ್ಬಂಧವನ್ನೂ ಹೇರಿವೆ. ಹೀಗಾಗಿ ಲಸಿಕೆ ಕೊರತೆ ನಡುವೆಯೂ ಹಣ ಕೊಟ್ಟಾದರೂ ಎರಡು ವ್ಯಾಕ್ಸಿನ್ ಹಾಕಿಸಬೇಕೆಂದು ಎನ್ನಾರೈಗಳು ಧಾವಂತದಲ್ಲಿದ್ದಾರೆ. ಆದರೆ, ಈ ನಡುವೆ ಭಾರತದಲ್ಲಿ ನೀಡಲಾಗುತ್ತಿರುವ ಕೋವಿಶೀಲ್ಡ್ ವ್ಯಾಕ್ಸಿನ್ ಸರ್ಟಿಫಿಕೇಟ್ ಬಗ್ಗೆಯೇ ಕೆಲವು ಎನ್ನಾರೈಗಳು ಅಪಸ್ವರ ಎತ್ತಿದ್ದಾರೆ.
ಕೋವಿಶೀಲ್ಡ್ ಲಸಿಕೆ ಗಲ್ಫ್ ರಾಷ್ಟ್ರಗಳ ಲಸಿಕೆ ಪಟ್ಟಿಯಲ್ಲಿ ನಮೂದು ಆಗಿಲ್ಲ. ಬದಲಿಗೆ ಆಕ್ಸ್ ಫರ್ಡ್ ಆಸ್ಟ್ರಾ ಜೆನೆಕಾ ಲಸಿಕೆಯೆಂದು ನಮೂದಿಸಲಾಗಿದೆ. ಭಾರತದ ಕೋವಿಶೀಲ್ಡ್ ಲಸಿಕೆಯು ಆಸ್ಟ್ರಾ ಜೆನೆಕಾ ಲಸಿಕೆಯದ್ದೇ ದೇಸೀ ಅವತರಣಿಕೆಯಾಗಿದ್ದು, ಭಾರತದಲ್ಲಿ ಸೀರಂ ಇನ್ ಸ್ಟಿಟ್ಯೂಟ್ ನವರು ಉತ್ಪಾದಿಸುತ್ತಿದ್ದಾರೆ. ಆದರೆ, ಲಸಿಕೆ ಪಡೆದವರಿಗೆ ನೀಡಲಾಗುತ್ತಿರುವ ಸರ್ಟಿಫಿಕೇಟಿನಲ್ಲಿ ಕೋವಿಶೀಲ್ಡ್ ಎಂದು ಮಾತ್ರ ನಮೂದಿಸುತ್ತಿರುವುದು ಎನ್ನಾರೈಗಳ ಚಿಂತೆಗೆ ಕಾರಣವಾಗಿದೆ. ಇದಕ್ಕಾಗಿ ಕೋವಿಶೀಲ್ಡ್ ಲಸಿಕೆಯ ಸರ್ಟಿಫಿಕೇಟ್ ನಲ್ಲಿ ಆಕ್ಸ್ ಫರ್ಡ್ ಆಸ್ಟ್ರಾಜೆನೆಕಾ ಎಂದು ಹೆಚ್ಚುವರಿಯಾಗಿ ನಮೂದಿಸುವಂತೆ ಕೆಲವು ಎನ್ನಾರೈಗಳು ಒತ್ತಾಯ ಮಾಡುತ್ತಿದ್ದಾರೆ.
ಆತಂಕದಲ್ಲಿ ಸಾವಿರಾರು ಎನ್ನಾರೈಗಳು ?
ಲಾಕ್ಡೌನ್ ಸಂದರ್ಭದಲ್ಲಿ ತಾಯ್ನಾಡಿಗೆ ಬಂದಿರುವ ಸಾವಿರಾರು ಮಂದಿ ಕರಾವಳಿಯಲ್ಲಿದ್ದಾರೆ. ಗಲ್ಫ್ ರಾಷ್ಟ್ರಗಳು, ಯುಕೆ, ಜರ್ಮನಿ, ಆಸ್ಟ್ರೇಲಿಯಾ, ಅಮೆರಿಕ ಹೀಗೆ ಜಗತ್ತಿನಾದ್ಯಂತ ಕರಾವಳಿ ಮಂದಿಯಿದ್ದು, ಭಾರತದ ಕರಾವಳಿಗೂ ಗಲ್ಫ್ ರಾಷ್ಟ್ರಗಳಿಗೂ ತೀರಾ ಹತ್ತಿರದ ಸಂಬಂಧ. ಆದರೆ, ಗಲ್ಫ್ ರಾಷ್ಟ್ರಗಳು ಸೇರಿದಂತೆ ಬಹುತೇಕ ದೇಶಗಳು ಫೈಜರ್, ಸ್ಪುಟ್ನಿಕ್, ಆಸ್ಟ್ರಾ ಜೆನೆಕಾ, ಮಾಡೆರ್ನಾ, ಜಾನ್ಸನ್ ಅಂಡ್ ಜಾನ್ಸನ್ ಮತ್ತು ಸಿನೋಫಾರ್ಮ್ ಲಸಿಕೆಯನ್ನು ಪಡೆದಿದ್ದರೆ ಮಾತ್ರ ತಮ್ಮ ದೇಶಕ್ಕೆ ಪ್ರವೇಶ ಎನ್ನುತ್ತಿವೆ. ಈ ಲಸಿಕೆ ಹೊರತುಪಡಿಸಿ ಇನ್ನಾವುದೇ ಲಸಿಕೆಯನ್ನು ಪಡೆದವರಿಗೆ ಎಂಟ್ರಿ ಇಲ್ಲ ಎಂದು ಕೆಲವು ದೇಶಗಳು ಹೇಳಿಕೊಂಡಿದ್ದು, ಎನ್ನಾರೈಗಳ ಆತಂಕಕ್ಕೆ ಕಾರಣವಾಗಿದೆ.
ಸಮಸ್ಯೆಗೆ ತುರ್ತು ಸ್ಪಂದಿಸಿದ ಕೇರಳ
ಕೋವಿಶೀಲ್ಡ್ ಸರ್ಟಿಫಿಕೇಟ್ ಬಗ್ಗೆ ಎನ್ನಾರೈಗಳಿಂದ ಆಕ್ಷೇಪ ಬರುತ್ತಿದ್ದಂತೆ ಕೇರಳ ಸರಕಾರ ಎಚ್ಚತ್ತುಕೊಂಡಿದ್ದು, ಕೇಂದ್ರ ಸರಕಾರದ ಅನುಮತಿ ಪಡೆದು ಜೂನ್ 1ರಿಂದಲೇ ಅದಕ್ಕಾಗಿ ಹೊಸ ಪೋರ್ಟಲ್ ಆರಂಭಿಸಿದೆ. ಅಲ್ಲದೆ, ಕೋವಿಶೀಲ್ಡ್ ಸರ್ಟಿಫಿಕೇಟಿನಲ್ಲಿ ಆಕ್ಸ್ ಫರ್ಡ್ ಆಸ್ಟ್ರಾಜೆನೆಕಾ ಎನ್ನುವ ಹೆಸರನ್ನು ನಮೂದಿಸಿದ್ದು, ತುರ್ತಾಗಿ ಎನ್ನಾರೈಗಳ ಕೂಗಿಗೆ ಸ್ಪಂದಿಸಿದೆ. ಆದರೆ, ಕರ್ನಾಟಕದಲ್ಲಿ ಆ ರೀತಿಯ ಯಾವುದೇ ಬೆಳವಣಿಗೆ ನಡೆದಿಲ್ಲ. ಈ ಭಾಗದ ಶಾಸಕರು, ಸಂಸದರಿಗೆ ಮಾಹಿತಿ ಕೇಳಿದರೆ ನೋ ರೆಸ್ಪಾನ್ಸ್ ಬರುತ್ತಿದೆ ಎಂದು ದುಬೈನಲ್ಲಿ ನೆಲೆಸಿರುವ, ಸದ್ಯ ಮಂಗಳೂರಿನಲ್ಲಿರುವ ವ್ಯಕ್ತಿಯೊಬ್ಬರು ಆತಂಕ ವ್ಯಕ್ತಪಡಿಸಿದ್ದಾರೆ. ಅವರು ಮಂಗಳೂರಿನಲ್ಲಿ ಮೊದಲ ಲಸಿಕೆ ಪಡೆದಿದ್ದು, ಎರಡನೇ ಲಸಿಕೆಯನ್ನು ಕೇರಳದಲ್ಲಿ ಪಡೆಯಲು ಅಲ್ಲಿನ ಏಪ್ ಮೂಲಕ ನೋಂದಣಿ ಮಾಡಿದ್ದಾರಂತೆ.
ಕೇರಳದಲ್ಲಿ ಇ-ಹೆಲ್ತ್ ಹೆಸರಲ್ಲಿ ಅದಕ್ಕಾಗಿ ಹೊಸತಾಗಿ ಏಪ್ ಮಾಡಿದ್ದು, ಅಲ್ಲದೆ ವೆಬ್ ಸೈಟ್ ಓಪನ್ (covi19.kerala.gov.in/vaccine) ಮಾಡಿದೆ. ಅದರಲ್ಲಿ ಯಾರು ಬೇಕಾದ್ರೂ ಓಪನ್ ಮಾಡಿ ತಮ್ಮ ಹೆಸರನ್ನು, ಪಾಸ್ ಪೋರ್ಟ್ ನಂಬರ್ ನೀಡಿ ನೋಂದಣಿ ಮಾಡಿಕೊಳ್ಳಬಹುದು. ಅಲ್ಲದೆ, ವಿದೇಶಕ್ಕೆ ಹೋಗುವ ಮಂದಿಗೆ ತುರ್ತಾಗಿ ಸ್ಪಂದಿಸಿ ಲಸಿಕೆ ಹಾಕಿಸುವ ಕೆಲಸವೂ ಕೇರಳದಲ್ಲಿ ನಡೆಯುತ್ತಿದೆ ಎಂದು ಮಂಗಳೂರಿನ ವ್ಯಕ್ತಿ ಹೇಳಿದ್ದಾರೆ.
ಕರ್ನಾಟಕದಲ್ಲಿ ಎನ್ನಾರೈ ಫಾರಂ ಪ್ರತಿನಿಧಿಯಿಲ್ಲ
ಕರ್ನಾಟಕದಲ್ಲಿ ಎನ್ನಾರೈ ಫಾರಂ ಅನ್ನುವ ಘಟಕ ಇದ್ದರೂ, ಅದಕ್ಕೆ ಸರಕಾರದ ಕಡೆಯಿಂದ ಪ್ರತಿನಿಧಿಯನ್ನೇ ನೇಮಕ ಮಾಡದಿರುವುದು ಸಮಸ್ಯೆಗೆ ಕಾರಣವಾಗಿದೆ. ಎನ್ನಾರೈ ಘಟಕದ ಉಪಾಧ್ಯಕ್ಷ ಸರಕಾರದ ಪ್ರತಿನಿಧಿಯಾಗಿದ್ದರೆ, ಈ ರೀತಿಯ ಸಮಸ್ಯೆ ಎದುರಾದ ವೇಳೆ ಸ್ಪಂದಿಸುತ್ತಾರೆ. ಸಮಸ್ಯೆಗೆ ಒಳಗಾದ ಎನ್ನಾರೈಗಳು ಕೂಡ ಫಾರಂ ಪ್ರತಿನಿಧಿಗೆ ಮನವರಿಕೆ ಮಾಡಿ, ಸಮಸ್ಯೆ ಬಗೆಹರಿಸಿಕೊಳ್ಳುತ್ತಾರೆ. ಆದರೆ, ಕರ್ನಾಟಕ ಸರಕಾರದ ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದಾಗಿ ಎನ್ನಾರೈ ಘಟಕಕ್ಕೆ ಪ್ರತಿನಿಧಿಯನ್ನೇ ನೇಮಕ ಮಾಡಲಾಗಿಲ್ಲ ಎಂದು ದುಬೈ ಉದ್ಯಮಿ ಮೋಹನದಾಸ್ ಕಾಮತ್ ಹೇಳಿದ್ದಾರೆ.
ಯಾರಿಗಾದ್ರೂ ಸಮಸ್ಯೆ ಆಗಿದೆಯೇ, ಗೊಂದಲ ಯಾಕೆ ?
ಈ ಬಗ್ಗೆ ಮಂಗಳೂರಿನಲ್ಲಿ ಎನ್ನಾರೈಗಳಿಗೆ ಲಸಿಕೆ ಹಾಕಿಸುವ ಜವಾಬ್ದಾರಿ ವಹಿಸ್ಕೊಂಡು ಸಕ್ರಿಯರಾಗಿರುವ ಯತೀಶ್ ಬೈಕಂಪಾಡಿ ಅವರಲ್ಲಿ ಕೇಳಿದರೆ, ಆ ರೀತಿಯ ಸಮಸ್ಯೆ ಯಾರಿಗಾದ್ರೂ ಆಗಿದೆಯೇ ಎಂದು ಮರು ಪ್ರಶ್ನೆ ಹಾಕುತ್ತಾರೆ. ಇಡೀ ದೇಶದಲ್ಲಿ ಕೋವಿಶೀಲ್ಡ್ ಎಂದೇ ಸರ್ಟಿಫಿಕೇಟ್ ನೀಡಲಾಗುತ್ತದೆ. ಕೋವಿಶೀಲ್ಡ್ ಎಂದರೆ ಆಸ್ಟ್ರಾ ಝೆನೆಕಾ ಎನ್ನುವುದು ಅಲ್ಲಿನ ರಾಷ್ಟ್ರಗಳಿಗೂ ಗೊತ್ತಿದು ಅದನ್ನು ಅಂಗೀಕಾರ ಮಾಡಿದ್ದಾರೆ. ಹೀಗಿದ್ದರೂ, ಇದರಿಂದ ತೊಂದರೆಯಾಗುತ್ತದೆ ಎಂದು ಜನರನ್ನು ಗೊಂದಲಕ್ಕೆ ಸಿಲುಕಿಸುವುದು ಸರಿಯಲ್ಲ.
ಬಹ್ರೇನ್ ದೇಶಕ್ಕೆ ಈಗಾಗ್ಲೇ ಕೆಲವರು ತೆರಳಿದ್ದಾರೆ. ಯಾರು ಕೂಡ ಆ ರೀತಿಯ ಸಮಸ್ಯೆ ಆಗಿದ್ದನ್ನು ನಮ್ಮ ಗಮನಕ್ಕೆ ತಂದಿಲ್ಲ. ದುಬೈ, ಕುವೈತ್ ಗಳಿಗೂ ಈ ತಿಂಗಳ ಕೊನೆಯಲ್ಲಿ ತೆರಳಲು ಹಲವರು ರೆಡಿಯಾಗಿದ್ದಾರೆ. ಕೆಲವರು ತಮ್ಮ ಪಾಸ್ ಪೋರ್ಟ್ ನಂಬರ್ ನಮೂದಿಸದೆ ತೊಂದರೆ ಮಾಡಿಕೊಂಡಿದ್ದಾರೆ. ಭಾರತ ಸರಕಾರ ಪಾಸ್ ಪೋರ್ಟ್ ನಂಬರ್ ನಮೂದಿಸಲು ಅವಕಾಶ ಕೊಟ್ಟಿದೆ. ಭಾರತದ ಲಕ್ಷಾಂತರ ಮಂದಿ ವಿದೇಶದಲ್ಲಿದ್ದಾರೆ. ಇಡೀ ದೇಶಾದ್ಯಂತ ಒಂದೇ ರೀತಿ ಇರುವಾಗ ಕೇರಳ ಸರಕಾರ ಮಾತ್ರ ಎನ್ನಾರೈಗಳಿಗೆ ಆಸ್ಟ್ರಾಜೆನೆಕಾ ಎಂದು ಹೆಚ್ಚುವರಿಯಾಗಿ ನಮೂದಿಸಿ ಕೊಟ್ಟು ಅದರಿಂದ ತೊಂದರೆಯಾದರೆ ಯಾರು ಹೊಣೆ ಎಂದು ಯತೀಶ್ ಬೈಕಂಪಾಡಿ ಪ್ರಶ್ನಿಸಿದ್ದಾರೆ.
ಕೋವಿಶೀಲ್ಡ್ ಲಸಿಕೆಗೆ WHO ಮಾನ್ಯತೆ
ಭಾರತದ ಕೋವಿಶೀಲ್ಡ್ ಲಸಿಕೆಗೆ ಡಬ್ಲ್ಯುಎಚ್ಓ ಮಾನ್ಯತೆ ನೀಡಿದ್ದು, ಅಧಿಕೃತವಾಗಿ ಲಸಿಕೆ ಹಾಕಿಸಿಕೊಳ್ಳಬಹುದು ಎನ್ನುವ ಷರಾವನ್ನು ನೀಡಿದೆ. ಹಾಗಿದ್ದರೂ, ಕೆಲವು ರಾಷ್ಟ್ರಗಳು ಜಗತ್ತಿನಲ್ಲಿ ಹೆಚ್ಚು ಪ್ರಚಲಿತ ಇರುವ ಆಕ್ಸ್ ಫರ್ಡ್ ಆಸ್ಟ್ರಾ ಜೆನೆಕಾ ಅಂತಲೇ ಲಸಿಕೆಯ ಹೆಸರನ್ನು ಹೇಳಿಕೊಂಡಿವೆ. ಆಸ್ಟ್ರಾ ಜೆನೆಕಾ ಮತ್ತು ಕೋವಿಶೀಲ್ಡ್ ಒಂದೇ ಆಗಿದ್ದು, ಭಾರತದಲ್ಲಿ ಕೋವಿಶೀಲ್ಡ್ ಹೆಸರಲ್ಲಿ ಇದನ್ನು ನೀಡಲಾಗುತ್ತಿದೆ.
NRIs in Mangalore suffer as countries restrict entry without two doses of vaccine. Many are on the verge of losing their jobs in Karnataka. The Kerela Government has announced that it shall provide COVID-19 vaccination certificates of those travelling from Kerala to countries outside India with batch number and date of vaccination.
26-11-24 10:46 pm
Bangalore Correspondent
Shivamogga, Monkey fever, Dinesh Gundu Rao: ಮ...
26-11-24 10:23 pm
BJP, Vijayendra: ಉಪ ಚುನಾವಣೆ ಸೋಲು ; ಪಕ್ಷದ ಕಾರ್...
26-11-24 06:56 pm
MLA Gaviyappa, Congress: ಗ್ಯಾರಂಟಿ ಸ್ಕೀಂನಿಂದಾಗ...
26-11-24 06:11 pm
Davanagere News, Heart Attack: ಗಂಡ ಹೃದಯಾಘಾತಕ್...
26-11-24 11:52 am
27-11-24 02:00 pm
HK News Desk
ರಸ್ತೆ ಬದಿ ಮಲಗಿದ್ದ ಅಲೆಮಾರಿ ಗುಂಪಿನ ಮೇಲಿಂದ ಹರಿದ...
27-11-24 12:36 pm
ಕ್ಯುಆರ್ ಕೋಡ್ ಸಹಿತ ಹೊಸ ನಮೂನೆಯ ಪ್ಯಾನ್ 2.0 ಜಾರಿ...
26-11-24 09:43 pm
BJP Devendra Fadnavis, Eknath Shinde: ಮಹಾರಾಷ್...
26-11-24 07:32 pm
ಪ್ರವಾಸೋದ್ಯಮ ಇಲಾಖೆಗೆ ನಿಗದಿಪಡಿಸಿದ್ದ ದರ್ಶನ ಟಿಕೆಟ...
23-11-24 11:07 pm
28-11-24 03:24 pm
Mangalore Correspondent
Belthangady suicide, Crime, Mangalore; ನಂಬಿಸಿ...
28-11-24 02:13 pm
Mangalore, Anupam Agarwal, Ramanatha Rai: ರಸ್...
28-11-24 01:56 pm
ಸ್ಪೀಕರ್ ಆಗಿ ಹತ್ತು ದೇಶ ಸುತ್ತಿದ ಯುಟಿ ಖಾದರ್ ; ಜ...
28-11-24 01:25 pm
Mangalore Cyber Fraud, Crime: ಜಾಲತಾಣದಲ್ಲಿ ಲೈಕ...
27-11-24 11:04 pm
27-11-24 03:36 pm
HK News Desk
Mangalore, Robbery, Crime : ಕೊಲ್ಯದ ಜಾಯ್ ಲ್ಯಾಂ...
27-11-24 01:11 pm
Mangalore crime, ACP Dhanya Nayak, Drugs: ಎಸಿ...
26-11-24 03:10 pm
ಹುಬ್ಬಳ್ಳಿ ದರೋಡೆ ಪ್ರಕರಣದಲ್ಲಿ ಮಂಗಳೂರು ನಂಟು ; ಉಳ...
25-11-24 06:17 pm
Honeytrap Bangalore, Crime, Udupi: ಪ್ರೊಫೆಸರ್...
24-11-24 04:33 pm