ಬ್ರೇಕಿಂಗ್ ನ್ಯೂಸ್
01-08-21 04:37 pm Mangaluru Correspondent ಕರಾವಳಿ
ಮಂಗಳೂರು, ಆಗಸ್ಟ್ 1: ಕಳೆದ ಬಾರಿ ಮಾಸ್ಕ್ ವಿಚಾರದಲ್ಲಿ ಸೂಪರ್ ಮಾರ್ಕೆಟ್ ನಲ್ಲಿ ವಾಗ್ವಾದ ಮಾಡಿದ ಘಟನೆಯ ಬಗ್ಗೆ ಖಂಡನೆ ವ್ಯಕ್ತಪಡಿಸಿದ ಮಂಗಳೂರಿನ ಐಎಂಎ ವೈದ್ಯರ ಸಂಘದ ವಿರುದ್ಧ ವೈದ್ಯ ಡಾ.ಶ್ರೀನಿವಾಸ ಕಕ್ಕಿಲ್ಲಾಯ ಮುಯ್ಯಿ ತೀರಿಸಿಕೊಂಡಿದ್ದಾರೆ. ಇಂಡಿಯನ್ ಮೆಡಿಕಲ್ ಅಸೋಸಿಯೇಶನ್ (ಐಎಂಎ) ನಗರದಲ್ಲಿ ಆಯೋಜಿಸಿದ್ದ ಡಾಕ್ಟರ್ಸ್ ಡೇ ಕಾರ್ಯಕ್ರಮದಲ್ಲಿ ಕೋವಿಡ್ ನಿಯಮ ಉಲ್ಲಂಘಿಸಲಾಗಿದೆ ಎಂದು ಡಾ.ಶ್ರೀನಿವಾಸ ಕಕ್ಕಿಲ್ಲಾಯ ಪೊಲೀಸರಿಗೆ ದೂರು ನೀಡಿದ್ದಾರೆ.
ಜುಲೈ 19 ರಂದು ಮಂಗಳೂರಿನ ಐಎಂಎ ಭವನದಲ್ಲಿ ಡಾಕ್ಟರ್ಸ್ ಡೇ ಆಯೋಜಿಸಲಾಗಿತ್ತು. ರಾಜ್ಯ ಐಎಂಎ ಅಧ್ಯಕ್ಷ ಡಾ.ಎಂ. ವೆಂಕಟಾಚಲಪತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ ವೈದ್ಯರು ಮಾಸ್ಕ್ ಧರಿಸದೆ, ಸಾಮಾಜಿಕ ಅಂತರ ಕಾಪಾಡದೆ ಕೊರೊನಾ ನಿಯಮ ಉಲ್ಲಂಘನೆ ಮಾಡಿದ್ದಾರೆ ಎಂದು ಡಾ.ಕಕ್ಕಿಲ್ಲಾಯ ಪಾಂಡೇಶ್ವರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಕಳೆದ ಬಾರಿ ಲಾಕ್ಡೌನ್ ಇದ್ದಾಗ ಕದ್ರಿ ಸೂಪರ್ ಮಾರ್ಕೆಟ್ ನಲ್ಲಿ ಡಾ. ಶ್ರೀನಿವಾಸ ಕಕ್ಕಿಲ್ಲಾಯರು ಮಾಸ್ಕ್ ಹಾಕದೆ ವಾಗ್ವಾದ ಮಾಡಿದ್ದು ಬಳಿಕ ಸಿಸಿಟಿವಿ ವಿಡಿಯೋ ವೈರಲ್ ಆಗಿ ಪೊಲೀಸ್ ದೂರು ದಾಖಲಾಗಿತ್ತು. ವೈದ್ಯರ ನಡೆಯ ಬಗ್ಗೆ ಕೆಲವರು ಆಕ್ರೋಶ ವ್ಯಕ್ತಪಡಿಸಿದ್ದರು. ಬಳಿಕ ಮಂಗಳೂರಿನ ಐಎಂಎ ಘಟಕದ ಪದಾಧಿಕಾರಿಗಳು, ಡಾ.ಕಕ್ಕಿಲ್ಲಾಯರ ನಡೆಯನ್ನು ವಿರೋಧಿಸಿ ಖಂಡನೆ ವ್ಯಕ್ತಪಡಿಸಿದ್ದರು. ಸಹೋದ್ಯೋಗಿ ವೈದ್ಯರೇ ಆಗಿದ್ದರೂ ಕೆಲವರ ಪಿತೂರಿಗೆ ಒಳಗಾಗಿ ಐಎಂಎ ಪದಾಧಿಕಾರಿಗಳು ಸುದ್ದಿಗೋಷ್ಟಿ ಕರೆದು ಡಾ.ಕಕ್ಕಿಲ್ಲಾಯರ ವರ್ತನೆಯನ್ನು ಖಂಡಿಸಿದ್ದು ಸಂಘದ ಒಳಗೇ ಒಡಕು ಮೂಡಿಸಿತ್ತು. ಕೊರೊನಾ ವೈರಸ್ ಮತ್ತು ಅದರ ಹರಡುವಿಕೆ ಬಗ್ಗೆ ಅಧ್ಯಯನ ನಡೆಸಿ ಪುಸ್ತಕ ಬರೆದಿರುವ ಡಾ.ಕಕ್ಕಿಲ್ಲಾಯರ ಬಗ್ಗೆ ವೈದ್ಯರ ವಲಯದಲ್ಲಿ ಸಾಕಷ್ಟು ಮಂದಿಗೆ ಉತ್ತಮ ಅಭಿಪ್ರಾಯಗಳಿವೆ. ವೈದ್ಯಕೀಯ ವಲಯದಲ್ಲಿ ಯಾವುದೇ ಹೊಸ ಸಮಸ್ಯೆ ಎದುರಾದರೂ, ಕಕ್ಕಿಲ್ಲಾಯರು ಮುಂದೆ ಬಂದು ಅದನ್ನು ಎದುರಿಸುವ ಬಗೆ ಬಗ್ಗೆ ಸಲಹೆಗಳನ್ನು ನೀಡುತ್ತಿದ್ದರು.
ಆದರೆ, ಕೋವಿಡ್ ಲಾಕ್ಡೌನ್ ಇದ್ದಾಗ ಮಾಸ್ಕ್ ಅಗತ್ಯವಿಲ್ಲ ಎಂದು ಸಾರ್ವಜನಿಕರ ಮಧ್ಯೆ ವಾದಿಸಿದ್ದು ಇರಿಸು ಮುರಿಸಿನ ಪ್ರಸಂಗವೇ ಆಗಿದ್ದರೂ ಅದನ್ನೇ ನೆಪವಾಗಿಟ್ಟು ಡಾ.ಕಕ್ಕಿಲ್ಲಾಯರ ನಡೆಯನ್ನು ಖಂಡಿಸಿದ್ದು ಐಎಂಎ ಘಟಕದ ಒಳಗೇ ಪರ - ವಿರೋಧಕ್ಕೆ ಕಾರಣವಾಗಿತ್ತು. ಇದೀಗ ಕಕ್ಕಿಲ್ಲಾಯರು ಐಎಂಎ ವೈದ್ಯರ ಕಾರ್ಯಕ್ರಮದಲ್ಲಿ ಕೋವಿಡ್ ನಿಯಮ ಉಲ್ಲಂಘಿಸಿದ್ದನ್ನೇ ನೆಪವಾಗಿಸಿ ಪೊಲೀಸ್ ದೂರು ನೀಡಿ ಮುಯ್ಯಿ ತೀರಿಸಿದ್ದಾರೆ.
Curious case of Karnataka Medical Council Can a petition be filed in one bench of the high court hiding the order...
Posted by Srinivas Kakkilaya on Tuesday, 27 July 2021
Mangalore Dr Kukkillaya files a complaint against IMA for breaking covid rules in Mangalore. Recently A case had been registered against Dr B Srinivas Kakkilaya under Epidemic Act at East (Kadri) police station, after he refused to wear a mask, while he went shopping at a supermarket in the city. Based on a complaint filed by a partner of Jimmy's Super Mart Kadri, Ryan Rosario, the police have booked a case.
27-08-25 06:21 pm
Bangalore Correspondent
Congress, MP Yaduveer, DK Shivakumar: ಕಾಂಗ್ರೆ...
27-08-25 06:17 pm
ದಸರಾ ಉದ್ಘಾಟಕರ ಆಯ್ಕೆ ವಿವಾದ ; ನೀವು ನಂಬಿರುವ ನಿಮ್...
27-08-25 03:17 pm
Kannada Anchor Anushree, Marriage, Mangalore:...
27-08-25 02:51 pm
ಚಾಮುಂಡಿ ಬೆಟ್ಟ ಪಕ್ಕಾ ಹಿಂದೂಗಳ ಸ್ವತ್ತು, ಮುಸ್ಲಿಮರ...
27-08-25 12:33 pm
26-08-25 09:02 pm
HK News Desk
ಜಮ್ಮು ಭಾರಿ ಮಳೆಗೆ ಒಂಬತ್ತು ಮಂದಿ ಬಲಿ ; ಹಲವೆಡೆ ಭೂ...
26-08-25 07:39 pm
Trump Immigrant Population: ಟ್ರಂಪ್ ಸಾಮ್ರಾಜ್ಯದ...
24-08-25 01:47 pm
Actor Vijay, Thalapathy; ಟಿವಿಕೆ ಮುಖ್ಯಸ್ಥ, ನಟ...
23-08-25 04:58 pm
Mp Brijesh Chowta, Mangalore: ಆನ್ಲೈನ್ ಗೇಮಿಂಗ್...
22-08-25 10:00 pm
27-08-25 08:46 pm
Mangalore Correspondent
Pastor John Shamine, BJP, Fake Human Rights:...
26-08-25 10:57 pm
Vasanth Giliyar Hate speech, Case: ಬೆಳ್ತಂಗಡಿ...
26-08-25 10:18 pm
Dharmasthala case, Chinmaya, Mahesh Shetty: ದ...
26-08-25 10:36 am
Mangalore, Rushabh Rao: ವಿಯಟ್ನಾಂ ಫ್ಯಾಷನ್ ಶೋ ಸ...
25-08-25 10:59 pm
26-08-25 10:39 pm
HK News Desk
ಟೆಕ್ನಾಲಜಿಯಲ್ಲಿ ಮುಂದಿರುವ ಅಮೆರಿಕದ ಪ್ರಜೆಗಳನ್ನೇ ಯ...
26-08-25 05:24 pm
ದುಬೈನಲ್ಲಿ ಗಂಡ, ಮೈಸೂರಿನಲ್ಲಿ ಪತ್ನಿಯ ಲವ್ವಿ ಡವ್ವಿ...
25-08-25 08:29 pm
ಶಿಕ್ಷಣ ಸಚಿವ ಮಧು ಬಂಗಾರಪ್ಪ ಪಿಎ ಹೆಸರಲ್ಲಿ ವಸೂಲಿ ;...
25-08-25 07:42 pm
How Did Pastor John Shamine and Criminal Mada...
25-08-25 07:31 pm