ಬ್ರೇಕಿಂಗ್ ನ್ಯೂಸ್
04-08-21 08:54 am Mangaluru Correspondent ಕರಾವಳಿ
ಮಂಗಳೂರು, ಆಗಸ್ಟ್ 4: ಉಳ್ಳಾಲದ ಮಾಜಿ ಶಾಸಕ ಬಿ.ಎಂ. ಇದಿನಬ್ಬ ಅವರ ಪುತ್ರನ ಮನೆಗೆ ಇಂದು ನಸುಕಿನಲ್ಲಿ ಎನ್ಐಎ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಬೆಳ್ಳಂಬೆಳಗ್ಗೆ ಬೆಂಗಳೂರಿನಿಂದ ಆಗಮಿಸಿದ ಅಧಿಕಾರಿಗಳು ಮನೆಗೆ ಬಂದು ತನಿಖೆ ಆರಂಭಿಸಿದ್ದಾರೆ.
ಮನೆಯಲ್ಲಿ ಇದಿನಬ್ಬ ಅವರ ಪುತ್ರ ಬಿ.ಎಂ. ಬಾಷಾ ಎಂಬವರು ತಮ್ಮ ಕುಟುಂಬದ ಜೊತೆಗೆ ವಾಸವಿದ್ದಾರೆ. ಸಿರಿಯಾ ಮೂಲದ ಐಸಿಸ್ ಉಗ್ರ ಸಂಘಟನೆಯ ಕುರಿತು ನಂಟು ಇರುವ ಶಂಕೆಯಲ್ಲಿ ದಾಳಿ ನಡೆದಿದೆ ಎನ್ನಲಾಗುತ್ತಿದೆ.







ನಾಲ್ಕು ಕಾರುಗಳಲ್ಲಿ 25 ಮಂದಿಯಿದ್ದ ತಂಡ ಉಳ್ಳಾಲದ ಮಾಸ್ತಿಕಟ್ಟೆಗೆ ಆಗಮಿಸಿದೆ. ಎನ್ಐಎ ಜೊತೆಗೆ ಮಂಗಳೂರಿನ ಸ್ಥಳೀಯ ಪೊಲೀಸರು ಕೂಡ ಭದ್ರತೆ ಒದಗಿಸಿದ್ದಾರೆ. ಹತ್ತು ವರ್ಷಗಳ ಹಿಂದೆ ಇದಿನಬ್ಬ ಅವರ ಮೊಮ್ಮಗಳು ಕೇರಳದಲ್ಲಿ ನಾಪತ್ತೆಯಾಗಿದ್ದು ಐಸಿಸ್ ಸೇರಿದ್ದಾಗಿ ಹೇಳಲಾಗಿತ್ತು.
ಇದಿನಬ್ಬ ಪುತ್ರ ಬಿ.ಎಂ. ಬಾಷಾ ಮಂಗಳೂರಿನಲ್ಲಿ ರಿಯಲ್ ಎಸ್ಟೇಟ್ ವ್ಯವಹಾರ ನಡೆಸುತ್ತಿದ್ದರು. ಇವರ ಪುತ್ರರು ವಿದೇಶದಲ್ಲಿದ್ದಾರೆ. ಇವರ ಕುಟುಂಬದವರು ಐಸಿಸ್ ಸಂಬಂಧಿಸಿದ ಯೂಟ್ಯೂಬ್ ಚಾನೆಲ್ ಗಳನ್ನು ಸಬ್ ಸ್ಕ್ರೈಬ್ ಮಾಡಿ, ಮೃದು ಧೋರಣೆ ಅನುಸರಿಸಿದ್ದರು ಎನ್ನಲಾಗಿದೆ. ಅಲ್ಲದೆ, ಐಸಿಸ್ ಸಂಪರ್ಕ ಮತ್ತು ಜಮ್ಮು ಕಾಶ್ಮೀರದ ಉಗ್ರ ಸಂಘಟನೆಯ ಯುವಕರ ಜೊತೆ ಮೊಬೈಲ್ ಸಂಪರ್ಕ ಇರುವ ಬಗ್ಗೆ ಮಾಹಿತಿ ಹಿನ್ನೆಲೆಯಲ್ಲಿ ದಾಳಿ ನಡೆಸಲಾಗಿದೆ ಎನ್ನಲಾಗಿದೆ. ಎನ್ಐಎ ವಿಭಾಗದ ಡಿಐಜಿ ಶ್ರೇಣಿಯ ಅಧಿಕಾರಿ ಉಮಾ ಎಂಬವರ ನೇತೃತ್ವದಲ್ಲಿ ದಾಳಿ ನಡೆದಿದೆ.
National Investigation Agency (NIA) team raids house of B. M. Idinabba who was the former MLA of Ullal, Mangalore Suspecting ISIS link of family. B. M. Idinabba was a prominent Kannada poet, journalist, freedom fighter, politician and a Kannada activist from Karnataka. He was a member of Congress party and was elected as a MLA for three times in the Karnataka state assembly from Ullal constituency.
08-10-26 08:00 pm
HK News Staffer
B.Y. Vijayendra: ಸ್ಟಿಂಗ್, ಡಿಂಗ್ ಆಪರೇಷನ್ ಮಾ...
08-10-26 04:38 pm
ಜನಸಾಮಾನ್ಯರು ಅಪಘಾತದಲ್ಲಿ ಸತ್ತರೆ 5 ಲಕ್ಷ ಕೊಡಕ್ಕಾಗ...
07-10-26 10:45 pm
HD Kumaraswamy, DK Shivakumar: ಡಿಕೆಶಿ ಸಿಎಂ ಆಗ...
07-10-26 09:16 pm
ಬೆಂಗಳೂರು ನಗರದಲ್ಲಿ ಐದು ಕಮಿಷನರೇಟ್ ; ವಿಭಜನೆಗೆ ಸಚ...
06-10-26 10:46 pm
12-10-26 05:22 pm
HK News Staffer
ಅಕ್ಟೋಬರ್ 7ರ ದಾಳಿ ಸೂತ್ರಧಾರ ಹಮಾಸ್ ಕಮಾಂಡರ್ ಅಬು ಜ...
11-10-26 10:28 pm
ರಷ್ಯನ್ ತೈಲಕ್ಕಾಗಿ ಭಾರತಕ್ಕೆ ಬರೆ ಹಾಕಿದ್ದ ಅಮೆರಿಕ...
11-10-26 03:20 pm
ರಿಯಾದ್ ಏರ್ಪೋರ್ಟ್ ಮೇಲೆ ಹೌತಿಗಳಿಂದ ಬಾಂಬ್ ದಾಳಿ ;...
11-10-26 02:34 pm
Elon Musk , Ambani, Modi: ಭಾರತದ ಆತ್ಮೀಯ ಪ್ರಧಾನ...
10-10-26 10:31 pm
12-10-26 11:30 am
HK News Staffer
Mangalore Dasara 2026: ಮಂಗಳೂರು, ಉಚ್ಚಿಲ ದಸರಾ ಉ...
11-10-26 06:35 pm
Someshwar Beach, Mangalore: ಸೋಮೇಶ್ವರದಲ್ಲಿ ಸಮು...
11-10-26 05:37 pm
Mahesh Shetty Thimarodi, Sowjanya Case: ಸೌಜನ್...
10-10-26 09:27 pm
Sowjanya, Mangalore, Justice: ಬೆಳ್ತಂಗಡಿಯಲ್ಲಿ...
10-10-26 09:17 pm
12-10-26 04:12 pm
HK News Staffer
ದೆವ್ವ ಬಿಡಿಸುವ ನೆಪದಲ್ಲಿ ಮಹಿಳೆ ಮೇಲೆ ನಿರಂತರ ಅತ್ಯ...
12-10-26 03:56 pm
Kochi accident: ಮಿನಿ ಕೂಪರ್ ಅಟ್ಟಹಾಸಕ್ಕೆ ಮಂಗಳೂರ...
12-10-26 10:06 am
Cyber Fraud, Mangalore Doctor: ಮಾಡೆಲಿಂಗ್, ಗೋಲ...
10-10-26 02:27 pm
ಮೃಗಾಲಯಕ್ಕೆ ಗಂಡನೊಂದಿಗೆ ಬಂದ ನವವಿವಾಹಿತೆ: ಪತಿ ಬೈಕ...
09-10-26 08:41 pm