ಬ್ರೇಕಿಂಗ್ ನ್ಯೂಸ್
15-08-21 11:06 am Mangaluru Correspondent ಕರಾವಳಿ
ಮಂಗಳೂರು, ಆಗಸ್ಟ್ 15: ಖ್ಯಾತ ಭಾಗವತ, ಪ್ರಸಂಗಕರ್ತ ಯಕ್ಷಗಾನದ ಹಿಮ್ಮೇಳ- ಮುಮ್ಮೇಳದಲ್ಲಿ ಸವ್ಯಸಾಚಿಯೆಂದು ಹೆಸರು ಮಾಡಿದ್ದ ಬೊಟ್ಟಿಕೆರೆ ಪುರುಷೋತ್ತಮ ಪೂಂಜ (65) ನಿನ್ನೆ ರಾತ್ರಿ ನಿಧನರಾಗಿದ್ದಾರೆ.
ಕಳೆದ ಎರಡು ತಿಂಗಳಿಂದ ಆಸ್ಪತ್ರೆಯಲ್ಲಿದ್ದ ಅವರನ್ನು ಇತ್ತೀಚೆಗೆ ಮನೆಗೆ ಒಯ್ಯಲಾಗಿತ್ತು. ಶನಿವಾರ ದಿಢೀರ್ ಅಸ್ವಸ್ಥರಾಗಿದ್ದು ರಾತ್ರಿ ವೇಳೆ ಕೊನೆಯುಸಿರೆಳೆದಿದ್ದಾರೆ. ಮೂಲತಃ ಕೊಣಾಜೆ ಸಮೀಪದ ಮಂಜನಾಡಿಯ ಬೊಟ್ಟಿಕೆರೆ ಎಂಬಲ್ಲಿನ ನಿವಾಸಿಯಾಗಿದ್ದ ಪುರುಷೋತ್ತಮ ಪೂಂಜ ಬಿಎಸ್ಸಿ ಪದವೀಧರರು. ಪದವಿ ಬಳಿಕ ಅವರು ಆನೆಗುಂಡಿ ಗಣಪತಿ ಭಟ್ ಮತ್ತು ಹೊಸಹಿತ್ಲು ಮಹಾಲಿಂಗ ಭಟ್ಟರ ಮಾರ್ಗದರ್ಶನದಲ್ಲಿ ಯಕ್ಷಗಾನದ ಹಿಮ್ಮೇಳ- ಮುಮ್ಮೇಳಗಳಲ್ಲಿ ತರಬೇತಿ ಪಡೆದಿದ್ದರು. ಆರಂಭದಲ್ಲಿ ಉದ್ಯೋಗ ನಿಮಿತ್ತ ಮುಂಬೈಯಲ್ಲಿದ್ದ ಪೂಂಜರು ಬಳಿಕ ವೃತ್ತಿ ಮೇಳಗಳಲ್ಲಿ ತೊಡಗಿಸಿದ್ದರು. ಸಮರ್ಥ ವೇಷಧಾರಿ, ಚೆಂಡೆ- ಮದ್ದಳೆ ವಾದಕ, ಭಾಗವತ ಮತ್ತು ಪ್ರಸಂಗಕರ್ತರೂ ಆಗಿದ್ದ ಪೂಂಜರ ಗರಡಿಯಲ್ಲಿ ಅದೆಷ್ಟೋ ಮಂದಿ ಕಲಾವಿದರಾಗಿ ವೃತ್ತಿ ಬದುಕು ನಡೆಸುತ್ತಿದ್ದಾರೆ.
ಮುಂಬೈನಲ್ಲಿ ಗೀತಾಂಬಿಕಾ, ಉಪ್ಪಳ ಭಗವತಿ, ಪುತ್ತೂರು, ಕರ್ನಾಟಕ ಮತ್ತು ಕಟೀಲು ಮೇಳಗಳಲ್ಲಿ 42 ವರ್ಷ ತಿರುಗಾಟ ಮಾಡಿದ್ದ ಪೂಂಜರು ಪ್ರಸಕ್ತ ಕಟೀಲು ಒಂದನೇ ಮೇಳದ ಪ್ರಧಾನ ಭಾಗವತರಾಗಿದ್ದರು. ಕಟೀಲಿನ ಎಲ್ಲ ಮೇಳಗಳ ಪ್ರಸಂಗ, ಪಾತ್ರ ಸಂಯೋಜನೆ ಜವಾಬ್ದಾರಿಯನ್ನೂ ಇವರೇ ನಿರ್ವಹಿಸುತ್ತಿದ್ದರು. ಕನ್ನಡ ಮತ್ತು ತುಳು ಭಾಷೆಗಳಲ್ಲಿ ಸುಮಾರು 32 ಪ್ರಸಂಗಗಳನ್ನು ಅವರು ಬರೆದಿದ್ದಾರೆ.
ರಾಮಾಯಣದ ಕೊನೆಯ ಅಂಕ ಮಾನಿಷಾದ ಇವರ ಅತೀ ಹೆಚ್ಚು ಹೆಗ್ಗಳಿಕೆ ಪಡೆದ ಪ್ರಸಂಗ. ಉಳಿದಂತೆ ನಳಿನಾಕ್ಷಿ ನಂದಿನಿ, ಉಭಯಕುಲ ಬಿಲ್ಲೋಜ, ಮೇಘ ಮಯೂರಿ, ಸ್ವರ್ಣನೂಪುರ (ಕನ್ನಡ) ಕುಡಿಯನ ಕೊಂಬಿರೆಲ್, ದಳವಾಯಿ ಮುದ್ದಣೆ, ಗರುಡಕೇಂಜವೆ, ಪಟ್ಟದಕತ್ತಿ, ಕುಡಿಯನ ಕಣ್ಣ್, ಸ್ವರ್ಣಕೇದಗೆ (ತುಳು) ಪ್ರಸಂಗಗಳು ವೃತ್ತಿ ಮೇಳಗಳಲ್ಲಿ ಪ್ರಯೋಗಗೊಂಡು ಜನಪ್ರಿಯವಾಗಿದ್ದವು.
ಅವರ 29 ಪ್ರಸಂಗಗಳನ್ನು ಯಕ್ಷ ಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ 'ಅಂಬುರುಹ' ಎಂಬ ಹೆಸರಿನಿಂದ ಎರಡು ಸಂಪುಟಗಳಲ್ಲಿ ಪ್ರಕಟಿಸಿದೆ. ನಾನಾ ಪ್ರಶಸ್ತಿ ಪಡೆದ ಅವರು ಯಕ್ಷ ಗಾನ ಅಕಾಡೆಮಿಯ ಸದಸ್ಯರಾಗಿದ್ದರು. ಮನೆಯಲ್ಲಿಯೇ ಮಕ್ಕಳಿಗೆ ಯಕ್ಷಗಾನ ತರಬೇತಿ ನೀಡುತ್ತಿದ್ದರು. ಇವರು ಪತ್ನಿ, ಇಬ್ಬರು ಪುತ್ರರು ಸೇರಿ ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ.
Bottikere Purushotham Poonja (68), renowned as 'Abhinava Valmiki' and an all-rounder in the field of Yakshagana, passed away late night on Saturday, August 14. Poonja, who was suffering from illness, was undergoing treatment at a hospital. He was a BSc graduate and
06-11-25 03:06 pm
Bangalore Correspondent
ಕೇಂದ್ರ ಜಿಎಸ್ಟಿ ದರ ಇಳಿಸಿದ ಬೆನ್ನಲ್ಲೇ ನಂದಿನಿ ತುಪ...
05-11-25 06:15 pm
ಮಾಜಿ ಸಚಿವ ಎಚ್.ವೈ ಮೇಟಿ ಬೆಂಗಳೂರಿನ ಆಸ್ಪತ್ರೆಯಲ್ಲಿ...
04-11-25 04:38 pm
ಸಚಿವ ಸತೀಶ್ ಜಾರಕಿಹೊಳಿ ದಿಢೀರ್ ದೆಹಲಿಗೆ ; ಕೆಪಿಸಿಸ...
03-11-25 05:17 pm
ಕಣ್ಣೂರಿನ ಪಯ್ಯಂಬಲಂ ಬೀಚ್ ನಲ್ಲಿ ಸಮುದ್ರಕ್ಕಿಳಿದ ಬೆ...
02-11-25 11:09 pm
03-11-25 01:13 pm
HK News Desk
ಜೋಧಪುರ ; ಭೀಕರ ರಸ್ತೆ ಅಪಘಾತದಲ್ಲಿ 18 ಜನರು ಸಾವು,...
02-11-25 11:12 pm
ಕೇರಳದಲ್ಲಿ ಮುಸ್ಲಿಮ್ ಮತ್ತು ಕ್ರಿಶ್ಚಿಯನ್ನರಿಗೆ ಒಬಿ...
02-11-25 05:13 pm
ಜೆಡ್ಡಾದಿಂದ ಹೈದರಾಬಾದ್ ಬರುತ್ತಿದ್ದ ವಿಮಾನದಲ್ಲಿ ಬ...
01-11-25 07:27 pm
ಭಾರತದಲ್ಲಿ ಸ್ವತಂತ್ರವಾಗಿದ್ದೇನೆ, ಮತ್ತೆ ಬಾಂಗ್ಲಾದೇ...
30-10-25 03:20 pm
06-11-25 12:51 pm
Mangalore Correspondent
ಭಾರತೀಯ ಪೂರ್ವಜರ ಬಗ್ಗೆ ಹೊಸ ಶೋಧನೆ ; ಕೊರಗ ಜನಾಂಗ ಫ...
05-11-25 10:48 pm
ಮಕ್ಕಳಿಲ್ಲದ ದಂಪತಿಗೆ ವೃದ್ಧಾಪ್ಯದಲ್ಲಿ ಗೃಹ ಭಾಗ್ಯ !...
05-11-25 10:19 pm
ಇಂದಿರಾ ಹೆಗ್ಗಡೆಯವರ ‘ಬಾರಗೆರೆ ಬರಂಬು ತುಳುವೆರೆ ಪುಂ...
05-11-25 07:49 pm
ಅಕ್ರಮ ಗೋಹತ್ಯೆ, ಮಾಂಸಕ್ಕೆ ಬಳಕೆ ; ಆರೋಪಿಯ ಉಳ್ಳಾಲದ...
05-11-25 03:35 pm
06-11-25 02:08 pm
Mangalore Correspondent
ಮದುವೆಯಾಗಿಲ್ಲ, ಹುಡುಗ ಸೆಟ್ ಆಗುತ್ತಿಲ್ಲ ಎಂದು ಜ್ಯೋ...
05-11-25 09:39 pm
ಇಪಿಎಫ್ಒ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯಲ್ಲಿ ಭಾರೀ...
05-11-25 05:27 pm
ನಕಲಿ ಷೇರು ಮಾರುಕಟ್ಟೆ ಮೇಲೆ ಹೂಡಿಕೆ ; ಫೇಸ್ಬುಕ್ ಗೆ...
04-11-25 02:11 pm
ಟೋಪಿ ನೌಫಾಲ್ ಕೊಲೆಯಲ್ಲ, ರೈಲು ಡಿಕ್ಕಿ ಹೊಡೆದು ಸಾವು...
03-11-25 12:33 pm