ಬ್ರೇಕಿಂಗ್ ನ್ಯೂಸ್
15-08-21 01:22 pm Mangaluru Correspondent ಕರಾವಳಿ
ಮಂಗಳೂರು, ಆಗಸ್ಟ್ 15: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ದಲಿತ ಉಸ್ತುವಾರಿ ಸಚಿವರೊಬ್ಬರು ಸ್ವಾತಂತ್ರ್ಯೋತ್ಸವದ ಧ್ವಜಾರೋಹಣ ಮಾಡಿದ್ದಾರೆ. ಮಂಗಳೂರಿನ ನೆಹರು ಮೈದಾನದಲ್ಲಿ ನಡೆದ ಜಿಲ್ಲಾ ಮಟ್ಟದ 75ನೇ ಸ್ವಾತಂತ್ರ್ಯ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಅಂಗಾರ ಧ್ವಜಾರೋಹಣ ನಡೆಸಿದ್ದು ಜಿಲ್ಲೆಯ ಮಟ್ಟಿಗೆ ಹೊಸ ಇತಿಹಾಸ ನಿರ್ಮಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಮಟ್ಟಿಗೆ ಹೇಳುವುದಾದರೆ, ಮೊದಲ ಬಾರಿಗೆ ಪರಿಶಿಷ್ಟ ಜಾತಿಯ ಶಾಸಕರು ಈ ಬಾರಿ ಉಸ್ತುವಾರಿ ಸಚಿವರಾಗಿದ್ದಾರೆ. ಸುಳ್ಯ ಮೀಸಲು ವಿಧಾನಸಭಾ ಕ್ಷೇತ್ರದಲ್ಲಿ ಆರು ಬಾರಿ ಶಾಸಕರಾಗಿರುವ ಎಸ್. ಅಂಗಾರ ಈ ಬಾರಿ ಸಚಿವರಾಗಿದ್ದು, ಇತ್ತೀಚೆಗೆ ಕೋವಿಡ್ ನಿರ್ವಹಣೆ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿಯಾಗಿ ಮಾಡಲಾಗಿದೆ.











ಇತರ ಜಿಲ್ಲೆಗಳಿಗೆ ಹೋಲಿಸಿದರೆ, ದಕ್ಷಿಣ ಕನ್ನಡ ವಿವಿಧ ಕ್ಷೇತ್ರಗಳಲ್ಲಿ ತುಂಬ ಮುಂದುವರಿದ ಜಿಲ್ಲೆ. ಅಷ್ಟೇ ಅಲ್ಲದೆ, ಬಂಟ, ಬಿಲ್ಲವ ಮತ್ತು ಮುಸ್ಲಿಂ ಮತದಾರರೇ ಅತ್ಯಧಿಕ ಇರುವ ಜಿಲ್ಲೆ. ಇಂಥ ಜಿಲ್ಲೆಯಲ್ಲಿ ಒಬ್ಬರು ದಲಿತ ವ್ಯಕ್ತಿ ಶಾಸಕರಾಗಿ ಬಿಜೆಪಿಯಿಂದ ಸತತವಾಗಿ 30 ವರ್ಷಗಳಿಂದ ಗೆಲ್ಲುತ್ತಾ ಬಂದಿದ್ದರೂ, ರಾಜ್ಯದಲ್ಲಿ ಬಿಜೆಪಿ ಎರಡು, ಮೂರು ಬಾರಿ ಅಧಿಕಾರಕ್ಕೆ ಬಂದರೂ ಸಚಿವರನ್ನಾಗಿ ಮಾಡಿರಲಿಲ್ಲ. ಈ ಬಾರಿ ಅಚಾನಕ್ಕಾಗಿ ಸಚಿವರಾಗಿದ್ದಲ್ಲದೆ, ಪ್ರತಿಷ್ಠೆಯ ಕಾರ್ಯಕ್ರಮ ಜಿಲ್ಲಾ ಮಟ್ಟದ ಸ್ವಾತಂತ್ರ್ಯೋತ್ಸವದಲ್ಲಿ ಧ್ವಜಾರೋಹಣ ನೆರವೇರಿಸುವ ಅದೃಷ್ಟ ಲಭಿಸಿದೆ. ಸಮಾಜದ ಅತ್ಯಂತ ಹಿಂದುಳಿದ ವರ್ಗದ ವ್ಯಕ್ತಿಯೊಬ್ಬರು ಧ್ವಜಾರೋಹಣ ಮಾಡಿದ್ದು ಜಿಲ್ಲೆಯ ಮಟ್ಟಿಗೆ ಹೊಸ ಮೈಲಿಗಲ್ಲು. ಅಲ್ಲದೆ, ಹಿಂದುಳಿದ ವರ್ಗದ ಜನಾಂಗಕ್ಕೆ ಶ್ರೇಯವೂ ಹೌದು.
ಬಂಗ್ಲೆಗುಡ್ಡೆಯಲ್ಲಿ ಬಲಿದಾನಿಗಳಿಗೆ ಸ್ಮಾರಕ
ಧ್ವಜಾರೋಹಣ ನೆರವೇರಿಸಿ ಪೊಲೀಸ್ ಗೌರವ ಸ್ವೀಕರಿಸಿದ ಬಳಿಕ ಸ್ವಾತಂತ್ರೋತ್ಸವ ಸಂದೇಶ ನೀಡಿದ ಸಚಿವ ಅಂಗಾರ, ತಮ್ಮ ಭಾಷಣದಲ್ಲಿ ದೇಶದಲ್ಲೇ ಮೊದಲು ಸ್ವಾತಂತ್ರ್ಯಕ್ಕಾಗಿ ಕಹಳೆ ಊದಿದ ಸುಳ್ಯದ ಇತಿಹಾಸವನ್ನು ಮೆಲುಕು ಹಾಕಿದರು. 1835-37ರಲ್ಲಿ ಸುಳ್ಯದಿಂದ ಮೊದಲ್ಗೊಂಡ ಸ್ವಾತಂತ್ರ್ಯದ ಕಹಳೆ ಕೊಡಗಿನಿಂದ ಮಂಗಳೂರಿನ ವರೆಗೆ ಬ್ರಿಟಿಷರನ್ನು ಅಧೀರರನ್ನಾಗಿಸಿತ್ತು. ಜಿಲ್ಲೆಯ ಜನರ ಮೊದಲ ಸ್ವಾತಂತ್ರ್ಯ ಸಂಗ್ರಾಮದ ಇತಿಹಾಸವನ್ನು ನಾವು ಮರೆಯಬಾರದು. ಸ್ವಾತಂತ್ರ್ಯಕ್ಕಾಗಿ ಬಂಡೆದ್ದ ಜನರು ಬೆಳ್ಳಾರೆಯಲ್ಲಿದ್ದ ಬ್ರಿಟಿಷರ ಕೋಟೆಯನ್ನು ಸೂರೆ ಮಾಡಿದ್ದರು. ಅಲ್ಲಿನ ಬಂಗ್ಲೆಗುಡ್ಡೆಯ ಕೋಟೆಯಲ್ಲಿ ಅಮರ ಸುಳ್ಯಕ್ಕಾಗಿ ಮಡಿದವರ ನೆನಪಿನಲ್ಲಿ ಸ್ಮಾರಕ ನಿರ್ಮಿಸುವುದಾಗಿ ಘೋಷಣೆ ಮಾಡಿದ್ದಾರೆ.
The Dakshina Kannada district administration marked India's 75th Independence Day with a celebration at Nehru Maidan here. Minister for fisheries, ports and inland transport S Angara, who is also the district in-charge minister, hoisted the Tricolour and inspected the guard of honour. Addressing the gathering, Angara said, "At the outset, I offer my sincere tribute to all the leaders of our country who sacrificed their life in the freedom struggle.
10-06-26 10:40 pm
HK News Desk
ನಿಮ್ಮಪ್ಪನಿಂದಲೇ ಆರ್ಎಸ್ಎಸ್ಗೆ ಏನು ಮಾಡೋಕೆ ಆಗಿಲ...
09-06-26 07:04 pm
ವಿಧಾನ ಪರಿಷತ್ ಚುನಾವಣೆ ; ಕಾಂಗ್ರೆಸ್ ಐದನೇ ಅಭ್ಯರ್ಥ...
09-06-26 01:27 pm
Krishna Byre Gowda: ಡಿಕೆಶಿ ಸಂಪುಟದಲ್ಲಿ ಮತ್ತೊಂದ...
08-06-26 12:37 pm
ರಾಮಲಿಂಗಾರೆಡ್ಡಿ ರಾಜೀನಾಮೆ ಡ್ರಾಮಾಗೆ ಟ್ವಿಸ್ಟ್ ; ಡ...
06-06-26 12:49 pm
10-06-26 06:42 pm
HK News Staffer
ಮಧ್ಯಪ್ರಾಚ್ಯದಲ್ಲಿ ಮತ್ತೆ ಉದ್ವಿಗ್ನ ಸ್ಥಿತಿ; ಕೂಡಲೇ...
08-06-26 09:11 pm
ದೇಲಂಪಾಡಿ ; ಭಾರೀ ಮಳೆಗೆ ಕಲ್ಲಿನ ತಡೆಗೋಡೆ ಕುಸಿದು ಬ...
06-06-26 10:42 pm
ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ; ಜಿರಳೆಗಳ ಮುಖವಾಡ ಧ...
06-06-26 05:48 pm
ತಮಿಳುನಾಡಿನಲ್ಲಿ ಅಣ್ಣಾಮಲೈ ಸಂಚಲನ ; ಬಿಜೆಪಿಗೆ ಗುಡ್...
05-06-26 02:34 pm
10-06-26 10:03 pm
HK News Staffer
ಅಡಿಕೆ ಎಲೆ ಚುಕ್ಕಿ, ಹಳದಿ ಎಲೆ ರೋಗ ; ರೈತರ ಕಷ್ಟಕ್ಕ...
10-06-26 05:07 pm
ಜೂನ್ 12ರಂದು ಮೊದಲ ಬಾರಿಗೆ ಕೊಲ್ಲೂರು ಮೂಕಾಂಬಿಕೆ ಸನ...
10-06-26 04:19 pm
Yedapadavu Highway News: ಮಂಗಳೂರು- ಮೂಡುಬಿದ್ರೆ...
09-06-26 08:58 pm
Mangalore: ಡಿಗ್ರಿ, ಇಂಜಿನಿಯರಿಂಗ್ ವಿದ್ಯಾರ್ಥಿಗಳಿ...
09-06-26 06:15 pm
10-06-26 01:48 pm
HK News Staffer
Udupi Fight, Temple Parking: ಗಾಡಿಗೆ ಸೈಡ್ ಕೊಡು...
10-06-26 12:09 pm
ಬೆಳ್ತಂಗಡಿ ಪೊಲೀಸರ ಭರ್ಜರಿ ಕಾರ್ಯಚರಣೆ ; ಮನೆಗಳಿಗೆ...
09-06-26 05:03 pm
Mangalore Blackmail, crime, Honeytrap: ಸಲಿಂಗಕ...
09-06-26 10:26 am
ಬಂಟ, ಬಿಲ್ಲವ ಜಾತಿಗಳ ಬಗ್ಗೆ ಅವಹೇಳನ ಹೇಳಿಕೆ ; ಸಾಮಾ...
08-06-26 11:10 pm