ಬ್ರೇಕಿಂಗ್ ನ್ಯೂಸ್
16-08-21 05:22 pm Mangaluru Correspondent ಕರಾವಳಿ
ಉಳ್ಳಾಲ, ಆ.16: ಹರೇಕಳ ಡ್ಯಾಂ ನಿರ್ಮಾಣದ ಯೋಜನೆ ಪ್ರಸ್ತಾಪ ಬಂದಾಗ ಅನೇಕರು ಇದು ಸಾಧ್ಯನಾ ಎಂದು ಪ್ರಶ್ನೆ ಮಾಡಿದ್ದರು. ಇದೀಗ ಅಣೆಕಟ್ಟು ಪೂರ್ಣಗೊಳ್ಳುತ್ತಿದ್ದು ಅಸಾಧ್ಯವಾದುದನ್ನ ಸಾಧ್ಯವನ್ನಾಗಿಸುವುದೇ ನನ್ನ ಕಾರ್ಯ ಎಂದು ಶಾಸಕ ಯು.ಟಿ.ಖಾದರ್ ಹೇಳಿದರು.
ಹರೇಕಳ ಉಲ್ಲಾಸ್ ನಗರ (ಬಾವಲಿ ಗುರಿ)ದಲ್ಲಿ ಸುಮಾರು 1 ಕೋಟಿ 20 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಗ್ರಾಮ ಸೌಧ ಕಟ್ಟಡಕ್ಕೆ ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡಿದರು. ಪಂಚಾಯತ್ ಆಡಳಿತ ಅಚ್ಚುಕಟ್ಟಾಗಿದ್ದರೆ ಗ್ರಾಮದ ಅಭಿವೃದ್ಧಿ ಸಾಧ್ಯ. ಹರೇಕಳವನ್ನ ಮಾದರಿ ಗ್ರಾಮ ಪಂಚಾಯತ್ ಆಗಿ ನಿರ್ಮಿಸಬೇಕು. ಕಾಮಗಾರಿ ಒಮ್ಮೆ ಆರಂಭವಾದರೆ ಅದು ಹಂತ ಹಂತವಾಗಿ ಅಭಿವೃದ್ದಿ ಕಾಣುತ್ತದೆ. ಸ್ವಂತ ಮನೆ ಕಟ್ಟಿದಷ್ಟೆ ಆಸಕ್ತಿಯಲ್ಲಿ ಗುತ್ತಿಗೆದಾರರು ಗುಣಮಟ್ಟದ ಕಟ್ಟಡ ನಿರ್ಮಿಸಬೇಕು. ಹರೇಕಳ ಡ್ಯಾಂ ನಿರ್ಮಾಣದ ಪ್ರಸ್ತಾವನೆ ಬಂದಾಗ ಅದು ಆಗುವುದು ಸಾಧ್ಯವೇ ಎಂದು ಕೆಲವರು ಆಡಿಕೊಳ್ಳುತ್ತಿದ್ದರು. ಅಸಾಧ್ಯ ಕಾಮಗಾರಿಗಳನ್ನ ಸಾಧ್ಯವಾಗಿಸೋದೆ ನನ್ನ ಗುರಿ ಎಂದರು. ಹರೇಕಳ ಡ್ಯಾಂ ಕಮ್ ಸೇತುವೆ ಲೋಕಾರ್ಪಣೆ ಆದ ಮೇಲೆ ಹರೇಕಳ ಗ್ರಾಮಸ್ಥರಿಗೆ ಮಂಗಳೂರು ನಗರ ಹತ್ತಿರವಾಗಲಿದೆ. ಪ್ರಯಾಣ ಬಹಳ ಸಲೀಸಾಗಲಿದೆ ಎಂದರು.
ಮಾಜಿ ತಾಪಂ ಸದಸ್ಯ ಮುಸ್ತಾಫ ಹರೇಕಳ ಮಾತನಾಡಿ ಹರೇಕಳ ಗ್ರಾಮ ಪಂಚಾಯಿತಿ ಕಚೇರಿ ಕಟ್ಟಡವು ಹಳೆಯದಾಗಿದ್ದು ಸ್ಥಳಾವಕಾಶದ ಕೊರತೆ ಇರುವುದರಿಂದ ಗ್ರಾಮಸಭೆ ಮತ್ತು ಇತರ ಸಭೆಗಳನ್ನು ನಡೆಸಲು ಅಸಾಧ್ಯವಾಗಿದೆ. ಹಾಗೆಯೇ ಪಾರ್ಕಿಂಗ್ ವ್ಯವಸ್ಥೆ ಇಲ್ಲದಿರುವುದರಿಂದ ಗ್ರಾಮಸ್ಥರ ಅಭಿಪ್ರಾಯದಂತೆ ಹರೇಕಳ ಗ್ರಾಮ ಪಂಚಾಯಿತಿಗೆ ಹರೇಕಳದ ಉಲ್ಲಾಸ ನಗರದಲ್ಲಿ 50 ಸೆಂಟ್ಸ್ ಸ್ಥಳದಲ್ಲಿ 5000 ಚದರಡಿಯ ಎರಡು ಅಂತಸ್ತಿನ ಸುಸಜ್ಜಿತ ಕಟ್ಟಡವನ್ನು ನಿರ್ಮಿಸಲು ಯೋಜನೆ ಹಾಕಲಾಗಿದೆ ಎಂದರು.
ಹರೇಕಳ ಗ್ರಾಮ ಪಂಚಾಯತಿ ಅಧ್ಯಕ್ಷ ಬದ್ರುದ್ದೀನ್ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಕಾರ್ಯಕ್ರಮದಲ್ಲಿ ಪದ್ಮಶ್ರೀ ಪುರಸ್ಕೃತ ಅಕ್ಷರ ಸಂತ ಹಾಜಬ್ಬ , ಧಾರ್ಮಿಕ ಗುರು ಸಯ್ಯದ್ ಸರ್ಫುದ್ದೀನ್ ತಂಞಳ್, ರೆ.ಫಾ. ಜಾನ್, ಕುತ್ತಿಮುಗೇರ್ ದೇವಸ್ಥಾನದ ಮೋಹನ್ ಕೆ, ಹರೇಕಳ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಕಲ್ಯಾಣಿ, ಮಾಜಿ ಅಧ್ಯಕ್ಷರಾದ ಮಹಾಬಲ ಹೆಗ್ಡೆ, ಅನಿತಾ ಡಿಸೋಜ, ಗುಲಾಬಿ, ಶಾಲಿ, ಸಂತೋಷ್ ಶೆಟ್ಟಿ ಅಸೈಗೋಳಿ, ಮೋಹನ್ ದಾಸ್ ಶೆಟ್ಟಿ ಉಳಿದೊಟ್ಟು, ರಾಮ್ ದಾಸ್ ಪೂಂಜ, ರಿಚರ್ಡ್, ಆದಂ ಸಾಹೇಬ, ಲತೀಫ್, ಎಸ್, ಮಹಮ್ಮದ್, ಇದ್ದಿನ್ ಕುಂಞಿ, ರವೀಂದ್ರ ರೈ ಹರೇಕಳ, ನಾಗರಾಜ್, ರಾಧಾಕೃಷ್ಣ ರೈ, ಅಬ್ದುಲ್ ಮಜೀದ್ ,ತ್ಯಾಗಂ ಹರೇಕಳ, ಗ್ರಾಪಂ ಅಭಿವೃದ್ಧಿ ಅಧಿಕಾರಿ ಪ್ರತಿಭಾ ಉಪಸ್ಥಿತರಿದ್ದರು.
I do things that are impossible says UT Khader in Ullal while laying foundation of Harekala Dam.
16-07-25 09:36 pm
HK News Desk
ಕೋವಿಡ್ ಮುಗಿದರೂ, ಅದರ ಪರಿಣಾಮ ನಿಂತಿಲ್ಲ..! ನರಮಂಡಲ...
16-07-25 07:05 pm
BESCOM, Cybercrime, Digital Arrest: ಡಿಜಿಟಲ್ ಅ...
16-07-25 03:58 pm
ಕಾವೇರಿ ಆರತಿ ದುಡ್ಡು ಹೊಡೆಯುವ ಸ್ಕೀಮ್, ನೂರು ಕೋಟಿ...
16-07-25 11:47 am
35 IPS Officers Transfer: ರಾಜ್ಯದಲ್ಲಿ 35 ಐಪಿಎಸ...
15-07-25 01:32 pm
16-07-25 09:58 pm
HK News Desk
Changur Baba: ಲವ್ ಜಿಹಾದ್, ಹಿಂದು ಯುವತಿಯರ ಮತಾಂತ...
14-07-25 03:24 pm
ಅಹ್ಮದಾಬಾದ್ ವಿಮಾನ ದುರಂತ ; ಭಾರೀ ಅನುಮಾನ ಹುಟ್ಟಿಸಿ...
12-07-25 09:25 pm
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
ಸಾಮೂಹಿಕ ಮತಾಂತರ ; ಮೂರೇ ವರ್ಷಕ್ಕೆ ಚಾಂಗೂರ್ ಬಾಬಾನಿ...
12-07-25 02:15 pm
16-07-25 10:52 pm
Mangalore Correspondent
ಕೆಂಪು ಕಲ್ಲು, ಮರಳು ಸಮಸ್ಯೆಗೆ ಕಾಂಗ್ರೆಸ್ ಸರ್ಕಾರದ...
16-07-25 01:01 pm
Dharmasthala Missing case, Ananya Bhat, Compl...
15-07-25 10:40 pm
Udupi Rain, Fishermen Missing: ಉಡುಪಿ ; ಭಾರೀ ಗ...
15-07-25 10:13 pm
Kmc Manipal Hospital, Mangalore, Health Card:...
15-07-25 07:19 pm
16-07-25 11:04 pm
Mangalore Correspondent
Mangalore Crime, Konaje Murder: ಒಂಟಿ ಮಹಿಳೆಯ ಅ...
16-07-25 09:48 pm
Sexual Harassment Odisha News; ಪ್ರಾಧ್ಯಾಪಕನಿಂದ...
16-07-25 04:37 pm
Kavoor police constable arrest, Mangalore: ದೂ...
16-07-25 11:42 am
ಸುಂದರವಾಗಿದ್ದಕ್ಕೆ ತಲೆ ಬೋಳಿಸಿ ಮನೆಯಲ್ಲಿ ಕೂಡಿಹಾಕಿ...
15-07-25 10:57 pm