ಬ್ರೇಕಿಂಗ್ ನ್ಯೂಸ್
17-08-21 11:05 pm Mangaluru Correspondent ಕರಾವಳಿ
ಮಂಗಳೂರು, ಆಗಸ್ಟ್ 17: ಕರ್ನಾಟಕ ಸರಕಾರ ಗಡಿಭಾಗದಲ್ಲಿ ನಿರ್ಬಂಧ ವಿಧಿಸಿದ್ದನ್ನು ಪ್ರಶ್ನಿಸಿ, ಕೇರಳ ಹೈಕೋರ್ಟ್ ಮೊರೆ ಹೋಗಿದ್ದವರಿಗೆ ಆರಂಭದಲ್ಲೇ ಹಿನ್ನಡೆಯಾಗಿದೆ.
ಅಪೀಲು ಅರ್ಜಿಯನ್ನು ಪರಿಗಣಿಸಿ ಕರ್ನಾಟಕ ಸರಕಾರ, ಕೇಂದ್ರ ಗೃಹ ಇಲಾಖೆ, ದಕ್ಷಿಣ ಕನ್ನಡ ಜಿಲ್ಲಾಡಳಿತ ಸೇರಿದಂತೆ ವಿವಿಧ ಆಡಳಿತ ವಿಭಾಗಕ್ಕೆ ಹೈಕೋರ್ಟ್ ನೋಟೀಸ್ ನೀಡಿತ್ತು. ಅದರಂತೆ, ಇಂದು ಕೋರ್ಟ್ ನಲ್ಲಿ ವಿಚಾರಣೆ ನಡೆದಿದ್ದು ಕರ್ನಾಟಕ ಸರಕಾರದಿಂದ ವಕೀಲರು ಹಾಜರಾಗಿ ವಾದ ಮಂಡಿಸಿದ್ದಾರೆ.
ಅಲ್ಲದೆ, ಅರ್ಜಿಯ ಉದ್ದೇಶವನ್ನು ಕೋರ್ಟ್ ನಲ್ಲಿ ಪ್ರಶ್ನೆ ಮಾಡಿದ್ದಾರೆ. ಅರ್ಜಿಯಲ್ಲಿ ತುರ್ತು ವೈದ್ಯಕೀಯ ಸೌಲಭ್ಯಕ್ಕಾಗಿ ಬರುವ ಮಂದಿಗೆ ಅವಕಾಶ ನೀಡಬೇಕೆಂದು ಕೇಳಿಕೊಂಡಿದ್ದರು. ಜೊತೆಗೆ, ಗಡಿಭಾಗದಲ್ಲಿ ಪೂರ್ತಿಯಾಗಿ ನಿರ್ಬಂಧ ಸಡಲಿಸುವಂತೆ ಕೇಳಿದ್ದರು. ಆದರೆ, ವೈದ್ಯಕೀಯ ಸೌಲಭ್ಯ ಇನ್ನಿತರ ತುರ್ತು ಅಗತ್ಯಕ್ಕೆ ಜುಲೈ 31ರಂದು ನೀಡಿದ್ದ ಕರ್ನಾಟಕ ಸರಕಾರ ಮಾರ್ಗಸೂಚಿಯಲ್ಲೇ ಅವಕಾಶ ನೀಡಲಾಗಿದೆ. ಅಲ್ಲದೆ, ಗಡಿಭಾಗದಲ್ಲಿ ಕುಟುಂಬಸ್ಥರ ಮರಣ ಇನ್ನಿತರ ಸಂದರ್ಭದಲ್ಲಿಯೂ ತುರ್ತಾಗಿ ತೆರಳಲು ಅವಕಾಶ ನೀಡಲಾಗಿದೆ. ಗಡಿಭಾಗದ ವಿದ್ಯಾರ್ಥಿಗಳಿಗೂ ಪರೀಕ್ಷೆ ಬರೆಯಲು ಕೋವಿಡ್ ನೆಗೆಟಿವ್ ಇಲ್ಲದಿದ್ದರೂ ಅವಕಾಶ ನೀಡಲಾಗಿದೆ. ಈ ನಡುವೆ, ಪೂರ್ತಿಯಾಗಿ ನಿರ್ಬಂಧ ಸಡಿಲ ಮಾಡಬೇಕು ಎಂದರೆ ಅದನ್ನು ಪರಿಗಣಿಸುವುದು ಹೇಗೆ ? ಕೋವಿಡ್ ಸೋಂಕು ಹರಡದಂತೆ ನೋಡಿಕೊಳ್ಳಲು ಈ ರೀತಿ ನಿರ್ಬಂಧ ವಿಧಿಸಲಾಗಿದೆ. ಡೈಲಿ ಪ್ರಯಾಣಿಕರು ಕೋವಿಡ್ ಟೆಸ್ಟ್ ಮಾಡಿಕೊಂಡು ತೆರಳಲು ಅವಕಾಶ ಮಾಡಲಾಗಿದೆ ಎಂದು ಕೋರ್ಟಿಗೆ ಮನವರಿಕೆ ಮಾಡಿದ್ದಾರೆ. ಇದಲ್ಲದೆ, ಈ ರೀತಿಯ ಪ್ರಕರಣದಲ್ಲಿ ಹೈಕೋರ್ಟ್ ತೀರ್ಪು ನೀಡಲು ಬರುವುದಿಲ್ಲ ಎಂದು ಅಡ್ವಕೇಟ್ ಜನರಲ್ ಪ್ರಭುಲಿಂಗ ಕವಾದಗಿ ವಾದ ಮಂಡಿಸಿದ್ದಾರೆ.
ಹಾಗಿದ್ದರೂ, ಕೋರ್ಟಿಗೆ ಈ ಅರ್ಜಿ ಬಗ್ಗೆ ಹೆಚ್ಚುವರಿ ದಾಖಲೆ ಸಹಿತ ವಿವರ ನೀಡಬೇಕಿದ್ದರೆ ಕಾಲಾವಕಾಶ ಬೇಕಾಗುತ್ತದೆ. ಆಗಸ್ಟ್ 25 ರ ವರೆಗೆ ಅವಕಾಶ ನೀಡಿದರೆ ಅಗತ್ಯ ದಾಖಲೆ ಸಲ್ಲಿಕೆ ಮಾಡಬಹುದು ಎಂದು ಅವಕಾಶ ಕೇಳಿದ್ದಾರೆ. ಕರ್ನಾಟಕ ಸರಕಾರದ ವಾದವನ್ನು ಪುರಸ್ಕರಿಸಿದ ಹೈಕೋರ್ಟ್, ವಿಚಾರಣೆಯನ್ನು ಆಗಸ್ಟ್ 25 ಕ್ಕೆ ಮುಂದೂಡಿದೆ. ಅಲ್ಲದೆ, ತುರ್ತು ಅಗತ್ಯಕ್ಕಾಗಿ ತೆರಳುವ ಮಂದಿ ಆಂಬುಲೆನ್ಸ್ ಅಥವಾ ಖಾಸಗಿ ವಾಹನದಲ್ಲಿ ಬಂದರೂ ಅವರನ್ನು ಗಡಿಭಾಗದಲ್ಲಿ ತೆರಳಲು ಅವಕಾಶ ನೀಡಬೇಕು ಎಂದು ಕರ್ನಾಟಕ ಸರಕಾರಕ್ಕೆ ನಿರ್ದೇಶನ ನೀಡಿದೆ.
he Kerala High Court on Tuesday directed Karnataka and its officials to ensure that people facing dire emergencies such as a death in the family, medical treatment etc are permitted to enter the state on the production of necessary documents to establish the respective case, irrespective of the nature of the vehicles used for the purpose.
16-07-25 09:36 pm
HK News Desk
ಕೋವಿಡ್ ಮುಗಿದರೂ, ಅದರ ಪರಿಣಾಮ ನಿಂತಿಲ್ಲ..! ನರಮಂಡಲ...
16-07-25 07:05 pm
BESCOM, Cybercrime, Digital Arrest: ಡಿಜಿಟಲ್ ಅ...
16-07-25 03:58 pm
ಕಾವೇರಿ ಆರತಿ ದುಡ್ಡು ಹೊಡೆಯುವ ಸ್ಕೀಮ್, ನೂರು ಕೋಟಿ...
16-07-25 11:47 am
35 IPS Officers Transfer: ರಾಜ್ಯದಲ್ಲಿ 35 ಐಪಿಎಸ...
15-07-25 01:32 pm
16-07-25 09:58 pm
HK News Desk
Changur Baba: ಲವ್ ಜಿಹಾದ್, ಹಿಂದು ಯುವತಿಯರ ಮತಾಂತ...
14-07-25 03:24 pm
ಅಹ್ಮದಾಬಾದ್ ವಿಮಾನ ದುರಂತ ; ಭಾರೀ ಅನುಮಾನ ಹುಟ್ಟಿಸಿ...
12-07-25 09:25 pm
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
ಸಾಮೂಹಿಕ ಮತಾಂತರ ; ಮೂರೇ ವರ್ಷಕ್ಕೆ ಚಾಂಗೂರ್ ಬಾಬಾನಿ...
12-07-25 02:15 pm
16-07-25 10:52 pm
Mangalore Correspondent
ಕೆಂಪು ಕಲ್ಲು, ಮರಳು ಸಮಸ್ಯೆಗೆ ಕಾಂಗ್ರೆಸ್ ಸರ್ಕಾರದ...
16-07-25 01:01 pm
Dharmasthala Missing case, Ananya Bhat, Compl...
15-07-25 10:40 pm
Udupi Rain, Fishermen Missing: ಉಡುಪಿ ; ಭಾರೀ ಗ...
15-07-25 10:13 pm
Kmc Manipal Hospital, Mangalore, Health Card:...
15-07-25 07:19 pm
16-07-25 11:04 pm
Mangalore Correspondent
Mangalore Crime, Konaje Murder: ಒಂಟಿ ಮಹಿಳೆಯ ಅ...
16-07-25 09:48 pm
Sexual Harassment Odisha News; ಪ್ರಾಧ್ಯಾಪಕನಿಂದ...
16-07-25 04:37 pm
Kavoor police constable arrest, Mangalore: ದೂ...
16-07-25 11:42 am
ಸುಂದರವಾಗಿದ್ದಕ್ಕೆ ತಲೆ ಬೋಳಿಸಿ ಮನೆಯಲ್ಲಿ ಕೂಡಿಹಾಕಿ...
15-07-25 10:57 pm