ಬ್ರೇಕಿಂಗ್ ನ್ಯೂಸ್
20-08-21 10:01 pm Mangaluru Correspondent ಕರಾವಳಿ
ಮಂಗಳೂರು, ಆಗಸ್ಟ್ 20: ಕೊರೊನಾ ಲಸಿಕೆ ಪಡೆದ ಮಾತ್ರಕ್ಕೆ ಸೋಂಕು ಬರಲ್ಲ ಎಂದು ಕೆಲವರು ಮಾಸ್ಕನ್ನೇ ಬಿಟ್ಟುಕೊಂಡು ತಿರುಗಾಡುತ್ತಾರೆ. ಆದರೆ, ಕೊರೊನಾ ಲಸಿಕೆ ಪಡೆದವರಿಗೂ ಸೋಂಕು ಬರುತ್ತದೆ ಎನ್ನುವುದು ಆರೋಗ್ಯ ಇಲಾಖೆಯಿಂದಲೇ ಸ್ಪಷ್ಟವಾಗುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ ಒಂದು ತಿಂಗಳ ಅವಧಿಯಲ್ಲಿ 500 ಮಂದಿಗೆ ಎರಡೂ ಡೋಸ್ ಲಸಿಕೆ ಪಡೆದವರಿಗೆ ಸೋಂಕು ಕಂಡುಬಂದಿದೆ ಎನ್ನುವ ಮಾಹಿತಿ ಹೊರಬಿದ್ದಿದೆ.
ಆದರೆ, ಕೊರೊನಾ ಲಸಿಕೆ ಪಡೆದವರಿಗೆ ಸೋಂಕು ಬಂದರೂ, ಅದರಿಂದ ಸಮಸ್ಯೆ ಆಗಲ್ಲ. ಇದರಿಂದಾಗಿ ಸೋಂಕಿನ ಲಕ್ಷಣ ಇದ್ದರೂ, ತಪಾಸಣೆ ಮಾಡಿಕೊಳ್ಳದೆ ತಿರುಗಾಡುವುದರಿಂದ ಅಂಥವರು ಇತರರಿಗೆ ಹರಡಲು ಕಾರಣವಾಗುತ್ತಿದ್ದಾರೆ ಎಂದು ಹೇಳುತ್ತಾರೆ, ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿ.
ವಿಶೇಷ ಅಂದ್ರೆ, ಕಳೆದೊಂದು ವಾರದಲ್ಲಿ ಕೇರಳದಿಂದ ಬಂದಿರುವ ವಿದ್ಯಾರ್ಥಿಗಳಿಗೆ ಅತಿ ಹೆಚ್ಚು ಸೋಂಕು ಕಂಡುಬರುತ್ತಿರುವುದು. ದಿನವೂ 25ರಷ್ಟು ಮಂದಿ ಕೇರಳ ಮೂಲದ ವಿದ್ಯಾರ್ಥಿಗಳು ಮಂಗಳೂರಿನಲ್ಲಿ ಪಾಸಿಟಿವ್ ಆಗುತ್ತಿದ್ದಾರೆ. ಹದಿನೈದು ದಿನಗಳಲ್ಲಿ ತಪಾಸಣೆಗೆ ಒಳಗಾದ 400 ಮಂದಿಯಲ್ಲಿ 250 ಮಂದಿ ಪಾಸಿಟಿವ್ ಆಗಿದ್ದಾರೆ. ಇವರೆಲ್ಲ ನೆಗೆಟಿವ್ ಸರ್ಟಿಫಿಕೇಟ್ ಇಟ್ಟುಕೊಂಡು ಮಂಗಳೂರಿಗೆ ಬಂದು ಆಯಾ ಕಾಲೇಜಿನ ಕೇಂದ್ರಗಳಲ್ಲಿ ಕ್ವಾರಂಟೈನ್ ಇದ್ದರು. ಆದರೆ, ಕಾಲೇಜಿನಲ್ಲಿದ್ದ ವಿದ್ಯಾರ್ಥಿಗಳನ್ನು ಏಳು ದಿನಗಳ ಬಳಿಕ ತಪಾಸಣೆ ನಡೆಸಿದರೆ ಪಾಸಿಟಿವ್ ಕಂಡುಬರುತ್ತಿದ್ದಾರೆ.
ಕಾಲೇಜು ಆಡಳಿತದ ವಿರುದ್ಧ ಪ್ರಕರಣ ; ಡೀಸಿ
ಈ ವಿಚಾರ ಆರೋಗ್ಯ ಇಲಾಖೆಯ ಸಭೆಯಲ್ಲಿ ಜಿಲ್ಲಾಧಿಕಾರಿಗಳ ಗಮನಕ್ಕೆ ಬಂದಿದ್ದು, ಕಾಲೇಜು ಆಡಳಿತದ ವಿರುದ್ಧ ಗರಂ ಆಗಿದ್ದಾರೆ. ಕೇರಳದಿಂದ ವಿದ್ಯಾರ್ಥಿಗಳನ್ನು ಕರೆಸಿಕೊಂಡು ಕ್ವಾರಂಟೈನ್ ನಡೆಸುವುದು ಆಯಾ ಕಾಲೇಜು ಆಡಳಿತದ ಜವಾಬ್ದಾರಿ. ವಿದ್ಯಾರ್ಥಿಗಳನ್ನು ಸೂಕ್ತವಾಗಿ ಕ್ವಾರಂಟೈನ್ ಮಾಡಲು ಆಗದೇ ಇರುವ ಕಾಲೇಜು ಆಡಳಿತದ ವಿರುದ್ಧ ಎಫ್ಐಆರ್ ದಾಖಲಿಸಬೇಕು. ಜೊತೆಗೆ, ಕಾಲೇಜು ಹಾಸ್ಟೆಲ್ ಗಳಲ್ಲಿ ವಿದ್ಯಾರ್ಥಿಗಳು ಉಳಿದುಕೊಂಡಿದ್ದರೆ ಆಯಾ ಹಾಸ್ಟೆಲಿನ ವಾರ್ಡನ್ ವಿರುದ್ಧ ಪ್ರಕರಣ ದಾಖಲು ಮಾಡುವಂತೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದ್ದಾರೆ.
ನಿಯಮದ ಪ್ರಕಾರ, ಕೇರಳ ಭಾಗದಿಂದ ಆರ್ ಟಿಪಿಸಿಆರ್ ನೆಗೆಟಿವ್ ತೋರಿಸಿ ವಿದ್ಯಾರ್ಥಿಗಳು ಮಂಗಳೂರಿಗೆ ಬರಬಹುದು. ಆದರೆ, ನೇರವಾಗಿ ಕಾಲೇಜು ಹೋಗುವಂತಿಲ್ಲ. ಇಂಜಿನಿಯರಿಂಗ್, ಪ್ಯಾರಾ ಮೆಡಿಕಲ್ ಹೀಗೆ ಕೇರಳದ ಸಾವಿರಾರು ವಿದ್ಯಾರ್ಥಿಗಳು ಮಂಗಳೂರಿನಲ್ಲಿ ವ್ಯಾಸಂಗ ನಡೆಸುತ್ತಾರೆ. ಇವರೀಗ ಮಂಗಳೂರಿಗೆ ಬರುತ್ತಿದ್ದು, ಆಯಾ ಕಾಲೇಜಿನ ಹಾಸ್ಟೆಲ್ಗಳಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಮಾಡಲಾಗಿದೆ. ಕೇರಳದ ವಿದ್ಯಾರ್ಥಿಗಳನ್ನು ಏಳು ದಿನಗಳ ಕಾಲ ಪ್ರತ್ಯೇಕ ಇರಿಸಿ, ನಿಗಾ ವಹಿಸುವಂತೆ ಜಿಲ್ಲಾಡಳಿತ ಸೂಚನೆ ನೀಡಿತ್ತು. ಆದರೆ, ಕಾಲೇಜಿನ ಆಡಳಿತಗಳು ಈ ಬಗ್ಗೆ ನಿರ್ಲಕ್ಷ್ಯ ವಹಿಸುವುದರಿಂದ ವಿದ್ಯಾರ್ಥಿಗಳ ನಡುವೆ ಸೋಂಕು ಹರಡಲು ಕಾರಣವಾಗುತ್ತಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುಳ್ಯ, ಬೆಳ್ತಂಗಡಿ ತಾಲೂಕಿನಲ್ಲಿ ಕೊರೊನಾ ಹೆಚ್ಚಿದೆಯಂತೆ. ಅಲ್ಲಿನ ಮಂದಿ ಪಾಸಿಟಿವ್ ಆದರೂ, ಅದರ ಬಗ್ಗೆ ಹೆಚ್ಚು ಕೇರ್ ಇಟ್ಟುಕೊಳ್ಳದೆ ಹೊರಗಡೆ ಅಡ್ಡಾಡುತ್ತಾರೆ. ಇದರಿಂದಾಗಿ ಆ ಭಾಗದಲ್ಲಿ ಸೋಂಕು ಹೆಚ್ಚು ಹರಡುತ್ತಿರುವುದು ಕಂಡುಬಂದಿದೆ. ಹಾಗಿದ್ದರೂ, ಜಿಲ್ಲೆಯಲ್ಲಿ ದಿನಕ್ಕೆ ಹತ್ತು ಸಾವಿರಕ್ಕಿಂತಲೂ ಹೆಚ್ಚು ಮಂದಿಯನ್ನು ತಪಾಸಣೆ ನಡೆಸಲಾಗುತ್ತಿದೆ. ಇದರಿಂದಾಗಿ ಇನ್ನೊಂದೆರಡು ತಿಂಗಳಲ್ಲಿ ಇತರ ಕಡೆಗಳಲ್ಲಿ ಜಾಸ್ತಿಯಾದರೂ, ದಕ್ಷಿಣ ಕನ್ನಡದಲ್ಲಿ ಅಂಥ ಪರಿಸ್ಥಿತಿ ಬರಲಿಕ್ಕಿಲ್ಲ ಎಂಬ ವಿಶ್ವಾಸ ಅಧಿಕಾರಿಗಳದ್ದು. ಯಾಕಂದ್ರೆ, ಈಗ ಹತ್ತು ಸಾವಿರ ಜನರಲ್ಲಿ 300 ಆಸುಪಾಸಿನಲ್ಲಿ ಪಾಸಿಟಿವ್ ಬರುತ್ತಿದ್ದು ಅವರನ್ನು ನಿಯಂತ್ರಣ ಮಾಡುವುದರಿಂದ ಸೋಂಕನ್ನು ತಡೆಗಟ್ಟಿದಂತೆ ಎನ್ನುತ್ತಾರೆ.
Even After 2nd Dose of the Vaccine more than 500 people have been tested covid positive. The highest no of cases has been reported from Sullia and Belthagady.
08-05-25 11:07 pm
Bangalore Correspondent
U T Khader, Dinesh Gundurao, Suhas Shetty Mur...
08-05-25 07:50 pm
Karwar high alert: ಕಾರವಾರದಲ್ಲಿ ಹೈ ಎಲರ್ಟ್ ; ಸಮ...
08-05-25 12:23 pm
Special Poojas, Indian Army, Minister Ramalin...
07-05-25 04:07 pm
ಭಾರತ - ಪಾಕ್ ಮಧ್ಯೆ ಉದ್ವಿಗ್ನ ಸ್ಥಿತಿ ; ಮೇ 7 ರಂದು...
06-05-25 11:23 pm
09-05-25 06:49 pm
HK News Desk
India Pak War: ಭಾರತ ವಾಯುಪಡೆಯಿಂದ ಭೀಕರ ಪ್ರತಿದಾಳ...
09-05-25 12:33 pm
India - Pak War update: ಪಾಕಿಸ್ತಾನದ ಎಫ್ -16, ಎ...
09-05-25 12:00 am
New Pope, Robert Francis Prevost;140 ಕೋಟಿ ಸದಸ...
08-05-25 11:44 pm
Pak drone-missile attack; ಚೈನಾ ಮೇಡ್ ಲಾಹೋರ್ ಏರ...
08-05-25 04:57 pm
09-05-25 06:22 pm
Giridhar Shetty, Mangaluru
Resham Bariga, Belthangady, Indo Pak War, Ant...
09-05-25 03:24 pm
Suhas Shetty Murder Case, Speaker UT Khader,...
09-05-25 01:32 pm
Ullal accident, Mangalore: ರಸ್ತೆ ದಾಟುತ್ತಿದ್ದ...
08-05-25 10:54 pm
Satish Kumapla, Mangalore, U T Khader: ಮೂಡಾ ಅ...
08-05-25 09:06 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm