ಬ್ರೇಕಿಂಗ್ ನ್ಯೂಸ್
21-08-21 01:19 pm Mangaluru Correspondent ಕರಾವಳಿ
ಕತಾರ್, ದೋಹಾ, ಆಗಸ್ಟ್ 21: ಇತ್ತೀಚೆಗೆ ಕತಾರ್ ವಿಶ್ವವಿದ್ಯಾಲಯದಿಂದ ಭಾರತೀಯ ಮೂಲದ ಮಹಿಳೆ, ಹರ್ಷಿತಾ ಶೈಲೇಶ್ ಅವರು ಗೌರವಾನ್ವಿತ ಪಿಎಚ್‌ಡಿ ಪದವಿ ಪಡೆದಿದ್ದಾರೆ. “Role of Protein Arginine Methyltransferase5 (PRMT5) in WNT/β-CATENIN" ಎಂಬ ಸ್ತನ ಕಾನ್ಸರ್ ಪ್ರಸರಣ ಸಂಕೇತಕ್ಕೆ ಸಂಬಂಧಪಟ್ಟ ಮಹಾ ಪ್ರಬಂಧಕ್ಕೆ ಈ ಗೌರವ ಸಂದಿದೆ.

ಕತಾರ್ ವಿಶ್ವವಿದ್ಯಾಲಯದ ಜೈವಿಕ ಮತ್ತು ಪರಿಸರ ವಿಜ್ಞಾನದ ವಿಭಾಗಸ್ಥ ಪ್ರೊಫೆಸರ್ ಸಯೀದ್ ಸಿಫ್ ಅವರು ಮಾರ್ಗದರ್ಶನ ನೀಡಿರುತ್ತಾರೆ. ಈ ಮೊದಲು 2020 ರ ಪದವಿ ಸಮಾರಂಭದಲ್ಲಿ ಹರ್ಷಿತಾ ಅವರು ಕತಾರ್ ಎಮಿರ್ ಶೇಖ್ ತಮೀಮ್ ಹಮದ್ ಬಿನ್ ಅಲ್ಥಾನಿಯವರ ಪತ್ನಿ ಹರ್ ಹೈನೆಸ್ ಶೇಖಾ ಜವಾಹರ್ ಬಿಂಟ್ ಹಮಾದ್ ಬಿನ್ ಸುಹೈಮ್ ಅಲ್ಥಾನಿ ಅವರಿಂದ ಚಿನ್ನದ ಪದಕವನ್ನು ಪಡೆದು ಶ್ರೇಷ್ಠ ಮಹಿಳಾ ಪದವಿ ವಿದ್ಯಾರ್ಥಿಯಾಗಿ ಹೊರಹೊಮ್ಮಿದ್ದರು.
ಹರ್ಷಿತಾ, ಕರ್ನಾಟಕ ರಾಜ್ಯದ ಕಾರ್ಕಳದ ತಾಲೂಕಿನ ಸಣ್ಣ ಪಟ್ಟಣದಿಂದ ಬಂದವರು. ಬಾಲ್ಯದಿಂದಲೇ ಅತ್ಯುತ್ತಮ ಸಾಧಕಿಯಾಗಿದ್ದ ಆಕೆ ತನ್ನ ಸ್ನಾತಕೋತ್ತರ ಪದವಿಯಲ್ಲಿ ಚಿನ್ನದ ಪದಕ ವಿಜೇತೆ. ಮಂಗಳೂರಿನ ವಿಶ್ವವಿದ್ಯಾನಿಲಯದಿಂದ ಬಯೋಟೆಕ್ನಾಲಜಿಯಲ್ಲಿ ಅತ್ಯುನ್ನತ ಅಂಕ ಗಳಿಸಿದ್ದರು. ನಂತರ ಅವರು ಮೈಸೂರು ವಿಶ್ವವಿದ್ಯಾನಿಲಯದಿಂದ ಬಯೋಕೆಮಿಸ್ಟ್ರಿಯಲ್ಲಿ ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿದ್ದರು. ಆಬಳಿಕ ಕತಾರ್ ವಿಶ್ವವಿದ್ಯಾಲಯಕ್ಕೆ ಸೇರಿದ್ದು ಪಿಎಚ್‌ಡಿ ಮುಗಿಸಿದ್ದಾರೆ.

ಪಿಎಚ್‌ಡಿ ಆಕ್ರಮಣಕಾರಿ ಸ್ತನ ಕ್ಯಾನ್ಸರ್ ಕೋಶಗಳ ಪ್ರಸರಣ ಮತ್ತು ಬೆಳವಣಿಗೆಯಲ್ಲಿ ಪಿಆರ್‌ಎಂಟಿ 5 ಪ್ರಮುಖ ಎಪಿಜೆನೆಟಿಕ್ ಕಿಣ್ವದ ಪಾತ್ರವನ್ನು ಅರ್ಥ ಮಾಡಿಕೊಳ್ಳಲು ಅಧ್ಯಯನವು ಕೇಂದ್ರೀಕರಿಸಿದೆ. ಅವರ ವ್ಯವಸ್ಥಿತ ಅಧ್ಯಯನವು PRMT5 ಅಭಿವ್ಯಕ್ತಿಯು ಆಕ್ರಮಣಕಾರಿ ಸ್ತನ ಕ್ಯಾನ್ಸರ್‌ಗಳ ಪೈಕಿ ಹೆಚ್ಚಿದೆ ಎಂದು ತೋರಿಸಿದೆ. ಅಧ್ಯಯನದಿಂದ ಕಂಡುಕೊಂಡ ಅಂಶಗಳು ವಿಶ್ವದಾದ್ಯಂತ ಆಕ್ರಮಣಕಾರಿ ಸ್ತನ ಕ್ಯಾನ್ಸರ್‌ನಿಂದ ಬಳಲುತ್ತಿರುವ ಜನರಿಗೆ ಒಂದು ಪರಿಣಾಮಕಾರಿ ಚಿಕಿತ್ಸೆಯನ್ನು ಅಭಿವೃದ್ಧಿಪಡಿಸಲು ಪ್ರಮುಖ ಅಡಿಪಾಯವಾಗಿದೆ. ಇವರ ಸಂಶೋಧನಾ ಪ್ರಬಂಧ ಜಾಗತಿಕ ಮಟ್ಟದ ಪತ್ರಿಕೆಗಳಲ್ಲಿ ಪ್ರಕಟವಾಗಿದೆ.
Harshitha from karkala gets Phd by Qatar University in Qatar.
18-12-25 08:40 pm
HK News Desk
ಪರಮೇಶ್ವರ್ ಸಿಎಂ ಆಗಲೆಂದು ಒಕ್ಕಲಿಗ, ಲಿಂಗಾಯತ, ದಲಿತ...
18-12-25 04:31 pm
Shivamogga, Gold Chain Robbery, Police: ಕಾಂಗ್...
18-12-25 02:26 pm
ಹೃದಯಾಘಾತ ; ರಸ್ತೆ ಮೇಲೆ ಬಿದ್ದುಕೊಂಡ ಪತಿಯನ್ನು ರಕ್...
18-12-25 02:09 pm
ಕೊಪ್ಪಳ ; ಬೈಕ್ - ಬೊಲೆರೋ ಡಿಕ್ಕಿ , ಮೂವರು ಯುವಕರ...
18-12-25 12:37 pm
18-12-25 04:34 pm
HK News Desk
ಸಮವಸ್ತ್ರ ಕಳಪೆಯೆಂದು ಸಹಪಾಠಿಗಳ ಅಣಕ ; ನೊಂದ ನಾಲ್ಕನ...
17-12-25 10:27 pm
ಆಸ್ಟ್ರೇಲಿಯಾ ಬೋಂಡಿ ಬೀಚ್ ದಾಳಿ ; ಹೈದ್ರಾಬಾದ್ ಮೂಲದ...
17-12-25 01:38 pm
ಯುಕೆಯ ಮಿಡ್ಲಾಂಡ್ಸ್ ನಲ್ಲಿ ಕನ್ನಡ ರಾಜ್ಯೋತ್ಸವ ; ಬರ...
16-12-25 06:33 pm
ಭಟ್ಕಳ ತಹಸೀಲ್ದಾರ್ ಕಚೇರಿಗೂ ಸ್ಫೋಟದ ಬೆದರಿಕೆ ; ತಮಿ...
16-12-25 01:56 pm
18-12-25 10:24 pm
Mangalore Correspondent
ಮಹೇಶ್ ಶೆಟ್ಟಿ ತಿಮರೋಡಿ ಮತ್ತೆ ರಾಯಚೂರಿಗೆ ಗಡೀಪಾರು...
18-12-25 10:52 am
Dharmasthala case, Chinnayya: ಜಾಮೀನು ಸಿಕ್ಕರೂ...
17-12-25 08:54 pm
New year 2026, Mangalore Rules: ಹೊಸ ವರ್ಷಾಚರಣೆ...
17-12-25 08:19 pm
Udupi, Baby death: ಉಡುಪಿ ; ತಾಯಿ ಕೈಯಿಂದ ಜಾರಿ ಬ...
17-12-25 05:23 pm
18-12-25 04:53 pm
Mangaluru Correspondent
ಫ್ಲಾಟ್, ಜಾಗವನ್ನು ಮಾರಾಟ ಮಾಡಿ ಸೈಬರ್ ವಂಚಕರಿಗೆ 2...
17-12-25 11:14 am
ಕದ್ರಿಯಲ್ಲಿ ಬೈಕ್ ಕದ್ದು ಭಟ್ಕಳದಲ್ಲಿ ಮಹಿಳೆಯ ಸರ ಕಸ...
16-12-25 10:35 pm
Mangalore Crime, Robbery, Mukka: 'ಬಂಗಾರ್ ಒಲ್ಪ...
15-12-25 10:26 pm
Udupi Murder, Brahmavar, Update: ಕುಡಿದ ಮತ್ತಿನ...
15-12-25 05:37 pm