ಬ್ರೇಕಿಂಗ್ ನ್ಯೂಸ್
01-09-21 11:00 pm Headline Karnataka News Network ಕರಾವಳಿ
ಮಂಗಳೂರು, ಸೆ.1: ಬಜ್ಪೆ ಏರ್ಪೋರ್ಟ್ ಬಳಿ ರಸ್ತೆ ಅಪಘಾತಕ್ಕೀಡಾಗಿ ತೀವ್ರ ರಕ್ತಸ್ರಾವದಿಂದ ಪ್ರಜ್ಞೆ ತಪ್ಪಿ ಬಿದ್ದಿದ್ದ ವ್ಯಕ್ತಿಯನ್ನು ಪೊಲೀಸ್ ಸಿಬಂದಿಯೊಬ್ಬರು ಕಾರಿನಲ್ಲಿ ಆಸ್ಪತ್ರೆಗೆ ಸಾಗಿಸಿ ಮಾನವೀಯತೆ ಮೆರೆದಿದ್ದಾರೆ.
ಏರ್ಪೋರ್ಟ್ ಬಳಿ ಕರ್ತವ್ಯದಲ್ಲಿರುವ ಹೆಡ್ ಕಾನ್ಸ್ ಟೇಬಲ್ ಗೋಪಾಲಕೃಷ್ಣ ಅವರು ಕೆಲಸ ಮುಗಿಸಿ ರಾತ್ರಿ 7.45 ರ ಸುಮಾರಿಗೆ ಮಂಗಳೂರಿನತ್ತ ಬರುತ್ತಿದ್ದರು. ಈ ವೇಳೆ, ಯುವಕನೊಬ್ಬ ಬೈಕ್ ಅಪಘಾತಕ್ಕೀಡಾಗಿ ರಸ್ತೆಗೆ ಬಿದ್ದು ಹೊರಳಾಡುತ್ತಿದ್ದ. ಸ್ಥಳದಲ್ಲಿ ಜನ ಸೇರಿದ್ದರೂ ಆತನನ್ನು ನಿಂತು ನೋಡುತ್ತಿದ್ದರೇ ವಿನಾ ಆಸ್ಪತ್ರೆಗೆ ಒಯ್ಯಲು ಮುಂದಾಗಿರಲಿಲ್ಲ. ಈ ವೇಳೆ, ಸ್ಥಳಕ್ಕೆ ಬಂದ ಪೊಲೀಸ್ ಸಿಬಂದಿ ಗೋಪಾಲಕೃಷ್ಣ ಅಲ್ಲಿ ಬಿದ್ದಿದ್ದ ವ್ಯಕ್ತಿಯನ್ನು ತಮ್ಮ ಕಾರಿಗೆ ತುಂಬಿಸಿದ್ದಾರೆ. ಆತನನ್ನು ಸ್ಥಳದಿಂದ ಎತ್ತಿ ಹಾಕುತ್ತಿದ್ದರೆ ಪೂರ್ತಿ ನಿಸ್ತೇಜವಾಗಿದ್ದ. ಕೈ ಮತ್ತು ಕಾಲಿನಲ್ಲಿ ರಕ್ತ ಒಸರುತ್ತಿದ್ದರಿಂದ ದೇಹದಿಂದ ರಕ್ತ ಹೋಗಿ ಪ್ರಜ್ಞೆ ತಪ್ಪಿದ್ದ. ಆದರೆ, ಅಲ್ಲಿದ್ದವರು ಆತ ಸತ್ತೇ ಹೋಗಿದ್ದಾನೆ ಎಂದು ಭ್ರಮಿಸಿ ಹಾಗೇ ಬಿಟ್ಟಿದ್ದರು. ಕಾರಿನಲ್ಲಿ ಹಾಕ್ಕೊಂಡು ಪೊಲೀಸ್ ಸಿಬಂದಿ ಗೋಪಾಲಕೃಷ್ಣ ಅವರು ತಮ್ಮ ಕಾರನ್ನು ವೇಗವಾಗಿ ಓಡಿಸುತ್ತಾ ಬಂದಿದ್ದಾರೆ. ಆದಷ್ಟು ಬೇಗ ಎಜೆ ಆಸ್ಪತ್ರೆಗೆ ತಲುಪಬೇಕೆಂದು ಹಂಪ್ಸ್ ಇರುವಲ್ಲಿಯೂ ನಿಲ್ಲಿಸದೆ ವೇಗವಾಗಿ ಬರುತ್ತಿದ್ದರು. ಹಂಪ್ಸ್ ಇರುವಲ್ಲಿ ದಡಬಡನೆ ಚಲಿಸುತ್ತಿದ್ದರಿಂದಲೋ ಏನೋ ಸತ್ತೇ ಹೋಗಿದ್ದಾನೆ ಎಂದು ಎಣಿಸಿದ್ದ ವ್ಯಕ್ತಿ ಸೀಟಿನ ಹಿಂಭಾಗದಲ್ಲಿ ಮಲಗಿದ್ದಲ್ಲಿಂದಲೇ ಕಾವೂರು ತಲುಪುತ್ತಿದ್ದಂತೆ ಧಡಕ್ಕನೆ ಎದ್ದು ಕುಳಿತಿದ್ದಾನೆ.
ಗೋಪಾಲಕೃಷ್ಣ ಅವರು ಕಾರನ್ನು ಚಲಾಯಿಸಿಕೊಂಡು ಬರುತ್ತಿದ್ದರೆ ಅರ್ಧಕ್ಕೆ ಎದ್ದು ಕುಳಿತ ವ್ಯಕ್ತಿಯನ್ನು ನೋಡಿ ಅಚ್ಚರಿಗೆ ಒಳಗಾಗಿದ್ದಾರೆ. ಬಳಿಕ ಆ ವ್ಯಕ್ತಿ ಏರ್ಪೋರ್ಟ್ ಆವರಣದಲ್ಲಿ ಕ್ಯಾಬ್ ಡ್ರೈವರ್ ಆಗಿದ್ದು ಕೆಲಸ ಮುಗಿಸಿ ಬೈಕಿನಲ್ಲಿ ಬರುತ್ತಿದ್ದಾಗ ರಸ್ತೆ ತಲುಪುತ್ತಿದ್ದಂತೆ ಯಾವುದೋ ವಾಹನ ಡಿಕ್ಕಿಯಾಗಿಸಿ ತೆರಳಿದ್ದನ್ನು ಹೇಳಿದ್ದಾನೆ. ವಾಹನ ಡಿಕ್ಕಿಯಾಗಿ ರಸ್ತೆಗೆ ಎಸೆಯಲ್ಪಟ್ಟಿದ್ದ ವ್ಯಕ್ತಿಗೆ ಪ್ರಜ್ಞೆ ಹೋಗಿತ್ತು. ತಲೆ, ಕೈ, ಕಾಲುಗಳಲ್ಲಿ ರಕ್ತ ಒಸರಿತ್ತು.
ಬಜ್ಪೆ ನಿವಾಸಿ ಅಮಾನುಲ್ಲಾ ಎಂಬಾತ ಹೀಗೆ ಅಪಘಾತಕ್ಕೀಡಾದ ಯುವಕನಾಗಿದ್ದು ಬಳಿಕ ಎಜೆ ಆಸ್ಪತ್ರೆಗೆ ಒಯ್ದು ಚಿಕಿತ್ಸೆ ನೀಡಲಾಗಿದೆ. ಗೋಪಾಲಕೃಷ್ಣ ಅವರಿಗೆ ಮನ್ಸೂರ್ ಎಂಬ ಇನ್ನೊಬ್ಬ ವ್ಯಕ್ತಿ ಸಹಾಯ ಮಾಡಿದ್ದಾರೆ. ವಿಚಿತ್ರ ಅಂದರೆ, ಹಂಪ್ಸ್ ನಲ್ಲಿ ಕಾರು ಹಾರಿಕೊಂಡು ತೆರಳುತ್ತಿದ್ದಾಗ ಮೇಲೆ - ಕೆಳಗೆ ಆಗಿಯೋ ಏನೋ ಯುವಕನಿಗೆ ಪ್ರಜ್ಞೆ ಬಂದಿತ್ತು.
ಏರ್ಪೋರ್ಟ್ ನಲ್ಲಿ ಪೊಲೀಸ್ ಕರ್ತವ್ಯದಲ್ಲಿರುವ ಗೋಪಾಲಕೃಷ್ಣ ಅವರು ಸಕಾಲದಲ್ಲಿ ಆಸ್ಪತ್ರೆಗೆ ಒಯ್ದಿದ್ದು ಯುವಕನನ್ನು ಬದುಕಿಸಿದೆ. ಈ ಬಗ್ಗೆ ನಗರ ಪೊಲೀಸ್ ಕಮಿಷನರ್ ಶಶಿಕುಮಾರ್, ತಮ್ಮ ಸಿಬಂದಿಯ ಕಾರ್ಯಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ. ಉತ್ತಮ ಗಾಯಕರೂ ಆಗಿರುವ ಗೋಪಾಲಕೃಷ್ಣ ಕಳೆದ ಬಾರಿ ಕೊರೊನಾ ವಾರಿಯರ್ ಕರ್ತವ್ಯದ ಪೊಲೀಸರ ಸೇವೆಯ ಬಗ್ಗೆ ಹಾಡೊಂದನ್ನು ಅರ್ಪಿಸಿ, ಗಮನ ಸೆಳೆದಿದ್ದರು.
Mangalore Accident near Bajpe airport Police constable Gopal Krishna who saw a biker on road in Unconscious condition took him by his car got him admitted to the hospital and saved his life. Huge appreciation rises on social media of the police personal timely presence.
11-09-25 10:11 pm
Bangalore Correspondent
ಈದ್ ಮೆರವಣಿಗೆ : ಶಿವಮೊಗ್ಗದಲ್ಲಿ ಪಾಕಿಸ್ತಾನ್ ಜಿಂದಾ...
09-09-25 10:52 pm
U T Khader: ಯುಟಿ ಖಾದರ್ ಏಕಪಕ್ಷೀಯ ತೀರ್ಮಾನ ತೆಗೆದ...
09-09-25 09:14 pm
Shivamogga Accident: ಸೆ.25ಕ್ಕೆ ಹಸೆಮಣೆ ಏರಬೇಕಿದ...
08-09-25 08:07 pm
ವೀರಶೈವ ಲಿಂಗಾಯತರು ಹಿಂದು ಬದಲು ಇತರರು ಎಂದು ನಮೂದಿಸ...
08-09-25 06:48 pm
10-09-25 04:22 pm
HK News Desk
ನೇಪಾಳದಲ್ಲಿ ಹಿಂಸಾಚಾರ ತೀವ್ರ ; ದೇಶ ಬಿಟ್ಟು ಓಡಿದ ಪ...
09-09-25 11:09 pm
ನೂತನ ಉಪ ರಾಷ್ಟ್ರಪತಿಯಾಗಿ ಎನ್.ಡಿ.ಎ ಮೈತ್ರಿಕೂಟದ ಸಿ...
09-09-25 09:38 pm
ಕಾಸರಗೋಡು ; ರಾಷ್ಟ್ರೀಯ ಹೆದ್ದಾರಿ ದಾಟಲೆತ್ನಿಸಿದ ಮಹ...
08-09-25 11:06 pm
ನೇಪಾಳದಲ್ಲಿ ಸೋಶಿಯಲ್ ಮೀಡಿಯಾ ಬ್ಯಾನ್ ; ದೇಶಾದ್ಯಂತ...
08-09-25 10:59 pm
11-09-25 10:42 pm
Mangaluru Correspondent
Mangalore, Harish Kumar: ಎರಡು ನಿಮಿಷದ ಆಜಾನ್ ನಿ...
11-09-25 09:38 pm
Mangalore Airport, Road, Accident: ಮಂಗಳೂರು ಏರ...
11-09-25 06:14 pm
Dharmasthala, YouTube, SIT: ಧರ್ಮಸ್ಥಳ ವಿರುದ್ಧ...
11-09-25 02:45 pm
ಬಿಜೆಪಿ ಬಗ್ಗೆ ಪುತ್ತಿಲ ಪರಿವಾರದ ಅಸಮಾಧಾನ ; ಭರವಸೆ...
11-09-25 01:40 pm
11-09-25 09:13 pm
Mangalore Correspondent
Mangalore Fake Documents, Crime, Arrest: ಸರ್ಕ...
11-09-25 08:52 pm
ಅಮೆರಿಕ ಅಧ್ಯಕ್ಷರ ಆಪ್ತ, ಬಲಪಂಥೀಯ ಕಾರ್ಯಕರ್ತ ಚಾರ್ಲ...
11-09-25 02:25 pm
Mangalore Police, Communial Case, Arrest, Cri...
08-09-25 10:34 pm
ಮಂಗಳೂರು ಏರ್ಪೋರ್ಟ್ ಟರ್ಮಿನಲ್ ಬಿಲ್ಡಿಂಗ್ ಧ್ವಂಸ ಬೆ...
07-09-25 03:34 pm