ಬ್ರೇಕಿಂಗ್ ನ್ಯೂಸ್
03-09-21 10:22 pm Mangaluru Correspondent ಕರಾವಳಿ
ಮಂಗಳೂರು, ಸೆ.3 : ರಾಷ್ಟ್ರೀಯ ತನಿಖಾ ದಳದ ಕಚೇರಿ ಮಂಗಳೂರಿನಲ್ಲಿ ಆಗತ್ತೆ ಎನ್ನುವ ಸುದ್ದಿ ಹಬ್ಬುತ್ತಿರುವಾಗಲೇ ಆರ್ಥಿಕ ಅಪರಾಧಗಳ ಬಗ್ಗೆ ತನಿಖೆ ನಡೆಸುವ ಕೇಂದ್ರ ಸರಕಾರದ ಕಂದಾಯ ಇಲಾಖೆ ಅಧೀನದ ಜಾರಿ ನಿರ್ದೇಶನಾಲಯ (ಇಡಿ) ವಲಯ ಕಚೇರಿಯನ್ನು ಮಂಗಳೂರಿನಲ್ಲಿ ಸದ್ದಿಲ್ಲದೆ ಆರಂಭಿಸಲಾಗಿದೆ.
ನಗರದ ಕಂಕನಾಡಿಯಲ್ಲಿ ಉಪ ವಲಯ ಕಚೇರಿ ಸೆ.3 ರಿಂದಲೇ ಆರಂಭಗೊಂಡಿರುವ ಬಗ್ಗೆ ಇಡಿ ಕಚೇರಿಯಿಂದ ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಲಾಗಿದೆ. ವಲಯ ಕಚೇರಿ ಬೆಂಗಳೂರಿನಲ್ಲಿದ್ದು ಅದರ ಅಧೀನದಲ್ಲಿ ಉಪ ಕಚೇರಿಯನ್ನು ತೆರೆಯಲಾಗಿದ್ದು ಇದರ ವ್ಯಾಪ್ತಿ ಕರ್ನಾಟಕದ 15 ಜಿಲ್ಲೆಗಳನ್ನು ಒಳಗೊಂಡಿದೆ.

ಮಂಗಳೂರಿನ ಕಚೇರಿಯು ದಕ್ಷಿಣ ಕನ್ನಡ, ಉಡುಪಿ, ಬೆಳಗಾವಿ, ಉತ್ತರ ಕನ್ನಡ, ಬಳ್ಳಾರಿ, ದಾವಣಗೆರೆ, ಶಿವಮೊಗ್ಗ, ಬಾಗಲಕೋಟ, ಹಾವೇರಿ, ಬೀದರ್, ಗುಲ್ಬರ್ಗ, ಬಿಜಾಪುರ, ರಾಯಚೂರು, ಧಾರವಾಡ, ಗದಗ, ಕೊಪ್ಪಳ ವ್ಯಾಪ್ತಿಯನ್ನು ಹೊಂದಿರುತ್ತದೆ. ಇಷ್ಟೂ ಜಿಲ್ಲೆಗಳ ವ್ಯಾಪ್ತಿಗೆ ಡೆಪ್ಯುಟಿ ಡೈರೆಕ್ಟರ್ ಒಬ್ಬರನ್ನು ಮುಖ್ಯಸ್ಥನಾಗಿ ನೇಮಕ ಮಾಡಲಾಗಿದೆ. ಇವರು ಬೆಂಗಳೂರು ವಲಯ ಕಚೇರಿಯ ಅಧೀನದಲ್ಲಿ 15 ಜಿಲ್ಲೆಗಳ ವ್ಯಾಪ್ತಿಯಲ್ಲಿ ದಾಳಿ, ತನಿಖೆ ನಡೆಸುವ ಜವಾಬ್ದಾರಿ ಹೊಂದಿರುತ್ತಾರೆ.
ಐಟಿ ಮತ್ತು ಇಡಿ ಪರಸ್ಪರ ಹತ್ತಿರದ ನಂಟನ್ನು ಹೊಂದಿರುವ ಪ್ರತ್ಯೇಕ ತನಿಖಾ ವಿಭಾಗ. ತೆರಿಗೆ ವಂಚನೆ ಇನ್ನಿತರ ಪ್ರಕರಣಗಳನ್ನು ಐಟಿ ಅಧಿಕಾರಿಗಳು ನಡೆಸಿದರೆ, ಯಾವುದೇ ಪ್ರಕರಣಗಳಲ್ಲಿ ಬೇಕಾಬಿಟ್ಟಿ ಹಣದ ವಹಿವಾಟು ನಡೆದಿದ್ದರೆ, ಆಮೂಲಕ ಕೋಟ್ಯಂತರ ರೂಪಾಯಿ ವಂಚನೆ ಆಗಿರೋದು ಮತ್ತು ಹಣದ ಮೂಲವನ್ನು ಪತ್ತೆ ಮಾಡುವುದು ಇಡಿ ಅಧಿಕಾರಿಗಳ ತನಿಖೆ ಆಗಿರುತ್ತದೆ. ಕರ್ನಾಟಕದಲ್ಲಿ ಬೆಂಗಳೂರಲ್ಲೇ ಕಚೇರಿ ಇದ್ದುಕೊಂಡು ಇಡೀ ರಾಜ್ಯ ವ್ಯಾಪ್ತಿಯಲ್ಲಿ ದಾಳಿ, ತನಿಖೆ ನಡೆಸಲಾಗುತ್ತಿತ್ತು. ಇದೀಗ ಉಪ ವಲಯ ಕಚೇರಿಯೆಂದು ರಾಜ್ಯದಲ್ಲಿ ಬೆಂಗಳೂರನ್ನು ಬಿಟ್ಟರೆ ಅತಿ ಹೆಚ್ಚು ವಾಣಿಜ್ಯ ವಹಿವಾಟು ನಡೆಯುವ ಮಂಗಳೂರಿನಲ್ಲಿ ಹೊಸತಾಗಿ ಆರಂಭಿಸಲಾಗಿದೆ. ಬಾಕಿ ಉಳಿದಿರುವ ಆರ್ಥಿಕ ಅಪರಾಧಗಳ ತನಿಖೆಗೆ ಇನ್ನಷ್ಟು ವೇಗ ಸಿಗಲಿದೆ ಎನ್ನಲಾಗುತ್ತಿದೆ.
The new sub-zonal office of Directorate of Enforcement, department of Revenue, government of India, started functioning at its office at Kankanady from Friday September 3. The sub zonal office will function under the Bengaluru zonal office. The Mangaluru sub-zonal office shall be headed by a deputy director.
18-12-25 08:40 pm
HK News Desk
ಪರಮೇಶ್ವರ್ ಸಿಎಂ ಆಗಲೆಂದು ಒಕ್ಕಲಿಗ, ಲಿಂಗಾಯತ, ದಲಿತ...
18-12-25 04:31 pm
Shivamogga, Gold Chain Robbery, Police: ಕಾಂಗ್...
18-12-25 02:26 pm
ಹೃದಯಾಘಾತ ; ರಸ್ತೆ ಮೇಲೆ ಬಿದ್ದುಕೊಂಡ ಪತಿಯನ್ನು ರಕ್...
18-12-25 02:09 pm
ಕೊಪ್ಪಳ ; ಬೈಕ್ - ಬೊಲೆರೋ ಡಿಕ್ಕಿ , ಮೂವರು ಯುವಕರ...
18-12-25 12:37 pm
18-12-25 04:34 pm
HK News Desk
ಸಮವಸ್ತ್ರ ಕಳಪೆಯೆಂದು ಸಹಪಾಠಿಗಳ ಅಣಕ ; ನೊಂದ ನಾಲ್ಕನ...
17-12-25 10:27 pm
ಆಸ್ಟ್ರೇಲಿಯಾ ಬೋಂಡಿ ಬೀಚ್ ದಾಳಿ ; ಹೈದ್ರಾಬಾದ್ ಮೂಲದ...
17-12-25 01:38 pm
ಯುಕೆಯ ಮಿಡ್ಲಾಂಡ್ಸ್ ನಲ್ಲಿ ಕನ್ನಡ ರಾಜ್ಯೋತ್ಸವ ; ಬರ...
16-12-25 06:33 pm
ಭಟ್ಕಳ ತಹಸೀಲ್ದಾರ್ ಕಚೇರಿಗೂ ಸ್ಫೋಟದ ಬೆದರಿಕೆ ; ತಮಿ...
16-12-25 01:56 pm
18-12-25 10:52 am
Mangalore Correspondent
Dharmasthala case, Chinnayya: ಜಾಮೀನು ಸಿಕ್ಕರೂ...
17-12-25 08:54 pm
New year 2026, Mangalore Rules: ಹೊಸ ವರ್ಷಾಚರಣೆ...
17-12-25 08:19 pm
Udupi, Baby death: ಉಡುಪಿ ; ತಾಯಿ ಕೈಯಿಂದ ಜಾರಿ ಬ...
17-12-25 05:23 pm
Mangalore Jail, Fight, Ccb Police: ಮಂಗಳೂರು ಜೈ...
17-12-25 05:05 pm
18-12-25 04:53 pm
Mangaluru Correspondent
ಫ್ಲಾಟ್, ಜಾಗವನ್ನು ಮಾರಾಟ ಮಾಡಿ ಸೈಬರ್ ವಂಚಕರಿಗೆ 2...
17-12-25 11:14 am
ಕದ್ರಿಯಲ್ಲಿ ಬೈಕ್ ಕದ್ದು ಭಟ್ಕಳದಲ್ಲಿ ಮಹಿಳೆಯ ಸರ ಕಸ...
16-12-25 10:35 pm
Mangalore Crime, Robbery, Mukka: 'ಬಂಗಾರ್ ಒಲ್ಪ...
15-12-25 10:26 pm
Udupi Murder, Brahmavar, Update: ಕುಡಿದ ಮತ್ತಿನ...
15-12-25 05:37 pm