ಬ್ರೇಕಿಂಗ್ ನ್ಯೂಸ್
06-09-21 01:50 pm Udupi Correspondent ಕರಾವಳಿ
ಉಡುಪಿ, ಸೆ.6 : ಬ್ಯಾಂಕಿನಲ್ಲಿ ಭದ್ರವಾಗಿರಲಿ ಅಂತ ಇಟ್ಟಿದ್ದ ಫಿಕ್ಸೆಡ್ ಡೆಪಾಸಿಟ್ ಹಣವೇ ಕಾಣೆಯಾಗಿದ್ದು ಆನಂತರ ನ್ಯಾಯಕ್ಕಾಗಿ ಕಾನೂನು ಹೋರಾಟ ನಡೆಸಿದ ವ್ಯಕ್ತಿಗೆ ಗ್ರಾಹಕರ ನ್ಯಾಯಾಲಯದಲ್ಲಿ ಗೆಲುವು ಸಿಕ್ಕಿದೆ.
ಕುಂದಾಪುರದ ಉಪ್ಪೂರು ನಿವಾಸಿ ಹರೀಶ್ ಗುಡಿಗಾರ್ ಹಣ ಕಳೆದುಕೊಂಡವರು. ಬೆಂಗಳೂರಿನಲ್ಲಿ ನೌಕರಿ ಮಾಡುತ್ತಿದ್ದಾಗ ಮಲ್ಲೇಶ್ವರಂನ ಸ್ಟೇಟ್ ಬ್ಯಾಂಕಿನಲ್ಲಿ ಸೇವಿಂಗ್ಸ್ ಬ್ಯಾಂಕ್ ಖಾತೆ ಹೊಂದಿದ್ದರು. ಊರಿನಲ್ಲಿ ಸ್ವಂತದೊಂದು ಮನೆ ನಿರ್ಮಿಸಬೇಕೆಂದು ಅಕೌಂಟ್ನಲ್ಲಿ ಹಣ ಕೂಡಿಟ್ಟಿದ್ದರು. ಬೆಂಗಳೂರು ತೊರೆದ ಬಳಿಕ 2019ರಲ್ಲಿ ಉಡುಪಿಯ ಸಂತೆಕಟ್ಟೆಯ ಎಸ್ಬಿಐ ಬ್ರಾಂಚಿಗೆ ತಮ್ಮ ಖಾತೆಯನ್ನು ವರ್ಗಾವಣೆ ಮಾಡಿದ್ದರು. ತನ್ನ ದುಡಿಮೆಯ ಐದೂವರೆ ಲಕ್ಷ ರೂ.ವನ್ನು ಹರೀಶ್ ಫಿಕ್ಸೆಡ್ ಡಿಪಾಸಿಟ್ ಆಗಿ ಇಟ್ಟಿದ್ದರು.
ಈ ನಡುವೆ, 2019 ಆಗಸ್ಟ್ 23 ರಂದು ಮೊಬೈಲ್ಗೆ ಬಂದ ಮೆಸೇಜ್ ಗಮನಿಸಿ ಬ್ಯಾಂಕಿಗೆ ತೆರಳಿ ನೋಡಿದಾಗ, ಫಿಕ್ಸೆಡ್ ಡೆಪಾಸಿಟ್ನಲ್ಲಿದ್ದ ಹಣವೇ ಮಂಗ ಮಾಯವಾಗಿತ್ತು. ಅದರಲ್ಲಿ, ರೂ. 6360 ಮಾತ್ರ ಉಳಿದಿತ್ತು. ಹಣ ಕಳೆದುಕೊಂಡ ಹರೀಶ್ ಪೊಲೀಸರಿಗೆ ದೂರು ಕೊಟ್ಟಿದ್ದರು. ಬ್ಯಾಂಕ್ ಮ್ಯಾನೇಜರ್ ಬಳಿ ಕೇಳಿದರೂ, ಯಾವುದೇ ಪ್ರಯೋಜನ ಆಗಲಿಲ್ಲ. ಎರಡು ವರ್ಷ ಹಣ ಕಳೆದುಕೊಂಡು ಓದ್ದಾಡಿದ ಹರೀಶ್, ಬಳಿಕ ಗ್ರಾಹಕರ ನ್ಯಾಯಾಲಯಕ್ಕೆ ಹೋಗಿದ್ದಾರೆ.
ಉಡುಪಿಯ ಮಾನವ ಹಕ್ಕುಗಳ ಪ್ರತಿಷ್ಠಾನದ ಅಧ್ಯಕ್ಷ ರವೀಂದ್ರನಾಥ್ ಶಾನುಬಾಗ್ ಬಳಿ ತಮ್ಮ ಅಳಲನ್ನು ತೋಡಿಕೊಂಡು ಗ್ರಾಹಕ ನ್ಯಾಯಾಲಯದ ಕದ ತಟ್ಟಿದರು. ಎಲ್ಲ ತನಿಖೆ ನಡೆದ ಬಳಿಕ ಹರೀಶ್ ಪರವಾಗಿ ತೀರ್ಪು ಬಂದಿತ್ತು. ಕಳೆದುಕೊಂಡ ಹಣವನ್ನು ಬಡ್ಡಿ ಸಮೇತ ಅಂದ್ರೆ, ಐದೂವರೆ ಲಕ್ಷಕ್ಕೆ 10% ಬಡ್ಡಿ ನೀಡಬೇಕು, ಜೊತೆಗೆ 50 ಸಾವಿರ ಪರಿಹಾರ, ಕೋರ್ಟ್ ವೆಚ್ಚ ಎಂದು ಹೆಚ್ಚುವರಿ 10 ಸಾವಿರ ರೂ. ಮೂವತ್ತು ದಿನಗಳ ಒಳಗೆ ನೀಡಬೇಕು ಅಂತ ಗ್ರಾಹಕರ ನ್ಯಾಯಾಲಯ ತೀರ್ಪು ನೀಡಿದೆ.
In public sector bank SBI lacs of fixed deposit is wrong doing customer court given,
03-10-25 06:08 pm
Bangalore Correspondent
DK Shivakumar: ಪವರ್ ಷೇರಿಂಗ್ ಬಗ್ಗೆ ಮಾತಾಡಿದ್ರೆ...
02-10-25 03:50 pm
ಆರ್ ಸಿಬಿ ತಂಡ ಮಾರಾಟಕ್ಕಿಟ್ಟ ಯುನೈಟೆಡ್ ಸ್ಪಿರಿಟ್ಸ್...
02-10-25 02:28 pm
ಹಾಸನದ ನಿಗೂಢ ಸ್ಫೋಟದ ಬೆನ್ನತ್ತಿದ ಪೊಲೀಸರು ; ಸಿಡಿಮ...
01-10-25 10:06 pm
Dharmasthala Case: ಧರ್ಮಸ್ಥಳ ಪ್ರಕರಣ ; ಆದಷ್ಟು ಬ...
30-09-25 07:31 pm
03-10-25 09:09 pm
HK News Desk
ಮಕ್ಕಳ ವಿಡಿಯೋ ಗೇಮ್ ನಲ್ಲೂ ಸೈಬರ್ ಅಪರಾಧ ; ಶಾಲಾ ಹಂ...
03-10-25 04:50 pm
ಮುಂದಿನ ವಾರ ಅಫ್ಘಾನಿಸ್ತಾನದ ತಾಲಿಬಾನ್ ಸಚಿವ ಭಾರತಕ್...
03-10-25 04:48 pm
India-Russia Summit, Vladimir Putin: ಡಿಸೆಂಬರ್...
02-10-25 03:45 pm
ಆರೆಸ್ಸೆಸ್ ಶತಮಾನೋತ್ಸವ ; ಭಾರತ ಮಾತೆಯ ಚಿತ್ರವಿರುವ...
01-10-25 09:44 pm
03-10-25 11:07 pm
Mangalore Correspondent
Puttur Krishna Rao, Baby, Pratibha Kulai: ಕೃಷ...
03-10-25 05:59 pm
Ullal Dasara Issue, Mangalore 2025: ದಸರಾ ಶೋಭಾ...
03-10-25 02:11 pm
ಮಂಗಳೂರಿನಲ್ಲಿ ಗಣತಿ ಕಾರ್ಯಕ್ಕೆ 425 ಮಂದಿ ಗೈರು: ಶಿ...
02-10-25 11:05 pm
Illegal Slaughterhouse in Mangalore: ಬೆನ್ನು ಬ...
02-10-25 10:43 pm
03-10-25 11:28 pm
HK News Desk
ಸುಧಾಮೂರ್ತಿ, ನಿರ್ಮಲಾ ಸೀತಾರಾಮನ್ ಹೆಸರಲ್ಲಿ ಎಐ ವಿಡ...
01-10-25 02:39 pm
Ullal Gold Robbery, Mangalore, CCB police: ಜು...
29-09-25 01:24 pm
ಸಹಾಯ ಕೇಳಿ ಬಂದ ಯುವತಿಯನ್ನು ಮದುವೆಯಾಗುತ್ತೇನೆಂದು ನ...
28-09-25 11:08 pm
ವಾಟ್ಸಪ್ ಮೆಸೇಜ್ ನಂಬಿ ಷೇರು ಮಾರುಕಟ್ಟೆ ಹೂಡಿಕೆ ; ನ...
28-09-25 05:04 pm