ಬ್ರೇಕಿಂಗ್ ನ್ಯೂಸ್
09-09-21 05:58 pm Mangaluru Correspondent ಕರಾವಳಿ
ಉಳ್ಳಾಲ, ಸೆ.9: ಸ್ವಾತಂತ್ರ್ಯ ಪೂರ್ವ ಕಾಲದಿಂದಲೇ ಸಾರ್ವಜನಿಕರು ದಾಟಿ ಹೋಗುತ್ತಿದ್ದ ತೊಕ್ಕೊಟ್ಟು ಒಳಪೇಟೆಯ ರೈಲ್ವೇ ಹಳಿಗಳಿಗಳನ್ನು ಇನ್ನು ಯಾರೂ ದಾಟುವಂತಿಲ್ಲ. ರೈಲ್ವೇ ಇಲಾಖೆಯು ಜನರು ಹಳಿ ದಾಟದಂತೆ ಕಬ್ಬಿಣದ ತಡೆಬೇಲಿ ಹಾಕಿದ್ದು ಇದರ ವಿರುದ್ಧ ಸ್ಥಳೀಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ತೊಕ್ಕೊಟ್ಟು ಓವರ್ ಬ್ರಿಡ್ಜ್ ಅನ್ನೋ ರೈಲ್ವೇ ಮೇಲ್ಸೇತುವೆ ಸಾರ್ವಜನಿಕರು ರೈಲ್ವೇ ಹಳಿ ದಾಟಲಿರುವ ಏಕೈಕ ಅಧಿಕೃತ ಮಾರ್ಗ. ಓವರ್ ಬ್ರಿಡ್ಜ್ ಎಂಬ ಹೆಸರಿನ ಈ ಮೇಲ್ಸೇತುವೆ ತೊಕ್ಕೊಟ್ಟು ಉಳ್ಳಾಲ ಮುಖ್ಯ ರಸ್ತೆಯ ಪ್ರಮುಖ ಕೊಂಡಿಯೂ ಆಗಿದೆ. ಆದರೆ ಸ್ವಾತಂತ್ರ್ಯ ಪೂರ್ವದಿಂದಲೂ ತೊಕ್ಕೊಟ್ಟಿನ ಸ್ಥಳೀಯರು ಮಾತ್ರ ರೈಲ್ವೇ ಹಳಿ ದಾಟಲು ಅಧಿಕೃತ ಓವರ್ ಬ್ರಿಡ್ಜನ್ನು ಬಿಟ್ಟು ಸುಲಭ ಉಪಾಯವೆಂಬಂತೆ ತೊಕ್ಕೊಟ್ಟು ಒಳಪೇಟೆಯ ರೈಲ್ವೇ ಮಾರ್ಗವನ್ನೇ ಅವಲಂಬಿಸಿದ್ದರು. ಕಳೆದ ಹಲವಾರು ವರುಷಗಳಿಂದ ಸ್ಥಳೀಯರು ಈ ಅನಧಿಕೃತ ರೈಲ್ವೇ ಹಳಿ ದಾಟುವ ಪದ್ಧತಿಯನ್ನ ಅನುಸರಿಸಿದ್ದು ಇದರ ಪರಿಣಾಮ ಈ ಪ್ರದೇಶದಲ್ಲಿ ಅನೇಕ ಅಮೂಲ್ಯ ಜೀವಗಳು ರೈಲ್ವೇ ದುರಂತಕ್ಕೆ ಒಳಗಾಗಿ ದಾರುಣ ಸಾವಿಗೀಡಾಗಿದ್ದು ನಡೆದಿತ್ತು.
ಇದೀಗ ರೈಲ್ವೇ ಇಲಾಖೆ ಇದರ ಬಗ್ಗೆ ಎಚ್ಚೆತ್ತು ತೊಕ್ಕೊಟ್ಟು ಒಳಪೇಟೆಯ ರೈಲ್ವೇ ಹಳಿ ಕ್ರಾಸಿಂಗ್ ಬಳಿ ತಿಂಗಳ ಹಿಂದೆ ರೈಲ್ವೇ ಹಳಿ ಅತಿಕ್ರಮಣದ ವಿರುದ್ಧ ಎಚ್ಚರಿಕೆಯ ನಾಮಫಲಕವನ್ನೂ ಹಾಕಿತ್ತು. ಆದರೆ ಇದನ್ನೆಲ್ಲ ಕ್ಯಾರೇ ಮಾಡದ ಇಲ್ಲಿನ ಮಂದಿ ರೈಲ್ವೇ ಹಳಿ ಬದಿಯಲ್ಲೇ ಸಾರಾಸಗಟಾಗಿ ಭರ್ಜರಿ ಮೀನು ವ್ಯಾಪಾರ ಮಾಡುತ್ತಿದ್ದರು. ಇದರ ದುಷ್ಪರಿಣಾಮವೋ ಏನೋ ರೈಲ್ವೇ ಇಲಾಖೆಯವರು ಇಂದು ಏಕಾಏಕಿ ರಕ್ಷಣಾತ್ಮಕ ಕಾರ್ಯವನ್ನ ಕೈಗೊಂಡಿದ್ದಾರೆ.
ರೈಲ್ವೇ ಲೋಕೋಪಯೋಗಿ ಇಲಾಖೆಯ ಹಿರಿಯ ಅಭಿಯಂತರ ಅನಿಲ್ ಅವರ ನೇತೃತ್ವದಲ್ಲಿ ಇಂದು ಬೆಳಗ್ಗಿನಿಂದಲೇ ತೊಕ್ಕೊಟ್ಟು ಒಳಪೇಟೆಯ ರೈಲ್ವೇ ಹಳಿ ಬದಿಗಳಲ್ಲಿ ಕಬ್ಬಿಣದ ಸಲಾಕೆಗಳ ಬೇಲಿ ಅಳವಡಿಸುವ ಕಾಮಗಾರಿಯನ್ನ ಆರಂಭಿಸಲಾಗಿದೆ. ರೈಲ್ವೇ ಇಲಾಖೆಯ ನುರಿತ ವೆಲ್ಡರ್ ಗಳು ರೈಲ್ವೇ ಹಳಿ ದಾಟದಂತೆ ಕಬ್ಬಿಣದ ಬೃಹತ್ ಸಲಾಕೆಗಳ ಬೇಲಿ ರಚಿಸಿಯೇ ಬಿಟ್ಟಿದ್ದಾರೆ.
ಆದರೆ ಸ್ಥಳೀಯ ವ್ಯಾಪಾರಿಗಳು ಮತ್ತು ರಿಕ್ಷಾ ಚಾಲಕರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದು ಸ್ಥಳಕ್ಕೆ ಉಳ್ಳಾಲ ನಗರಸಭಾ ಅಧ್ಯಕ್ಷೆ ಚಿತ್ರಕಲಾ ಚಂದ್ರಕಾಂತ್, ಉಪಾಧ್ಯಕ್ಷರಾದ ಆಯೂಬ್ ಮಂಚಿಲರನ್ನ ಕರೆಸಿದ್ದಾರೆ.
ಸ್ಥಳಕ್ಕೆ ಭೇಟಿ ನೀಡಿದ ನಗರಸಭಾ ಅಧ್ಯಕ್ಷರಾದ ಚಿತ್ರಕಲಾ ಮತ್ತು ಉಪಾಧ್ಯಕ್ಷ ಆಯೂಬ್ ಅವರು ರೈಲ್ವೇ ಹಿರಿಯ ಅಭಿಯಂತರ ಅನಿಲ್ ಅವರಲ್ಲಿ ಮಾತುಕತೆ ನಡೆಸಿದ್ದಾರೆ. ಅನೇಕ ವರ್ಷಗಳಿಂದ ಸ್ಥಳೀಯರು ಇದೇ ರೈಲ್ವೇ ಹಳಿಯನ್ನು ನೆಚ್ಚಿಕೊಂಡಿದ್ದು ತರಾತುರಿಯಲ್ಲಿ ನಿರ್ಬಂಧ ವಿಧಿಸಿದರೆ ಸಮಸ್ಯೆ ಎದುರಾಗುತ್ತದೆ. ಸ್ಥಳೀಯರು ಸುಲಭವಾಗಿ ಹಳಿ ದಾಟಲು ಪರ್ಯಾಯ ವ್ಯವಸ್ಥೆ ಕಲ್ಪಿಸುವಂತೆ ನಗರ ಉಪಾಧ್ಯಕ್ಷರಾದ ಆಯೂಬ್ ಮಂಚಿಲ ರೈಲ್ವೇ ಅಧಿಕಾರಿಯಲ್ಲಿ ಕೇಳಿ ಕೊಂಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ರೈಲ್ವೇ ಅಧಿಕಾರಿಗಳು ನಮಗೆ ತಡೆ ಬೇಲಿ ಹಾಕುವಂತೆ ರೈಲ್ವೇ ಇಲಾಖೆಯಿಂದ ಆದೇಶ ಬಂದಿದ್ದು ಅದನ್ನು ಮೀರಲು ಸಾಧ್ಯವಿಲ್ಲ ಎಂದಿದ್ದಾರೆ.
Mangalore Thokottu Railway officers install rod frame to restrict moment of public people oppose
10-05-25 12:40 pm
Bangalore Correspondent
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
U T Khader, Dinesh Gundurao, Suhas Shetty Mur...
08-05-25 07:50 pm
Karwar high alert: ಕಾರವಾರದಲ್ಲಿ ಹೈ ಎಲರ್ಟ್ ; ಸಮ...
08-05-25 12:23 pm
09-05-25 06:49 pm
HK News Desk
India Pak War: ಭಾರತ ವಾಯುಪಡೆಯಿಂದ ಭೀಕರ ಪ್ರತಿದಾಳ...
09-05-25 12:33 pm
India - Pak War update: ಪಾಕಿಸ್ತಾನದ ಎಫ್ -16, ಎ...
09-05-25 12:00 am
New Pope, Robert Francis Prevost;140 ಕೋಟಿ ಸದಸ...
08-05-25 11:44 pm
Pak drone-missile attack; ಚೈನಾ ಮೇಡ್ ಲಾಹೋರ್ ಏರ...
08-05-25 04:57 pm
09-05-25 11:07 pm
Mangalore Correspondent
Mangalore University, U T Khader, Syndicate M...
09-05-25 06:22 pm
Resham Bariga, Belthangady, Indo Pak War, Ant...
09-05-25 03:24 pm
Suhas Shetty Murder Case, Speaker UT Khader,...
09-05-25 01:32 pm
Ullal accident, Mangalore: ರಸ್ತೆ ದಾಟುತ್ತಿದ್ದ...
08-05-25 10:54 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm