ಬ್ರೇಕಿಂಗ್ ನ್ಯೂಸ್
14-09-21 03:46 pm Mangaluru Correspondent ಕರಾವಳಿ
ಬಂಟ್ವಾಳ, ಸೆ.14: ಕುಡಿದು ತೂರಾಡುತ್ತಾ ಬಂದು ರಸ್ತೆಯಲ್ಲೇ ಮಲಗಿದ್ದ ವ್ಯಕ್ತಿಯೊಬ್ಬನಿಗೆ ಬೈಕ್ ಡಿಕ್ಕಿಯಾಗಿದ್ದು, ಇದರಿಂದ ತೀವ್ರ ಗಾಯಗೊಂಡಿದ್ದ ವ್ಯಕ್ತಿ ಆನಂತರ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ ಘಟನೆ ನಡೆದಿದೆ.
ಬಂಟ್ವಾಳ ತಾಲೂಕಿನ ಸಜಿಪಮೂಡ ಗ್ರಾಮದ ಕೋಯಮಜಲು ಎಂಬಲ್ಲಿ ಘಟನೆ ನಡೆದಿದೆ. ಮೃತ ವ್ಯಕ್ತಿಯನ್ನು ಕೃಷ್ಣಮೂರ್ತಿ ಎಂದು ಗುರುತಿಸಲಾಗಿದೆ. ಘಟನೆ ನಡೆದಿರುವುದು ಸ್ಥಳದಲ್ಲಿದ್ದ ಸಿಸಿಟಿವಿಯಲ್ಲಿ ದಾಖಲಾಗಿದ್ದು, ಕುಡಿದು ತೂರಾಡುತ್ತಾ ಬಂದು ರಸ್ತೆಯಲ್ಲೇ ಮಲಗಿದ್ದ ವ್ಯಕ್ತಿಯ ಮೇಲೆ ಬೈಕ್ ಹರಿದಿದ್ದ ವಿಡಿಯೋ ವೈರಲ್ ಆಗಿದೆ. ಇದಕ್ಕೂ ಮುನ್ನವೇ ಬಂಟ್ವಾಳ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬೈಕ್ ಸವಾರನ ಅತಿವೇಗದ ಚಾಲನೆಯಿಂದಾಗಿ ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ಪಾದಚಾರಿ ವ್ಯಕ್ತಿಗೆ ಡಿಕ್ಕಿಯಾಗಿದ್ದಾಗಿ ಕೇಸು ದಾಖಲಾಗಿತ್ತು.
ಈ ಬಗ್ಗೆ ಚೇತನ್ ಎಂಬವರು ಪೊಲೀಸ್ ದೂರು ನೀಡಿದ್ದರು. ತಾನು ಮೋಟರ್ ಸೈಕಲಿನಲ್ಲಿ ಸಾಗುತ್ತಿದ್ದಾಗ ಮುಂದಿನಿಂದ ತೆರಳುತ್ತಿದ್ದ ಕೆಎ 70 ಇ- 9186 ಸಂಖ್ಯೆಯ ಬೈಕ್ ವ್ಯಕ್ತಿಗೆ ಡಿಕ್ಕಿಯಾಗಿತ್ತು. ಅತಿ ವೇಗ ಮತ್ತು ನಿರ್ಲಕ್ಷ್ಯ ಚಾಲನೆಯಿಂದಾಗಿ ಘಟನೆ ನಡೆದಿತ್ತು ಎಂದು ದೂರು ನೀಡಿದ್ದರಿಂದ ಪೊಲೀಸರು ಅದೇ ರೀತಿ ಸದ್ರಿ ಬೈಕ್ ಸವಾರನ ವಿರುದ್ಧ ಕೇಸು ದಾಖಲಿಸಿದ್ದರು. ಆದರೆ, ಇಂದು ಘಟನಾ ಸ್ಥಳದ ವಿಡಿಯೋ ಹೊರಬಂದಿದ್ದು, ಕುಡಿದು ತೂರಾಡುತ್ತಾ ಬಂದು ರಸ್ತೆಯಲ್ಲೇ ಮಲಗಿದ ವ್ಯಕ್ತಿಯ ಚಿತ್ರಣವನನು ತೆರೆದಿಟ್ಟಿದೆ. ಒಬ್ಬಾತ ರಸ್ತೆಯಲ್ಲಿ ಮಲಗಿದ್ದ ವ್ಯಕ್ತಿಯನ್ನು ನೋಡಿ, ಸರಿದು ವಾಹನ ಚಲಾಯಿಸಿದ್ದರೆ ಹಿಂಬದಿಯಿಂದ ಬಂದಿದ್ದ ಮತ್ತೊಂದು ಬೈಕ್ ಆತನ ಮೇಲಿನಿಂದಲೇ ಹರಿದು ಹೋಗಿತ್ತು.
ಇದರಿಂದ ತೀವ್ರ ಗಾಯಗೊಂಡಿದ್ದ ವ್ಯಕ್ತಿಯನ್ನು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು. ಪ್ರಕರಣ ಅತಿ ವೇಗದ ಚಾಲನೆಯೆಂದು ದಾಖಲಾಗಿದ್ದರೂ, ರಸ್ತೆಯಲ್ಲಿ ರಾತ್ರಿ ವೇಳೆ ಮಲಗಿದ್ದು ಒಂದು ಹಂತಕ್ಕೆ ಬೈಕ್ ಸವಾರನನ್ನು ರಕ್ಷಣೆ ಮಾಡಿದೆ.
Video: Click
Mangalore Drunk man dies after bike goes on him after falling asleep on road in Bantwal. The deceased has been identified as Krishnamurthy. Police have booked a case against the Two wheeler rider for over speed.
03-10-25 06:08 pm
Bangalore Correspondent
DK Shivakumar: ಪವರ್ ಷೇರಿಂಗ್ ಬಗ್ಗೆ ಮಾತಾಡಿದ್ರೆ...
02-10-25 03:50 pm
ಆರ್ ಸಿಬಿ ತಂಡ ಮಾರಾಟಕ್ಕಿಟ್ಟ ಯುನೈಟೆಡ್ ಸ್ಪಿರಿಟ್ಸ್...
02-10-25 02:28 pm
ಹಾಸನದ ನಿಗೂಢ ಸ್ಫೋಟದ ಬೆನ್ನತ್ತಿದ ಪೊಲೀಸರು ; ಸಿಡಿಮ...
01-10-25 10:06 pm
Dharmasthala Case: ಧರ್ಮಸ್ಥಳ ಪ್ರಕರಣ ; ಆದಷ್ಟು ಬ...
30-09-25 07:31 pm
03-10-25 09:09 pm
HK News Desk
ಮಕ್ಕಳ ವಿಡಿಯೋ ಗೇಮ್ ನಲ್ಲೂ ಸೈಬರ್ ಅಪರಾಧ ; ಶಾಲಾ ಹಂ...
03-10-25 04:50 pm
ಮುಂದಿನ ವಾರ ಅಫ್ಘಾನಿಸ್ತಾನದ ತಾಲಿಬಾನ್ ಸಚಿವ ಭಾರತಕ್...
03-10-25 04:48 pm
India-Russia Summit, Vladimir Putin: ಡಿಸೆಂಬರ್...
02-10-25 03:45 pm
ಆರೆಸ್ಸೆಸ್ ಶತಮಾನೋತ್ಸವ ; ಭಾರತ ಮಾತೆಯ ಚಿತ್ರವಿರುವ...
01-10-25 09:44 pm
03-10-25 11:07 pm
Mangalore Correspondent
Puttur Krishna Rao, Baby, Pratibha Kulai: ಕೃಷ...
03-10-25 05:59 pm
Ullal Dasara Issue, Mangalore 2025: ದಸರಾ ಶೋಭಾ...
03-10-25 02:11 pm
ಮಂಗಳೂರಿನಲ್ಲಿ ಗಣತಿ ಕಾರ್ಯಕ್ಕೆ 425 ಮಂದಿ ಗೈರು: ಶಿ...
02-10-25 11:05 pm
Illegal Slaughterhouse in Mangalore: ಬೆನ್ನು ಬ...
02-10-25 10:43 pm
03-10-25 11:28 pm
HK News Desk
ಸುಧಾಮೂರ್ತಿ, ನಿರ್ಮಲಾ ಸೀತಾರಾಮನ್ ಹೆಸರಲ್ಲಿ ಎಐ ವಿಡ...
01-10-25 02:39 pm
Ullal Gold Robbery, Mangalore, CCB police: ಜು...
29-09-25 01:24 pm
ಸಹಾಯ ಕೇಳಿ ಬಂದ ಯುವತಿಯನ್ನು ಮದುವೆಯಾಗುತ್ತೇನೆಂದು ನ...
28-09-25 11:08 pm
ವಾಟ್ಸಪ್ ಮೆಸೇಜ್ ನಂಬಿ ಷೇರು ಮಾರುಕಟ್ಟೆ ಹೂಡಿಕೆ ; ನ...
28-09-25 05:04 pm