ಬ್ರೇಕಿಂಗ್ ನ್ಯೂಸ್
15-09-21 01:38 pm Mangaluru Correspondent ಕರಾವಳಿ
ಮಂಗಳೂರು, ಸೆ.15: ಕೃಷಿ ಅಧ್ಯಯನಕ್ಕಾಗಿ ಫಾರ್ಮ್ ಹೌಸಿಗೆ ತೆರಳಿದ್ದ ಮಂಗಳೂರಿನ ಲೇಡಿ ಡಾಕ್ಟರ್ ಒಬ್ಬರು ಈಜು ಕೊಳ ಮಾದರಿಯ ನೀರಿನ ಹೊಂಡಕ್ಕೆ ಬಿದ್ದು ಸಾವನಪ್ಪಿರುವ ಘಟನೆ ವಿಟ್ಲ ಸಮೀಪದ ಅಡ್ಯನಡ್ಕ ಫಾರ್ಮ್ ನಲ್ಲಿ ನಡೆದಿದೆ.
ಮಂಗಳೂರಿನ ಪ್ರಶಾಂತ ನಗರ ನಿವಾಸಿ ಡಾ.ಮೈಜಿ ಕರೋಲ್ ಫೆರ್ನಾಂಡಿಸ್ (32) ಮೃತರು. ಮೈಜಿ ಫೆರ್ನಾಂಡಿಸ್ ಕೃಷಿ ಬಗ್ಗೆ ಸಂಶೋಧನೆ ನಡೆಸುವ ನಿಟ್ಟಿನಲ್ಲಿ ಅಡ್ಯನಡ್ಕದಲ್ಲಿರುವ ವಾರಣಾಸಿ ಪಾರ್ಮ್ ಹೌಸಿಗೆ ಎರಡು ದಿನಗಳ ಹಿಂದೆ ತೆರಳಿದ್ದರು. ಕೆಲವು ದಿನಗಳ ಹಿಂದೆ ಒಮ್ಮೆ ಬಂದಿದ್ದು ಆನಂತರ ಮನೆಗೆ ತೆರಳಿ ಸೆ.12 ರಂದು ಮತ್ತೆ ಬಂದು ಫಾರ್ಮ್ ಹೌಸಿನಲ್ಲೇ ವಾಸ್ತವ್ಯ ಮಾಡಿದ್ದರು.
ಫಾರ್ಮ್ ಹೌಸ್ನಲ್ಲಿ ನೀರನ್ನು ಕೃತಕವಾಗಿ ಶೇಖರಣೆ ಮಾಡಿರುವ ಈಜು ಕೊಳ ಮಾದರಿಯ ಕೆರೆಯನ್ನು ನೋಡಿದ ಮೈಜಿ ಸ್ವಿಮ್ಮಿಂಗ್ ಡ್ರೆಸ್ ಧರಿಸಿ ಈಜಲೆಂದು ನೀರಿಗೆ ಇಳಿದಿದ್ದರು. ಈ ಸಂದರ್ಭ ಮೈಜಿ ನೀರಿನಲ್ಲಿ ಮುಳುಗಿದ್ದರು ಎನ್ನಲಾಗಿದೆ. ಸ್ವಲ್ಪ ಹೊತ್ತಾದರೂ ಮರಳಿ ಬಾರದ ಕಾರಣ ಅಲ್ಲಿ ಈಜು ಕಲಿಯುವ ವಿದ್ಯಾರ್ಥಿಗಳು ಆತಂಕಗೊಂಡು ಕೊಳದಲ್ಲಿ ಹುಡುಕಾಡಿದ್ದಾರೆ. ಬಳಿಕ ಕೆರೆಯ ತಳದಲ್ಲಿ ಮೈಜಿ ದೇಹ ಪತ್ತೆಯಾಗಿದೆ. ಕೂಡಲೇ ವಿಟ್ಲ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕೊಂಡೊಯ್ದು ಅಲ್ಲಿಂದ ಮಂಗಳೂರಿನ ಆಸ್ಪತ್ರೆಗೆ ತಂದಿದ್ದಾರೆ. ಮಂಗಳೂರಿನ ವೈದ್ಯರು ಪರಿಶೀಲಿಸಿ, ಮೈಜಿ ಮೃತರಾಗಿರುವುದನ್ನು ಖಚಿತಪಡಿಸಿದ್ದಾರೆ.
ಮೈಜಿ ಫೆರ್ನಾಂಡಿಸ್ ಮೆಡಿಕಲ್ ಶಿಕ್ಷಣ ಮುಗಿಸಿ ಡಾಕ್ಟರ್ ಆಗಿದ್ದರೂ, ಪ್ರಾಕ್ಟಿಸ್ ಮಾಡುತ್ತಿರಲಿಲ್ಲ. ಒಂದು ವರ್ಷದ ಹಿಂದೆ ಡಾಕ್ಟರ್ ಕೆಲಸವನ್ನು ಬಿಟ್ಟು ಅಮೆಜಾನ್ ಸಪೋರ್ಟ್ ಟೀಮ್ ನಲ್ಲಿ ವರ್ಕ್ ಮಾಡುತ್ತಿದ್ದರು. ಕೋವಿಡ್ ಕಾರಣ ವರ್ಕ್ ಫ್ರಂ ಹೋಮ್ ಕೆಲಸ ಇದ್ದ ಕಾರಣ ಇದರ ನಡುವೆಯೇ ಕೃಷಿ ಅಧ್ಯಯನಕ್ಕೆ ತೆರಳುತ್ತಿದ್ದರು.
ಕೃಷಿಯ ಬಗ್ಗೆ ಅಪಾರ ಸೆಳೆತ, ಆಸಕ್ತಿ ಇದ್ದುದರಿಂದ ಅಧ್ಯಯನಕ್ಕಾಗಿ ಫಾರ್ಮ್ ಹೌಸ್ ತೆರಳುತ್ತಿದ್ದರು. ನಿನ್ನೆ ಸಂಜೆ, ಫಾರ್ಮ್ ನಲ್ಲಿ ಅಡ್ಡಾಡುತ್ತಿದ್ದ ವೇಳೆ ಈಜು ಕೊಳದ ಬಳಿಗೆ ತೆರಳಿದ್ದರು. ತನ್ನ ಉಡುಗೆ ಮತ್ತು ಚಪ್ಪಲಿಯನ್ನು ಕೆರೆಯ ಬಳಿ ತೆಗೆದಿಟ್ಟು ಸ್ವಿಮ್ ಉಡುಗೆಯಲ್ಲಿ ನೀರಿಗೆ ಇಳಿದಿದ್ದರು ಎನ್ನಲಾಗಿದೆ. ಸಂಜೆ 5.45 ಕ್ಕೆ ಘಟನೆ ನಡೆದಿದ್ದು ನೀರುಗಿಳಿದಾಕೆ ಹೊರಗೆ ಬಾರದಿರುವುದನ್ನು ಗಮನಿಸಿದ ಅಲ್ಲಿ ಈಜು ಕಲಿಯಲು ಬಂದಿದ್ದವರು ಆಕೆಯನ್ನು ಮೇಲೆತ್ತಿದ್ದಾರೆ. ಪ್ರವಾಸಿಗರನ್ನು ಆಕರ್ಷಿಸಲು ಈಜು ಕೊಳವನ್ನು ಮಾಡಲಾಗಿತ್ತು. ಕೆಲವೊಮ್ಮೆ ಸಾಹಸ ಕ್ರೀಡೆಗಳನ್ನು ಅದೇ ಕೊಳದಲ್ಲಿ ಏರ್ಪಡಿಸಿದ್ದೂ ಇದೆ. ಸರಕಾರಿ ಇಲಾಖೆಯ ಹಿರಿಯ ಅಧಿಕಾರಿಗಳು ಇದೇ ಫಾರ್ಮ್ ಹೌಸ್ ನಲ್ಲಿ ಉಳಿದುಕೊಂಡು ಹೋಗುತ್ತಿದ್ದರು. ವಿಟ್ಲ ಠಾಣಾ ಪೊಲೀಸರು ಮಾಹಿತಿ ತಿಳಿದ ತಕ್ಷಣ ಘಟನಾ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.
32-year-old doctor cum Amazon employee Maizy Fernandes from Mangalore who came to Varanasi Farm in Adyanadka, Vittal in the taluk, fell into a pond located inside the farm at around 5.45 pm on Tuesday September 14. She was brought to a private hospital in Mangaluru after initially referring her to Vittal community health centre. The doctors upon examination found that she was no more.
03-10-25 06:08 pm
Bangalore Correspondent
DK Shivakumar: ಪವರ್ ಷೇರಿಂಗ್ ಬಗ್ಗೆ ಮಾತಾಡಿದ್ರೆ...
02-10-25 03:50 pm
ಆರ್ ಸಿಬಿ ತಂಡ ಮಾರಾಟಕ್ಕಿಟ್ಟ ಯುನೈಟೆಡ್ ಸ್ಪಿರಿಟ್ಸ್...
02-10-25 02:28 pm
ಹಾಸನದ ನಿಗೂಢ ಸ್ಫೋಟದ ಬೆನ್ನತ್ತಿದ ಪೊಲೀಸರು ; ಸಿಡಿಮ...
01-10-25 10:06 pm
Dharmasthala Case: ಧರ್ಮಸ್ಥಳ ಪ್ರಕರಣ ; ಆದಷ್ಟು ಬ...
30-09-25 07:31 pm
03-10-25 09:09 pm
HK News Desk
ಮಕ್ಕಳ ವಿಡಿಯೋ ಗೇಮ್ ನಲ್ಲೂ ಸೈಬರ್ ಅಪರಾಧ ; ಶಾಲಾ ಹಂ...
03-10-25 04:50 pm
ಮುಂದಿನ ವಾರ ಅಫ್ಘಾನಿಸ್ತಾನದ ತಾಲಿಬಾನ್ ಸಚಿವ ಭಾರತಕ್...
03-10-25 04:48 pm
India-Russia Summit, Vladimir Putin: ಡಿಸೆಂಬರ್...
02-10-25 03:45 pm
ಆರೆಸ್ಸೆಸ್ ಶತಮಾನೋತ್ಸವ ; ಭಾರತ ಮಾತೆಯ ಚಿತ್ರವಿರುವ...
01-10-25 09:44 pm
03-10-25 11:07 pm
Mangalore Correspondent
Puttur Krishna Rao, Baby, Pratibha Kulai: ಕೃಷ...
03-10-25 05:59 pm
Ullal Dasara Issue, Mangalore 2025: ದಸರಾ ಶೋಭಾ...
03-10-25 02:11 pm
ಮಂಗಳೂರಿನಲ್ಲಿ ಗಣತಿ ಕಾರ್ಯಕ್ಕೆ 425 ಮಂದಿ ಗೈರು: ಶಿ...
02-10-25 11:05 pm
Illegal Slaughterhouse in Mangalore: ಬೆನ್ನು ಬ...
02-10-25 10:43 pm
03-10-25 11:28 pm
HK News Desk
ಸುಧಾಮೂರ್ತಿ, ನಿರ್ಮಲಾ ಸೀತಾರಾಮನ್ ಹೆಸರಲ್ಲಿ ಎಐ ವಿಡ...
01-10-25 02:39 pm
Ullal Gold Robbery, Mangalore, CCB police: ಜು...
29-09-25 01:24 pm
ಸಹಾಯ ಕೇಳಿ ಬಂದ ಯುವತಿಯನ್ನು ಮದುವೆಯಾಗುತ್ತೇನೆಂದು ನ...
28-09-25 11:08 pm
ವಾಟ್ಸಪ್ ಮೆಸೇಜ್ ನಂಬಿ ಷೇರು ಮಾರುಕಟ್ಟೆ ಹೂಡಿಕೆ ; ನ...
28-09-25 05:04 pm