ಬ್ರೇಕಿಂಗ್ ನ್ಯೂಸ್
16-09-21 10:53 am Mangaluru Correspondent ಕರಾವಳಿ
ಮಂಗಳೂರು, ಸೆ.15: ಅಪಘಾತದಲ್ಲಿ ತೀವ್ರ ಗಾಯಗೊಂಡು ನಗರದ ಎಜೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ 23 ವರ್ಷದ ಯುವತಿಯ ಅಂಗಾಂಗಗಳನ್ನು ಕುಂಟುಬಸ್ಥರು ಅಗತ್ಯ ಇದ್ದವರಿಗೆ ನೆರವಾಗಲೆಂದು ದಾನ ಮಾಡಿದ್ದಾರೆ.
ಶಿವಮೊಗ್ಗ ಜಿಲ್ಲೆಯ ಹೊನ್ನಾಳಿ ತಾಲೂಕಿನ ಸೊರಟೂರು ಗ್ರಾಮದಲ್ಲಿ ನಡೆದ ಅಪಘಾತದಲ್ಲಿ ಹಾವೇರಿ ಜಿಲ್ಲೆಯ ಹಲ್ಲೂರು ನಿವಾಸಿ ಕವನಾ ಮರಳಸಿದ್ದಯ್ಯ ಹಿರೇಮಠ್ (23) ಎಂಬ ಯುವತಿ ತೀವ್ರ ಗಾಯಗೊಂಡು ಮಂಗಳೂರಿನ ಆಸ್ಪತ್ರೆಗೆ ದಾಖಲಾಗಿದ್ದರು. ಸೆ.12ರಂದು ಎಜೆ ಆಸ್ಪತ್ರೆಗೆ ದಾಖಲಾಗಿದ್ದ ಯುವತಿಯ ಬ್ರೈನ್ ಡೆಡ್ ಆಗಿತ್ತು. ದೇಹಕ್ಕೆ ಆಗಿರುವ ಗಾಯಗಳು ಗುಣಮುಖ ಆಗದೇ ಇರುವುದು ಮತ್ತು ಬ್ರೇನ್ ಡೆಡ್ ಆಗಿದ್ದರಿಂದ ಕೋಮಾ ಸ್ಥಿತಿಗೆ ಹೋಗಿದ್ದರು. ಬದುಕುವುದು ಸಾಧ್ಯವಿಲ್ಲ ಎಂಬುದನ್ನು ವೈದ್ಯರು ತಿಳಿಸಿದಾಗ, ಕವನಾ ಸೋದರಿಯರು ಆಕೆಯ ಅಂಗಾಂಗ ದಾನಕ್ಕೆ ಮುಂದಾಗಿದ್ದಾರೆ.

ಕರ್ನಾಟಕ ಸರಕಾರ ಜಾರಿಗೆ ತಂದಿರುವ ಜೀವನ ಸಾರ್ಥಕತೆ ಎನ್ನುವ ಯೋಜನೆಯ ಬಗ್ಗೆ ತಿಳಿದು ತಮ್ಮ ಅಂಗಾಂಗ ಯಾರಿಗಾದರೂ ಅಗತ್ಯ ಇದ್ದವರಿಗೆ ನೆರವಾಗಲೆಂದು ಸೋದರಿಯರು ಅಂಗಾಂಗ ದಾನಕ್ಕೆ ಮುಂದಾಗಿದ್ದರು. ಕವನಾ ಕುಟುಂಬಸ್ಥರ ಕೋರಿಕೆಯಂತೆ, ಜೀವನ ಸಾರ್ಥಕತೆ ಯೋಜನೆಯಡಿ ಅಮೂಲ್ಯ ಅಂಗಗಳನ್ನು ಎಜೆ ಆಸ್ಪತ್ರೆಯವರು ಸಂಗ್ರಹಿಸಿದ್ದು, ಅವನ್ನು ಅವಶ್ಯವುಳ್ಳ ವಿವಿಧ ಆಸ್ಪತ್ರೆಗಳಿಗೆ ತಲುಪಿಸಿದ್ದಾರೆ.
ಇದರಂತೆ, ಒಂದು ಕಿಡ್ನಿಯನ್ನು ಎಜೆ ಆಸ್ಪತ್ರೆಯಲ್ಲೇ ಅಗತ್ಯ ಇದ್ದವರಿಗೆ ಟ್ರಾನ್ಸ್ ಪ್ಲಾಂಟ್ ಮಾಡಲಾಗಿದೆ. ಲಿವರ್ ಅನ್ನು ಸಿಎಂಐ ಬೆಂಗಳೂರು ಆಸ್ಪತ್ರೆಗೆ, ಹೃದಯವನ್ನು ಬೆಂಗಳೂರಿನ ಮಣಿಪಾಲ್ ಹಾಸ್ಪಿಟಲ್, ಇನ್ನೊಂದು ಕಿಡ್ನಿ, ಕಾರ್ನಿಯಾ ಮತ್ತು ಚರ್ಮವನ್ನು ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ವರ್ಗಾಯಿಸಲಾಗಿದೆ. ಎಜೆ ಆಸ್ಪತ್ರೆಯಿಂದ ಬೆಂಗಳೂರಿನ ಆಸ್ಪತ್ರೆಗಳಿಗೆ ಮಂಗಳೂರು ಏರ್ಪೋರ್ಟ್ ಮೂಲಕ ಮತ್ತು ಮಣಿಪಾಲ ಆಸ್ಪತ್ರೆಗೆ ಆಂಬುಲೆನ್ಸ್ ಮೂಲಕ ಅಂಗಗಳನ್ನು ತಲುಪಿಸಲಾಗಿದೆ.
Kavana Maralsiddaya Hiremath from Hallur of Haveri district met with accident at Soratur village of Honnali taluk, Shivamogga was shifted to Mangaluru for treatment and was further referred to A J Hospital & Research Centre on September 12.
18-12-25 11:05 pm
HK News Desk
Byrathi Suresh, Mangalore, Karavali: 'ಕರಾವಳಿಗ...
18-12-25 08:40 pm
ಪರಮೇಶ್ವರ್ ಸಿಎಂ ಆಗಲೆಂದು ಒಕ್ಕಲಿಗ, ಲಿಂಗಾಯತ, ದಲಿತ...
18-12-25 04:31 pm
Shivamogga, Gold Chain Robbery, Police: ಕಾಂಗ್...
18-12-25 02:26 pm
ಹೃದಯಾಘಾತ ; ರಸ್ತೆ ಮೇಲೆ ಬಿದ್ದುಕೊಂಡ ಪತಿಯನ್ನು ರಕ್...
18-12-25 02:09 pm
18-12-25 04:34 pm
HK News Desk
ಸಮವಸ್ತ್ರ ಕಳಪೆಯೆಂದು ಸಹಪಾಠಿಗಳ ಅಣಕ ; ನೊಂದ ನಾಲ್ಕನ...
17-12-25 10:27 pm
ಆಸ್ಟ್ರೇಲಿಯಾ ಬೋಂಡಿ ಬೀಚ್ ದಾಳಿ ; ಹೈದ್ರಾಬಾದ್ ಮೂಲದ...
17-12-25 01:38 pm
ಯುಕೆಯ ಮಿಡ್ಲಾಂಡ್ಸ್ ನಲ್ಲಿ ಕನ್ನಡ ರಾಜ್ಯೋತ್ಸವ ; ಬರ...
16-12-25 06:33 pm
ಭಟ್ಕಳ ತಹಸೀಲ್ದಾರ್ ಕಚೇರಿಗೂ ಸ್ಫೋಟದ ಬೆದರಿಕೆ ; ತಮಿ...
16-12-25 01:56 pm
18-12-25 10:51 pm
Udupi Correspondent
ಬಜ್ಪೆ ಪೊಲೀಸರ ಬಗ್ಗೆ ಅವಹೇಳನ, ಆರೋಪಿಗಳಿಗೆ ರಾಜಾತಿಥ...
18-12-25 10:24 pm
ಮಹೇಶ್ ಶೆಟ್ಟಿ ತಿಮರೋಡಿ ಮತ್ತೆ ರಾಯಚೂರಿಗೆ ಗಡೀಪಾರು...
18-12-25 10:52 am
Dharmasthala case, Chinnayya: ಜಾಮೀನು ಸಿಕ್ಕರೂ...
17-12-25 08:54 pm
New year 2026, Mangalore Rules: ಹೊಸ ವರ್ಷಾಚರಣೆ...
17-12-25 08:19 pm
18-12-25 04:53 pm
Mangaluru Correspondent
ಫ್ಲಾಟ್, ಜಾಗವನ್ನು ಮಾರಾಟ ಮಾಡಿ ಸೈಬರ್ ವಂಚಕರಿಗೆ 2...
17-12-25 11:14 am
ಕದ್ರಿಯಲ್ಲಿ ಬೈಕ್ ಕದ್ದು ಭಟ್ಕಳದಲ್ಲಿ ಮಹಿಳೆಯ ಸರ ಕಸ...
16-12-25 10:35 pm
Mangalore Crime, Robbery, Mukka: 'ಬಂಗಾರ್ ಒಲ್ಪ...
15-12-25 10:26 pm
Udupi Murder, Brahmavar, Update: ಕುಡಿದ ಮತ್ತಿನ...
15-12-25 05:37 pm