ಬ್ರೇಕಿಂಗ್ ನ್ಯೂಸ್
17-09-21 05:55 pm Mangaluru Correspondent ಕರಾವಳಿ
ಮಂಗಳೂರು, ಸೆ.17: ಪ್ರಧಾನಿ ಮೋದಿ ಜನ್ಮದಿನವನ್ನು ಯುವ ಕಾಂಗ್ರೆಸ್ ವತಿಯಿಂದ ರಾಷ್ಟ್ರೀಯ ನಿರುದ್ಯೋಗ ದಿನವಾಗಿ ಆಚರಿಸಲು ಕರೆ ನೀಡಿದ್ದು, ಅದರಂತೆ ಮಂಗಳೂರಿನಲ್ಲಿ ಕಾಂಗ್ರೆಸ್ ಕಾರ್ಯಕರ್ತರು, ನಾಯಕರು ಸೇರಿಕೊಂಡು ವಿಭಿನ್ನ ರೀತಿಯಲ್ಲಿ ಪ್ರತಿಭಟನೆ ವ್ಯಕ್ತಪಡಿಸಿದ್ದಾರೆ.
ನಗರದ ಕ್ಲಾಕ್ ಟವರ್ ಬಳಿ ಸೇರಿದ ಯುವ ಕಾಂಗ್ರೆಸ್ ಕಾರ್ಯಕರ್ತರು ಟೀ ಸ್ಟಾಲ್, ಶೂ ಪಾಲೀಸ್, ಪಕೋಡ ಸ್ಟಾಲ್ ತೆರೆದು ಮೋದಿ ಜನ್ಮದಿನ ಆಚರಣೆಯನ್ನು ಅಣಕಿಸಿದ್ದಾರೆ. ಉದ್ಯೋಗ ಕೊಡುತ್ತೇನೆಂದು ಅಧಿಕಾರಕ್ಕೇರಿದ್ದ ಮೋದಿ, ಕಳೆದ ಬಾರಿ ಪಕೋಡ ಮಾರುವುದು ಕೂಡ ಉದ್ಯೋಗ ಎಂದು ಹೇಳಿಕೆ ನೀಡಿದ್ದು ಭಾರೀ ವಿವಾದಕ್ಕೆ ಕಾರಣವಾಗಿತ್ತು. ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆಯ ಹೆಸರಲ್ಲಿ ಪಕೋಡ ಮತ್ತು ಟೀ ಸ್ಟಾಲ್ ಮಾಡಿ ವಿಭಿನ್ನವಾಗಿ ಟೀಕಿಸಿದ್ದಾರೆ.
ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಲುಕ್ಮಾನ್ ಬಂಟ್ವಾಳ ನೇತೃತ್ವದಲ್ಲಿ ನಿರುದ್ಯೋಗ ದಿನದ ಹೆಸರಲ್ಲಿ ಪ್ರತಿಭಟನಾ ಸಭೆ ನಡೆಸಲಾಗಿದೆ. ಪ್ರತಿಭಟನೆಯಲ್ಲಿ ಮಾಜಿ ಸಚಿವ ರಮಾನಾಥ ರೈ, ಮಾಜಿ ಎಂಎಲ್ಸಿ ಐವಾನ್ ಡಿಸೋಜ, ಮಾಜಿ ಶಾಸಕ ಮೊಯ್ದೀನ್ ಬಾವಾ, ಶಶಿಧರ ಹೆಗ್ಡೆ, ಅಬ್ದುಲ್ ರವೂಫ್, ಶಾಹುಲ್ ಹಮೀದ್, ಪ್ರಕಾಶ್ ಸಾಲ್ಯಾನ್ ಸೇರಿದಂತೆ ಹಲವಾರು ಕಾರ್ಯಕರ್ತರು ಭಾಗವಹಿಸಿದ್ದರು.
ಮೋದಿ ನಿರುದ್ಯೋಗ ಸಮಸ್ಯೆಯನ್ನು ನೀಗಿಸುತ್ತೇನೆಂದು ಅಧಿಕಾರಕ್ಕೆ ಬಂದಿದ್ದರು. ಆದರೆ, ಅಧಿಕಾರಕ್ಕೇರಿದ ಬಳಿಕ ಯುವಕರಿಗೆ ಪಕೋಡ ಮಾರಲು ಹೇಳಿದ್ದರು. ಉನ್ನತ ಶಿಕ್ಷಣ ಪಡೆದು ವರ್ಷಂಪ್ರತಿ ಲಕ್ಷಾಂತರ ಯುವಕರು ಹೊರಬರುತ್ತಿದ್ದಾರೆ. ಅವರೆಲ್ಲ ಪಕೋಡ ಮಾರುವುದನ್ನೇ ಮಾಡಬೇಕಾ ಎಂದು ಪ್ರಶ್ನೆ ಮಾಡಿದ ರಮಾನಾಥ ರೈ, ಇಂದು ಮೋದಿಯವರು 71ನೇ ವರ್ಷದ ಜನ್ಮದಿನ ಆಚರಿಸುತ್ತಿದ್ದಾರೆ. ಅದರ ಲೆಕ್ಕದಲ್ಲಿ ಬಿಜೆಪಿಯವರು ಅಲ್ಲಲ್ಲಿ ಕಾರ್ಯಕ್ರಮ ಏರ್ಪಡಿಸಿದ್ದಾರೆ. ಇವರು ಯಾಕೆ ಯುವಕರ ನಿರುದ್ಯೋಗ ಸಮಸ್ಯೆಗೆ ಉತ್ತರ ಕೊಟ್ಟಿಲ್ಲ. ಕನಿಷ್ಠ ಖಾಲಿ ಇರುವ ಸರಕಾರಿ ಹುದ್ದೆಗಳನ್ನಾದರೂ ತುಂಬಿದರೆ ಲಕ್ಷಾಂತರ ಮಂದಿಗೆ ಉದ್ಯೋಗ ಸಿಗಬಹುದು. ಆದರೆ, ಮೋದಿಯವರು ಕಾಂಗ್ರೆಸ್ ಮಾಡಿದ್ದ ಸಂಸ್ಥೆಗಳನ್ನೇ ಮಾರಲು ಹೊರಟಿದ್ದಾರೆ. ಏರ್ಪೋರ್ಟ್, ರೈಲ್ವೇ, ಬಿಎಸ್ಸೆನ್ನೆಲ್ ಮಾರಿ, ಅದಾನಿ ಅಂಬಾನಿಯನ್ನು ಪೋಷಣೆ ಮಾಡುತ್ತಿದ್ದಾರೆ ಎಂದು ಮಾಜಿ ಸಚಿವ ರಮಾನಾಥ ರೈ ಟೀಕಿಸಿದರು.
Mangalore The Youth Congress has decided to observe National Unemployment Day tomorrow to mark the birthday of Prime Minister Narendra Modi on September 17. This may be seen as a counter to the BJP’s decision to begin its 20-day Seva Samarpan Abhiyan under which the party is set to undertake a slew of mass contact programmes and public service activities. The day also marks 20 years in public service for PM Modi.
09-09-25 10:52 pm
Bangalore Correspondent
U T Khader: ಯುಟಿ ಖಾದರ್ ಏಕಪಕ್ಷೀಯ ತೀರ್ಮಾನ ತೆಗೆದ...
09-09-25 09:14 pm
Shivamogga Accident: ಸೆ.25ಕ್ಕೆ ಹಸೆಮಣೆ ಏರಬೇಕಿದ...
08-09-25 08:07 pm
ವೀರಶೈವ ಲಿಂಗಾಯತರು ಹಿಂದು ಬದಲು ಇತರರು ಎಂದು ನಮೂದಿಸ...
08-09-25 06:48 pm
ಮಸೀದಿ ಎದುರಲ್ಲಿ ಗಣೇಶ ವಿಸರ್ಜನೆ ವೇಳೆ ಕಲ್ಲು ತೂರಾಟ...
08-09-25 05:21 pm
10-09-25 04:22 pm
HK News Desk
ನೇಪಾಳದಲ್ಲಿ ಹಿಂಸಾಚಾರ ತೀವ್ರ ; ದೇಶ ಬಿಟ್ಟು ಓಡಿದ ಪ...
09-09-25 11:09 pm
ನೂತನ ಉಪ ರಾಷ್ಟ್ರಪತಿಯಾಗಿ ಎನ್.ಡಿ.ಎ ಮೈತ್ರಿಕೂಟದ ಸಿ...
09-09-25 09:38 pm
ಕಾಸರಗೋಡು ; ರಾಷ್ಟ್ರೀಯ ಹೆದ್ದಾರಿ ದಾಟಲೆತ್ನಿಸಿದ ಮಹ...
08-09-25 11:06 pm
ನೇಪಾಳದಲ್ಲಿ ಸೋಶಿಯಲ್ ಮೀಡಿಯಾ ಬ್ಯಾನ್ ; ದೇಶಾದ್ಯಂತ...
08-09-25 10:59 pm
11-09-25 02:45 pm
Mangalore Correspondent
ಬಿಜೆಪಿ ಬಗ್ಗೆ ಪುತ್ತಿಲ ಪರಿವಾರದ ಅಸಮಾಧಾನ ; ಭರವಸೆ...
11-09-25 01:40 pm
Headline Karnataka, Social Campaigning, Manga...
11-09-25 11:34 am
ಧರ್ಮಸ್ಥಳ ಕೇಸ್ ; ವಿಚಾರಣೆ ಮುಗಿಸಿ ಸತ್ಯಕ್ಕೆ ಜಯ ಎನ...
10-09-25 10:50 pm
Yenepoya Hospital, Mangalore: ಯೆನಪೋಯ ಆಸ್ಪತ್ರೆ...
10-09-25 08:46 pm
11-09-25 02:25 pm
HK STAFF
Mangalore Police, Communial Case, Arrest, Cri...
08-09-25 10:34 pm
ಮಂಗಳೂರು ಏರ್ಪೋರ್ಟ್ ಟರ್ಮಿನಲ್ ಬಿಲ್ಡಿಂಗ್ ಧ್ವಂಸ ಬೆ...
07-09-25 03:34 pm
Mangalore SAF Police Constable, Arrest: ವಕೀಲ...
06-09-25 08:32 pm
60 Crore Fraud, Actress Shilpa Shetty, Raj Ku...
06-09-25 07:45 pm