ಬ್ರೇಕಿಂಗ್ ನ್ಯೂಸ್
24-09-21 05:14 pm Mangaluru Correspondent ಕರಾವಳಿ
ಮಂಗಳೂರು, ಸೆ.24: ಇತ್ತೀಚೆಗೆ ತನ್ನ ಪತ್ನಿ ಮತ್ತು ಮಕ್ಕಳು ಕಾಣೆಯಾಗಿದ್ದಾರೆಂದು ನಗರದ ಅಶೋಕ ನಗರದಲ್ಲಿ ನೆಲೆಸಿರುವ ಮೂಲತಃ ಉತ್ತರ ಕರ್ನಾಟಕ ಮೂಲದ ವ್ಯಕ್ತಿಯೊಬ್ಬ ಉರ್ವಾ ಠಾಣೆಯಲ್ಲಿ ದೂರು ನೀಡಿದ್ದ. ಪೊಲೀಸರು ಪ್ರಕರಣದ ಬಗ್ಗೆ ತನಿಖೆ ನಡೆಸಿದಾಗ, ಇಡೀ ಪ್ರಕರಣ ದೂರುದಾರನ ಕೊರಳನ್ನೇ ಸುತ್ತಿಕೊಂಡಿದೆ.
ಸೆ.18ರಂದು ರೇಣುಕಾ (30) ಮತ್ತು ಇಬ್ಬರು ಮಕ್ಕಳು ಕಾಣೆಯಾಗಿದ್ದಾಗಿ ಅಶೋಕ ನಗರದ ನಿವಾಸಿ ನಾಗರಾಜ ಹಾಲಪ್ಪ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದ. ಇದಕ್ಕೂ ಮುನ್ನ ನಾಗರಾಜ್ ತನ್ನ ಊರಿಗೆ ತೆರಳಿದ್ದು, ಎರಡು ದಿನಗಳ ಹಿಂದೆ ಮಂಗಳೂರಿಗೆ ಮರಳಿ, ಮನೆಗೆ ತೆರಳಿದಾಗ ಪತ್ನಿ ಮತ್ತು ಮಕ್ಕಳು ಮನೆಯಲ್ಲಿ ಇರಲಿಲ್ಲ. ಬಾಡಿಗೆ ಮನೆಯಾಗಿದ್ದರಿಂದ ಮಾಲಕರ ಬಳಿ ಕೇಳಿದರೆ, ಆಕೆ ಆಂಟಿ ಮನೆಗೆಂದು ಮಕ್ಕಳ ಜೊತೆಗೆ ತೆರಳುವುದಾಗಿ ಹೇಳಿ ಹೋಗಿದ್ದಳು ಎಂದಿದ್ದರು. ಮರುದಿನವೂ ಬಾರದೇ ಇದ್ದುದರಿಂದ ನಾಗರಾಜ ಪೊಲೀಸರಿಗೆ ದೂರು ನೀಡಿದ್ದ.
ಪೊಲೀಸರು ಆನಂತರ ಆಕೆಯ ಮೊಬೈಲ್ ನಂಬರ್ ಪಡೆದು ತನಿಖೆ ನಡೆಸಿದಾಗ, ಆಕೆ ತನ್ನ ಊರು ಗದಗಕ್ಕೆ ತೆರಳಿರುವುದು ತಿಳಿದುಬಂದಿದೆ. ಅಲ್ಲದೆ, ರೇಣುಕಾಳ ನಿಜ ವಿಚಾರವೂ ಹೊರಬಂದಿದೆ. ಆಕೆಯ ಮೊದಲ ಗಂಡ ತೀರಿಕೊಂಡಿದ್ದು, ಆನಂತರ ನಾಗರಾಜ ಹಾಲಪ್ಪನ ಪರಿಚಯ ಆಗಿತ್ತು. ಈತನ ಜೊತೆ ಭವಿಷ್ಯ ಕಂಡುಕೊಳ್ಳಬಹುದೆಂಬ ಲೆಕ್ಕಾಚಾರದಲ್ಲಿ ಇಬ್ಬರು ಮಕ್ಕಳೊಂದಿಗೆ ಬಂದಿದ್ದು ಮಂಗಳೂರಿನ ಅಶೋಕ ನಗರದಲ್ಲಿ ಮನೆ ಮಾಡಿಕೊಂಡಿದ್ದರು.
ಅಲ್ಲಿ ನಾಗರಾಜ ಮತ್ತು ರೇಣುಕಾ ಗಂಡ – ಹೆಂಡತಿಯೆಂದೇ ಹೇಳಿಕೊಂಡಿದ್ದರು. ಸ್ಥಳೀಯರೆಲ್ಲ ಅದನ್ನೇ ನಂಬಿದ್ದರು. ಆದರೆ, ಇವರ ಮಧ್ಯೆ ಮದುವೆಯಾಗಿರಲಿಲ್ಲ. ಇತ್ತೀಚೆಗೆ, ನಾಗರಾಜನ ವರ್ತನೆಯಿಂದ ರೇಣುಕಾ ಬೇಸತ್ತಿದ್ದು, ಈತನ ಜೊತೆಗಿರುವುದಕ್ಕಿಂತ ಒಬ್ಬಂಟಿಯಾಗಿರುವುದೇ ಲೇಸು ಎಂದು ತೀರ್ಮಾನಿಸಿದ್ದಳು. ವಾರದ ಹಿಂದೆ ನಾಗರಾಜ ತನ್ನ ಊರಿಗೆಂದು ತೆರಳಿದ್ದ ಸಂದರ್ಭದಲ್ಲೇ ರೇಣುಕಾ ಕೂಡ ತನ್ನ ಮಕ್ಕಳೊಂದಿಗೆ ತನ್ನೂರಿಗೆ ಹೊರಟಿದ್ದಳು. ನಾಗರಾಜ ಹಿಂತಿರುಗಿ ಬಂದು ನೋಡಿದಾಗ, ಪತ್ನಿ, ಮಕ್ಕಳು ಇಲ್ಲದೆ ಚಿಂತೆಗೆ ಒಳಗಾಗಿದ್ದ. ಈಗ ರೇಣುಕಾ ತಾನು ತಾಯಿ ಜೊತೆಗೆ ಒಬ್ಬಂಟಿಯಾಗೇ ಇರುತ್ತೇನೆ. ನಾಗರಾಜನ ಸಹವಾಸ ಬೇಡ ಎಂದು ಪೊಲೀಸರಲ್ಲಿ ಹೇಳಿದ್ದಾಳೆ. ಈ ಬಗ್ಗೆ ಪೊಲೀಸರು ನಾಗರಾಜನಿಗೂ ವಿಷಯ ತಿಳಿಸಿದ್ದು, ನೀನೂ ಒಬ್ಬಂಟಿಯಾಗೇ ಇರು ಎಂದು ಸಲಹೆ ನೀಡಿದ್ದಾರೆ.
The case relating to a woman from Ashok Nagar here going missing with her two children has encountered a curious twist now. The person who complained to the police that his wife and two children had gone missing, was found to be not the missing woman's husband. This truth has come as a rude shock not only to the policemen but also the local people.
03-10-25 06:08 pm
Bangalore Correspondent
DK Shivakumar: ಪವರ್ ಷೇರಿಂಗ್ ಬಗ್ಗೆ ಮಾತಾಡಿದ್ರೆ...
02-10-25 03:50 pm
ಆರ್ ಸಿಬಿ ತಂಡ ಮಾರಾಟಕ್ಕಿಟ್ಟ ಯುನೈಟೆಡ್ ಸ್ಪಿರಿಟ್ಸ್...
02-10-25 02:28 pm
ಹಾಸನದ ನಿಗೂಢ ಸ್ಫೋಟದ ಬೆನ್ನತ್ತಿದ ಪೊಲೀಸರು ; ಸಿಡಿಮ...
01-10-25 10:06 pm
Dharmasthala Case: ಧರ್ಮಸ್ಥಳ ಪ್ರಕರಣ ; ಆದಷ್ಟು ಬ...
30-09-25 07:31 pm
03-10-25 09:09 pm
HK News Desk
ಮಕ್ಕಳ ವಿಡಿಯೋ ಗೇಮ್ ನಲ್ಲೂ ಸೈಬರ್ ಅಪರಾಧ ; ಶಾಲಾ ಹಂ...
03-10-25 04:50 pm
ಮುಂದಿನ ವಾರ ಅಫ್ಘಾನಿಸ್ತಾನದ ತಾಲಿಬಾನ್ ಸಚಿವ ಭಾರತಕ್...
03-10-25 04:48 pm
India-Russia Summit, Vladimir Putin: ಡಿಸೆಂಬರ್...
02-10-25 03:45 pm
ಆರೆಸ್ಸೆಸ್ ಶತಮಾನೋತ್ಸವ ; ಭಾರತ ಮಾತೆಯ ಚಿತ್ರವಿರುವ...
01-10-25 09:44 pm
03-10-25 05:59 pm
Mangalore Correspondent
Ullal Dasara Issue, Mangalore 2025: ದಸರಾ ಶೋಭಾ...
03-10-25 02:11 pm
ಮಂಗಳೂರಿನಲ್ಲಿ ಗಣತಿ ಕಾರ್ಯಕ್ಕೆ 425 ಮಂದಿ ಗೈರು: ಶಿ...
02-10-25 11:05 pm
Illegal Slaughterhouse in Mangalore: ಬೆನ್ನು ಬ...
02-10-25 10:43 pm
D.K. Shivakumar, Mangaluru Dasara: ದೇವರೇ ನನ್ನ...
02-10-25 11:43 am
01-10-25 02:39 pm
Mangalore Correspondent
Ullal Gold Robbery, Mangalore, CCB police: ಜು...
29-09-25 01:24 pm
ಸಹಾಯ ಕೇಳಿ ಬಂದ ಯುವತಿಯನ್ನು ಮದುವೆಯಾಗುತ್ತೇನೆಂದು ನ...
28-09-25 11:08 pm
ವಾಟ್ಸಪ್ ಮೆಸೇಜ್ ನಂಬಿ ಷೇರು ಮಾರುಕಟ್ಟೆ ಹೂಡಿಕೆ ; ನ...
28-09-25 05:04 pm
ಉಡುಪಿ ಬಸ್ ಚಾಲಕ ಸೈಫುದ್ದೀನ್ ಸ್ನೇಹಿತರಿಂದಲೇ ಕೊಲೆ...
28-09-25 04:57 pm