ಬ್ರೇಕಿಂಗ್ ನ್ಯೂಸ್
26-09-21 06:43 pm Mangaluru Correspondent ಕರಾವಳಿ
ಉಡುಪಿ, ಸೆ.26: ಅಮೆರಿಕ ಪ್ರವಾಸದಲ್ಲಿದ್ದ ಪ್ರಧಾನಿ ನರೇಂದ್ರ ಮೋದಿ, ವಾಷಿಂಗ್ಟನ್ ಡಿಸಿಯಲ್ಲಿ ಉಡುಪಿ ಮೂಲದ ಹೊಟೇಲ್ ಉದ್ಯಮಿಗೆ ಸೇರಿದ ರೆಸ್ಟೋರೆಂಟಿಗೆ ತೆರಳಿ, ಉಡುಪಿ ಖಾದ್ಯವನ್ನು ಸವಿದಿದ್ದಾರೆ.
ಬೈಂದೂರು ಮೂಲದ ಆನಂದ್ ಪೂಜಾರಿ ಮತ್ತು ಸುಮಿತಾ ದಂಪತಿ ಕಳೆದ 35 ವರ್ಷಗಳಿಂದ ಅಮೆರಿಕದಲ್ಲಿದ್ದು, ವಾಷಿಂಗ್ಟನ್ ಡಿಸಿಯಲ್ಲಿ ವುಡ್ ಲ್ಯಾಂಡ್ಸ್ ಹೆಸರಲ್ಲಿ ಸ್ಟಾರ್ ಹೊಟೇಲ್ ನಡೆಸುತ್ತಿದ್ದಾರೆ. ಅಲ್ಲಿನ ಭಾರತೀಯರಿಗೆ ದಕ್ಷಿಣ ಭಾರತ ಶೈಲಿಯ ಆಹಾರ, ತಿನಿಸುಗಳನ್ನು ಮಾಡಿಕೊಡುತ್ತಿದ್ದಾರೆ. ಭಾರತೀಯ ಮೂಲದವರು, ಇಲ್ಲಿನ ಅಧಿಕಾರಿಗಳು, ಕೇಂದ್ರ ಸರಕಾರದ ಪ್ರತಿನಿಧಿಗಳು ವಾಷಿಂಗ್ಟನ್ ತೆರಳಿದರೇ ಇದೇ ಹೊಟೇಲಿಗೆ ಬಂದು ಆತಿಥ್ಯ ಪಡೆಯುತ್ತಾರೆ.

ಪ್ರಧಾನಿ ಮೋದಿ ವಾಷಿಂಗ್ಟನ್ ತೆರಳಿದ್ದರಿಂದ ಸೆ.24ರಂದು ಉಡುಪಿ ಮೂಲದ ಹೊಟೇಲ್ ನಲ್ಲಿ ಉಪಾಹಾರ ಸೇವಿಸಿದ್ದಾರೆ. ಇಡ್ಲಿ, ವಡೆ ಸಾಂಬಾರ್ ಮತ್ತು ಎರಡು ರೀತಿಯ ಸ್ವೀಟ್ ಐಟಂಗಳನ್ನು ಮೋದಿ ಸವಿದಿದ್ದಾರೆ. ಈ ಮೂಲಕ ಅಮೆರಿಕಕ್ಕೆ ತೆರಳಿದರೂ, ಉಡುಪಿ ಮೂಲದ ಖಾದ್ಯವನ್ನು ಸವಿಯುವ ಮೂಲಕ ಭಾರತೀಯ ಖಾದ್ಯಕ್ಕೆ ಮೋದಿ ಆದ್ಯತೆ ನೀಡಿದ್ದಾರೆ.
ಈ ವೇಳೆ, ಪ್ರಧಾನಿ ಮೋದಿ ಅವರನ್ನು ಆನಂದ್ ಪೂಜಾರಿ ದಂಪತಿ ಭೇಟಿಯಾಗಿದ್ದು, ಹಾರೈಕೆ ತಿಳಿಸಿದ್ದಾರೆ. ಬೈಂದೂರು ತಾಲೂಕಿನ ಆಲೂರು ಗ್ರಾಮದ ಕಲ್ಲಂಗಡಿ ಮನೆಯ ಬಡಿಯ ಪೂಜಾರಿ – ಗಿರಿಜಾ ದಂಪತಿಯ ಮಗ ಆನಂದ್ ಪೂಜಾರಿ, 35 ವರ್ಷಗಳಿಂದ ಅಮೆರಿಕದಲ್ಲಿದ್ದರೂ, ಪ್ರತಿ ವರ್ಷ ಊರಿಗೆ ಬರುತ್ತಾರೆ. ಈ ಬಾರಿ ಕೊರೊನಾ ಸೋಂಕಿನ ಕಾರಣದಿಂದ ಮೂರು ವರ್ಷಗಳಿಂದ ಊರಿಗೆ ಬಂದಿರಲಿಲ್ಲ.
ಆನಂದ ಪೂಜಾರಿ ದಂಪತಿ ನಾಲ್ಕನೇ ಬಾರಿಗೆ ಮೋದಿಯನ್ನು ಭೇಟಿಯಾಗಿದ್ದು ಆತ್ಮೀಯವಾಗಿ ಮಾತುಕತೆ ನಡೆಸಿದ್ದಾರೆ. ಕ್ವಾಡ್ ಮೀಟ್ ಸಲುವಾಗಿ ಸೆ.23ರಂದು ಅಮೆರಿಕಕ್ಕೆ ತೆರಳಿದ್ದ ಮೋದಿ, ವಿಶ್ವಸಂಸ್ಥೆಯಲ್ಲಿ ಭಾಷಣ ಸೇರಿದಂತೆ ಉಭಯ ರಾಷ್ಟ್ರಗಳ ಸಂಬಂಧ ವೃದ್ಧಿ ವಿಚಾರದಲ್ಲಿ ಮಹತ್ವದ ಮಾತುಕತೆ ನಡೆಸಿದ್ದಾರೆ.
Anand Poojary hosted the Prime Minister in United States and also took care of his diet. Anand Poojary along with his wife who have been living in Washington DC for about 35 years have been running Woodlands Hotel for 25 years,
07-09-26 01:33 pm
HK News Staffer
ಜೆನ್ ಜೀಗಳಿಗೆ ಕಾಂಗ್ರೆಸ್ ಸಿದ್ಧಾಂತ, ಜಾತ್ಯತೀತ ಭಾವ...
05-09-26 04:53 pm
400 ಪಶು ವೈದ್ಯಾಧಿಕಾರಿಗಳ ನೇಮಕಾತಿ ಹಗರಣ ; ಪ್ರತಿ ಹ...
02-09-26 05:06 pm
ಬಿಗ್ ಬಾಸ್ ಸೀಸನ್ 13 ಆರಂಭಕ್ಕೂ ಮುನ್ನ ಸಂಕಷ್ಟ ; ಪ...
31-08-26 08:29 pm
ಇಸ್ಲಾಂ ಶ್ರೇಷ್ಠ ಧರ್ಮ, ನಾನು ಮಠ ಮಂದಿರ ಹೋಗಲ್ಲ, ಹಜ...
30-08-26 10:09 pm
05-09-26 11:55 am
HK News Staffer
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
ಹಾರಾಟದ ವೇಳೆ ಪೈಲೆಟ್ ಅಸ್ವಸ್ಥ ; ದೋಹಾ - ಬೆಂಗಳೂರು...
03-09-26 07:27 pm
ಅಯೋಧ್ಯೆ ರಾಮ ಮಂದಿರಕ್ಕೆ ನೂತನ ಸಿಇಓ ಆಗಿ ನಿವೃತ್ತ ಏ...
02-09-26 08:31 pm
ಸ್ಲೀಪರ್ ಬಸ್ನಲ್ಲಿ ಬಾಲಕಿ ಮೇಲೆ ಅತ್ಯಾಚಾರ ; ಎಚ್ಚೆ...
02-09-26 07:16 pm
07-09-26 09:57 pm
HK News Staffer
ಬಿಜೆಪಿಯವರೇ ಭ್ರಷ್ಟಾಚಾರದಲ್ಲಿ ಕಂಠಪೂರ್ತಿ ಮುಳುಗಿದ್...
07-09-26 01:22 pm
Ujre Wild Elephant: ಉಜಿರೆ ಎಸ್ ಡಿಎಂ ಕಾಲೇಜು ಬಳಿ...
06-09-26 08:09 pm
Ujre Wild Elephant: ಉಜಿರೆ ಎಸ್ಡಿಎಂ ಎಂಜಿನಿಯರಿಂ...
06-09-26 01:14 pm
ಸುಬ್ರಹ್ಮಣ್ಯ ಬಳಿ ಬೆಂಗಳೂರಿಗೆ ತೆರಳುತ್ತಿದ್ದ ಕೆಎಸ್...
06-09-26 12:47 pm
07-09-26 08:56 pm
HK News Staffer
ದೆಹಲಿಯಲ್ಲಿ ಕಟ್ಟಡ ಕುಸಿತಕ್ಕೆ ಏಳು ಬಲಿ ; ನೆಲಮಹಡಿಯ...
07-09-26 07:44 pm
ಮಂಜೇಶ್ವರ ; ಹೊಸಂಗಡಿ ಬಳಿ ಕೂಲಿ ಕಾರ್ಮಿಕನ ಹತ್ಯೆಗೈದ...
07-09-26 04:09 pm
ಹೂ ಕಟಾವಿಗೆ ಹೊರಟಿದ್ದ ಕೂಲಿ ಕಾರ್ಮಿಕರ ದುರಂತ ಅಂತ್ಯ...
07-09-26 03:42 pm
ತಿರುಪತಿ ದರ್ಶನ ಮುಗಿಸಿ ವಾಪಸ್ ಬರುತ್ತಿದ್ದ ಕುಟುಂಬ...
07-09-26 02:06 pm