ಬ್ರೇಕಿಂಗ್ ನ್ಯೂಸ್
27-09-21 01:20 pm Mangaluru Correspondent ಕರಾವಳಿ
ಉಳ್ಳಾಲ, ಸೆ.27: ಹಿರಿಯ ಜನಪದ ವಿದ್ವಾಂಸರು, ಸಾಹಿತಿ ಪ್ರೊ.ಡಾ.ಅಮೃತ ಸೋಮೇಶ್ವರ ಅವರ 86ನೇ ಜನ್ಮದಿನದ ಪ್ರಯುಕ್ತ ಕರ್ನಾಟಕ ಸಾಹಿತ್ಯ ಅಕಾಡೆಮಿಯ 2020ನೇ ಸಾಲಿನ "ಗೌರವಶ್ರೀ" ಪ್ರಶಸ್ತಿ ಪ್ರದಾನ ಮಾಡಲಾಯಿತು.
ಕರ್ನಾಟಕ ಸಾಹಿತ್ಯ ಅಕಾಡೆಮಿ ವತಿಯಿಂದ ಪ್ರದಾನ ಮಾಡಲಾಗುವ 2020ನೇ ಸಾಲಿನ ಗೌರವಶ್ರೀ ಪ್ರಶಸ್ತಿಗೆ ಮಂಗಳೂರಿನ ಹಿರಿಯ ಸಾಹಿತಿ ಮತ್ತು ಜನಪದ ವಿದ್ವಾಂಸರಾದ ಪ್ರೊ.ಡಾ.ಅಮೃತ ಸೋಮೇಶ್ವರ ಅವರನ್ನು ಆಯ್ಕೆ ಮಾಡಲಾಗಿತ್ತು. ಕಳೆದ ಸೆ.12 ರಂದು ಬೆಂಗಳೂರಿನಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭವು ನಡೆದಿತ್ತು. ಅನಾರೋಗ್ಯದ ಕಾರಣ ಸಾಹಿತಿ ಅಮೃತರಿಗೆ ಬೆಂಗಳೂರಿಗೆ ತೆರಳಲು ಆಗಿರಲಿಲ್ಲ. ಇಂದು ಅಮೃತರ ಸೋಮೇಶ್ವರದ ಸ್ವಗೃಹ ಒಲುಮೆಯಲ್ಲಿ "ಗೌರವ ಶ್ರೀ" ಪ್ರಶಸ್ತಿಯನ್ನು ಪ್ರದಾನಿಸಲಾಯಿತು.
ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಬಿ.ವಿ ವಸಂತ್ ಕುಮಾರ್ ಮಾತನಾಡಿ ಅಮೃತರಂತಹ ಮಹಾನ್ ಸಾಹಿತಿಗೆ ಪ್ರಶಸ್ತಿ ಪ್ರದಾನ ಮಾಡಿರುವುದರಿಂದ ಈ ಪ್ರಶಸ್ತಿಯ ಗೌರವ ಇಮ್ಮಡಿಯಾಗಿದೆ. ಅವರ ರಚನೆಯ "ಮಾನವತೆ ಗೆದ್ದಾಗ"ಎಂಬ ಕೃತಿಗೆ ಇಂದು ಅವರೇ ನಿದರ್ಶನರಾಗಿದ್ದಾರೆ. ಸುದೀರ್ಘ ಸಾಹಿತ್ಯ ಜೀವನದಲ್ಲಿ ಅವರು ಅಮೃತತ್ವವನ್ನು ಪ್ರಾಪ್ತಿಸಿದ್ದಾರೆ. ಅವರ ಜೀವನ ಶೈಲಿಯೇ ನಮಗೆಲ್ಲರಿಗೂ ಮಾದರಿ. ಅವರ ಮಾರ್ಗದರ್ಶನ ಅಕಾಡೆಮಿಗೆ ಮುಂದೆಯೂ ಅಗತ್ಯವಿದೆ ಎಂದರು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಸಾಹಿತಿ ಅಮೃತ ಸೋಮೇಶ್ವರ ಅವರು ಮನೆಯಲ್ಲೇ ಪ್ರಶಸ್ತಿ ಪ್ರದಾನದ ಸನ್ನಿವೇಶ ಸೃಷ್ಟಿಸಿದ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಕಾರ್ಯಕ್ಕೆ ಸಂತಸ ವ್ಯಕ್ತಪಡಿಸಿದರು. ನನ್ನ ಪಾಡಿಗೆ ನಾನು ಸಾಹಿತ್ಯ ಸೇವೆ ಮಾಡಿಕೊಂಡು ಬಂದಿದ್ದೇನೆ. ಆಶೆ ,ಆಕಾಂಕ್ಷೆ ಇಲ್ಲದೆ ನನ್ನ ಇತಿ, ಮಿತಿಯಲ್ಲಿ ಮಾಡಿದ ಕೆಲಸವನ್ನ ಗಮನಿಸಿ ಗೌರವಿಸಿದಕ್ಕೆ ಕೃತಜ್ಞತೆ ಅರ್ಪಿಸಿದರು.
ಅಕಾಡೆಮಿ ಅಧ್ಯಕ್ಷರು, ಪದಾಧಿಕಾರಿಗಳು, ಕುಟುಂಬ ಸದಸ್ಯರ ಸಮ್ಮುಖದಲ್ಲಿ ಅಮೃತ ಸೋಮೇಶ್ವರ ಅವರು ಕೇಕ್ ಕತ್ತರಿಸಿ 86ನೇ ಹುಟ್ಟುದಿನವನ್ನ ಆಚರಿಸಲಾಯಿತು. ಅಮೃತರ ಮೊಮ್ಮಗಳಾದ ಸೃಷ್ಟಿ ಸೋಮೇಶ್ವರ ಅವರು ಅಜ್ಜನದ್ದೇ ಸಾಹಿತ್ಯದ 'ಎಂಚಿತ್ತಿ ಮಗನ್ ಪಡೆಯಲ್ ಪಾರ್ವತಿ...' ಎಂಬ ಭಕ್ತಿಗೀತೆಯನ್ನ ಹಾಡಿ ರಂಜಿಸಿದಳು.
ಕರ್ನಾಟಕ ಸಾಹಿತ್ಯ ಅಕಾಡೆಮಿಯ ರಿಜಿಸ್ಟ್ರಾರ್ ಆದ ಎನ್. ಕರಿಯಪ್ಪ , ಪದಾಧಿಕಾರಿಗಳಾದ ಹರೀಶ್ ಕುಮಾರ್, ಡಾ.ಬಿ.ಎಂ ಶರಭೇಂದ್ರ ಸ್ವಾಮಿ, ಮಂಗಳೂರು ಆಕಾಶವಾಣಿಯ ಸೂರ್ಯನಾರಾಯಣ ಭಟ್, ಅಮೃತ ಸೋಮೇಶ್ವರರ ಧರ್ಮ ಪತ್ನಿ ನರ್ಮದಾ, ಮಕ್ಕಳಾದ ಚೇತನ್ ಸೋಮೇಶ್ವರ, ಜೀವನ್ ಸೋಮೇಶ್ವರ, ಸೊಸೆಯಂದಿರಾದ ರಾಜೇಶ್ವರಿ, ಸತ್ಯ ಜೀವನ್, ಮೊಮ್ಮಕ್ಕಳಾದ ಸೃಜನ್ ಸೋಮೇಶ್ವರ, ಸೃಷ್ಟಿ ಸೋಮೇಶ್ವರ ಮೊದಲಾದವರು ಉಪಸ್ಥಿತರಿದ್ದರು.
Ullal Tulu scholar and writer Dr Amrut Someshwar honoured by Sahitya Academy awards Gourawa Shree on 86th birthday. The program was held in Someshwar in Mangalore.
10-05-25 10:40 pm
HK News Desk
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
U T Khader, Dinesh Gundurao, Suhas Shetty Mur...
08-05-25 07:50 pm
10-05-25 11:05 pm
HK News Desk
ಎಸ್-400 ಏರ್ ಡಿಫೆನ್ಸ್ ಸಿಸ್ಟಮ್ ಮತ್ತು ಬ್ರಹ್ಮೋಸ್...
10-05-25 09:24 pm
India and Pakistan, Ceasefire: ಮೂರೇ ದಿನದಲ್ಲಿ...
10-05-25 08:28 pm
India-Pakistan war: ಭಾರತ - ಪಾಕಿಸ್ತಾನ ತಕ್ಷಣದಿಂ...
10-05-25 07:25 pm
Indian Military, Pakistan : ತನ್ನ ಮೂರು ವಾಯುನೆಲ...
10-05-25 01:58 pm
10-05-25 07:10 pm
Mangalore Correspondent
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
Mangalore University, U T Khader, Syndicate M...
09-05-25 06:22 pm
Resham Bariga, Belthangady, Indo Pak War, Ant...
09-05-25 03:24 pm
Suhas Shetty Murder Case, Speaker UT Khader,...
09-05-25 01:32 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm