ಬ್ರೇಕಿಂಗ್ ನ್ಯೂಸ್
28-09-21 10:30 pm Headline Karnataka News Network ಕರಾವಳಿ
ಉಳ್ಳಾಲ, ಸೆ.28: ಉಳ್ಳಾಲದ ಅಬ್ಬಕ್ಕ ಸರ್ಕಲ್ ನಿಂದ ಓವರ್ ಬ್ರಿಡ್ಜ್ ತನಕದ ಚತುಷ್ಪಥ ರಾಜರಸ್ತೆಯ ಇಕ್ಕೆಲಗಳಲ್ಲಿ ಸರ್ವಿಸ್ ರಸ್ತೆ ನಿರ್ಮಾಣವಾಗಲಿದ್ದು ಶಾಸಕ ಯು.ಟಿ ಖಾದರ್ ಅವರು ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಿದರು.
ಉಳ್ಳಾಲ ಅಬ್ಬಕ್ಕ ಸರ್ಕಲ್ ನಿಂದ ತೊಕ್ಕೊಟ್ಟು ಓವರ್ ಬ್ರಿಡ್ಜ್ ತನಕದ ರಾಜ ರಸ್ತೆಯು ಶಾಸಕ ಯು.ಟಿ.ಖಾದರ್ ಮುತುವರ್ಜಿಯಿಂದ ವರ್ಷಗಳ ಹಿಂದೆ ಚತುಷ್ಪಥ ರಸ್ತೆಯಾಗಿ ಕಾಂಕ್ರಿಟೀಕರಣಗೊಂಡಿತ್ತು. ಇದೀಗ ತೊಕ್ಕೊಟ್ಟು ಓವರ್ ಬ್ರಿಡ್ಜ್ ನಿಂದ ಉಳ್ಳಾಲ ಸಂಪರ್ಕದ ಚತುಷ್ಪಥ ರಾಜ ರಸ್ತೆಯ ಇಕ್ಕೆಲಗಳಿಗೆ ಲೋಕೋಪಯೋಗಿ ಇಲಾಖೆಯ 4.30 ಕೋಟಿ ರೂಪಾಯಿ ಅನುದಾನದಿಂದ ಸರ್ವಿಸ್ ರಸ್ತೆ ನಿರ್ಮಾಣವಾಗಲಿದ್ದು ಮಾಜಿ ಸಚಿವ, ಶಾಸಕ ಯು.ಟಿ.ಖಾದರ್ ಅವರು ನೂತನ ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಿದರು.
ಈ ವೇಳೆ ಮಾತನಾಡಿದ ಖಾದರ್ ಬೆಳೆಯುತ್ತಿರುವ ಉಳ್ಳಾಲದ ಮುಖ್ಯ ರಸ್ತೆಯು ಸುಸಜ್ಜಿತ, ಸುಂದರವಾಗಿರಬೇಕು. ಉಳ್ಳಾಲದಲ್ಲಿ ಅನೇಕ ಶಿಕ್ಷಣ ಸಂಸ್ಥೆಗಳಿದ್ದು ವಿದ್ಯಾರ್ಥಿಗಳಿಗೆ ರಸ್ತೆಯಲ್ಲಿ ಯಾವುದೇ ತೊಂದರೆಗಳಾಗದಂತೆ ತಡೆಯಲು ಸರ್ವಿಸ್ ರಸ್ತೆಯಲ್ಲೇ ಬೈಕ್ ಮತ್ತು ಸೈಕಲ್ ಸವಾರಿಗೆ ಸ್ಪೆಷಲ್ ಟ್ರ್ಯಾಕ್ ಒದಗಿಸಲಾಗಿದೆ. ಡ್ರೈನ್ ಮೇಲೆ ನಡೆದಾಡಲು ಪಾತ್ ವೇಯನ್ನೂ ಕಲ್ಪಿಸಲಾಗಿದೆ. ಮುಂದೆ ಅಬ್ಬಕ್ಕ ಸರ್ಕಲ್ ನಿಂದ ಮುಕ್ಕಚ್ಚೇರಿ ರಸ್ತೆಯನ್ನೂ ಸ್ಮಾರ್ಟ್ ರಸ್ತೆಯನ್ನಾಗಿಸಲು ಲೋಕೋಪಯೋಗಿ ಇಲಾಖೆಯಿಂದ ಅನುದಾನ ಮೀಸಲಿಡಲಾಗಿದ್ದು ಟೆಂಡರ್ ಪ್ರಕ್ರಿಯೆ ಮುಗಿದಿದೆ. ಕಾಮಗಾರಿಗೆ ಶೀಘ್ರ ಚಾಲನೆ ನೀಡಲಾಗುವುದು ಎಂದರು. ಉಳ್ಳಾಲದ ಕೋಟೆಪುರ, ಅಂಬಿಕಾ ರೋಡ್, ಉಳ್ಳಾಲ ಬೈಲ್ ಸೇರಿದಂತೆ ಅನೇಕ ಕಡೆ ಹೈಮಾಸ್ಟ್ ದೀಪಗಳನ್ನ ಅಳವಡಿಸಲಾಗುತ್ತಿದೆ ಎಂದರು.
ಉಳ್ಳಾಲ ನಗರಸಭೆ ಅಧ್ಯಕ್ಷರಾದ ಚಿತ್ರಕಲಾ ಚಂದ್ರಕಾಂತ್, ಉಪಾಧ್ಯಕ್ಷರಾದ ಆಯೂಬ್ ಮಂಚಿಲ, ನಗರಸಭಾ ಆಯುಕ್ತರಾದ ರಾಯಪ್ಪ, ಉಳ್ಳಾಲ ನಗರಸಭಾ ಮಾಜಿ ಅಧ್ಯಕ್ಷರಾದ ಮಹಮ್ಮದ್ ಮುಕ್ಕಚ್ಚೇರಿ, ಯು.ಎ ಇಸ್ಮಾಯಿಲ್, ಭಾಝಿಲ್ ಡಿಸೋಜ, ಸದಸ್ಯರಾದ ಭಾರತಿ, ಶಶಿಕಲಾ, ಸಪ್ನ ಹರೀಶ್, ವೀಣಾ ಡಿಸೋಜ, ರವಿಚಂದ್ರ ಗಟ್ಟಿ,ಪ್ರಮುಖರಾದ ಇಬ್ರಾಹಿಂ ,ಅಶ್ರಫ್,ಅಝೀಝ್ ಕೋಡಿ ,ಸುರೇಶ್ ಭಟ್ನಗರ ,ಮಹಿಳಾ ಕಾಂಗ್ರೆಸ್ನ ದೇವಕಿ,ಮುಸ್ತಫಾ ಅಬ್ದುಲ್ಲ, ಅದ್ದಾಮ ಮೇಲಂಗಡಿ,ರಫೀಕ್ ಮೇಲಂಗಡಿ,ಜಾಫರ್,ಲೋಕೋಪಯೋಗಿ ಇಂಜಿನಿಯರ್ ದಾಸ್ ಪ್ರಕಾಶ್, ಎ.ಇ ಚಂದ್ರಶೇಖರಯ್ಯ ಮೊದಲಾದವರು ಉಪಸ್ಥಿತರಿದ್ದರು.
Ullal Bike cycle riders get separate track founding laid by MLA UT Khader. The track will lead from Abbakka circle to Thokottu over bridge.
10-05-25 10:40 pm
HK News Desk
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
U T Khader, Dinesh Gundurao, Suhas Shetty Mur...
08-05-25 07:50 pm
10-05-25 11:05 pm
HK News Desk
ಎಸ್-400 ಏರ್ ಡಿಫೆನ್ಸ್ ಸಿಸ್ಟಮ್ ಮತ್ತು ಬ್ರಹ್ಮೋಸ್...
10-05-25 09:24 pm
India and Pakistan, Ceasefire: ಮೂರೇ ದಿನದಲ್ಲಿ...
10-05-25 08:28 pm
India-Pakistan war: ಭಾರತ - ಪಾಕಿಸ್ತಾನ ತಕ್ಷಣದಿಂ...
10-05-25 07:25 pm
Indian Military, Pakistan : ತನ್ನ ಮೂರು ವಾಯುನೆಲ...
10-05-25 01:58 pm
10-05-25 07:10 pm
Mangalore Correspondent
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
Mangalore University, U T Khader, Syndicate M...
09-05-25 06:22 pm
Resham Bariga, Belthangady, Indo Pak War, Ant...
09-05-25 03:24 pm
Suhas Shetty Murder Case, Speaker UT Khader,...
09-05-25 01:32 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm