ಬ್ರೇಕಿಂಗ್ ನ್ಯೂಸ್
09-10-21 03:51 pm Mangalore Reporter ಕರಾವಳಿ
ಉಳ್ಳಾಲ, ಅ.9 : ಕಾಶ್ಮೀರದಲ್ಲಿ ಹಿಂದುಗಳ ಹತ್ಯೆ ಮತ್ತು ಹಿಂಸಾಚಾರವನ್ನ ಖಂಡಿಸಿ ವಿಶ್ವ ಹಿಂದು ಪರಿಷತ್, ಬಜರಂಗದಳ ಉಳ್ಳಾಲ ಪ್ರಖಂಡದ ವತಿಯಿಂದ ತೊಕ್ಕೊಟ್ಟಿನಲ್ಲಿ ಜಿಹಾದಿ ಪ್ರತಿಕೃತಿಯನ್ನ ದಹಿಸಿ ಪ್ರತಿಭಟನೆ ನಡೆಸಲಾಯಿತು.
ಹಿಂದು ಸಂಘಟನೆ ಮುಖಂಡ ಆಶಿಕ್ ಮಾಡೂರು ಮಾತನಾಡಿ, ಕಾಶ್ಮೀರದಲ್ಲಿ ಆರ್ಟಿಕಲ್ 370 ಕಾಯ್ದೆಯನ್ನ ರದ್ದು ಮಾಡಿದ ಪರಿಣಾಮ ಪಾಕಿಸ್ಥಾನಿ ಜಿಹಾದಿಗಳು, ಕಾಶ್ಮೀರದ ಮುಸ್ಲಿಂ ಮೂಲಭೂತವಾದಿಗಳಲ್ಲಿ ನಡುಕ ಹುಟ್ಟಿದೆ. ಅದಕ್ಕಾಗಿ ಈಗ ಅಲ್ಲಿನ ಹಿಂದುಗಳನ್ನ ಹುಡುಕಿ ಹತ್ಯೆ ಮಾಡುತ್ತಿದ್ದಾರೆ. ಕಾಶ್ಮೀರಿ ಪಂಡಿತರಿಗೆ ವಿಶ್ವ ಹಿಂದು ಪರಿಷತ್ ಬಜರಂಗದಳ ಸದಾ ನೈತಿಕ ಬೆಂಬಲ ನೀಡುತ್ತದೆ. ಎಂಬತ್ತು ಶೇಕಡ ಹಿಂದೂಗಳು ಜಾತಿ ಭೇದ ಮರೆತು ಒಂದಾಗಿ ಜಿಹಾದಿಗಳ ವಿರುದ್ಧ ಸೆಟೆದು ನಿಂತರೆ ಭಾರತದಲ್ಲಿ ನೆಲೆಸುವ ಪ್ರತಿಯೊಬ್ಬರೂ ವಂದೇ ಮಾತರಂ, ಜೈ ಶ್ರೀರಾಂ ಹೇಳಲೇಬೇಕಾದ ಕಾಲ ಬರುತ್ತದೆ ಎಂದರು.
ಭಾರತ ಸ್ವಾತಂತ್ರ್ಯಗೊಂಡ ಸಂದರ್ಭದಲ್ಲಿ ಪಾಕಿಸ್ಥಾನ, ಭಾರತ ಎಂದು ದೇಶವನ್ನ ವಿಂಗಡಿಸಲಾಯಿತು. ಆದರೂ ಇಂದಿಗೂ ಮೂವತ್ತು ಶೇಕಡ ಕಾಶ್ಮೀರ ನಮ್ಮ ಕೈ ತಪ್ಪಲು ಯಾರು ಕಾರಣರೆಂದು ದೇಶದ ಜನರಿಗೆ ತಿಳಿದಿದೆ ಎಂದರು.
ಬಜರಂಗದಳ ಉಳ್ಳಾಲ ನಗರ ಸಂಚಾಲಕ ಅರ್ಜುನ್ ಮಾಡೂರು ಮಾತನಾಡಿ ಕಾಶ್ಮೀರಿ ಪಂಡಿತರನ್ನ ಅಲ್ಲಿನ ಮೂಲ ನಿವಾಸಿಗಳೆಂದು ಪರಿಗಣಿಸಿದರೂ ಸಹ ಅಲ್ಲಿನ ಮುಸ್ಲಿಂ ಮೂಲಭೂತವಾದಿಗಳು, ಜಿಹಾದಿಗಳು ಹಿಂದೂಗಳ ಹತ್ಯೆ ನಡೆಸುತ್ತಿದ್ದಾರೆ. ಕಾಶ್ಮೀರದಲ್ಲಿ ಅರಾಜಕತೆ ಸೃಷ್ಟಿಸಿದ ಕ್ರಿಮಿಗಳಿಗೆ ವಿಶ್ವ ಹಿಂದೂ ಪರಿಷತ್, ಬಜರಂಗದಳ ತಕ್ಕ ಉತ್ತರ ನೀಡಲಿದೆ ಎಂದು ಎಚ್ಚರಿಸಿದರು.
ವಿಶ್ವ ಹಿಂದೂ ಪರಿಷತ್ ಉಳ್ಳಾಲ ನಗರ ಪ್ರಖಂಡ ಅಧ್ಯಕ್ಷ ನಾರಾಯಣ ಕುಂಪಲ, ಗೌರವಾಧ್ಯಕ್ಷರಾದ ಹರಿದಾಸ್ ಮಾಡೂರು, ಪ್ರಮುಖರಾದ ಪದ್ಮನಾಭ ಮರ್ಕೆದು, ಬಿಜೆಪಿ ಕ್ಷೇತ್ರಾಧ್ಯಕ್ಷ ಚಂದ್ರಹಾಸ ಪಂಡಿತ್ ಹೌಸ್, ಉಪಾಧ್ಯಕ್ಷರಾದ ರವಿಶಂಕರ್ ಸೋಮೇಶ್ವರ, ಪ್ರಮುಖರಾದ ಪುರುಷೋತ್ತಮ ಕಲ್ಲಾಪು, ಸತೀಶ್ ಶೆಟ್ಟಿ ಮೊದಲಾದವರು ಪ್ರತಿಭಟನೆಯಲ್ಲಿದ್ದರು.
Bajrang Dal had given a nation wide call to hold protests against the assassination of Hindus and atrocities heaped on them in Kashmir.
11-05-25 01:21 pm
HK News Desk
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
11-05-25 11:02 pm
HK News Desk
ಭಾರತದ ಮೇಲೆ ದಾಳಿಗೆ ಟರ್ಕಿ ಡ್ರೋಣ್ ಬಳಕೆ ; ಒಂದೇ ರಾ...
11-05-25 06:25 pm
ಆಪರೇಷನ್ ಸಿಂಧೂರ ಇನ್ನೂ ಮುಗಿದಿಲ್ಲ.. ಕದನ ವಿರಾಮ ಘೋ...
11-05-25 06:12 pm
ಜಮ್ಮು ಗಡಿಯಲ್ಲಿ ಪಾಕ್ ಶೆಲ್ ದಾಳಿ ; ಬಿಎಸ್ಎಫ್ ಯೋಧ,...
11-05-25 01:43 pm
India Pak War: ಪೆಟ್ಟು ತಿಂದರೂ ಬಿಡದ ಪಾಕ್ ನರಿಬುದ...
10-05-25 11:05 pm
11-05-25 05:01 pm
Mangalore Correspondent
Drone Ban, Mangalore, Mysuru: ಮಂಗಳೂರು, ಮೈಸೂರಿ...
10-05-25 07:10 pm
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
Mangalore University, U T Khader, Syndicate M...
09-05-25 06:22 pm
Resham Bariga, Belthangady, Indo Pak War, Ant...
09-05-25 03:24 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm