ಬ್ರೇಕಿಂಗ್ ನ್ಯೂಸ್
12-10-21 05:12 pm Mangalore Reporter ಕರಾವಳಿ
ಸುಳ್ಯ, ಅ.12: ತನ್ನನ್ನು ಮತಾಂತರಿಸಿ, ಮದುವೆಯಾದ ಬಳಿಕ ಬೀದಿಪಾಲು ಮಾಡಿದ್ದನ್ನು ವಿರೋಧಿಸಿ ಗಂಡನ ಮನೆಯಲ್ಲೇ ಪ್ರತಿಭಟನೆ ಕುಳಿತು ಸುದ್ದಿಯಾಗಿದ್ದ ಆಸಿಯಾ ಮತ್ತೆ ನಿರಶನಕ್ಕಿಳಿದಿದ್ದಾರೆ. ಒಂದು ವರ್ಷದಿಂದ ಗಂಡನ ಮನೆಯಲ್ಲೇ ಇದ್ದುಕೊಂಡು ಕುಟುಂಬದ ಜೊತೆಗೇ ಇದ್ದರೂ, ಗಂಡ ಇಬ್ರಾಹಿಂ ಖಲೀಲ್ ಮರಳಿ ಬಾರದೇ ಇರುವುದರಿಂದ ಧೃತಿಗೆಟ್ಟ ಆಸಿಯಾ ಮತ್ತೆ ಪ್ರತಿಭಟನೆಗೆ ಇಳಿದಿದ್ದಾರೆ.
ಗಂಡನ ಕುಟುಂಬಸ್ಥರಿಗೆ ಸೇರಿದ ಸುಳ್ಯ ಪೇಟೆಯ ಗಾಂಧಿನಗರದಲ್ಲಿರುವ ಅಂಗಡಿಯ ಮುಂದೆ ಆಸಿಯಾ ಪ್ರತಿಭಟನೆ ಕುಳಿತಿದ್ದು, ಗಂಡನೇ ಬರಬೇಕು ಎಂದು ಹಠ ಹಿಡಿದಿದ್ದಾಳೆ. ಮೂಲತಃ ಕೇರಳದ ಕಣ್ಣೂರಿನ ನಿವಾಸಿಯಾಗಿರುವ ಶಾಂತಿ ಜೂಬಿ ಎನ್ನುವ ಹಿಂದು ಯುವತಿಯನ್ನು ಬೆಂಗಳೂರಿನಲ್ಲಿ ಕೆಲಸಕ್ಕಿದ್ದ ವೇಳೆ ಇಬ್ರಾಹಿಂ ಕಟ್ಟೆಕಾರ್ ಎಂಬಾತ ಪ್ರೀತಿಯ ನೆಪದಲ್ಲಿ ಮತಾಂತರಿಸಿ, ಮದುವೆಯಾಗಿದ್ದ. ಆನಂತರ, ಜೊತೆಗೆ ಬಾಳುವುದನ್ನು ಬಿಟ್ಟು ಆಕೆಯನ್ನು ಒಬ್ಬಂಟಿಯಾಗಿ ಬಿಟ್ಟು ಹೋಗಿದ್ದ. ಇಬ್ರಾಹಿಂ ತನ್ನ ಮನೆಯವರ ಸೂಚನೆಯಂತೆ ಯುವತಿಯನ್ನು ಬಿಟ್ಟು ಬಂದಿದ್ದಾನೆ ಎನ್ನಲಾಗಿತ್ತು.
ಆನಂತರ, ಆಸಿಯಾ ಸುಳ್ಯದಲ್ಲಿರುವ ಇಬ್ರಾಹಿಂ ಮನೆಯನ್ನು ಹುಡುಕಿ ಬಂದಿದ್ದು, ಆತ ಮಾತ್ರ ನಾಪತ್ತೆಯಾಗಿದ್ದ. ಸುಳ್ಯ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದ್ದರೂ, ವಿವಾದ ಮಾತ್ರ ಇತ್ಯರ್ಥವಾಗಿಲ್ಲ. ಗಂಡನ ಮನೆಯವರ ಕಿರುಕುಳದ ಮಧ್ಯೆಯೇ ಆಸಿಯಾ ಆತನ ಮನೆಯಲ್ಲೇ ಕಾಲ ಕಳೆದಿದ್ದಾಳೆ. ಹೀಗಿದ್ದರೂ, ಇಬ್ರಾಹಿಂ ಮರಳಿ ಬಾರದೆ ದೂರ ಉಳಿದಿದ್ದಾನೆ. ಆಸಿಯಾ ಕಣ್ಣೂರು ಮೂಲದ ಶ್ರೀಮಂತ ಕುಟುಂಬದ ಹುಡುಗಿಯಾಗಿದ್ದು, ಮರಳಿ ಮನೆಗೂ ಹೋಗಲಾಗದೆ, ಇತ್ತ ಗಂಡನ ಜೊತೆಗೂ ಇರಲಾಗದೆ ಲವ್ ಜಿಹಾದ್ ಕರಾಳ ಪಾಶಕ್ಕೆ ಸಿಲುಕಿ ಒಂಟಿಯಾಗಿದ್ದಾಳೆ.
ಮೊದಲು ಆಸಿಯಾ ಪ್ರತಿಭಟನೆಗೆ ಇಳಿದಾಗ ಮುಸ್ಲಿಂ ಸಂಘಟನೆಗಳು ಸಹಕಾರದ ಭರವಸೆ ನೀಡಿದ್ದವು. ಆದರೆ, ಮುಸ್ಲಿಂ ಸಂಘಟನೆಗಳಿಗೆ ಇಬ್ರಾಹಿಂ ಖಲೀಲ್ ಮನೆಯವರಿಂದ ಸಹಕಾರ ಸಿಗದೇ ಇದ್ದುದರಿಂದ ಅವರು ಕೈಬಿಟ್ಟಿದ್ದರು. ಇದೀಗ ಅಂಗಡಿ ಮುಂದೆ ನಿರಶನ ಕುಳಿತಿದ್ದು, ಗಂಡನೇ ಬರಬೇಕೆಂದು ಕಾದು ಕುಳಿತಿದ್ದಾಳೆ.
ಪ್ರೀತಿ, ಮತಾಂತರ, ಮದುವೆ ; ಮುಸ್ಲಿಂ ಲವ್ ಜಿಹಾದ್ ಬಲಿಯಾದ ಯುವತಿ ಬೀದಿಪಾಲು !!
Love Jihad victim Asiya protests against her Husband and family seeking for Justice at Sullia. The Asiya-Ibrahim Khaleel marriage controversy, which had kicked up immense interest last year after Asiya doggedly pursued the family of Khaleel, claiming that she had married Khaleel and that Khaleel had deserted her at the insistence of his father and brother, has surfaced again. As she could not get a solution to the problem, Asiya, has resumed her protest demonstration in front of a shop in Gandhinagar here which is owned by the family of Khaleel.
14-07-25 10:44 pm
Bangalore Correspondent
Shiradi Ghat Accident, Car: ಶಿರಾಡಿ ಘಾಟ್ ; ರಸ್...
14-07-25 01:43 pm
Dr B Saroja Devi Death: 17ನೇ ವಯಸ್ಸಲ್ಲೇ ಚಿತ್ರರ...
14-07-25 12:50 pm
Mantralaya, Tungabhadra River, drowning: ತುಂಬ...
13-07-25 08:37 pm
ಆಧ್ಯಾತ್ಮಿಕ ಸಾಧನೆಯತ್ತ ಚಿತ್ತ ; ಗೋಕರ್ಣ ಬಳಿಯ ದಟ್ಟ...
13-07-25 04:03 pm
14-07-25 03:24 pm
HK News Desk
ಅಹ್ಮದಾಬಾದ್ ವಿಮಾನ ದುರಂತ ; ಭಾರೀ ಅನುಮಾನ ಹುಟ್ಟಿಸಿ...
12-07-25 09:25 pm
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
ಸಾಮೂಹಿಕ ಮತಾಂತರ ; ಮೂರೇ ವರ್ಷಕ್ಕೆ ಚಾಂಗೂರ್ ಬಾಬಾನಿ...
12-07-25 02:15 pm
Coimbatore Serial Blasts, 'Tailor Raja' Arres...
11-07-25 12:08 pm
14-07-25 09:55 pm
Mangalore Correspondent
Mrpl leakgae, Death, Fight: ಅನಿಲ ಸೋರಿಕೆಯಿಂದ ಇ...
14-07-25 07:56 pm
Mangalore, Help: ಅಪಘಾತದಲ್ಲಿ ಬಡ ಮಹಿಳೆಯ ತಲೆಗೆ ತ...
13-07-25 11:13 pm
Mangalore News: ಸಾರಿಗೆ ಕಚೇರಿಗಳಿಗೆ ಸ್ವಂತ ಕಟ್ಟಡ...
13-07-25 11:11 pm
Mangalore, E Bus, MP Chowta: ಕೇಂದ್ರ ಸರ್ಕಾರದಿಂ...
13-07-25 10:12 pm
13-07-25 05:23 pm
Bangalore Correspondent
ಅಪ್ರಾಪ್ತ ಬಾಲಕಿಯನ್ನು ಶಾಲೆಗೆ ಕರೆದೊಯ್ಯುವ ನೆಪದಲ್ಲ...
12-07-25 11:10 pm
Dowry Harassment, Mysuru: ಮದುವೆಯಾದ ಎರಡೇ ತಿಂಗಳ...
12-07-25 01:32 pm
Mangalore Job Fraud, KCOCA, Police: ಫಾರಿನ್ ಉದ...
12-07-25 11:59 am
Robbery, Gold Workshop in Kalaburagi: ಕಲಬುರಗಿ...
11-07-25 10:10 pm