ಬ್ರೇಕಿಂಗ್ ನ್ಯೂಸ್
21-10-21 09:54 pm Mangaluru Correspondent ಕರಾವಳಿ
ಮಂಗಳೂರು, ಅ.21: ರಾಜ್ಯದಲ್ಲಿ ಕಠಿಣ ಮತಾಂತರ ನಿಷೇಧ ಮಸೂದೆಯನ್ನು ಶೀಘ್ರದಲ್ಲೇ ಜಾರಿಗೆ ಹಿಂದು ಸಂಘಟನೆಗಳ ಮುಖಂಡರು ಮತ್ತು ಕರಾವಳಿಯ ಪ್ರಮುಖ ಸ್ವಾಮೀಜಿಗಳು ಸೇರಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯನ್ನು ಭೇಟಿ ಮಾಡಿ, ಮನವಿ ಕೊಟ್ಟಿದ್ದಾರೆ. ಮನವಿಯನ್ನು ರಾಜ್ಯ ಸರಕಾರಕ್ಕೆ ತಲುಪಿಸಬೇಕು ಮತ್ತು ಶೀಘ್ರದಲ್ಲೇ ಅಧ್ಯಾದೇಶ ಹೊರಡಿಸಿ ಕಾನೂನು ಜಾರಿಗೆ ತರಬೇಕೆಂದು ಒತ್ತಾಯಿಸಿದ್ದಾರೆ.

ಜಿಲ್ಲಾಧಿಕಾರಿಯನ್ನು ಭೇಟಿಯಾದ ನಿಯೋಗದಲ್ಲಿ ಒಡಿಯೂರು ಮಠದ ಗುರುದೇವಾನಂದ ಸ್ವಾಮೀಜಿ, ಗುರುಪುರ ಮಠದ ರಾಜಶೇಖರಾನಂದ ಸ್ವಾಮೀಜಿ, ಮಾಣಿಲ ಮೋಹನದಾಸ ಸ್ವಾಮೀಜಿ, ವಿಶ್ವ ಹಿಂದು ಪರಿಷತ್ ಮುಖಂಡರಾಜ ಎಂ.ಬಿ. ಪುರಾಣಿಕ್, ಶರಣ್ ಪಂಪ್ವೆಲ್, ಗೋಪಾಲ ಕುತ್ತಾರ್ ಸೇರಿದಂತೆ ಹಲವರು ಇದ್ದರು. ಜಿಲ್ಲಾಧಿಕಾರಿ ಭೇಟಿಯ ಬಳಿಕ ಕದ್ರಿಯಲ್ಲಿರುವ ವಿಶ್ವ ಹಿಂದು ಪರಿಷತ್ ಕಚೇರಿಯಲ್ಲಿ ಸ್ವಾಮೀಜಿಗಳು ಸುದ್ದಿಗೋಷ್ಠಿ ಕರೆದು ಮತಾಂತರ ನಿಷೇಧ ಅಗತ್ಯವನ್ನು ಹೇಳಿದರು.

ಒಡಿಯೂರು ಮಠದ ಸ್ವಾಮೀಜಿ ಮಾತನಾಡಿ, ಮತಾಂತರ ಅನ್ನೋದು ಕಾಯಿಲೆ, ಮಹಾಮಾರಿ ಇದ್ದಂತೆ. ದೇಶದ ಎಲ್ಲೆಂದರಲ್ಲಿ ಬಡವ, ಬಲ್ಲಿದ ಅನ್ನುವ ಭೇದ ಇಲ್ಲದೆ ಹರಡುತ್ತಿದೆ. ಬಡವರನ್ನು ಆಮಿಷಕ್ಕೊಡ್ಡಿ ಮತಾಂತರಿಸಿದೆ, ಐಟಿ ಬಿಟಿ ಕಂಪನಿಗಳಲ್ಲಿ ಉನ್ನತ ಸ್ಥಾನದ ಆಮಿಷ ನೀಡಿ ಮತಾಂತರ ಮಾಡಲಾಗುತ್ತಿದೆ. ವಿದ್ಯಾವಂತರನ್ನು ಈ ರೀತಿ ಮತಾಂತರಿಸಿ, ಆನಂತರ ಮನೆಯವರನ್ನೂ ಮತಾಂತರಕ್ಕೆ ಬಲಿ ಕೊಡಲಾಗುತ್ತಿದೆ ಎಂದು ಹೇಳಿದರು.
ಇದೇ ವಿಚಾರದ ಬಗ್ಗೆ ವಿವರಣೆ ನೀಡಿದ ಗುರುಪುರ ಶ್ರೀ, ಐಟಿ ಬಿಟಿ ಕೇಂದ್ರಗಳಲ್ಲಿ ಮತಾಂತರ ಹೇಗಿದೆ ಅಂದ್ರೆ, ಅಲ್ಲಿನ ಚಟುವಟಿಕೆ ಹೊರ ಜಗತ್ತಿಗೆ ತಿಳಿಯುವುದೇ ಇಲ್ಲ. ಬೆಂಗಳೂರು ಸೇರಿ ನಗರಗಳಲ್ಲಿ ಇಂಥ ಚಟುವಟಿಕೆಗಳಾಗುತ್ತಿವೆ. ಆಮಿಷವೊಡ್ಡಿ ಮತಾಂತರಿಸುವ ಕೆಲಸ ಆಗದಂತೆ ನೋಡಿಕೊಳ್ಳುವುದು ಸರಕಾರದ ಕೆಲಸ. ಅದನ್ನು ನಾವು ಪ್ರತಿಭಟನೆ ಇನ್ನೊಂದು ರೂಪದಲ್ಲಿ ನಿಯಂತ್ರಣಕ್ಕೆ ತರುವುದು ಸಾಧ್ಯವಿಲ್ಲ. ಅದಕ್ಕಾಗಿ ಕಠಿಣ ಕಾಯ್ದೆಯುಳ್ಳ ಕಾನೂನುಗಳೇ ಜಾರಿಗೆ ಬರಬೇಕು. ಈಗಾಗ್ಲೇ ಕಾನೂನು ತರುವ ಬಗ್ಗೆ ಸರಕಾರ ಹೇಳಿದೆ. ಅದನ್ನು ಅಧ್ಯಾದೇಶ ಮೂಲಕ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.

ಯಾವುದೇ ವ್ಯಕ್ತಿ ಯಾವ ಧರ್ಮದಲ್ಲಿ ಹುಟ್ಟಿರುತ್ತಾನೋ, ಅದೇ ಧರ್ಮದಲ್ಲಿ ಸಾಯುವುದು ಆತನ ಹಕ್ಕು. ಯಾಕಾಗಿ ಅವರನ್ನು ಮತಾಂತರ ಮಾಡಬೇಕು. ದೇಶದಲ್ಲಿ ಹಿಂದುಗಳು ಮಾತ್ರ ಇವರ ಟಾರ್ಗೆಟ್ ಆಗಿದ್ದಾರೆ. ಲವ್ ಜಿಹಾದ್ ಒಂದೆಡೆಯಾದರೆ, ಮತ್ತೊಂದು ಕಡೆ ಬಲವಂತದ ಮತಾಂತರ ನಡೆಸಲಾಗುತ್ತಿದೆ. ಇದರ ವಿರುದ್ಧ ಪ್ರಬಲ ಕಾನೂನು ತರಬೇಕಿದೆ ಎಂದು ವಿಹಿಂಪ ಪ್ರಾಂತ ಕಾರ್ಯಾಧ್ಯಕ್ಷ ಎಂ.ಬಿ.ಪುರಾಣಿಕ್ ಹೇಳಿದರು.
ಸೆಕ್ಯುಲರಿಸಂ ಅನ್ನುವುದು ಹಿಂದುತ್ವದ ಗಿಫ್ಟ್. ಎಲ್ಲ ಮತಗಳನ್ನು ಸಮಾನವಾಗಿ ನೋಡು ಎನ್ನುವುದು ಹಿಂದುತ್ವದ ಕಲ್ಪನೆ. ಅದೇ ತತ್ವ ಸೆಕ್ಯುಲರಿಸಂ. ಆದರೆ, ಸೆಕ್ಯುಲರ್ ಆಗಿರುವ ಹಿಂದುಗಳೇ ಈಗ ಟಾರ್ಗೆಟ್ ಆಗಿದ್ದಾರೆ. ಕೇರಳದಲ್ಲಿ ಕೆಲವೊಂದು ರಿಜಿಸ್ಟರ್ ಕೇಂದ್ರಗಳಲ್ಲಿ 80 ಶೇಕಡಾ ಮ್ಯಾರೇಜ್ ರಿಜಿಸ್ಟರ್ ಆಗುವುದು ಹಿಂದು- ಮುಸ್ಲಿಂ ನಡುವೆ. ಈ ಬಗ್ಗೆ ಖಚಿತ ದಾಖಲೆಗಳಿದ್ದು, ಹಿಂದು ಹೆಣ್ಮಕ್ಕಳನ್ನೇ ಟಾರ್ಗೆಟ್ ಮಾಡಿ ಮತಾಂತರ ಮಾಡಲಾಗುತ್ತಿದೆ. ಧಾರ್ಮಿಕ ಕೇಂದ್ರಗಳು ನಡೆಸುವ ಶಿಕ್ಷಣ ಕೇಂದ್ರಗಳಲ್ಲೂ ಮತಾಂತರ ಕಾರ್ಯ ನಡೆಯುತ್ತಿದೆ ಎಂದು ಕಾಸರಗೋಡಿನ ವಿದ್ಯಾನಂದ ಸರಸ್ವತಿ ಹೇಳಿದ್ದಾರೆ.
Vishwa Hindu Parishad (VHP), Bajrang Dal (BD) and Swamijis conducted a joint press meet here at the VHP office on Thursday October 21 and demanded the government to bring in an act banning forced religious conversions.Addressing the media, VHP regional working president Prof M B Puranik said, “Since a couple of years, religious conversion is spreading like wildfire. The government should think over this seriously and bring a strict law banning forced religious conversions on. If the government delays bringing a law, then it will be a dangerous threat.”
03-10-26 05:30 pm
HK News Staffer
Urdu Habba Row: ವಿಧಾನಸೌಧ ಮೆಟ್ಟಿಲುಗಳಲ್ಲಿ ಉರ್ದು...
01-10-26 10:50 pm
‘ಕನ್ನಡದ ಶಿವಮಣಿ’ ಖ್ಯಾತಿಯ ಡ್ರಮ್ಮರ್ ದೇವ್ ನಿಧನ ;...
27-09-26 03:21 pm
ಬೆಂಗಳೂರಿಗೆ ಬಂದ ಶಾಸಕರೆಲ್ಲ ಎರಡೆರಡು ಮದುವೆಯಾಗಿದ್ದ...
25-09-26 04:49 pm
ರಾಜ್ಯ ಸರ್ಕಾರಕ್ಕೆ ಆರ್ಥಿಕ ಸಂಕಷ್ಟ ; ಬೆಳಗಾವಿ ವಿಟಿ...
25-09-26 03:11 pm
04-10-26 12:34 pm
HK News Staffer
Smith Machar, Mankind Pharma: 180 ಜೀವ ಉಳಿಸಿದ...
03-10-26 01:00 pm
ಹನುಮಾನ್ ಚಾಲೀಸಾ ಜಪಿಸುತ್ತಲೇ ಕಾಕ್ಪಿಟ್ ಬಾಗಿಲು ತೆ...
02-10-26 05:28 pm
ಇಸ್ರೇಲ್ ತೆರಳುತ್ತಿದ್ದ ವಿಮಾನ ಹೈಜಾಕ್ ಯತ್ನ ? ಒಮಾ...
02-10-26 10:23 am
ವಿಮಾನ ಅಪಘಾತದ ತನಿಖಾ ವರದಿಗಳೇ ನೆರವಾಯ್ತು..! ದುಬೈ...
01-10-26 11:46 am
03-10-26 09:56 pm
HK News Staffer
Tammanna Shetty, mysore kambala: ಮೈಸೂರು ದಸರಾ...
03-10-26 01:27 pm
KSCA, Mangaluru: ಮಂಗಳೂರಿನಲ್ಲಿ ಅಂತಾರಾಷ್ಟ್ರೀಯ ಕ...
02-10-26 05:20 pm
Sowjanya case, Lokesh Jagalsar: ಸೌಜನ್ಯ ಪ್ರಕರಣ...
02-10-26 10:25 am
Madoor Yusuf Murder Case: ಜೈಲಿನಲ್ಲಿ ಮಾಡೂರು ಯೂ...
01-10-26 10:45 pm
04-10-26 12:51 pm
HK News Staffer
ಪುತ್ತೂರು ; ವಿದ್ಯುತ್ ಸ್ಪರ್ಶಿಸಿ ಪವರ್ಮ್ಯಾನ್ ಸಾ...
03-10-26 08:46 pm
Mangalore Crime, Mangalore Police, Delhi Thie...
03-10-26 06:39 pm
Kasaragod crime: ಕಾಸರಗೋಡು ; ಮನೆ ಮೇಲೆ ಬಿದ್ದ ಬೋ...
03-10-26 05:05 pm
Infra Developers, Vasudevan: ಬೆಂಗಳೂರಿನಲ್ಲಿ ಫ್...
03-10-26 03:41 pm