ಬ್ರೇಕಿಂಗ್ ನ್ಯೂಸ್
22-10-21 05:19 pm Mangalore Reporter ಕರಾವಳಿ
ಮಂಗಳೂರು, ಅ.22 : ಮಂಗಳೂರಿನಲ್ಲಿ ಮ್ಯಾಗ್ನಮ್ ಇಂಟರ್ ಗ್ರಾಫಿಕ್ಸ್ ಹೆಸರಲ್ಲಿ ಜಾಹೀರಾತು ಸಂಸ್ಥೆ ಸ್ಥಾಪಿಸಿ, ದೇಶದ ಹಲವೆಡೆ ಕಚೇರಿಗಳನ್ನು ಆರಂಭಿಸಿ ಒಂದು ಕಾಲದಲ್ಲಿ ಮಿಂಚು ಹರಿಸಿದ್ದ ಸುಧೀರ್ ಘಾಟೆ(64) ಇಂದು ತಮ್ಮ ಮನೆಯಲ್ಲಿ ನಿಧನ ಹೊಂದಿದ್ದಾರೆ.
ಲೆಕ್ಕ ಪರಿಶೋಧಕರಾಗಿ ವೃತ್ತಿ ಜೀವನ ಆರಂಭಿಸಿದ್ದ ಸುಧೀರ್ ಘಾಟೆ, 1992 ರಲ್ಲಿ ಮ್ಯಾಗ್ನಮ್ ಇಂಟರ್ ಗ್ರಾಫಿಕ್ಸ್ ಜಾಹೀರಾತು ಸಂಸ್ಥೆಯನ್ನು ಆರಂಭಿಸಿದ್ದರು. ಆನಂತರ ಜಾಹೀರಾತು ಕ್ಷೇತ್ರದಲ್ಲಿ ದಿಗ್ಗಜನಾಗಿ ಮೆರೆದು ರಾಷ್ಟ್ರ ಮಟ್ಟದಲ್ಲಿ ಹೆಸರು ಮಾಡಿದ್ದರು. ಸಾವಿರಾರು ಮಂದಿಗೆ ಉದ್ಯೋಗದಾತರಾಗಿ ಸುಮಾರು 500ಕ್ಕಿಂತಲೂ ಹೆಚ್ಚು ಮಂದಿ ನುರಿತ ಕೆಲಸಗಾರರನ್ನು ತನ್ನ ಗರಡಿಯಲ್ಲಿ ಪಳಗಿಸಿದ್ದರು.
1995ರಲ್ಲಿ ಈಗಿನ ವಿಧಾನಸಭಾ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಬಿಜೆಪಿ ರಾಜ್ಯ ಯುವಮೋರ್ಚಾದ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಸುಧೀರ್ ಘಾಟೆ ಪ್ರಧಾನ ಕಾರ್ಯದರ್ಶಿ ಆಗಿಯೂ ಕಾರ್ಯ ನಿರ್ವಹಿಸಿದ್ದರು. ಪಿ.ಆರ್.ಐ.ಎಸ್ ಅಧ್ಯಕ್ಷರಾಗಿಯೂ ತಮ್ಮ ಸೇವೆ ಸಲ್ಲಿಸಿದ್ದರು. ರಾಷ್ಟ್ರ ಮಟ್ಟದ ನಾಯಕರುಗಳಾದ ದಿವಂಗತ ಅಟಲ್ ಬಿಹಾರಿ ವಾಜಪೇಯಿ, ಸುಷ್ಮಾ ಸ್ವರಾಜ್, ಆಡ್ವಾಣಿ, ಮುರಳಿ ಮನೋಹರ್ ಜೋಷಿ ಅವರಂತಹ ಹಿರಿಯರ ಒಡನಾಟದಲ್ಲಿ ಇದ್ದ ಸುಧೀರ್ ಘಾಟೆ, ಬಿಎಂಎಸ್ ಕಾರ್ಮಿಕ ಸಂಘಟನೆಯನ್ನು ದೇಶಾದ್ಯಂತ ಪಸರಿಸಿದ್ದ ಧೀಮಂತ ನಾಯಕ ದಿವಂಗತ ಪ್ರಭಾಕರ್ ಘಾಟೆ ಮತ್ತು ಶಾರದಾ ಘಾಟೆ ದಂಪತಿಯ ಪುತ್ರ.
ಒಂದು ಕಾಲದಲ್ಲಿ ಜಾಹೀರಾತು ಕ್ಷೇತ್ರದಲ್ಲಿ ಅಪ್ರತಿಮ ಸಾಧನೆಗೆ ಕಾರಣವಾಗಿದ್ದ ಮ್ಯಾಗ್ನಮ್ ಸಂಸ್ಥೆ ಆನಂತರ ನಷ್ಟದ ಕಾರಣದಿಂದ ಮುಚ್ಚಿ ಹೋಗಿತ್ತು. ಆಬಳಿಕ ಅನಾರೋಗ್ಯಕ್ಕೆ ತುತ್ತಾಗಿದ್ದ ಸುಧೀರ್ ಘಾಟೆಯವರು ತಮ್ಮ ಕೊಡಿಯಾಲಬೈಲಿನ ಮನೆಯಲ್ಲಿ ಉಳಿದುಕೊಂಡಿದ್ದರು. ಐದಾರು ವರ್ಷಗಳಿಂದ ಮನೆಯಲ್ಲಿದ್ದೇ ಚಿಕಿತ್ಸೆ ಪಡೆಯುತ್ತಿದ್ದರು. ಘಾಟೆಯವರು ಪತ್ನಿ, ಪುತ್ರ ಪ್ರಾಂಜಲ ಘಾಟೆ, ಪುತ್ರಿ ಸಹಿತ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
Chairman and managing director at Magnum Intergrafiks, Sudhir Ghate, passed away here on Friday October 22. Sudhir Ghate was actively involved in Bharatiya Janata Party (BJP) activities.
11-05-25 01:21 pm
HK News Desk
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
11-05-25 01:43 pm
HK News Desk
India Pak War: ಪೆಟ್ಟು ತಿಂದರೂ ಬಿಡದ ಪಾಕ್ ನರಿಬುದ...
10-05-25 11:05 pm
ಎಸ್-400 ಏರ್ ಡಿಫೆನ್ಸ್ ಸಿಸ್ಟಮ್ ಮತ್ತು ಬ್ರಹ್ಮೋಸ್...
10-05-25 09:24 pm
India and Pakistan, Ceasefire: ಮೂರೇ ದಿನದಲ್ಲಿ...
10-05-25 08:28 pm
India-Pakistan war: ಭಾರತ - ಪಾಕಿಸ್ತಾನ ತಕ್ಷಣದಿಂ...
10-05-25 07:25 pm
10-05-25 07:10 pm
Mangalore Correspondent
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
Mangalore University, U T Khader, Syndicate M...
09-05-25 06:22 pm
Resham Bariga, Belthangady, Indo Pak War, Ant...
09-05-25 03:24 pm
Suhas Shetty Murder Case, Speaker UT Khader,...
09-05-25 01:32 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm